ಭಾಗ-53, ಆನಂದಪುರಂ ಇತಿಹಾಸ, ಆಚಾರ್ಯ ವಿನೋಬಾ ಭಾವೆಯವರಿಗೆ ತನ್ನ ಫಲವತ್ತಾದ 5 ಎಕರೆ ಜಮೀನು ಬದರೀ ನಾರಾಯಣ ಅಯ್ಯ0ಗಾರ್ ಸಹೋದರರ ಪ್ರೇರಣೆಯಿಂದ ಭೂದಾನ ಮಾಡಿದ ಇರುವಕ್ಕಿ ಕುಂಬಾರ ಚೌಡ ಶೆಟ್ಟರು ಮಹಾದಾನಿಗಳು.
#ಆನಂದಪುರಂ_ಇತಿಹಾಸ
#ಇರುವಕ್ಕಿ_ಕುಂಬಾರ_ಚೌಡಶೆಟ್ಟರು_ಫಲಭರಿತ_ತರಿ_ಜಮೀನು_ಭೂದಾನ_ಮಾಡಿದ್ದು.
#ಮಂಡಲ್_ಪಂಚಾಯ್ತಿ_ಸದಸ್ಯರಾಗಿದ್ದ_ಕುಂಬಾರ್_ಬಸಪ್ಪರ_ತಂದೆ.
#ಸ್ವತಃ_ಭೂದಾನ_ಸ್ಪೀಕರಿಸಿದ_ವಿನೋಬಾ_ಭಾವೆ.
#ಎಣ್ಣೆಕೊಪ್ಪದ_ಮಲ್ಲಿಕಾಜು೯ನ_ಗೌಡರಿಂದ_ಜಿಲ್ಲೆಯಲ್ಲಿ_ಭೂದಾನ_ಚಳವಳಿ_ಯಶಸ್ವಿ
#ಭೂದಾನ_ಮಾಡಿದ_ಆಗಿನ_ಆನಂದಪುರಂ_ಮಹನೀಯರು_ಅಯ್ಯಂಗಾರ್_ಕುಟುಂಬ_ಮತ್ತು_ಸುಳಗೋಡು_ಮುತ್ರಿ_ಗೌಡರ_ಕುಟುಂಬ_ಸ್ಮರಣೀಯರು
ದೇಶದಲ್ಲೇ ಅರಣ್ಯದ ಮಧ್ಯೆ ಇರುವ ಏಕೈಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿಯ ಯಡೇಹಳ್ಳಿ ಗ್ರಾಮ ಪಂಚಾಯತ್ ನ ಇರುವಕ್ಕಿಯದ್ದು, ಇತ್ತೀಚಿಗಷ್ಟೆ ಇದನ್ನು ಆಗ ಮುಖ್ಯಮಂತ್ರಿ ಆಗಿದ್ದ ಯಡೂರಪ್ಪನವರು ಉದ್ಘಾಟಿಸಿದರು 7 ಜಿಲ್ಲೆಯ ವ್ಯಾಪ್ತಿಯ ಈ ವಿಶ್ವವಿದ್ಯಾಲಯಕ್ಕೆ ಕೆಳದಿ ಅರಸರಾದ #ಶಿವಪ್ಪ_ನಾಯಕರ ಹೆಸರು ನಾಮಕರಣ ಮಾಡಿದರು.
