#ತೂಕ_ಇಳಿಸು_ಕೊಳ್ಳುವ_ನನ್ನ_ಅನುಭವಕ್ಕೆ_ಅನೇಕರು_ವಿವರಣೆ_ಕೇಳಿದ್ದಾರೆ.
ರಾತ್ರಿ ಊಟ ಬಿಟ್ಟು 200 ML ರಾಗಿ ಗಂಜಿ ಮಲಗುವಾಗ ಸೇವಿಸುವುದು ತೂಕ ಇಳಿಕೆಗೆ ಮುಖ್ಯ ಕಾರಣ ಅಂತ ನನ್ನ ಅನುಭವ.)
#ರಾಗಿ_ಗಂಜಿ_ತಯಾರಿಸುವ_ವಿಧಾನ
250 ML ನೀರು ಕುದಿಯಲಿಟ್ಟು ಎರೆಡು ಟೇಬಲ್ ಚಮಚ ರಾಗಿ ಹಿಟ್ಟು ಬೇರೆ ನೀರಲ್ಲಿ ಕದಡಿ ಇದಕ್ಕೆ ಬೆರೆಸಿ ನಿಧಾನ ಕರಡಬೇಕು, ಐದು ನಿಮಿಷ ಸಣ್ಣ ಉರಿಯಲ್ಲಿ ಬೇಯಿಸುತ್ತ ರುಚಿಗೆ ತಕ್ಕ ಉಪ್ಪು ಬೆರೆಸಿ, ತಣ್ಣಗಾದ ನಂತರ ಕುಡಿಯುವ ಸಮಯದಲ್ಲಿ ಸಣ್ಣಗೆ ಕೊಚ್ಚಿದ ನೀರುಳ್ಳಿ, ಹಸಿ ಮೆಣಸು, ಕೊತ್ತುಂಬರಿ ಸೊಪ್ಪು, ಜೀರಿಗೆ ಪುಡಿ ಕಾಲು ಟೀ ಸ್ಪೂನ್ ಮತ್ತು ಕಡಿದ ಮಜ್ಜಿಗೆ ಬೆರೆಸಿ ಕುಡಿಯುವುದು. (ಈ ರೀತಿ ರಾಗಿ ಅಂಬಲಿ ರುಚಿ ಮತ್ತು ಸುವಾಸನೆಯಿಂದ ಕೂಡಿರುವುದರಿಂದ ಕುಡಿಯಲು ಇಷ್ಟವಾಗುತ್ತದೆ.
#ನಿಶ್ಯಕ್ತಿ_ಇದ್ದರೆ.
ಚ್ಯುವನ ಪ್ರಾಶ ಒ0ದು ಚಮಚ (ಡಯಾಬಿಟಿಕ್ ಇದ್ದರೆ ಶುಗರ್ ಪ್ರೀ ಚ್ಯುವನ ಪ್ರಾಶ ಬಳಸಬೇಕು) ಮತ್ತು ಒಂದು ಲೋಟ ಹಾಲು ಬಳಸಬಹುದು.
#ನಿತ್ಯ_ವಾಕಿಂಗ್.
ನಿತ್ಯ ಒಂದು ಗಂಟೆ ಕಡ್ಡಾಯ ವಾಕಿಂಗ್ ಮಾಡ ಬೇಕು, ಮೊದಲ ದಿನ 5 ನಿಮಿಷದಂತೆ ಪ್ರತಿ 10 ದಿನಕ್ಕೆ 5 ನಿಮಿಷ ಹೆಚ್ಚಿಸುತ್ತಾ ನಂತರ ಒಂದು ಗಂಟೆಗೆ ತಲುಪಿಸಿದರೆ ನಿಮಗೆ ಗೊತ್ತಾಗದಂತೆ ನೀವು ಒಂದು ಗಂಟೆ ವಾಕಿಂಗ್ ಮಾಡಲು ಪಿಟ್ ಆಗಿರುತ್ತೀರಿ.
#ಪಥ್ಯ_ಬೇಕಾಗಿಲ್ಲ
ಬೆಳಗಿನ ಉಪಹಾರ ಮತ್ತು ಮಧ್ಯಾಹ್ನದ ಊಟಕ್ಕೆ ನಿಮಗೆ ಏನಿಷ್ಟ ಅದನ್ನು (ಸಿಹಿ ತಿಂಡಿ, ಮೀನು ಮಾಂಸ)ಎಷ್ಟು ಬೇಕಾದರೂ ಸೇವಿಸಿ(ತುಪ್ಪ, ಬೆಣ್ಣೆ ಕೂಡ)ಕ್ರಮೇಣ ನಿಮಗೆ ಸೇವಿಸುವ ಪ್ರಮಾಣ ಸ್ವಯ೦ ಆಗಿ ಕಡಿಮೆ ಆಗುತ್ತಾ ಬರುತ್ತದೆ ಆಗ ಮಿತ ಆಹಾರಕ್ಕೆ ದೇಹ ಒಗ್ಗಿ ಕೊಳ್ಳುತ್ತದೆ.
#ಮಧ್ಯಪಾನ .
ನಿತ್ಯ ಮದ್ಯಪಾನ ಮಾಡುವವರು ಪಾನಿಯದ ಮಧ್ಯೆ ತಿಂಡಿ ತಿನಿಸು, ಕುರುಕಲು (Munching) ತಿನ್ನುವ ಅಭ್ಯಾಸ ಬಿಡಬೇಕು. (ಮದ್ಯಪಾನ ಸಂಪೂಣ೯ ವಿಶೇದ ಅವಶ್ಯ ಇಲ್ಲ, ಸ್ವಯಂ ನಿಯಂತ್ರಣ ಇರಲಿ)
ವಾರದಲ್ಲಿ ಒಂದೆರೆಡು ದಿನ ಮಧ್ಯಪಾನಕ್ಕೆ ಬ್ರೇಕ್ ನೀಡುವ ಪ್ರಯತ್ನ ಮಾಡುವುದು ಒಳಿತು.
#ನಿದ್ದೆ
ನಿದ್ದೆ ಬೇಕಾದಾಗೆಲ್ಲ ಮಾಡಿ, ಮಧ್ಯಾಹ್ನ ಮಲಗುವ ಅಭ್ಯಾಸ ಇದ್ದರೂ ತೊಂದರೆ ಇಲ್ಲ.
#ಆರು_ತಿಂಗಳು_ತೂಕ_ಪರೀಕ್ಷೆ_ಬೇಡ
ಪ್ರಾರಂಭದ ಆರು ತಿಂಗಳು ತೂಕ ಪರೀಕ್ಷೆ ಮತ್ತು ಸೊಂಟದ ಅಳತೆ ಮಾಡಲೇ ಬೇಡಿ (ಪ್ರಾರಂಭದಲ್ಲಿ ನಿರಾಶೆ ಆಗುವ ಸಂಭವ ಹೆಚ್ಚು ಆರು ತಿಂಗಳಲ್ಲಿ ತೂಕ ಇಳಿಕೆ ಮತ್ತು ಸೊಂಟದ ಅಳತೆ ನೂರಕ್ಕೆ ನೂರು ಇಳಿಯುತ್ತದೆ)
Comments
Post a Comment