ಭಾಗ - 57, ಆನಂದಪುರಂ ಇತಿಹಾಸ, ದೇಶದ ಮೊದಲ ಪ್ರದಾನಿ ಜವಾಹರಲಾಲ್ ರ ಆನಂದಪುರಂ ಬೇಟಿ, ಜೊತೆಗೆ ಪುತ್ರಿ ಇಂದಿರಾಗಾಂಧಿ, ಅಯ್ಯಂಗಾರ್ ಕುಟು೦ಬದ ಸಾರಥ್ಯ ಮತ್ತು ರಾಜ ಪ್ರತಿನಿದಿಗಳಾಗಿದ್ದ ಕಾಗೋಡಿನ ಕೆ.ಜಿ.ಒಡೆಯರ್ ನೇತೃತ್ವ.
#ಆನಂದಪುರಂ_ಇತಿಹಾಸ
#ಆನಂದಪುರಂಗೆ_ಪ್ರದಾನಿ_ನೆಹರೂ.
#ಮಗಳು_ಇಂದಿರಾ_ಜೊತೆ_ಜೋಗ್_ಜಲಪಾತ_ಪ್ರವಾಸ.
#ಆನಂದಪುರಂ_ಪ್ರೌಡಶಾಲೆ_ಎದರು_ಗಿಡ_ನೆಡುತ್ತಾರೆ.
ಸ್ವಾತಂತ್ರ್ಯ ನಂತರ ದೇಶದ ಪ್ರದಾನ ಮಂತ್ರಿ ಜವಾಹರಲಾಲ್ ನೆಹರೂರವರು ಜೋಗ ಜಲಪಾತ ವೀಕ್ಷಿಸಲು ಬರುವ ಕಾರ್ಯಕ್ರಮ ನಿಗದಿ ಅಗುತ್ತದೆ.
ಶಿವಮೊಗ್ಗ ಮಾರ್ಗವಾಗಿ ಆನಂದಪುರಂ ಮೇಲೆ ಜೋಗ್ ಫಾಲ್ಸ್ ಗೆ ಹೋಗುವುದರಿಂದ ಆನಂದಪುರಂ ನಲ್ಲಿ ಪ್ರದಾನ ಮಂತ್ರಿಗಳು ಒಂದು ಬೇಟಿ ಮಾಡುವ ಕಾರ್ಯಕ್ರಮ ನಿಗದಿ ಮಾಡಿಸಲು ಜಮೀನ್ದಾರ್ ರಾಮಕೃಷ್ಣ ಅಯ್ಯಂಗಾರರು ಮತ್ತು ಅವರ ಪುತ್ರರಾದ ವೆಂಕಟಾಚಲ ಅಯ್ಯಂಗಾರ್ ಮತ್ತು ಬದರಿನಾರಾಯಣಯ್ಯಂಗಾರ್ ಯಶಸ್ವಿ ಆದ ಮತ್ತು ಐತಿಹಾಸಿಕ ಘಟನೆಗೆ ಕಾರಣರಾದ ಘಟನೆ ನಿಜಕ್ಕೂ ರೋಚಕ ಮತ್ತು ರೋಮಾಂಚನದ ವಿಷಯವಾಗಿತ್ತು ಆ ಕಾಲದಲ್ಲಿ.
ಅಯ್ಯಂಗಾರ್ ಕುಟುಂಬದ ಆತ್ಮೀಯರಾದ ಕೆ.ಜಿ. ಒಡೆಯರ್ (ಶಿವಮೊಗ್ಗ ಲೋಕಸಭಾ ಪ್ರಥಮ ಸದಸ್ಯರಾಗಿ ನಂತರ ಚುನಾವಣೆಯಲ್ಲಿ ಗೆಲ್ಲುತ್ತಾರೆ) ಪ್ರದಾನಿ ನೆಹರೂರವರ ಆನಂದಪುರಂ ಬೇಟಿ ನಿಗದಿಗೊಳಿಸುತ್ತಾರೆ.