ಬಹಳಷ್ಟು ಜನ ಶಿಸ್ತಿನ ಶಿವಪ್ಪ ನಾಯಕರೆಂದರೆ ಅವರ ಕಲ್ಪನೆಯಲ್ಲಿ ಅವರ ಚಿತ್ರ ರಚನೆ ನೋಡಿ ವೇಷ ಭೂಷಣಕ್ಕಾಗಿ ಶಿಸ್ತು ಅಂತಲೇ ಬಾವಿಸಿದ್ದಾರೆ ಆದರೆ ಶಿಸ್ತು ಎಂದರೆ ಅದು ಆ ಕಾಲದ ಭೂಮಿ ಮಾಪಕ ಅಳತೆ ಪಟ್ಟಿ, ಇದರ ಮಾದರಿ ಕೆಳದಿ ರಾಮೇಶ್ವರ ದೇವಾಲಯದ ಹಿಂಭಾಗದ ಗೋಡೆಯಲ್ಲಿ ಶಿಲೆಯಲ್ಲಿ ಕೆತ್ತಿದ್ದಾರೆ, ಆ ಕಾಲದಲ್ಲಿ ಪಲವತ್ತಾದ ಜಮೀನು, ಅನುಪಯುಕ್ತ ಜಮೀನುಗಳನ್ನು ಶಿವಪ್ಪ ನಾಯಕರು ವಿಂಗಡಿಸಿ ತೆರಿಗೆ ನಿಗದಿ ಗೊಳಿಸಿದ್ದು ಮತ್ತು ಅಳತೆಯ ಕೋಲು ಶಿಸ್ತು ಜಾರಿಗೆ ತಂದಿದ್ದರಿಂದ ಶಿಸ್ತಿನ ಶಿವಪ್ಪ ನಾಯಕರೆಂದೇ ಪ್ರಸಿದ್ದಿ ಪಡೆದರು.
ಇರುವಕ್ಕಿಯ ಶಿವಪ್ಪ ನಾಯಕ ಕೃಷಿ ವಿಶ್ವವಿದ್ಯಾಯದ ಪಕ್ಕದಲ್ಲಿ ಕಳೆದ ಶತಮಾನದ ಪ್ರಾರಂಭದಲ್ಲೇ ನೆಲೆಸಿದ್ದ ಕುಂಬಾರ ಚೌಡ ಶೆಟ್ಟರು ತಮ್ಮ ಮಡಿಕೆ ತಯಾರಿಸುವ ಕುಂಬಾರಿಕೆ ವೃತ್ತಿಗಾಗಿ ಮಡಿಕೆ ತಯಾರಿಕೆಗೆ ಬೇಕಾದ ಕುಂಬಾರ ಮಣ್ಣು ಇಲ್ಲಿ ಯಥೇಚ್ಚ ಸಿಗುವುದರಿಂದ ತಂಗಿದ್ದವರು,ಅವರಿಗೆ ಜೀವನಕ್ಕಾಗಿ ಕೃಷಿ ಜಮೀನು ಹೊಂದಿದ್ದರು.
ಈ ಕಾಲದಲ್ಲಿ ಆನಂದಪುರಂನ ಜಮೀನ್ದಾರರಾದ ಕೊಡುಗೈ ದಾನಿ ರಾಮಕೃಷ್ಣ ಅಯ್ಯಂಗಾರರ ಸಹಾಯ ಸಹಕಾರದ ಜೊತೆ ಮಾರ್ಗದರ್ಶನ ಇವರಿಗೆ ಅಡಿಕೆ ತೋಟ ಮಾಡಲು ಪ್ರೇರಣೆ ಆಯಿತು, ಈ ಭಾಗದ ಕುಂಬಾರಲ್ಲಿ ಶ್ರೀಮಂತ ಜಮೀನುದಾರರು ಇವರು, ಇವರು ಇಲ್ಲಿ ಇದ್ದಿದ್ದರಿಂದಲೇ ಸೊರಬ, ಹಿರೆನೆಲ್ಲೂರು, ಸಾಗರ, ಆನಂದಪುರಂನ ಜೇಡಿಸರ,ತಾವರೇಹಳ್ಳಿ, ಹೆಬ್ಬೋಡಿ, ಕೆಂಜಿಗಾಪುರದ ಕುಂಬಾರ ಗುಂಡಿ, ಬಸವನಹೊಂಡ ಇಲ್ಲೆಲ್ಲ ವಲಸೆ ಬಂದು ತಮ್ಮ ವಂಶಪಾರ್ಯ೦ಪರ ಮಣ್ಣಿನ ತಯಾರಿಕೆಯಲ್ಲಿ ಜೀವನ ಮಾಡುತ್ತಿದ್ದ ಅನೇಕ ಕುಂಬಾರ ವೃತ್ತಿಯ ಕುಟುಂಬಗಳು ಇರುವಕ್ಕಿಯ ಚೌಡ ಶೆಟ್ಟರ ಸಹಕಾರದಿಂದ ಇರುವಕ್ಕಿಯಲ್ಲಿ ಖಾಯಂ ನೆಲುಸುವಂತಾಯಿತು.
