ಭಾಗ - 55, ಆನಂದಪುರಂ ಇತಿಹಾಸ, ಮೈಸೂರು ಚಲೋ ಚಳವಳಿಯಲ್ಲಿ ಆನಂದಪುರಂ ಬದರಿನಾರಾಯಣಯ್ಯ೦ಗಾರರು ಮತ್ತು ಎ.ರಾಮರಾವ್ ಬಾಗವಹಿಸಿ ಜೈಲಿಗೆ ಹೋದವರು, ಈ ಚಳವಳಿಯಲ್ಲಿ ಭಾಗವಹಿಸಿದ್ದ ಕಾಗೋಡು ಕೆ.ಜಿ.ಒಡೆಯರ್ ಪಾರ್ಲಿಮೆಂಟ್ ಸದಸ್ಯರಾಗಿದ್ದು ಮತ್ತು ಎ.ಆರ್. ಬದರಿನಾರಾಯಣ ಅಯ್ಯಂಗಾರರು ವಿದ್ಯಾ ಮಂತ್ರಿಗಳಾಗಿದ್ದು ಇತಿಹಾಸ.
#ಆನಂದಪುರಂ_ಇತಿಹಾಸ.
#ಸ್ವಾತಂತ್ರ್ಯ_ನಂತರ_ನಡೆದ_ಮೈಸೂರು_ಚಲೋ_ಚಳವಳಿ
#ಚಳವಳಿಯಲ್ಲಿ_ಭಾಗವಹಿಸಿ_ಜೈಲು_ಸೇರಿದವರಲ್ಲಿ_ಆನಂದಪುರಂನಿಂದ_ಇಬ್ಬರು.
#ಬದರಿನಾರಾಯಣಯ್ಯಂಗಾರ್_ಮತ್ತು_ರಾಮರಾವ್.
1947 ಆಗಸ್ಟ್ 15ಕ್ಕೆ ಸ್ಟಾತಂತ್ರ್ಯ ಲಭಿಸಿ ಈಗ 75 ನೇ ವರ್ಷಾಚಾರಣೆಯಲ್ಲಿದ್ದೇವೆ ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣಿ ಮತ್ತು ಆ ಕುಟುಂಬಗಳನ್ನು ಪ್ರೀತಿಯಿಂದ ಆಧರಿಸುವ ಈ ಸಂದರ್ಭದಲ್ಲಿ ಸಾಗರ ತಾಲ್ಲೂಕಿನಲ್ಲಿ ನಡೆದ ಮೈಸೂರು ಚಲೋ ಚಳವಳಿ ನೆನಪಿಸಿ ಕೊಳ್ಳಬೇಕಾಗಿದೆ.
ಇದು ಬ್ರಿಟಿಷರ ವಿರುದ್ದ ನಡೆದ ಸ್ವಾತಂತ್ರ್ಯ ಚಳವಳಿ ಅಲ್ಲ, ಮೈಸೂರು ಸರಕಾರವು ಸ್ವತಂತ್ರ ಭಾರತದಲ್ಲಿ ಐಕ್ಯವಾಗಿ ಅರಸೊತ್ತಿಗೆ ಅಳಸಿಹಾಕಲು ಮೀನಾ - ಮೇಷ ಎಣಿಸಿತ್ತು ಆದ್ದರಿಂದ ಕಾಂಗ್ರೇಸ್ #ಮೈಸೂರು_ಚಲೋ ಚಳವಳಿಗೆ ಕರೆ ಕೊಟ್ಟಿತ್ತು.
ಈ ಚಳವಳಿ ಮೈಸೂರು ರಾಜ್ಯದಲ್ಲಿ ಎಲ್ಲೆಡೆ ಹಬ್ಬಿ ಉಗ್ರ ರೂಪ ತಾಳಿತು, ಇದಕ್ಕೆ ಎಲ್ಲೆಲ್ಲೂ ರೈಲು ಚಳವಳಿ, ವಿದ್ಯಾರ್ಥಿ ಚಳವಳಿ, ಪೋಲಿಸರ ಮುಷ್ಕರಗಳಿಂದಲೂ ಚಳವಳಿಯ ಪರಿಣಾಮ ಪ್ರಚಂಡವಾಗಿ ಅರಮನೆ, ಆಳರಸರು ಅವರ ಸಕಾ೯ರ ಮತ್ತು ಅದರ ದಿವಾನ್ ಅರ್ಕಾಟ್ ಲಕ್ಷ್ಮಣ ಸ್ವಾಮಿ ಮೊದಲಿಯಾರ್ ಸಾಹೇಬರು ಮಣಿದರು.
13- ಅಕ್ಟೋಬರ್ -1947ರಲ್ಲಿ ಮಹಾರಾಜರು "ಪ್ರಜಾಪ್ರತಿನಿದಿಗಳ ಮಂತ್ರಿ ಮಂಡಲ ಸ್ಥಾಪನೆ ಆಗಿದೆ" ಎಂದು ಘೋಷಿಸಿದರು, 24- ಅಕ್ಟೋಬರ್ - 1947 ರಂದು ಮೈಸೂರಿನಲ್ಲಿ ಜನತಾ ಸರಕಾರ ಸ್ಥಾಪನೆಯಾಗಿ ಕೆ.ಸಿ.ರೆಡ್ಡಿಯವರು ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದರು.
