#ಈ_ಘಟನೆ_ನನಗೂ_ಅವರಿಗೂ_ವಿಶೇಷವಾಯಿತು
#ಅವರ_ಜೀವಿತಾವದಿಯಲ್ಲಿ_ನಿರೀಕ್ಷೆಯೇ_ಮಾಡದ
#ಅವರ_ತಂದೆ_ಪೋಟೋ_ನೋಡಿದಾಗ
1984ರಲ್ಲಿ(41 ವರ್ಷದ ಹಿಂದೆ) ನಾನು ಖರೀದಿಸಿದ್ದ ನಿಕಾನ್ ಕ್ಯಾಮೆರಾದಲ್ಲಿ ಬ್ಲಾಕ್ & ವೈಟ್ ಪೋಟೋದಲ್ಲಿ ನಾನು ಬಚ್ಚಾಚಾರ್ ಫೋಟೋ ಒಂದು ತೆಗೆದಿದ್ದೆ.
ನಮ್ಮ ಮನೆ ಪಕ್ಕದ ರಾಮಾಚಾರರ ಕುಲುಮೆಯ ಕ್ಯಾಪ್ಟನ್ ಬಚ್ಚಾಚಾರ್ ಮಗಳು ಲಲಿತಮ್ಮನಿಗೆ ಸುಮಾರು 35 ವರ್ಷದ ನಂತರ ಅವರ ತಂದೆಯ ಪೋಟೋ ನೋಡಿದಾಗ...
#photo #memories #Anandapuram #yadehalli #gowthamapura #vishwakarma #Acharya #carpentar
ಅವರ ಉದ್ಘಾರ "ತನ್ನ ತಂದೆ ಪೋಟೋ ತನ್ನ ಜೀವಮಾನದಲ್ಲೇ ನೋಡುತ್ತೇನೆ ಅಂದು ಕೊಂಡಿರಲಿಲ್ಲ"...
35 ವರ್ಷದ ಹಿಂದೆ ಮೃತರಾದ ಅವರ ಒಂದೇ ಒಂದು ಪೋಟೋ ಇರಲಿಲ್ಲ.... ಅಂತ ಸುಮಾರು ಅನೇಕ ವಷ೯ದ ನಂತರ ನನ್ನ ಕಛೇರಿಗೆ ಬಂದಿದ್ದ ಗೌತಮಪುರದ ಲಲಿತಕ್ಕ ಕಣ್ಣೀರಾಗಿದ್ದಳು.
ಇವರ ತಂದೆ ಬಚ್ಚಾಚಾರ್ ತಾಯಿ ಪದ್ದಮ್ಮ ಕುಂದಾಪುರ ಮೂಲದವರು, ಈ ಬಚ್ಚಾಚಾರ್ ರನ್ನು ನಮ್ಮ ಪಕ್ಕದ ಮನೆಯ ರಾಮಾಚಾರ್ ತಮ್ಮ ಕುಲುಮೆ ಕೆಲಸಕ್ಕೆ ಕರೆತಂದಿದ್ದು.
ನನ್ನ ಕಥಾ ಸಂಕಲನ #ಬಿಲಾಲಿ_ಬಿಲ್ಲಿ_ಅಭ್ಯಂಜನ ದಲ್ಲಿ ಬರುವ ಒಂದು ಕಥೆಯಾದ #ಮಂಜ_ಬ್ರಹ್ಮ_ರಾಕ್ಷಸನಾದರೆ... ಕಥೆಯಲ್ಲಿ ಬಚ್ಚಾಚಾರ್ ಮತ್ತು ಆ ಕಾಲದ ಕುಲಿಮೆ ನನ್ನ ಕಣ್ಣಲ್ಲಿ ಗ್ರಹಿಸಿದ ವರ್ಣನೆ ದಾಖಲಿಸಿದ್ದೇನೆ.
1984ರಲ್ಲಿ(41 ವರ್ಷದ ಹಿಂದೆ) ನಾನು ಖರೀದಿಸಿದ್ದ ನಿಕಾನ್ ಕ್ಯಾಮೆರಾದಲ್ಲಿ ಬ್ಲಾಕ್ & ವೈಟ್ ಪೋಟೋದಲ್ಲಿ ನಾನು ಬಚ್ಚಾಚಾರ್ ಫೋಟೋ ಒಂದು ತೆಗೆದಿದ್ದೆ.