ಆನಂದಪುರಂ ಪ್ರೌಡ ಶಾಲೆ ಎದುರಿಗೆ ಇಕ್ಕೆಲದಲ್ಲಿ ಮೈಸೂರು ಮಹಾರಾಜರ ಆ ಕಾಲದಲ್ಲಿ ಮೈಸೂರು ರಾಜ್ಯದ ಎಲ್ಲಾ ಹೆದ್ದಾರಿಗಳಲ್ಲಿ ಸಾಲು ಮರಗಳಾಗಿ (ಆಯಾ ಪ್ರದೇಶದ ಹವಾಮಾನಕ್ಕೆ ತಕ್ಕ ಹಾಗೆ) ದೂಪ, ಹಲಸು, ಮಾವು,ಆಲ, ಅರಳಿ ಮರಗಳನ್ನು ಬೆಳೆಸಿದ್ದು ಅದು ಸಮೃದ್ದವಾಗಿ ಪ್ರಯಾಣಿಕರಿಗೆ ಜನ ಮತ್ತು ಜಾನುವಾರಿಗೆ ನೆರಳು ನೀಡುತ್ತಿದ್ದದ್ದನ್ನು ಪ್ರದಾನಿಯವರಿಗೆ ವಿವರಿಸುವ ಮತ್ತು ಪ್ರದಾನಿಯವರು ವೀಕ್ಷಿಸುವ ಕಾರ್ಯಕ್ರಮವದು.
ಪ್ರೌಡ ಶಾಲೆ (ಈಗಿನ ಪದವಿ ಪೂವ೯ ಕಾಲೇಜ್) ಎದರು ಪ್ರದಾನಿಯವರನ್ನು ಸ್ಥಳಿಯರು ಸ್ವಾಗತಿಸುವುದು, ಪ್ರಧಾನಿಯವರ ಬೇಟಿ ಸ್ಮರಣಾರ್ಥ ಗೊಳಿಸಲು ಒಂದು ಗಿಡ ನೆಡಿಸುವುದು ನಂತರ ರಸ್ತೆಯ ಇಕ್ಕೆಲದಲ್ಲಿ ಶಿಸ್ತಾಗಿ ನಿಂತ ಶಾಲಾ ಮಕ್ಕಳು ಮತ್ತು ಆನಂದಪುರಂ ನಿವಾಸಿಗಳಿಗೆ ಪ್ರದಾನ ಮಂತ್ರಿಗಳಿಗೆ ಶುಭ ಹಾರೈಸಲು ಮತ್ತು ಶುಭ ಹಾರೈಕೆ ಸ್ಪೀಕರಿಸಲು ಪ್ರದಾನಿಗಳು ಸ್ವಲ್ಪ ದೂರ ನಡೆದು ಹೋಗುವುದು ಕಾರ್ಯಕ್ರಮ ಮತ್ತು ಈ ಕಾರ್ಯಕ್ರಮ ಹೆಚ್ಚು ಸಮಯ ತೆಗೆದುಕೊಳ್ಳದಂತೆ ನಿಗದಿ ಆಗುತ್ತದೆ.
ರಾಜ ಪ್ರಮುಖರಿಂದ ಗಣ್ಯರಿಗೆಲ್ಲ ರಾಜ ಪರಿವಾರದ ರಾಜ ಪೋಷಾಕನ್ನು ಧರಿಸಿ ನಿಗದಿತ ಸಮಯದಲ್ಲಿ ನಿಗದಿತ ಜಾಗದಲ್ಲಿ ನೆರೆಯುವ ವಿನಂತಿ ತಲುಪಿಸಿರುತ್ತಾರೆ.
