Blog number 1351. ಪ್ರತಿ ಚುನಾವಣೆ ಸಂದರ್ಭದಲ್ಲಿ ಆತ್ಮ ರಕ್ಷಣೆಗಾಗಿ - ಪಸಲು ರಕ್ಷಣೆಗಾಗಿ ಪಡೆದ ಲೈಸೆನ್ಸ್ ರಿವಾಲ್ವಾರ್ / ಬಂದೂಕು ಪೋಲಿಸ್ ಠಾಣೆಯಲ್ಲಿ ತಂದಿಡುವ ಅವೈಜ್ಞಾನಿಕ ಓಬಿರಾಯನ ಕಾಲದ ಪದ್ದತಿ ಬದಲಿಸಬಾರದೇಕೆ ?
#ರಾಜ್ಯ_ವಿಧಾನಸಭಾ_ಚುನಾವಣೆ_ಘೋಷಣೆ_ಆಗಿದೆ. #ಆತ್ಮರಕ್ಷಣೆ_ಪಸಲುರಕ್ಷಣೆ_ರಿವಾಲ್ವಾರ್_ಬಂದೂಕುಗಳು_ಪೋಲಿಸ್_ಠಾಣೆಯಲ್ಲಿ_ಸರೆಂಡರ್_ಮಾಡಬೇಕು. #ಚುನಾವಣೆ_ಬಂದಾಗ_ದರೋಡೆಕೊರರು_ಪಸಲು_ತಿನ್ನುವ_ಪ್ರಾಣಿಗಳು_ಸುಮ್ಮನಿರುತ್ತದ? #ಈ_ಅನಾಗರೀಕ_ಅವೈಜ್ಞಾನಿಕ_ಪದ್ಧತಿ_ರಾಜ್ಯದಲ್ಲಿ_ಈ_ಚುನಾವಣೆಯಲ್ಲಿಯೂ_ಜಾರಿ_ಇದೆ #ಕೇರಳಾ_ರಾಜ್ಯದ_ಉಚ್ಚ_ನ್ಯಾಯಾಲಯ_ಈ_ಪದ್ದತಿಗೆ_ತಡೆ_ಆಜ್ಞೆ_ನೀಡಿದೆ. #ಕರ್ನಾಟಕ_ರಾಜ್ಯದಲ್ಲಿ_ಯಾರೋಬ್ಬರೂ_ಈ_ಬಗ್ಗೆ_ಉಚ್ಚ_ನ್ಯಾಯಾಲಯದಲ್ಲಿ_ಈ_ಪದ್ದತಿ_ರದ್ದತಿಗೆ_ರಿಟ್_ಹಾಕಿಲ್ಲ. ಆತ್ಮ ರಕ್ಷಣೆ ಮತ್ತು ಪಸಲು ರಕ್ಷಣೆಗಾಗಿ ರಿವಾಲ್ವಾರ್ ಅಥವ ಬಂದೂಕು ಲೈಸೆನ್ಸ್ ಪಡೆದವರಿಗೆ ಪ್ರತಿ ಚುನಾವಣೆಯ ಸಂದರ್ಭದಲ್ಲಿ ತಮ್ಮ ತಮ್ಮ ರಿವಾಲ್ವಾರ್ / ಬಂದೂಕುಗಳನ್ನು ಅವರ ವ್ಯಾಪ್ತಿಯ ಪೋಲಿಸ್ ಠಾಣೆಗೆ ತಂದು ಸರೆಂಡರ್ ಮಾಡಬೇಕೆಂಬ ಜ್ಞಾಪನಾ ಪತ್ರ ಪೋಲಿಸರು ನೀಡುತ್ತಾರೆ. ಅದರಂತೆ ಆ ವ್ಯಾಪ್ತಿಯ ಜನರು ಪೋಲಿಸರ ಆದೇಶ ಪಾಲಿಸುತ್ತಾರೆ ಆದರೆ ಈ ಪದ್ಧತಿ ಸರಿಯಾ? ದರೋಡೆಕೋರರು - ಕಳ್ಳರು ತಮ್ಮ ವೃತ್ತಿಯನ್ನು ಚುನಾವಣೆಯಲ್ಲಿ ಬಿಡುತ್ತಾರಾ? ಚುನಾವಣಾ ಸಂದರ್ಭದಲ್ಲಿ ಬಂದೂಕು ಪೋಲಿಸ್ ಠಾಣೆಯಲ್ಲಿ ಡಿಪೋಸಿಟ್ ಮಾಡಿರುತ್ತಾರೆಂಬ ಮಾಹಿತಿ ಅವರಿಗೆ ಹೆಚ್ಚಿನ ದೈರ್ಯ ನೀಡದೇ ಇರುತ್ತದಾ?. ಈ ಅವೈಜ್ಞಾನಿಕ ಪದ್ದತಿಯನ್ನು ಕೇರಳ ರಾಜ್ಯದ ಉಚ್ಚ ನ್ಯಾಯಾಲಯದ ಆದೇಶದಲ್ಲಿ ತಡೆ ಹಿಡಿದಿರುವುದರಿಂದ ಅಲ್ಲ...