ಅಧಿಕಾರ ಸ್ವೀಕರಿಸಿದ ಮುಖ್ಯಮಂತ್ರಿ ಕೆ.ಸಿ.ರೆಡ್ಡಿಯವರು ಅರಮನೆಯ ಸತ್ಯಾಗ್ರಹದಲ್ಲಿ ಭಾಗವಹಿಸಿ ಜೈಲು ಸೇರಿದವರನ್ನು ಬಿಡುಗಡೆ ಮಾಡಿ ಆದೇಶಿಸುತ್ತಾರೆ.
ಈ ಆರಮನೆ ಸತ್ಯಾಗ್ರಹ ಸಾಗರದ ತಾಲ್ಲೂಕ್ ಕಛೇರಿ (ಗಣಪತಿ ದೇವಸ್ಥಾನದ ಎದರು ಇತ್ತು.) ಎದುರು ಕಛೇರಿ ನೌಕರರು ಒಳ ಹೋಗದಂತೆ ತಡೆದು, ಕಛೇರಿ ಮೇಲೆ ದ್ವಜ ಹಾರಿಸಿದಾಗ ಪೋಲಿಸರು ಲಾಠಿ ಪ್ರಹಾರ ಮಾಡಿ ಎಲ್ಲರನ್ನು ಬಂಧಿಸುತ್ತಾರೆ ಆಗ ಪ್ಲೇಗ್ ಅಂಟು ರೋಗ ಹರಡಿದ ಕಾಲವಾದ್ದರಿಂದ ಸಾಗರದ ಜೈಲಿನ ಒಳಗೆ ಹೋಗಲು ಚಳವಳಿಗಾರರು ವಿರೋದಿಸಿದರೂ ಪೋಲಿಸರು ಬಲ ಪ್ರಯೋಗಿಸಿ ಜೈಲಿನಲ್ಲಿ ಹಾಕುತ್ತಾರೆ.
ಬದರಿನಾರಾಯಣ ಅಯ್ಯಂಗಾರರು ಶಿವಮೊಗ್ಗದಲ್ಲಿ ವಕೀಲರಾಗಿ ಮತ್ತು ಕಾಂಗ್ರೇಸ್ ಮುಖಂಡರಾಗಿರುತ್ತಾರೆ ಅಯ್ಯಂಗಾರರ ಕುಟುಂಬ ದೇಶಭಕ್ತಿಯಲ್ಲಿ ಯಾವತ್ತೂ ಹಿಂದೆ ಹೆಜ್ಜೆ ಇಟ್ಟಿರುವುದಿಲ್ಲ ಆದರೆ ಮೈಸೂರು ಅರಸರ ಸಂಬಂದಗಳು ಇವರಿಗೆ ಮೈಸೂರು ಮಹಾರಾಜರ ಮೇಲೆ ವಿಶೇಷ ಗೌರವ ಇರುವ ಸಂದರ್ಭದಲ್ಲಿ ಬದರಿನಾರಾಯಣ ಅಯ್ಯಂಗಾರ್ ರ ತಂದೆ ರಾಮಕೃಷ್ಣ ಅಯ್ಯಂಗಾರರ ವಿರೋದದ ನಡುವೆ ಬದರಿನಾರಾಯಣ ಅಯ್ಯಂಗಾರ್ ಕಾಂಗ್ರೇಸ್ ನೀಡಿದ ಕರೆ "ಮೈಸೂರು ಚಲೋ" ಗೆ ಆನಂದಪುರಂ ನ ಇನ್ನೋರ್ವ ಸ್ವಾತಂತ್ರ ಹೋರಾಟಗಾರ ರಾಮರಾವ್ ಕರೆದುಕೊಂಡು ಭಾಗ ವಹಿಸುತ್ತಾರೆ.
ಅವತ್ತು ಈ ಚಳವಳಿಯಲ್ಲಿ ಭಾಗವಹಿಸಿದ ಪ್ರಮುಖರು ಕಾಗೋಡಿನ ಕೆ.ಜಿ. ಒಡೆಯರ್, ಶಿರವಂತೆ ಹೆಚ್.ಎಲ್.ವೀರಭದ್ರಪ್ಪ ಗೌಡರು,ಹೆಚ್.ಗಣಪತಿಯಪ್ಪನವರು, ಸಾಗರದ ಪ್ರಖ್ಯಾತ ವಕೀಲರಾದ ಮೃತ್ಯುಂಜಯ ಭಾಪಟ್, ಬರಸಿನ ಧ್ಯಾವಪ್ಪ, ಸಾಗರದ ತುಳುಜಪ್ಪ, ವೆಂಕಟರಾವ್, ಸೀತಾರಾಮ ರಾವ್, ಭದ್ರಪ್ಪ, ಮಂಚಾಲೆ ಗಣಪತಿ, ಉಳ್ಳೂರು ಸುಬ್ಬರಾವ್, ಬಸವಣ್ಣಪ್ಪ ಮುಂತಾದವರು.
ಮುಂದಿನ ದಿನದಲ್ಲಿ ಕಾಗೋಡಿನ ಕೆ.ಜಿ.ಒಡೆಯರ್ ಲೋಕಸಭಾ ಸದಸ್ಯರಾಗಿದ್ದು, ಬದರಿನಾರಾಯಣ ಅಯ್ಯಂಗಾರ್ ಶಾಸಕರಾಗಿ ವಿದ್ಯಾ ಮಂತ್ರಿಗಳಾಗಿದ್ದು ಇತಿಹಾಸ.
Comments
Post a Comment