#ಹಸಿರು_ಹಾದಿಯ_ಕಥನ
#ರೈತ_ನಾಯಕ_ಹೆಚ್_ಆರ್_ಬಸವರಾಜಪ್ಪನವರ
#ಆತ್ಮಕಥೆ
ಮೊನ್ನೆ ಶಿವಮೊಗ್ಗದಲ್ಲಿ ಹಿರಿಯ ಸಮಾಜವಾದಿ ಪಿ.ಪುಟ್ಟಯ್ಯನವರ ಬೇಟಿಗೆ ಹೋದಾಗ ಅವರು ಈ ಪುಸ್ತಕ ನೀಡಿದ್ದರು.
ಕರ್ನಾಟಕ ರಾಜ್ಯದ ರೈತ ಚಳವಳಿಯ ತವರು ಶಿವಮೊಗ್ಗ ಇಲ್ಲಿಯೇ ಕರ್ನಾಟಕ ರಾಜ್ಯ ರೈತ ಸಂಘ ಸಂಸ್ಥಾಪಕ ಅಧ್ಯಕ್ಷ ರುದ್ರಪ್ಪನವರ ನೇತೃತ್ವದಲ್ಲಿ ಜನಿಸಿದ್ದು ಇತಿಹಾಸ.
#FarmersProtest #RaithaSangha #hrbasavarajappa #shivamogga
ಶಿವಮೊಗ್ಗ ಜಿಲ್ಲೆಯ ಸುಂದರೇಶ್, ಕಡಿದಾಳು ಶಾಮಣ್ಣರ ಸಾಲಿನಲ್ಲಿ ಈ ಚಳವಳಿಯ ನೇತೃತ್ವ ವಹಿಸಿ ರೈತ ಚಳವಳಿ ಮುನ್ನಡೆಸಿದ್ದ ರೈತ ನಾಯಕರಾದ ಕೆ.ಟಿ.ಗಂಗಾಧರ್ ಮತ್ತು ಹೆಚ್.ಆರ್.ಬಸವರಾಜಪ್ಪರ ಹೋರಾಟಗಳು ಅಸಂಖ್ಯ.
ಜನಪರ ಹೋರಾಟಗಳು ಮತ್ತು ಅದರ ಮುಖಂಡತ್ವ ವಹಿಸಿದವರ ವಿವರಗಳು ಪುಸ್ತಕವಾಗಿ ಬರಬೇಕು ಆ ನಿಟ್ಟಿನಲ್ಲಿ ಬಸವರಾಜಪ್ಪನವರ ಆತ್ಮಚರಿತ್ರೆ ಬಂದಿರುವುದು ಖುಷಿ ಪಡುವಂತ ವಿಚಾರ.
ಹೊಸನಗರ ವಿಧಾನ ಸಭಾ ಕ್ಷೇತ್ರದಿಂದ ರೈತ ಸಂಘದಿಂದ ಬಸವರಾಜಪ್ಪನರು ಶಾಸಕರಾಗುತ್ತಾರೆಂದು ಆಸೆ ಪಟ್ಟವರಲ್ಲಿ ನಾನೂ ಒಬ್ಬನಾಗಿದ್ದೆ.
Comments
Post a Comment