ಆನಂದಪುರಂನ ಭೂ ಮಾಲಿಕರು, ಕೊಡುಗೈ ದಾನಿಗಳು ಮತ್ತು ಇನಾಂದಾರರಾದ ರಾಮಕೃಷ್ಣ ಅಯ್ಯಂಗಾರವರು ಅವರ ಪುತ್ರರಾದ ವೆಂಕಟಾಚಲಯ್ಯಂಗಾರ್ ಮತ್ತು ಬದರಿನಾರಾಯಣ ಅಯ್ಯಂಗಾರ್ ಜೊತೆ ಆನಂದಪುರಂನ ಗಣ್ಯರೆಲ್ಲ ನೆರೆದಿರುತ್ತಾರೆ ಸಮಯಕ್ಕೆ ಸರಿಯಾಗಿ ಪ್ರದಾನ ಮಂತ್ರಿ ಜವಾಹರಲಾಲ್ ರು ಪುತ್ರಿ ಇಂದಿರಾಗಾಂಧಿ ಮತ್ತು ರಾಜ ಪ್ರಮುಖರಾದ ಕಾಗೋಡು ಕೆ.ಜಿ. ಒಡೆಯರ್ ಜೊತೆ ಆನಂದಪುರಂ ಪ್ರೌಡ ಶಾಲೆಯ ಗೇಟಿನ ಎದರು ಕಾರಿಂದ ಇಳಿಯುತ್ತಾರೆ.
ಅಯ್ಯಂಗಾರ್ ಕುಟುಂಬ ಮತ್ತು ಸ್ಥಳಿಯರಿಂದ ಸ್ವಾಗತ ಸ್ವೀಕರಿಸಿ ನಂತರ ರಾಜ ಪ್ರಮುಖರಾದ ಕಾಗೋಡಿನ ಕೆ.ಜಿ. ಒಡೆಯರ್ ರಿಂದ ಮೈಸೂರು ರಾಜರಿಂದ ರಾಜ್ಯದಾದ್ಯಂತ ಬೆಳೆಸಿದ ಸಾಲು ಮರದ ಬಗ್ಗೆ ವಿವರಣೆ ತಿಳಿದುಕೊಳ್ಳುತ್ತಾರೆ.
ಆನಂದಪುರಂಗೆ ದೇಶದ ಪ್ರಧಾನಿಗಳ ಆಪೂವ೯ ಬೇಟಿ ಸದಾ ಸ್ಮರಣೆಯಲ್ಲಿರಲಿ ಎಂದು ಸಸಿ ಒಂದು ನೆಡುತ್ತಾರೆ, ನಂತರ ಶಾಲಾ ಗಡಿಯವರೆಗೆ (ಈಗಿನ ವಿದ್ಯುತ್ ಇಲಾಖೆ ಕಛೇರಿ ವರೆಗೆ) ಹಸನ್ಮುಖರಾಗಿ ಎರೆಡೂ ಕೈ ಮುಗಿದು ನಡೆಯುತ್ತಾರೆ.
ರಸ್ತೆಯ ಇಕ್ಕೆಲದಲ್ಲಿ ಶಿಸ್ತಾಗಿ ಸಾಲಾಗಿ ನಿಂತ ವಿದ್ಯಾರ್ಥಿ ವೃಂದ ಮತ್ತು ಆನಂದಪುರಂ ಜನತೆ ಈ ಐತಿಹಾಸಿಕ ಘಟನೆಯಿಂದ ಪುಳಕಿತರಾಗಿ ಸಾಕ್ಷಿಗಳಾಗುತ್ತಾರೆ.
ಪ್ರದಾನಿ ಜವಾಹರಲಾಲ್ ನೆಹರು ಆನಂದಪುರಂ ಬೇಟಿ ನೆನಪು ಮಸುಕಾಗಿದೆ ಹಾಗೇ ನೆಹರೂರವರು ನೆಟ್ಟಿದ ಸಸಿ ಮರವಾಯಿತಾ? ಅದು ಯಾವ ಮರ? ಎಂಬುದು ಯಾರಿಗೂ ನೆನಪಿಲ್ಲದಿರುವುದು ವಿಪರ್ಯಾಸವಾಗಿದೆ.
Comments
Post a Comment