#ಆನಂದಪುರಂ_ಇತಿಹಾಸ.
#ಆನಂದಪುರಂ_ಕ್ರೈಸ್ತ_ಬಾಂದವರ_ಚರ್ಚ್_ಯಡೇಹಳ್ಳಿಯಲ್ಲಿದೆ.
#1936ರ_ಮೊದಲು_ಪ್ರಾರ್ಥನೆಗಳು_ಬ್ರಿಟೀಷ್_ಬಂಗ್ಲೆ_ಈಗಿನ_ಪ್ರವಾಸಿಮಂದಿರದಲ್ಲಿ
#ಸಂತ_ಜೂದ್_ತದೆಯಸರ_ಚರ್ಚ್_1936ರಲ್ಲಿ_ಪ್ರಾರಂಭ_ಆಯಿತು
#ಕೊ೦ಕಣಿ_ಬಾಷೆಯ_ಕರಾವಳಿ_ಭಾಗದಿಂದ_ಬಂದ_ಹನ್ನೊಂದು_ಕುಟುಂಬದವರಿಗಾಗಿ_ಈ_ಚರ್ಚ್_ಪ್ರಾರಂಭ_ಆಗಿತ್ತು.
1930 ರ ದಶಕದಲ್ಲಿ ಕರಾವಳಿ ತೀರದ ಬೈಂದೂರು ಭಾಗದಿಂದ ಕೆಲ ಕೊಂಕಣಿ ಬಾಷಾ ಕ್ರೈಸ್ತ ಧರ್ಮಿಯರು ಆನಂದಪುರಂಗೆ ಬಂದು ನೆಲೆಸುತ್ತಾರೆ, ಆನಂದಪುರಂ ನಲ್ಲಿ ನೈಸರ್ಗಿಕವಾಗಿ ದೊರೆಯುವ ಕೆಂಪು ಕಲ್ಲು ಜಂಬಿಟ್ಟಿಗೆ ತೆಗೆಯಲು ಬಂದವರಿವರು.
ಆಗ ಕೈಯಲ್ಲೇ ಕಲ್ಲು ತೆಗೆಯುವ ಕುಶಲ ಕರ್ಮಿಗಳಾದ ಇವರು ಬೈಂದೂರು ಭಟ್ಕಳಗಳಲ್ಲಿ ಇದೇ ವೃತ್ತಿ ಮಾಡಿದವರು, ಇಲ್ಲಿಗೆ ಬಂದ ಕೆಲ ಕುಟುಂಬ ಇಲ್ಲೇ ನೆಲೆಸಿದರು, ಇವರ ಸಂಪರ್ಕದಿಂದ ಬಂದ ಬೇರೆ ಕುಟುಂಬಗಳು ಕೃಷಿ ಕೆಲಸದಲ್ಲಿ ತೊಡಗಿದರು, ಜಂಬಿಟ್ಟಿಗೆ ಕಲ್ಲು ಕಟ್ಟುವ ಗಾರೆ ಕೆಲಸದವರೂ ಬಂದರೂ, ಸರ್ಕಾರಿ ಉದ್ಯೋಗ ಪಡೆದವರೂ ಆನಂದಪುರಂನ ಯಡೇಹಳ್ಳಿಯಲ್ಲಿಯೇ ಗುಂಪಾಗಿ ನೆಲೆಸಿದರು.
ಹನ್ನೊಂದು ಕ್ರೈಸ್ತ ಕುಟುಂಬಗಳ ಪ್ರಾಥ೯ನೆ ಪೂಜೆಗಳು ಪ್ರತಿ ಭಾನುವಾರ ಯಡೇಹಳ್ಳಿಯ ಬ್ರಿಟೀಷ್ ಬಂಗ್ಲೆಯಲ್ಲಿ (ಈಗಿನ ಪ್ರವಾಸಿ ಮಂದಿರದಲ್ಲಿ) ಹನ್ನೊಂದು ಕುಟುಂಬದ ಐವತ್ತೈದು ಜನರ ಜೊತೆ ಅಂದಿನ ಕ್ರೈಸ್ತ ಗುರುಗಳಾದ ವಂದನೀಯ ಸ್ವಾಮಿ ಜೆ.ಬಿ.ಡಿಸೋಜರಿಂದ ಪ್ರಾರಂಭವಾಯಿತು.