ಚೌಡ ಶೆಟ್ಟರು ನಡೆ ನುಡಿ ಶುದ್ಧರಾಗಿದ್ದರಿಂದ ಮತ್ತು ಸಾತ್ವಿಕರಾಗಿದ್ದರಿಂದಲೇ ರಾಮಕೃಷ್ಣ ಅಯ್ಯಂಗಾರರ ಆಪ್ತ ವಲಯದಲ್ಲಿ ಆಪ್ತರಾಗಲು ಕಾರಣ.
1952 ರ ಮೊದಲ ವಿಧಾನಸಭಾ ಚುನಾವಣೆಯಲ್ಲಿ ರಾಮಕೃಷ್ಣ ಅಯ್ಯಂಗಾರರ ಪುತ್ರ ಆಗಿನ ಪ್ರಖ್ಯಾತ ವಕೀಲರಾಗಿದ್ದ ಸ್ವಾತಂತ್ರ ಹೋರಾಟಗಾರರೂ ಆಗಿದ್ದ ಬದರೀನಾರಾಯಣ ಅಯ್ಯಂಗಾರರು ಕಾಂಗ್ರೇಸ್ ಪಕ್ಷದಿಂದ ಸ್ಪರ್ದಿಸಿ,ಎದುರಾಳಿ ಉಳುವವನೇ ಹೊಲದೊಡೆಯ ಉದ್ಘೋಷದ ಗಣಪತಿಯಪ್ಪರ ನೇತೃತ್ವದಲ್ಲಿ ಪ್ರಾರಂಭ ಆಗಿದ್ದ ಕಾಗೋಡು ರೈತ ಹೋರಾಟವನ್ನು ಮುನ್ನಡೆಸಿ ರಾಷ್ಟ್ರ ನಾಯಕರಾದ ರಾಮಮನೋಹರ ಲೋಹಿಯಾ, ಜೇಪಿ, ಮದುಲಿಮೆ, ಜಾರ್ಜ್ ಪರ್ನಾಂಡಿಸರು ಬರುವಂತೆ ಮಾಡಿ ಗೇಣಿ ರೈತರ ಕಣ್ಮಣಿ ಆಗಿದ್ದ ಸಮಾಜವಾದಿ ಪಾರ್ಟಿಯಿಂದ ಸ್ಪರ್ದಿಸಿದ್ದ ಶಾಂತವೇರಿ ಗೋಪಾಲಗೌಡರು ಗೆದ್ದದ್ದು ಇತಿಹಾಸ.
ಬದರೀನಾರಾಯಣರ ಸೋಲಿನ ಅಘಾತದಿಂದ ನಾಲ್ಕು ಸಾವಿರ ಎಕರೆ ಇನಾಂದಾರರು, ಭೂಮಾಲಿಕರು, ಆನಂದಪುರಂ ನಲ್ಲಿ ಸಾರ್ವಜನಿಕರಿಗಾಗಿ ತಮ್ಮ ಪತ್ನಿ ಸ್ಮಾರಕ ಆಸ್ಪತ್ರೆ (ಕನಕಮ್ಮಾಳ್ ಆಸ್ಪತ್ರೆ) ಮಗನ ಸ್ಮರಣಾಥ೯ ಪಶುವೆದ್ಯ ಶಾಲೆ (ಜಗನ್ನಾಥ ಪಶು ವೈದ್ಯ ಶಾಲೆ) ನಿರ್ಮಿಸಿ ಕೊಡುಗೈ ದಾನಿ ಆಗಿದ್ದ ರಾಮಕೃಷ್ಣ ಅಯ್ಯಂಗಾರರು ಹೃದಯಾಘಾತದಿಂದ ಮರಣಿಸಿದ್ದು ಅವರ ಅನುಯಾಯಿಗಳಿಗೂ ದೊಡ್ಡ ಅಘಾತ ಆಗಿತ್ತು.
