2015 ರ ಬಾರಾಪಂತ್ ಯಾತ್ರೆಯಲ್ಲಿನ ಪಾತ್ರಾದೇವತೆಯ ವಿಶೇಷ ಪೂಜಾ ಪ್ರಸಾದ ಮುಂದಿನ 12 ವರ್ಷದ ವರೆಗೆ ಸಂರಕ್ಷಿಸಿಡಲು ನನಗೆ ನೀಡಿದ ಸಂತರು, ಅವರು ಅಕಸ್ಮಿಕವಾಗಿ ನಮ್ಮಲ್ಲಿಗೆ ಬರಲು ಕಾರಣ ಒಂದು ಪವಾಡವೇ?
ನಾಸಿಕ್ ಕುಂಭಮೇಳ ಸಂಪನ್ನವಾದ ಮರುದಿನ (2015 ರಲ್ಲಿ) ನಾಸಿಕ್ ನಿಂದ ಪಶ್ಚಿಮ ಘಟ್ಟ ತಪ್ಪಲಲ್ಲೇ ನೂರಾರು (2015 ರಲ್ಲಿ ಸುಮಾರು 600) ಸಂತರು ನಡೆದು ಬಂದು ಮಂಗಳೂರಿನ ಕದ್ರಿ ಮಂಜುನಾಥ ಸ್ವಾಮಿ ದೇವಾಲಯ ತಲುಪುವ ಬಾರಾಪಂತ್ ಯಾತ್ರೆ ಬಗ್ಗೆ ಈಗೆಲ್ಲ ಕನಾ೯ಟಕ ರಾಜ್ಯದಲ್ಲಿ ಹೆಚ್ಚಿನ ಮಾಹಿತಿ ಇದೆ. ಬಾರಾಪಂತ್ಯ ಯಾತ್ರೆ ಸಮಾರೋಪಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಮತ್ತು ಗೋರಕ್ ಪುರದ ಮಹಾಂತರಾದ ಜೋಗಿ ಆದಿತ್ಯನಾಥರು ಕೂಡ ಭಾಗವಹಿಸಿದ್ದರು.
ಈ ಯಾತ್ರೆ ಮುಗಿದ ನಂತರ ಭಾಗವಹಿಸಿದ ಅನೇಕ ಸಂತರು ಮಂಗಳೂರಿ೦ದ ವಾಪಾಸ್ ಹೋಗುತ್ತಾರೆ.
ಈ ರೀತಿ ಒಂದು ತಂಡ ಮಂಗಳೂರಿಂದ ತಾವು ನಡೆದು ಬಂದ ದಾರಿಯಲ್ಲೇ ಹಾವೇರಿ ಜಿಲ್ಲೆಯ ಲೋಕಿ ಮಠಕ್ಕೆ ಹೋಗಿ ಅಲ್ಲಿಂದ ರೈಲಿನಲ್ಲಿ ಅವರ ಮೂಲ ಸ್ಥಳಗಳಿಗೆ ಹೋಗುವ ಉದ್ದೇಶದಿಂದ ಭಕ್ತರು ವ್ಯವಸ್ಥೆ ಮಾಡಿದ 3 ಕಾರುಗಳಲ್ಲಿ ಹೊರಟಿದ್ದರು, ದಾರಿ ತಪ್ಪಿ ನನ್ನ ಮಲ್ಲಿಕಾ ವೆಜ್ ರೆಸ್ಟಾರಂಟ್ ತಲುಪಿದ್ದರು.
