#ತೀರ್ಥಹಳ್ಳಿ_ದಮ೯ಕುಮಾರ್
#ಕ್ರಿಯಾಶೀಲ_ವ್ಯಕ್ತಿ
#ಸಮಾಜ_ಮುಖಿ_ಕಾರ್ಯದಲ್ಲಿ_ಸದಾ_ಮುಂದೆ
2019 ರಲ್ಲಿ ರಾತ್ರಿ ನಮ್ಮ ಊರಿನ ವರಸಿದ್ಧಿವಿನಾಯಕ ಸ್ವಾಮಿ ಜಾತ್ರೆ ಮುಗಿಸಿ ನಾನು ಮನೆಗೆ ಬಂದು ಕುಳಿತಿದ್ದಾಗ ಧರ್ಮ ಕುಮಾರ್ ಬಂದಾಗ ತೆಗೆದ ಫೋಟೋ ಇದು.
ಈ ಬೇಟಿ ಸುಮಾರು 19 ವಷ೯ಗಳ ನಂತರದ ನನ್ನ ಮತ್ತು ಇವರ ಬೇಟಿ.
#thirthahalli #sagar #krishi #AgricultureDepartment #darmakumar #sahityaparishath
ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ನನ್ನ ಭಾಗದಲ್ಲಿನ ಉತ್ಸಾಹಿ ಮತ್ತು ಪ್ರಾಮಾಣಿಕ ಕೃಷಿ ಸೇವಕರಾಗಿ ಜನಾನುರಾಗಿಗಳಾಗಿದ್ದವರು.
ರೈತ ಸ್ನೇಹಿ ಆಗಿದ್ದ ಇವರಂತಹ ಕೃಷಿ ಸೇವಕರನ್ನ ನಾನು ಈ ವರೆಗೆ ನೋಡಿಲ್ಲ.
ಈಗೆಲ್ಲ ಕೃಷಿ ಸೇವಕರು ಯಾರೂ ಅಂತಲೇ ನನಗೆ ಗೊತ್ತಿಲ್ಲ.
ಆನಂದಪುರಂನಲ್ಲಿ ಆ ದಿನಗಳಲ್ಲಿ ನಾವೆಲ್ಲ ಯುವಕರು ಹಮ್ಮಿಕೊಳ್ಳುತ್ತಿದ್ದ ಯುವಜನ ಮೇಳ, ರಾಜ್ಯ ಮಟ್ಟದ ಹಾಸ್ಯ ನಾಟಕ ಸ್ಪದೆ೯, ಮೋದಿ ಡಾಕ್ಟರ್ ಕಣ್ಣಿನ ಶಸ್ತ್ರಚಿಕಿತ್ಸಾ ಶಿಭಿರಗಳು ಯಶಸ್ವಿಗೊಳಿಸುವಲ್ಲಿ ತೆರೆ ಮರೆಯಲ್ಲಿ ಈ ದಮ೯ಕುಮಾರರ ಶ್ರಮ ಇರುತ್ತಿತ್ತು.
ಇವರ ಕಿರಿಯ ಸಹೋದರ ಶಿವಮೊಗ್ಗದ ಖ್ಯಾತ ವಕೀಲರಾದ ಜಿ.ನಾಗೇಶನ್ ನನಗೆ ಹಳೆ ಗೆಳೆಯರು.
ನಂತರ ಇವರ ಗೆಳೆತನ ಆಯಿತು, ದರ್ಮ ಕುಮಾರ್ ಈಗ ತೀಥ೯ಳ್ಳಿಯಲ್ಲಿ ನಿವೃತ್ತರಾಗಿ ಮನೆ ಮತ್ತು ಅಡಿಕೆ ತೋಟ ಮಾಡಿಕೊಂಡು ನೆಲೆಸಿದ್ದಾರೆ ಜೊತೆಗೆ ತೀರ್ಥಹಳ್ಳಿ ಸಾಹಿತ್ಯ ಪರಿಷತ್ ನಲ್ಲಿ ಕ್ರಿಯಾಶೀಲರಾಗಿದ್ದಾರೆ.
ಇವರ ಅಣ್ಣ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಮಂಜುನಾಥ ಗೌಡರು ರಾಜ್ಯದ ಪ್ರತಿಷ್ಟಿತ ಮಲೆನಾಡು ಅಭಿವೃದ್ದಿ ಮಂಡಳಿ ಅಧ್ಯಕ್ಷರು.
Comments
Post a Comment