Skip to main content

Posts

Showing posts with the label My one year weight loss experience

ಸ್ಥೂಲ ಕಾಯ ನಿವಾರಣೆಗೆ ನನ್ನ ಒಂದು ವರ್ಷದ ಪ್ರಯೋಗ

#ತೂಕ_ಇಳಿಸು_ಕೊಳ್ಳುವ_ನನ್ನ_ಅನುಭವಕ್ಕೆ_ಅನೇಕರು_ವಿವರಣೆ_ಕೇಳಿದ್ದಾರೆ.   ರಾತ್ರಿ ಊಟ ಬಿಟ್ಟು 200 ML ರಾಗಿ ಗಂಜಿ ಮಲಗುವಾಗ ಸೇವಿಸುವುದು ತೂಕ ಇಳಿಕೆಗೆ ಮುಖ್ಯ ಕಾರಣ ಅಂತ ನನ್ನ ಅನುಭವ.)   #ರಾಗಿ_ಗಂಜಿ_ತಯಾರಿಸುವ_ವಿಧಾನ 250 ML ನೀರು ಕುದಿಯಲಿಟ್ಟು ಎರೆಡು ಟೇಬಲ್ ಚಮಚ ರಾಗಿ ಹಿಟ್ಟು ಬೇರೆ ನೀರಲ್ಲಿ ಕದಡಿ ಇದಕ್ಕೆ ಬೆರೆಸಿ ನಿಧಾನ ಕರಡಬೇಕು, ಐದು ನಿಮಿಷ ಸಣ್ಣ ಉರಿಯಲ್ಲಿ ಬೇಯಿಸುತ್ತ ರುಚಿಗೆ ತಕ್ಕ ಉಪ್ಪು ಬೆರೆಸಿ, ತಣ್ಣಗಾದ ನಂತರ ಕುಡಿಯುವ ಸಮಯದಲ್ಲಿ ಸಣ್ಣಗೆ ಕೊಚ್ಚಿದ ನೀರುಳ್ಳಿ, ಹಸಿ ಮೆಣಸು, ಕೊತ್ತುಂಬರಿ ಸೊಪ್ಪು, ಜೀರಿಗೆ ಪುಡಿ ಕಾಲು ಟೀ ಸ್ಪೂನ್ ಮತ್ತು ಕಡಿದ ಮಜ್ಜಿಗೆ ಬೆರೆಸಿ ಕುಡಿಯುವುದು. (ಈ ರೀತಿ ರಾಗಿ ಅಂಬಲಿ ರುಚಿ ಮತ್ತು ಸುವಾಸನೆಯಿಂದ ಕೂಡಿರುವುದರಿಂದ ಕುಡಿಯಲು ಇಷ್ಟವಾಗುತ್ತದೆ.   #ನಿಶ್ಯಕ್ತಿ_ಇದ್ದರೆ.  ಚ್ಯುವನ ಪ್ರಾಶ ಒ0ದು ಚಮಚ (ಡಯಾಬಿಟಿಕ್ ಇದ್ದರೆ ಶುಗರ್ ಪ್ರೀ ಚ್ಯುವನ ಪ್ರಾಶ ಬಳಸಬೇಕು) ಮತ್ತು ಒಂದು ಲೋಟ ಹಾಲು ಬಳಸಬಹುದು.   #ನಿತ್ಯ_ವಾಕಿಂಗ್. ನಿತ್ಯ ಒಂದು ಗಂಟೆ ಕಡ್ಡಾಯ ವಾಕಿಂಗ್ ಮಾಡ ಬೇಕು, ಮೊದಲ ದಿನ 5 ನಿಮಿಷದಂತೆ ಪ್ರತಿ 10 ದಿನಕ್ಕೆ 5 ನಿಮಿಷ ಹೆಚ್ಚಿಸುತ್ತಾ ನಂತರ ಒಂದು ಗಂಟೆಗೆ ತಲುಪಿಸಿದರೆ ನಿಮಗೆ ಗೊತ್ತಾಗದಂತೆ ನೀವು ಒಂದು ಗಂಟೆ ವಾಕಿಂಗ್ ಮಾಡಲು ಪಿಟ್ ಆಗಿರುತ್ತೀರಿ.   #ಪಥ್ಯ_ಬೇಕಾಗಿಲ್ಲ ಬೆಳಗಿನ ಉಪಹಾರ ಮತ್ತು ಮಧ್ಯಾಹ್ನದ ಊಟಕ್ಕ...