Skip to main content

Posts

Showing posts with the label calsium and sodium after sufficient rain only this water comes out

Blog number 914. ಮದ್ಯಾಹ್ನ ಊಟ ಆಯಿತಾ ಎಂದು ಕೇಳುವ ಸಂಪ್ರದಾಯದಂತೆ ಮುಂಗಾರಿನ ಮಳೆಗಾಲದ ಮಧ್ಯದಲ್ಲಿ ನಿಮ್ಮಲ್ಲಿ ಜಲ ಒಡಿತಾ? ಒರತೆ ಎದ್ದಿದಿಯಾ? ಎಂಬ ಪ್ರಶ್ನೆ ಸಹಜ ಯಾಕೆ?

#ಮುಂಗಾರು_ಬಿರುಸಾಗಿದೆ_ಎಲ್ಲೆಡೆ #ತಣ್ಣನೆಯ_ಸುಳಿ_ಗಾಳಿ_ಬೀಸುತ್ತಿದೆ. #ಜಲದ_ಬುಗ್ಗೆ_ಒಡೆದಿದೆ. #ಪರಸ್ಪರವಾಗಿ_ಸಂಪ್ರದಾಯಿಕವಾಗಿ_ಕೇಳುವ_ಪ್ರಶ್ನೆ #ನಿಮ್ಮಲ್ಲಿ_ಜಲದ_ಕಣ್ಣು_ಒಡೆಯಿತಾ? #ನೀರಿನ_ಒರತೆ_ಎದ್ದಿದಿಯಾ?   ಜಲ-ಬುಗ್ಗೆ - ಒರತೆ ಮುಂತಾದ ಪ್ರಾದೇಶಿಕ ಭಾಷೆಯಲ್ಲಿ ಕರೆಯುವ ಮಳೆಗಾಲದ ನೀರಿನ ಒರತೆ ಎದ್ದಿತೂ ಅಂದರೆ ಆ ವರ್ಷದ ಮಳೆ ಭೂಮಿಗೆ ಹದವಾಗಿ ತಲುಪಿತು ಅಂತಲೇ ಅರ್ಥ, ಇತ್ತೀಚಿಗೆ ಎಷ್ಟೋ ಮಳೆಗಾಲದಲ್ಲಿ ಮಳೆ ಪ್ರಮಾಣ ಕಡಿಮೆಯಿಂದ ಜಲ ಒಡೆಯುವುದಿಲ್ಲ.   ಮಳೆ ಜಾಸ್ತಿ ಆಗಿ ಚಳಿಯ ಸುಳಿಗಾಳಿ ಪ್ರಾರಂಭ ಆಯಿತೆಂದರೆ ಜಲದ ಬುಗ್ಗೆಗಳು ಎದ್ದಿದೆ ಎಂದೇ ಅರ್ಥ.   ಭೂಮಿಯು ಸರಿಯಾದ ಮಳೆ ನೀರು ದಾರಣೆ ಆದರೆ ನೈಸರ್ಗಿಕ ಒತ್ತಡದಿಂದ ಭೂಮಿಯಲ್ಲಿನ ಹೆಚ್ಚು ಪ್ರಮಾಣದ ಸೀಪೇಜ್ ನೀರು ಭೂಮಿ ಒಡೆದು ಹೊರ ಬರುತ್ತದೆ.   ಒತ್ತಡ ಹೆಚ್ಚಿದ್ದಲ್ಲಿ ಬುಗ್ಗೆಯಾಗಿ ಚಿಮ್ಮುತ್ತದೆ, ಇದು ಆಯಾ ಪ್ರದೇಶದಲ್ಲಿ ಕೆಲವು ವಾರ - ತಿಂಗಳು ಹರಿಯುತ್ತದೆ, ಇನ್ನೂ ಕೆಲವು ವರ್ಷ ಪೂರ್ತಿ, ಕೆಲವು ಕಡೆ ಬಿಸಿ ನೀರಿನ ಬುಗ್ಗೆಗಳೂ ಇದೆ.   ಇಂಗ್ಲೀಷ್ ನಲ್ಲಿ Spring ಎನ್ನುವ ಈ ನೀರು ರಸ್ತೆ ಬದಿಯಲ್ಲಿ  ಬುಗ್ಗೆಯಾಗಿ ಬಂದರೆ ಕುಡಿಯುವುದು ಸೂಕ್ತವಲ್ಲ ಅದರಲ್ಲಿ ತ್ಯಾಜ್ಯದ ವಿಷದ ಅಂಶ ಇರುತ್ತದೆಂದು ನ್ಯೂಯಾರ್ಕಿನ ಆರೋಗ್ಯ ಇಲಾಖೆ ಎಚ್ಚರಿಸಿದೆ.   ಪಶ್ಚಿಮ ಘಟ್ಟ ಪ್ರದೇಶದಲ್ಲಿ ಈ ವರ್ಷದ ಮಳೆಗಾಲ ತಡವಾಗಿ ಆರಂಭವಾಗಿ ...