ಅವರ ಪುತ್ರ ವೆಂಕಟಾಚಲ ಆಯ್ಯಂಗಾರರು ಕುಟುಂಬದ ಯಜಮಾನಿಕೆ ಅನಿವಾಯ೯ವಾಗಿ ಹೊರುವಂತಾಗಿ ಮೊದಲ ಚುನಾವಣೆಯಲ್ಲಿ ಸೋತ ಸಹೋದರ ಬದರಿನಾರಾಯಣ ಅಯ್ಯಂಗಾರರನ್ನು 1957ರ ಚುನಾವಣೆಯಲ್ಲಿ ಗೆಲ್ಲಿಸುವ ಶಪಥ ಮಾಡುತ್ತಾರೆ, ಆಗ ಅವರ ತಂದೆಯ ಗೆಳೆಯರೆಲ್ಲ ಸಂಘಟಿತರಾಗುತ್ತಾರೆ.
ಈ ಸಂದರ್ಭದಲ್ಲೇ ಮಹಾತ್ಮಾ ಗಾಂಧಿಜೀಯಿಂದ ಸವೋ೯ದಯ ಮತ್ತು ಗ್ರಾಮಸ್ವರಾಜ್ಯದ ಬಗ್ಗೆ ಪ್ರೇರಣೆ ಪಡೆದು ಆಚಾರ್ಯ ವಿನೋಬ ಬಾವೆ 18 ಏಪ್ರಿಲ್ 1951ರಲ್ಲಿ ಪ್ರಾರಂಭಿಸಿದ ಭೂದಾನ ಚಳವಳಿ (ಶ್ರೀಮಂತ ಜಮೀನ್ದಾರರು ಅವರ ಜಮೀನಿನ ಕೆಲ ಅಂಶ ಭೂರಹಿತರಿಗೆ ದಾನ ಮಾಡುವುದು) ಉತ್ತು೦ಗಕ್ಕೆ ಸಾಗಿತ್ತು, ನಮ್ಮ ಜಿಲ್ಲೆಯಲ್ಲಿ ಸರ್ದಾರ್ ಎಣ್ಣೆಕೊಪ್ಪದ ಮಲ್ಲಿಕಾರ್ಜುನ ಗೌಡರು ಇದರ ನೇತೃತ್ವವಹಿಸಿದ್ದರು ಅವರಿಗೆ ವೆಂಕಟಾಚಲ ಅಯ್ಯಂಗಾರ್ ಬದರೀನಾರಾಯಣ ಅಯ್ಯಂಗಾರರು ಸಾಥ್ ನೀಡಿ ಆಚಾರ್ಯ ವಿನೋಬಾ ಭಾವೆಯವರು ಆನಂದಪುರಂಗೆ ಭೂದಾನ ಸ್ವೀಕರಿಸಲು ಬರುವಂತೆ ಮಾಡಲು ಯಶಸ್ವಿ ಆಗಿ ವಿನೋಭಾ ಭಾವೆಯಂತ ಮಹಾನುಭಾವರ ಪಾದ ಸ್ಪರ್ಶ ಆನಂದಪುರಂಗೆ ಮಾಡುವಂತೆ ಮಾಡಿ ಆನಂದಪುರಂ ಪಾವನ ಮಾಡಿದ್ದು ಇತಿಹಾಸವಾಗಿದೆ.
