Skip to main content

Posts

Showing posts with the label Janavarthe G.S.Nagaraj memories

Blog number 1268. ಜನವಾರ್ತೆ ನಾಗರಾಜ್ ಅಪಘಾತದಿಂದ ಇಹಲೋಕ ತ್ಯಜಿಸಿದ್ದಾರೆ, ಉದ್ಯಮ ಲೋಕದ ಕನಸುಗಾರನ ದುರಂತ ಜೀವನ.

#ಶ್ರದ್ಧಾಂಜಲಿಗಳು. #ಜನವಾರ್ತೆ_ನಾಗರಾಜ್_ಅಪಘಾತದಿಂದ_ವಿದಿವಶ. #ಶಿವಮೊಗ್ಗದ_ಮೊದಲ_ಅಂತರ್_ಜಿಲ್ಲಾ_ನಾಲ್ಕು_ಪುಟಗಳ_ದಿನಪತ್ರಿಕೆ_ಪ್ರಾರಂಬಿಸಿದವರು. #ಸ್ವಂತ_ಆಫ್_ಸೆಟ್_ಮುದ್ರಣದ_ಪತ್ರಿಕೆ_ಜನವಾರ್ತೆ #ಕನಸುಗಾರ_ಉದ್ಯಮಿಯನ್ನು_ದಾರಿತಪ್ಪಿಸಿದ_ಜಿಲ್ಲೆಯ_ರಾಜಕಾರಣಿಗಳು #ಆಶ್ರಯ_ಹಗರಣದಲ್ಲಿ_ಬಲಿಪಶು #ಕೊನೆಯವರೆಗೂ_ಇವರೊಂದಿಗೆ_ಉಳಿದವರು_SPಶೇಷಾದ್ರಿ #ದುರಂತ_ಕಥಾ_ನಾಯಕ_ಜಿ_ಎಸ್_ನಾಗರಾಜ್ #ಯಶಸ್ಸಿಗೆ_ಹಲವು_ಅಪ್ಪಂದಿರು_ಇರುತ್ತಾರೆ_ಸೋಲು_ಅನಾಥ_ಎಂಬ_ಗಾದೆ_ಸುಳ್ಳಲ್ಲ.    1995ರಲ್ಲಿ ಶಿವಮೊಗ್ಗದಿಂದ ಜಿ.ಎಸ್.ನಾಗರಾಜ್ ಸಂಪಾದಕತ್ವದಲ್ಲಿ ಪ್ರಾರಂಬಿಸಿದ #ಜನವಾರ್ತೆ ಪತ್ರಿಕೆ ಆ ಕಾಲದಲ್ಲಿ ಅನೇಕ ಪ್ರಥಮಗಳ ದಾಖಲೆ ಮಾಡಿತ್ತು.   ಡೆಮ್ಮಿಸೈಜಿನ (ಪ್ರಜಾವಾಣಿ ಸೈಜಿನಲ್ಲಿ) ನಾಲ್ಕು ಪುಟದ ಶಿವಮೊಗ್ಗ ಜಿಲ್ಲೆಯ ಮೊದಲ ದಿನ ಪತ್ರಿಕೆ ಜನವಾರ್ತೆ, ಸ್ವಂತದ್ದಾದ ಬೃಹತ್ ಆಫ್ ಸೆಟ್ ಮುದ್ರಣ ಯಂತ್ರ ಹೊಂದಿದ ಮೊದಲ ಸ್ಥಳಿಯ ದಿನ ಪತ್ರಿಕೆ ಮತ್ತು ಶಿವಮೊಗ್ಗ - ದಾವಣಗೆರೆ (ಆಗ ಚಿತ್ರದುರ್ಗ ಜಿಲ್ಲೆಯಲ್ಲಿತ್ತು) - ಚಿಕ್ಕಮಗಳೂರು - ಹಾಸನ ಜಿಲ್ಲೆಗಳಿಗೆ ಪ್ರಸಾರಣ ಹೊಂದಿದ್ದ ಮೊದಲ ಅಂತರ್ ಜಿಲ್ಲಾ ಪತ್ರಿಕೆ.    1995-2000 ಇಸವಿ ಅವಧಿಯಲ್ಲಿ ಶಿವಮೊಗ್ಗ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ನನಗೆ ಜನವಾರ್ತೆ ಪತ್ರಿಕೆ ನನ್ನ ಹೋರಾಟ, ಪತ್ರಿಕಾ ಹೇಳಿಕೆಗಳ ಪ್ರಕಟನೆ ಮುಖಾಂತರ ಹೆಚ್ಚಿನ ಸಹಾಯ ಮಾಡಲ...