#ನಾರಿ_ಲೋಕಪ್ಪ
#ಮಾಜಿ_ಉಪಾದ್ಯಕ್ಷರು
#ಯಡೇಹಳ್ಳಿ_ಗ್ರಾಮ_ಪಂಚಾಯಿತಿ
#ಪುಣ್ಯ_ಪ್ರಾಪ್ತಿಗಾಗಿ_ದೇವರ_ಸೇವೆ_ನಿರಂತರ_ಮಾಡುತ್ತಿರುವ_ಸಜ್ಜನರು
ಪ್ರತಿ ವರ್ಷ ದೇವಾಲಯದಲ್ಲಿ ನಡೆಯುವ ಬ್ರಹ್ಮ ರಥೋತ್ಸವಕ್ಕೆ ಭಕ್ತರಿಂದ ನಿರಂತರವಾಗಿ ದೇವಾಲಯಕ್ಕೆ ದೇಣಿಗೆ ಕಾಣಿಕೆ ಸಂಗ್ರಹಿಸಿ ತಲುಪಿಸುತ್ತಾರೆ.
ರಥೋತ್ಸವದ ಮೂರೂ ದಿನ ದೇವರ ಸೇವೆಯ ಕೆಲಸ ನಿರಂತರ ಮಾಡುತ್ತಾರೆ ಆದರೆ ಎಲ್ಲೂ ಯಾವ ಕಾರಣಕ್ಕೂ ತೋರುಗಾಣಿಕೆ ಪ್ರದರ್ಶನ ಮಾತ್ರ ಅವರು ಮಾಡುವುದಿಲ್ಲ.
ತನ್ನ ಹೆಸರು ಖ್ಯಾತಿ ಸನ್ಮಾನಗಳಿಗೆ ಯಾವತ್ತೂ ಇಷ್ಟಪಡದೆ ಭಕ್ತಿಯಿಂದ ಶ್ರೀ ವರಸಿದ್ಧಿನಾಯಕ ಸ್ವಾಮಿಯ ಸೇವೆ ಮಾಡುವ ಕೆಲವೇ ಕೆಲವರಲ್ಲಿ ನಾರಿ ಲೋಕಪ್ಪನವರು ಒಬ್ಬರು.
#yadehalli #Anandapuram #sagar #siddhivinayak #temple #jatra #narilokappa
ನಾರಿ ಲೋಕಪ್ಪ ಯಡೇಹಳ್ಳಿ ಗ್ರಾಮ ಪಂಚಾಯಿತಿಯ ಹಿರಿಯ ಸದಸ್ಯರು ಮತ್ತು ಒಂದು ಅವಧಿಯ ಉಪಾಧ್ಯಕ್ಷರು ಕೂಡ ಆಗಿದ್ದವರು
ದೇವಾಲಯದ ಪ್ರತಿಷ್ಠಾಪನೆಯ ಪ್ರಾರಂಭದ ದಿನದಿಂದ 19 ವರ್ಷದಲ್ಲಿ ಅಂದರೆ ಈ ವರ್ಷದ ಪುನರ್ ಪ್ರತಿಷ್ಠಾಪನೆಯ ತನಕ ಅವರ ಸೇವೆ ಅನನ್ಯ.
ಅವರು ದೇವಾಲಯದ ಕಾಯಂ ಸಲಹಾ ಮಂಡಳಿ ಸದಸ್ಯರು ಆಗಿದ್ದಾರೆ.
ದೇವಾಲಯದಲ್ಲಿ15 ವರ್ಷದ ಹಿಂದೆ ನಡೆದ 1008 (ಸಾವಿರದ ಎಂಟು) #ನಾರಿ_ಕೇಳಾ_ಮಹಾಗಣ_ಯಾಗ ನಡೆದಾಗ ಈ ಮಹಾಯಾಗಕ್ಕೆ ಬೇಕಾದ ಕಟ್ಟಿಗೆ ಸರಬರಾಜು ನೀಡಿದವರು ನಾರಿ ಲೋಕಪ್ಪ.
ಈ ಬಾರಿ ದೇವಾಲಯದಲ್ಲಿ ಪುನರಷ್ಟಬಂದ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಗಿತ್ತು ಆದರೆ ಅಹ್ವಾನ ಪತ್ರಿಕೆ ನೀಡಲು ಟ್ರಸ್ಟ್ ನವರು ಅವರ ಮನೆಗೆ ಹೋದರೆ ಆಹ್ವಾನ ಸ್ಪೀಕರಿಸಲು ನಾರಿ ಲೋಕಪ್ಪನವರು ಅವರ ಮನೆಯಲ್ಲಿ ಇರಲಿಲ್ಲ.
ಪುನರಷ್ಟಬಂಧ ಪ್ರಾರಂಭದ ದಿನ ನಾರಿ ಲೋಕಪ್ಪ ಶ್ರೀವರ ಸಿದ್ದಿ ವಿನಾಯಕ ಸ್ವಾಮಿ ದೇವಾಲಯದಲ್ಲಿ ಸೇವಾ ಕಾರ್ಯ ನಿರ್ವಹಿಸಲು ಆಗಮಿಸಿದಾಗ ಟ್ರಸ್ಟ್ ಅಧ್ಯಕ್ಷ ಕೆ. ನಾಗರಾಜ್ ಟ್ರಸ್ಟಿಗಳಾದ ದೇವರಾಜ, ಗಣಪತಿ ಮತ್ತು ದೇವಾಲಯದ ಖಾಯಂ ಸಲಹಾ ಸಮಿತಿಯ ಇನ್ನೋರ್ವ ಸದಸ್ಯರು ಮತ್ತು ಯಡೇಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಗೇರುಬೀಸು ಶಿವಾನಂದರು ನಾರಿ ಲೋಕಪ್ಪನವರಿಗೆ ಆಹ್ವಾನ ಪತ್ರಿಕೆ ನೀಡಿದರು.
Comments
Post a Comment