ಅವರ ಮಗಳು ತಂದೆಯ ಪೋಟೋ ಇಲ್ಲ ಅಂತ ರೋದಿಸಿದಾಗ ಬಚ್ಚಾಚಾರ್ ಪೋಟೋ ನೆನಪಾಗಿ ಮಗನಿಗೆ ಹೇಳಿ ಎಡಿಟ್ ಮಾಡಿಸಿ ನಮ್ಮದೇ ಪ್ರಿಂಟರ್ ನಲ್ಲಿ ಪ್ರಿಂಟ್ ತೆಗೆದು ನನ್ನಣ್ಣನ ಮಗನಿಗೆ ಆನಂದಪುರOಗೆ ಕಳಿಸಿ ಪೋಟೋ ಪ್ರೇಂ ಹಾಕಿಸಿ ತರಿಸಿ ಲಲಿತಕ್ಕನಿಗೆ ನೀಡಿದಾಗ ಅವರ ಮುಖದಲ್ಲಿ ವ್ಯಕ್ತವಾದ ಸಂತೋಷಕ್ಕೆ ಬೆಲೆ ಕಟ್ಟಲಾಗಲಿಲ್ಲ.
ಈ ಸಂದರ್ಭದಲ್ಲಿ ಲಲಿತಕ್ಕ ತಾನು ತನ್ನ ಜೀವಮಾನದಲ್ಲೂ ನಿರೀಕ್ಷಿಸದ ತಂದೆಯ ಪೋಟೋದ ಬೆಲೆ ಲಕ್ಷ ರೂಪಾಯಿ ಕೊಟ್ಟರೂ ಕಡಿಮೆ ಅಂದರು.
ಇವರ ತಾಯಿಗೆ ತೀವ್ರ ಅನಾರೋಗ್ಯವಾಗಿದ್ದಾಗ ನನ್ನ ತಾಯಿ ನಮ್ಮ ಮನೆಯಲ್ಲೇ ಎರೆಡು ತಿಂಗಳು ಇಟ್ಟುಕೊಂಡು ಸಲಹಿದ್ದು...ನಮ್ಮ ತಂದೆ ಚಿಕಿತ್ಸೆ ನೀಡಿದ್ದು... ಆಗ ನನ್ನ ದೊಡ್ಡಕ್ಕ ಜಲಜಕ್ಕನ ಕೈ ಬಳೆಗಳ ದೊಡ್ಡ ಪೆಟ್ಟಿಗೆಯ ಸಂಗ್ರಹ..., ಪ್ರತಿ ವರ್ಷ ದೀಪಾವಳಿಯಲ್ಲಿ ಲಲಿತಕ್ಕ ತನ್ನ ತಂದೆ ಬಚ್ಚಾಚಾರ್ ಗೆ ಪಿತೃ ತರ್ಪಣದ ಎಡೆ ತಪ್ಪದೆ ಇಡುವುದು... ಎಲ್ಲಾ ನೆನಪಿಸಿಕೊಂಡರು.
ಗೌತಮಪುರದಲ್ಲಿ ಇವರು ನೆಲೆನಿಲ್ಲಲು ಕಾರಣರಾದ #ಕೊಗ್ಗಾಚಾರ್.... ಹಾಲಿ ಗೌತಮಪುರದ ಜನತಾ ಕಾಲೋನಿಯಲ್ಲಿ ಜಾಗ ಮತ್ತು ಮನೆ ಮಂಜೂರಿ ಮಾಡಿಸಿಕೊಟ್ಟ ಸ್ಥಳಿಯ ಮುಖಂಡರಾದ #ಕಲ್ಲಪ್ಪರನ್ನು ಸ್ಮರಿಸಿದರು
ಬಚ್ಚಾಚಾರ್ ಪೋಟೋ, ಅವರ ಉಲ್ಲೇಖಗಳು ಇರುವ ನನ್ನ ಕಥಾ ಸಂಕಲನ, ಒಂದು ಸಾವಿರ ರೂಪಾಯಿ ಉಡುಗೊರೆಯೊಂದಿಗೆ ನೀಡಿ ಊಟ ಮಾಡಿಸಿ ಬೀಳ್ಕೊಡಿಗೆ ಮಾಡಿದೆ ಅವರ ಮುಖದಲ್ಲಿ-ಕಣ್ಣಿನಲ್ಲಿ ಅಲೌಕಿಕವಾದ ತೃಪ್ತಿಯ ಪ್ರತಿಫಲನವಿತ್ತು.
Comments
Post a Comment