ಹೋಟೆಲ್ ನವರಿಗೆ ಕುಚಿ೯ ತಂದು ಹೊರಗೆ ಹಾಕು ನಾವು ಹೋಟೆಲ್ ಒಳಗೆ ಬರುವುದಿಲ್ಲ ಅಂತ ಅದೇಶ ಮಾಡಿದಾಗ ಸಿಬ್ಬಂದಿಗಳು ಗಾಭರಿ ಆಗಿದ್ದರು ಆಗ ನನ್ನ ಅಣ್ಣನ ಮಗ ನನ್ನ ಜೊತೆ ಬಾರಾಪಂತ್ ಯಾತ್ರೆ ಹೋಗುವಾಗ ನೋಡಿದ್ದರಿಂದ ಮತ್ತು ಹೊಸನಗರ ತಾಲ್ಲೂಕಿನ ಆಲಗೇರಿ ಮಂಡ್ರಿಯಲ್ಲಿ ನಡೆದ ಸತ್ಸಂಗ ಪೂಜೆಯಲ್ಲಿ ಭಾಗವಹಿಸಿದ್ದರಿಂದ ತಕ್ಷಣ ಅವರಿಗೆ ಹೋಟೆಲ್ ಹೊರಭಾಗದಲ್ಲಿ ಆಸನ ವ್ಯವಸ್ಥೆ ಮಾಡಿ ಅವರ ಒಪ್ಪಿಗೆ ಪಡೆದು ಚಹ ನೀಡಿದ್ದ.
ನನ್ನ ಜೊತೆ ಸತ್ಸ೦ಗಕ್ಕೆ ಬಂದಿದ್ದ ನಮ್ಮ ಕೆಲಸಗಾರ ಕೃಷ್ಣಪ್ಪ " ಸಾರ್ ಬಾರಾಪಂತದ ಸನ್ಯಾಸಿಗಳು ಹೋಟೆಲ್ ಗೆ ಬಂದಿದ್ದಾರೆ" ಅಂತ ಸುದ್ದಿ ಮುಟ್ಟಿಸಿದಾಗ ಅವರ್ಯಾಕೆ ಹೋಟಿಲ್ ಗೆ ಬಂದರು? ಏನೇ ಆಗಲಿ ಅವರಿಗೇನು ಬೇಕು ಕೊಡಿ, ಅವರನ್ನು ಯಾವುದೇ ತೊಂದರೆ ಇಲ್ಲದೆ ಕಳಿಸಿ ಅಂತ ಹೇಳಿ ನಮ್ಮ ಮನೆಯ ಗೇಟಿನ ಹೊರಗಡೆ ಬಂದು ಇಣುಕಿದೆ.
ನನ್ನ ನೋಡಿದವರೇ ಈ ಗುಂಪಿನ ಮುಖಂಡರು ಕೈ ಸನ್ನೆ ಮಾಡಿ ಕರೆದರು! ಹೋಗಿ ಅವರಿಗೆ ವಂದಿಸಿ ನಿಂತೆ, ಕುಳಿತುಕೊಳ್ಳಲು ಹೇಳಿದರು, ಅವರು ಹೋಗ ಬೇಕಾದ ಸ್ಥಳದ ಮಾಗ೯ ಡ್ರೈವರ್ ಗೆ ತಿಳಿಸಲು ಹೇಳಿದರು, ನಂತರ ಇನ್ನೊಂದು ಸುತ್ತಿನ ಚಹಾ ಕೇಳಿದರು.
ಅವರ ಚೆಲುಮೆಗಳಲ್ಲಿ ಬೆಂಕಿಯ ಕಿಡಿ ಜ್ವಲಿಸಿತು, ದೂಮ ಆವರಿಸಿತು ಆಗಷ್ಟೇ ಸಂಜೆ ಕತ್ತಲಾಗುತ್ತಿತ್ತು ನನಗೂ ಅದನ್ನು ಬಳಸುವ ಮನಸ್ಸಾಯಿತು, ವಿಶೇಷ ಜ್ಞಾನದಿಂದ ಅವರಿಗೆ ಗೊತ್ತಾಯಿತು ಎಂಬಂತೆ ಬೇರೆ ಬಟ್ಟಿ ಚಿಲುಮೆ ಕೆಳಬಾಗದಲ್ಲಿ ಸುತ್ತಿ ನನಗೆ ನೀಡಿದರು ನಾನೂ ಯಾವುದೇ ಅಂಜಿಕೆ ಇಲ್ಲದೇ ಅವತ್ತು ಸಾವ೯ಜನಿಕವಾಗಿ ಸಂತರ ಜೊತೆ ಚಿಲುಮೆ ಸೇದಿದೆ.
