*#ನನ್ನ_ಚೊಚ್ಚಲ_ಕಥಾಸಂಕಲನ_ಅಚ್ಚಿನಲ್ಲಿ.* *#ನನ್ನ_ಕಾದಂಬರಿ_ಚಂಪಕಾರಾಣಿ_ಮುದ್ರಿಸಿದ_ಪತ್ರಕರ್ತ_ಶೃಂಗೇಶರದ್ದೇ_ಈ_ಮುದ್ರಣ* *#ಮುನ್ನುಡಿ_ಬರೆದವರು_ಪ್ರಖ್ಯಾತ_ಲೇಖಕ_ಅಂಕಣಕಾರ_ಅರವಿಂದ_ಜೊಕ್ಕಾಡಿಯವರು.* *#ಎಲ್ಲಾ_ಕಥೆ_ಓದಿಯೇ_ಮುನ್ನುಡಿ_ಬರೆದಿದ್ದಾರೆ.* *#ಬೆನ್ನುಡಿ_ಬರೆದವರು_ರಾಜ್ಯದ_ಪ್ರಖ್ಯಾತ_ರಾಜಕೀಯ_ಅಂಕಣಕಾರ_ಪತ್ರಕರ್ತ_ನಮ್ಮ_ತಾಲ್ಲೂಕಿನ_ಆರ್_ಟಿ_ವಿಠಲ_ಮೂರ್ತಿ.* *#ಶುಭ_ಹಾರೈಕೆ_ಶೃಂಗೇಶರದ್ದು* *ಈ ವರೆಗೆ ನಾನು ಬರೆದ ಸಣ್ಣ ಕಥೆಗಳು ನೂರಕ್ಕೂ ಹೆಚ್ಚು ಆದರೆ ಮೂಡು ಬಂದಾಗ ಸಿಕ್ಕ ಹಾಳೆಯಲ್ಲಿ ವೇಗವಾಗಿ ಬರೆದು ಯಾವುದೋ ಪುಸ್ತಕದ ಮಧ್ಯ ಇಡುವುದು ನಂತರ ಮರೆಯುವುದು ಹಾಗಾಗಿ ಅದನ್ನೆಲ್ಲ ಹುಡುಕಿ ಪುಸ್ತಕ ಮಾಡುವ ಯೋಚನೆ ಇದ್ದರೂ ಕಾರ್ಯಗತ ಆಗಿರಲಿಲ್ಲ.* *ಪತ್ರಕರ್ತ ಗೆಳೆಯರಾದ ಶೃಂಗೇಶ್ ಹಾಯ್ ಬೆಂಗಳೂರು ವರದಿಗಾರರಾಗಿ ಜೊತೆಗೆ ಶಿವಮೊಗ್ಗ ಜಿಲ್ಲಾ ಪತ್ರಿಕೆ ಆಗಿ ಜನ ಹೋರಾಟ ದಿನಪತ್ರಿಕೆ ಪ್ರಾರಂಬಿಸಿ ಅದಕ್ಕೆ ಜೀವ ತುಂಬಲು ಪ್ರಿಂಟಿಂಗ್ ಉದ್ಯಮ ಕೂಡ ಪ್ರಾರಂಬಿಸಿದ್ದರು ಹಾಗಾಗಿ ಅವರ ಹತ್ತಿರ ಒಂದೆರೆಡು ಸಣ್ಣ ಕಥಾ ಸಂಕಲನ ಮತ್ತು ಚಂಪಕಾರಾಣಿ ಕಾದಂಬರಿ ಮುದ್ರಣದ ಬಗ್ಗೆ ಚರ್ಚಿಸಿದ್ದೆ ಆದರೆ ಅದನ್ನೆಲ್ಲ ಹುಡುಕಿ ಅವರಿಗೆ ಕಳಿಸುವುದರಲ್ಲಿ ವಿಳಂಬ ಮಾಡಿದ್ದೆ.* *ಶೃಂಗೇಶರೇ ಒತ್ತಾಯ ಮಾಡಿ ಪದೇ ಪದೇ ನೆನಪು ಮಾಡಿದ್ದರಿಂದ 29 ಸಣ್ಣ ಕಥೆ ಮತ್ತು ಕಾದಂಬರಿ ಕಳಿಸಿದ್ದೆ, ನಾನು ಸ...