Skip to main content

Posts

Showing posts with the label Farmers leader H.R.Basavarajappa

Blog number 3388. ರೈತ ನಾಯಕ H.R. ಬಸವರಾಜಪ್ಪ ಶಿವಮೊಗ್ಗ

#ಹಸಿರು_ಹಾದಿಯ_ಕಥನ #ರೈತ_ನಾಯಕ_ಹೆಚ್_ಆರ್_ಬಸವರಾಜಪ್ಪನವರ #ಆತ್ಮಕಥೆ   ಮೊನ್ನೆ ಶಿವಮೊಗ್ಗದಲ್ಲಿ ಹಿರಿಯ ಸಮಾಜವಾದಿ ಪಿ.ಪುಟ್ಟಯ್ಯನವರ ಬೇಟಿಗೆ ಹೋದಾಗ ಅವರು ಈ ಪುಸ್ತಕ ನೀಡಿದ್ದರು.   ಕರ್ನಾಟಕ ರಾಜ್ಯದ ರೈತ ಚಳವಳಿಯ ತವರು ಶಿವಮೊಗ್ಗ ಇಲ್ಲಿಯೇ ಕರ್ನಾಟಕ ರಾಜ್ಯ ರೈತ ಸಂಘ ಸಂಸ್ಥಾಪಕ ಅಧ್ಯಕ್ಷ ರುದ್ರಪ್ಪನವರ ನೇತೃತ್ವದಲ್ಲಿ ಜನಿಸಿದ್ದು ಇತಿಹಾಸ. #FarmersProtest #RaithaSangha #hrbasavarajappa #shivamogga    ಶಿವಮೊಗ್ಗ ಜಿಲ್ಲೆಯ ಸುಂದರೇಶ್, ಕಡಿದಾಳು ಶಾಮಣ್ಣರ ಸಾಲಿನಲ್ಲಿ ಈ ಚಳವಳಿಯ ನೇತೃತ್ವ ವಹಿಸಿ ರೈತ ಚಳವಳಿ ಮುನ್ನಡೆಸಿದ್ದ ರೈತ ನಾಯಕರಾದ ಕೆ.ಟಿ.ಗಂಗಾಧರ್ ಮತ್ತು ಹೆಚ್.ಆರ್.ಬಸವರಾಜಪ್ಪರ ಹೋರಾಟಗಳು ಅಸಂಖ್ಯ.      ಜನಪರ ಹೋರಾಟಗಳು ಮತ್ತು ಅದರ ಮುಖಂಡತ್ವ ವಹಿಸಿದವರ ವಿವರಗಳು ಪುಸ್ತಕವಾಗಿ ಬರಬೇಕು ಆ ನಿಟ್ಟಿನಲ್ಲಿ ಬಸವರಾಜಪ್ಪನವರ ಆತ್ಮಚರಿತ್ರೆ ಬಂದಿರುವುದು ಖುಷಿ ಪಡುವಂತ ವಿಚಾರ.   ಹೊಸನಗರ ವಿಧಾನ ಸಭಾ ಕ್ಷೇತ್ರದಿಂದ ರೈತ ಸಂಘದಿಂದ ಬಸವರಾಜಪ್ಪನರು ಶಾಸಕರಾಗುತ್ತಾರೆಂದು ಆಸೆ ಪಟ್ಟವರಲ್ಲಿ ನಾನೂ ಒಬ್ಬನಾಗಿದ್ದೆ.