*#ನನ್ನ_ಕಾದಂಬರಿ_ಚಂಪಕಾರಾಣಿ_ಮುದ್ರಿಸಿದ_ಪತ್ರಕರ್ತ_ಶೃಂಗೇಶರದ್ದೇ_ಈ_ಮುದ್ರಣ*
*#ಮುನ್ನುಡಿ_ಬರೆದವರು_ಪ್ರಖ್ಯಾತ_ಲೇಖಕ_ಅಂಕಣಕಾರ_ಅರವಿಂದ_ಜೊಕ್ಕಾಡಿಯವರು.*
*#ಎಲ್ಲಾ_ಕಥೆ_ಓದಿಯೇ_ಮುನ್ನುಡಿ_ಬರೆದಿದ್ದಾರೆ.*
*#ಬೆನ್ನುಡಿ_ಬರೆದವರು_ರಾಜ್ಯದ_ಪ್ರಖ್ಯಾತ_ರಾಜಕೀಯ_ಅಂಕಣಕಾರ_ಪತ್ರಕರ್ತ_ನಮ್ಮ_ತಾಲ್ಲೂಕಿನ_ಆರ್_ಟಿ_ವಿಠಲ_ಮೂರ್ತಿ.*
*#ಶುಭ_ಹಾರೈಕೆ_ಶೃಂಗೇಶರದ್ದು*
*ಈ ವರೆಗೆ ನಾನು ಬರೆದ ಸಣ್ಣ ಕಥೆಗಳು ನೂರಕ್ಕೂ ಹೆಚ್ಚು ಆದರೆ ಮೂಡು ಬಂದಾಗ ಸಿಕ್ಕ ಹಾಳೆಯಲ್ಲಿ ವೇಗವಾಗಿ ಬರೆದು ಯಾವುದೋ ಪುಸ್ತಕದ ಮಧ್ಯ ಇಡುವುದು ನಂತರ ಮರೆಯುವುದು ಹಾಗಾಗಿ ಅದನ್ನೆಲ್ಲ ಹುಡುಕಿ ಪುಸ್ತಕ ಮಾಡುವ ಯೋಚನೆ ಇದ್ದರೂ ಕಾರ್ಯಗತ ಆಗಿರಲಿಲ್ಲ.*
*ಪತ್ರಕರ್ತ ಗೆಳೆಯರಾದ ಶೃಂಗೇಶ್ ಹಾಯ್ ಬೆಂಗಳೂರು ವರದಿಗಾರರಾಗಿ ಜೊತೆಗೆ ಶಿವಮೊಗ್ಗ ಜಿಲ್ಲಾ ಪತ್ರಿಕೆ ಆಗಿ ಜನ ಹೋರಾಟ ದಿನಪತ್ರಿಕೆ ಪ್ರಾರಂಬಿಸಿ ಅದಕ್ಕೆ ಜೀವ ತುಂಬಲು ಪ್ರಿಂಟಿಂಗ್ ಉದ್ಯಮ ಕೂಡ ಪ್ರಾರಂಬಿಸಿದ್ದರು ಹಾಗಾಗಿ ಅವರ ಹತ್ತಿರ ಒಂದೆರೆಡು ಸಣ್ಣ ಕಥಾ ಸಂಕಲನ ಮತ್ತು ಚಂಪಕಾರಾಣಿ ಕಾದಂಬರಿ ಮುದ್ರಣದ ಬಗ್ಗೆ ಚರ್ಚಿಸಿದ್ದೆ ಆದರೆ ಅದನ್ನೆಲ್ಲ ಹುಡುಕಿ ಅವರಿಗೆ ಕಳಿಸುವುದರಲ್ಲಿ ವಿಳಂಬ ಮಾಡಿದ್ದೆ.*
*ಶೃಂಗೇಶರೇ ಒತ್ತಾಯ ಮಾಡಿ ಪದೇ ಪದೇ ನೆನಪು ಮಾಡಿದ್ದರಿಂದ 29 ಸಣ್ಣ ಕಥೆ ಮತ್ತು ಕಾದಂಬರಿ ಕಳಿಸಿದ್ದೆ, ನಾನು ಸುಮಾರು 1995 ರಿಂದ ಬರೆದ ಸಣ್ಣ ಕಥೆಗಳು ನನಗೆ ಪುನಃ ಓದಲು ಇಷ್ಟ ಆಗುವುದಿಲ್ಲ ಆದರೆ ಡಿಟಿಪಿ ಮಾಡುವವರಿಗೆ ನನ್ನ ಅಕ್ಷರ ಗೊತ್ತಾಗದಂತ ಬ್ರಹ್ಮಲಿಪಿ ( ವೇಗದ ಅವಸರ ಬರವಣಿಗೆ) ಇದು ಶೃಂಗೇಶರೇ ಒಂದು ರೀತಿ ಡಿಕೋಡ್ ಮಾಡಿದರೆಂದರೆ ತಪ್ಪಲ್ಲ.*
