Blog number 1778. ಸಾಗರ ತಾಲೂಕಿನ ಒಂದು ನೇಗಿಲ ಕಥೆ ಇಡೀ ರಾಜ್ಯದ ಕೃಷಿ ಇಲಾಖೆಯ ಭ್ರಷ್ಟಾಚಾರ ತೆರೆದು ತೋರಿಸಿದ ಹೆಬ್ಬಾಗಿಲಾಯಿತು ಸ್ವತಃ ಕೃಷಿ ಮಂತ್ರಿ ಬೈರೇ ಗೌಡರು ಬಂದು 8 ಕೃಷಿ ಅಧಿಕಾರಿಗಳನ್ನು ಆ ಕ್ಷಣದಲ್ಲೇ ಜೈಲಿಗೆ ಕಳಿಸಿ ಮರುದಿನ ವಿಧಾನ ಸೌಧದಲ್ಲಿ ಪತ್ರಿಕಾಗೋಷ್ಟಿ ಮಾಡಿ ಕೃಷಿ ಇಲಾಖೆಯ ಭಾಗವಾಗಿದ್ದ ಭೂಸಾರ ಸಂರಕ್ಷಣ ಇಲಾಖೆಯನ್ನೆ ರದ್ದು ಮಾಡಿದ್ದರು
ನಾಗೇಂದ್ರ ಸಾಗರ್ ಕಣ್ಣಾರೆ ನೋಡಿದ್ದ ನಮ್ಮ ರೈತ ಪರ ಹೋರಾಟದ ಲೇಖನ 2018ರಲ್ಲಿ ಬರೆದಿದ್ದು ಇವತ್ತು ಇನ್ನೊಮ್ಮೆ ಪೋಸ್ಟ್ ಮಾಡಿದ್ದಾರೆ. ಈಗ ನೇಗಿಲು, ಎತ್ತು -ಗಾಡಿ,ಬತ್ತದ ಗದ್ದೆ, ಪಶು ಸಂಗೋಪನೆ, ಕೋಳಿ ಸಾಕಾಣಿಕೆ ಎಲ್ಲವೂ ನೇಪಥ್ಯಕ್ಕೆ ಸರಿದಿದೆ. ಈ ಹೋರಾಟದ ಪೂರ್ಣ ಮಾಹಿತಿ ನಾನು ಬರೆದ ಬ್ಲಾಗ್ ಈ ಲಿಂಕ್ ಕ್ಲಿಕ್ ಮಾಡಿ #ಒಂದು_ನೇಗಿಲ_ಕಥೆ ಓದಿ. https://arunprasadhombuja.blogspot.com/search?q=%E0%B2%92%E0%B2%82%E0%B2%A6%E0%B3%81+%E0%B2%A8%E0%B3%87%E0%B2%97%E0%B2%BF%E0%B2%B2+%E0%B2%95%E0%B2%A5%E0%B3%86 ನಾಗೇಂದ್ರ ಸಾಗರ್ ಬರೆದ ಲೇಖನ.... #ನೇಪಥ್ಯಕ್ಕೆ_ಸೇರಿದ_ನೇಗಿಲು. ಆವಿನಹಳ್ಳಿಯ ಮಂಜುನಾಥ ಆಚಾರ್ರು ನನಗೆ ಸಮಾನ ಚಿಂತನೆಯ ಜಗಲೀಕಟ್ಟೆಯಲ್ಲಿ ಜತೆಯಾದವರು.. ಇವರ ಕುಲುಮೆಯಲ್ಲಿ ಸಿದ್ಧವಾಗುವ ನೇಗಿಲು ತೀರಾ ಇತ್ತೀಚಿನ ವರ್ಷಗಳವರಗೆ ನಮ್ಮ ಭಾಗದ ಗದ್ದೆಗಳಿಗೆಲ್ಲ ಚಿರಪರಿಚಿತವು. ಇವರ ನೇಗಿಲ್ಲದೆ ಉಳುಮೆಯೇ ಇಲ್ಲ ಎನ್ನುವಷ್ಟು ಖ್ಯಾತಿ ಇದೆ. ಆವಿನಹಳ್ಳಿ ಮಾದರಿ ನೇಗಿಲು ಎಂದು ರಾಜ್ಯಾದ್ಯಂತ ಪ್ರಖ್ಯಾತಿಯಿರುವ ಈ ನೇಗಿಲು ಮಂಜುನಾಥ್ ಆಚಾರ್ ಅವರ ವೃತ್ತಿ ಬದ್ದತೆಯ ಮತ್ತು ಕಲಾತ್ಮಕತೆಯ ಫಸಲು ಎನ್ನುವುದರಲ್ಲಿ ಖಂಡಿತಾ ಎರಡು ಮಾತಿಲ್ಲ. ಕೆಲವು ದಿನಗಳ ಹಿಂದೆ ಕೆಲಸದ ನಿಮಿತ್ತ ಆವಿನಹಳ್ಳಿಗೆ ಹೋಗಿದ್ದೆ. ಆವಿನಹಳ್ಳಿಗೆ ಹೋದ ಮೇಲೆ ಇವರ...