ಆ ದಿನ ಅಯ್ಯಂಗಾರರ ಕುಟುಂಬ, ಸುಳುಗೋಡಿನ ಮುತ್ರಿ ಗೌಡರ ಕುಟುಂಬ ಹಾಲಿ ಆನಂದಪುರಂ ವಿದ್ಯುತ್ ಇಲಾಖೆ ಸುತ್ತ ಮುತ್ತದ ಖುಷ್ಕಿ ಜಮೀನು ದಾನ ನೀಡಿದರು (ಆನಂದಪುರಂ ಸರ್ಕಾರಿ ಪದವಿ ಪೂವ೯ ಇಲಾಖೆಗೆ ಈ ಜಮೀನು ಸೇರಿದೆ), ಇದೇ ಸಂದಭ೯ದಲ್ಲಿ ಇರುವಕ್ಕಿಯ ಚೌಡ ಶೆಟ್ಟರು ತಮ್ಮ ಫಲಭರಿತ ಬೆಲೆ ಬಾಳುವ 5 ಎಕರೆ ತರಿ ಜಮೀನು ಭೂದಾನ ಮಾಡಿದರು (ಆನಂದಪುರಂ ಸರ್ಕಾರಿ ಮಾಧ್ಯಮಿಕ ಶಾಲೆಯ ಸುಪರ್ದಿಯಲ್ಲಿ ಈ ಜಮೀನು ಇದೆ, ಈ ಕುಟುಂಬದ ಈಗಿನ ತಲೆಮಾರು ಪ್ರತಿ ವರ್ಷ ಗೇಣಿ ಭತ್ತ ಆನಂದಪುರಂ ಸರ್ಕಾರಿ ಮಾಧ್ಯಮಿಕ ಶಾಲೆಗೆ ನೀಡುತ್ತಿತ್ತು).
ಇದು ಸರ್ದಾರ್ ಎಣ್ಣೆಕೊಪ್ಪದ ಮಲ್ಲಿಕಾಜು೯ನ ಗೌಡರಿಗೆ ಹೆಚ್ಚು ಸಂತೋಷ ನೀಡುತ್ತದೆ ಮತ್ತು ಈ ವಿಚಾರ ವಿನೋಬಾ ಭಾವೆಯವರಿಗೆ ಅವತ್ತಿನ ಸಭೆಯಲ್ಲೇ ವಿವರಿಸುತ್ತಾರೆ, ಆಚಾರ್ಯರೂ ಚೌಡ ಶೆಟ್ಟರನ್ನು ಅಭಿನಂದಿಸಿ ಆಶ್ರೀವದಿಸುತ್ತಾರೆ.
ಹಿಂದುಳಿದ ಜನಾಂಗದ, ಕುಂಬಾರಿಕೆ ವೃತ್ತಿಯ ಚೌಡ ಶೆಟ್ಟರ ಈ ಭೂದಾನ ಅವರನ್ನು ದಾನಿಗಳಲ್ಲಿ ಶ್ರೀಮಂತ ಗೊಳಿಸಿತು, ರಾಜ್ಯದ ಮೊದಲ ಮತ್ತು ಏಕೈಕ ಕುಂಬಾರ ಸಮಾಜದ ಭೂದಾನಿಗಳು ಇವರು.
ಇರುವಕ್ಕಿ ಚೌಡ ಶೆಟ್ಟರು ಮತ್ತು ಶ್ರೀಮತಿ ಕನ್ನಮ್ಮ ದಂಪತಿಗೆ ಏಕೈಕ ಪುತ್ರ ಬಸಪ್ಪ ಆ ಕಾಲದಲ್ಲಿ ಎಸ್.ಎಸ್.ಎಲ್.ಸಿ .ಪಾಸು ಮಾಡಿದ ಪ್ರತಿಬಾವಂತ, ಇವರು ಕೂಡ ಶಿಸ್ತಿನ ಮನುಷ್ಯ ,ಅತ್ಯುತ್ತಮ ಕಬ್ಬಡಿ ಆಟಗಾರರು, ಅತ್ಯುತ್ತಮ ಬೇಟೆಗಾರರು, ಮಾದರಿ ಕೃಷಿಕರು ಆಗಿದ್ದರು, ಹಾವು ಕಚ್ಚಿದರೆ ಔಷದಿ ನೀಡುತ್ತಿದ್ದರು ಇವರೂ ಈಗ ಇಲ್ಲ.
(ನಾಳೆ ಮುಂದಿನ ಭಾಗ - 54)
Comments
Post a Comment