*ಹೀಗೆ ನನ್ನ ಬರವಣಿಗೆ ಪುಸ್ತಕ ರೂಪಕ್ಕೆ ಬರುವ ಹಂತದಲ್ಲಿ ಮೊದಲಿಗೆ ಸಣ್ಣ ಕಥೆಗಳ ಸಂಕಲನ ನಂತರ ಸಾಧ್ಯವಾದರೆ ಮಾತ್ರ ಬೆಸ್ತರ ರಾಣಿ ಚಂಪಕಾ ಅಂತ ನಿರ್ದರಿಸಿದ್ದೆ ಆದರೆ ಶೃಂಗೇಶ್ ಜೇಷ್ಟತಾ ಪಟ್ಟಿಯಲ್ಲಿ ಕಾದಂಬರಿಯೇ ಮೊದಲಾಯಿತು.*
*ಕೆಳದಿ ಸಾಮ್ರಾಜ್ಯದಲ್ಲಿ ಕಳೆದು ಹೋದ (ಉದ್ದೇಶ ಪೂರ್ವ ಕ) ರಾಜರ ದುರಂತ ಪ್ರೇಮ ಕಥೆ ಅದರ ಸ್ಮಾರಕ, ಇಟಲಿ ಪ್ರವಾಸಿ ಪತ್ರಗಳಲ್ಲಿ ಇದ್ದದ್ದು ನನ್ನ ಕಾಲ್ಪನಿಕ ಕಾದಂಬರಿ (ಸಂಶೋದಕರಿಗೆ ಹೆದರಿ) ಅಂತ ಕೆಳದಿ ಸಾಮ್ರಾಜ್ಯ ಇತಿಹಾಸ ಮರೆತ ಬೆಸ್ತರ ರಾಣಿ ಚಂಪಕಾ ನನ್ನ ಮನಸ್ಸಿಗೆ ಸಂತೃಪ್ತಿ ತರುವಂತೆ ಅರ್ಹ ಓದುಗರಿಂದ ಮೆಚ್ಚುಗೆ ಪಡೆಯಿತು ಮತ್ತು ನನ್ನ ಅತ್ಯಾಸೆ ಆಗಿದ್ದ ಈ ಸ್ಮಾರಕದ ಸಂಶೋದನೆಗಳು ಮಾಡಲು ಅನೇಕರು ಮುಂದೆ ಬಂದಿದ್ದಾರೆ.*
*ಮುದ್ರಣ ಆಗಿ ಕೆಲ ದಿನದಲ್ಲಿ ಓದಲು ಸಿಗಲಿರುವ 29 ಸಣ್ಣ ಕಥೆಗಳಲ್ಲಿ ಬರುವ ನನ್ನ ಮಗನ ಪ್ರೀತಿಯ ಪ್ರಚಂಡ ಬೆಕ್ಕು ಪಾಣಿ "ಬಿಲಾಲಿ ಬಿಲ್ಲಿ" ಅಂತ ಹೆಸರು ಪಡೆದಿತ್ತು ಅದರದ್ದೇ ಒಂದು ಕಥೆ ಈ ಕಥಾ ಸಂಕಲನದಲ್ಲಿದೆ ಈ ಕಥೆ ಅರವಿಂದ್ ಚೊಕ್ಕಾಡಿಯವರಿಗೂ ಹಿಡಿಸಿದೆ, ಪುಸ್ತಕದ ಮುಖಪುಟದಲ್ಲಿ ನಮ್ಮ ಮುದ್ದಿನ ಬೆಕ್ಕಿನ ಪೋಟೋಗು ಜಾಗದ ಅವಕಾಶ ಆಗಿದೆ (ಬೆಕ್ಕು ಈಗ ಇಲ್ಲ).*
Comments
Post a Comment