1962 ರಲ್ಲಿ ಮೈಸೂರಿನ ಕ್ರೈಸ್ತ ದರ್ಮ ಪ್ರಾಂತ್ಯದ ದರ್ಮಾದ್ಯಕ್ಷರಾದ ವಂ. ಸ್ವಾಮಿ ಪೂಜ್ಯರಾದ ಪಾಲ್ ರು ಸಂತ ಪಿಲೋಮಿನರಿಗೆ ಅರ್ಪಿತವಾದ ಸಣ್ಣ ದೇವಾಲಯ ನಿರ್ಮಿಸಲು ಒಪ್ಪಿಗೆ ನೀಡಿದಾಗ ಯಡೇಹಳ್ಳಿಯ ಹೊಸನಗರ ರಸ್ತೆಯ ಪ್ರವಾಸಿ ಮಂದಿರದ ಎದುರಿನ ರೈಲು ಮಾರ್ಗದ ಈ ಭಾಗದಲ್ಲಿ ಪಶ್ಚಿಮ ದಿಕ್ಕಿಗೆ ಮುಖವಾಗಿ ಸಣ್ಣ ಚರ್ಚ್ ನಿರ್ಮಿಸಿ ಪೂಜೆ ಪ್ರಾಥ೯ನೆ ಪ್ರಾರಂಬಿಸಲಾಯಿತು.
1974 ರಲ್ಲಿ ವಂ ಸ್ವಾಮಿ ಆಲ್ವೋ ನ್ಸ್ ಮತಿಯಾಸ್ ದರ್ಮಾದ್ಯಕ್ಷರು ಚಿಕ್ಕಮಗಳೂರು ಧರ್ಮ ಪ್ರಾಂತ್ಯ ಇವರ ಅನುಮತಿ,ಸಹಾಯ ಮತ್ತು ಸಹಕಾರದಿಂದ ಈಗಿರುವ ಸಂತ ಜೂದ್ ತದೆಯಸರ ದೇವಾಲಯ ನಿರ್ಮಾಣವಾಯಿತು.
1989 ರಿಂದ 1990ರವರೆಗೆ ಪ್ರಪ್ರಥಮ ದರ್ಮ ಕೇಂದ್ರದ ಗುರುವಾಗಿ ವಂ. ಸ್ವಾಮಿ ಎಸ್.ಆರ್. ಪೀಟರ್ ಅರುಳ್ ಕಾಯ೯ನಿರ್ವಹಿಸಿದರು.
1998 ರಲ್ಲಿ ಸಂತ ಜೋಸೆಪರ ಕನ್ಯಾಸ್ತ್ರಿ ಮಠ ಪ್ರಾರಂಭ ಆಯಿತು, 1999 ರಲ್ಲಿ ಚಚ್೯ ಪುನಃ ನವೀಕರಣಗೊಳಿಸಲಾಯಿತು.
ಕನ್ಯಾಸ್ತ್ರಿ ಮಠದಿಂದ ಸಮಾಜ ಸೇವಾ ಕೇಂದ್ರ, ಆರೋಗ್ಯ ಕೇಂದ್ರ,ನರ್ಸರಿ ಶಾಲೆ ನಡೆಯುತ್ತಿದೆ.
2003 ರಲ್ಲಿ ದೇವಾಲಯದ ಮುಂಬಾಗದಲ್ಲಿ ಅದ್ಭುತ ಮಾತಾ ಮಂದಿರವೂ ನಿರ್ಮಾಣ ಆಗಿದೆ.
Comments
Post a Comment