ನಂತರ ನನ್ನ ಜೊತೆ ನನ್ನ ಕಲ್ಯಾಣ ಮಂಟಪದ ಬೋಡ್೯ ನಲ್ಲಿ ಬರೆದ ಬಗ್ಗೆ ಕೇಳಿದರು ನನ್ನ ತಂದೆ ತಾಯಿ ಸ್ಮಾರಕವಾಗಿ ಅವರ ಹೆಸರಲ್ಲಿ ನಿಮಿ೯ಸಿದ್ದು ತಿಳಿದು ತುಂಬಾ ಸಂತೋಷ ಪಟ್ಟರು, ನನ್ನ ಕಛೇರಿಯ ಒಳಗೆ ಕರೆದೊಯ್ದು ಗೌರವಿಸಿದೆ.
ಆಗ ಅವರು ಹೇಳಿದ್ದು "ನಾವು ಮಾಗ೯ದಲ್ಲಿ ಯಾವುದೇ ಹೋಟೆಲ್ ಗೆ ಹೋಗುವುದಿಲ್ಲ ಆದರೆ ಇವತ್ತು ದಾರಿ ತಪ್ಪಿ ಇಲ್ಲಿಗೆ ಬರುವಂತಾಯಿತು, ಇದಕ್ಕೆ ಬೇರೇನೋ ಕಾರಣ ಇರಬಹುದು ನಮಗೂ ಗೊತ್ತಿಲ್ಲ" ಅಂದಾಗ ನಾನು ಇವರ ಯಾತ್ರೆಯಲ್ಲಿ 36 ವರ್ಷದ ಹಿಂದೆ ಬಂದು ಕುಂದಾಪುರ ತಾಲ್ಲೂಕಿನ ಕಮಲಶಿಲೆ ಸಮೀಪದ ಹಲವಾರಿ ಮಠದ ಸ್ವಾಮಿಗಳಾಗಿ ನೇಮಕವಾಗಿದ್ದ ಗ್ವಾಲೀಯರ್ ಮೂಲದ ಪೀರ್ ಸೋಮನಾಥ ಬಾವಾಜಿ ಮತ್ತು ನನ್ನ ಸಂಪಕ೯, ಅವರು ನನ್ನ ಅಭಿವೃದ್ದಿಗಾಗಿ ನನ್ನ ಕಷ್ಟದ ದಿನದಲ್ಲಿ ನನ್ನ ಮನೆಯ ದೇವರ ಮನೆಯಲ್ಲಿ ಪೂಜೆ ಮಾಡಿದ್ದು, ನಂತರ ನಮ್ಮ ಊರ ಶ್ರೀ ವರಸಿದ್ದಿ ವಿನಾಯಕ ದೇವರ ರಥೋತ್ಸವದಲ್ಲಿ ಭಾಗವಹಿಸಿದ್ದು ನಂತರ ಅವರು ಈ ಬಾರಿಯ ಬಾರಾಪಂಥ್ ಯಾತ್ರೆಗೆ ಹೆಚ್ಚಿನ ಪ್ರಚಾರ ನೀಡಲು ಆದೇಶ ಮಾಡಿದ್ದು ನೆನಪಿಸಿದೆ.
ಅವತ್ತಿನ ಪ್ರಖ್ಯಾತ ಪತ್ರಿಕೆ ಹಾಯ್ ಬೆಂಗಳೂರಿನಲ್ಲಿ ಶ್ರಂಗೇಶ್ ರು ಮಾಡಿದ ವರದಿ ಪರಿಣಾಮ ಎಲ್ಲಾ ಸುದ್ದಿ ಸಂಸ್ಥೆಗಳು, ದೂರದರ್ಶನಗಳು ಅತಿ ಹೆಚ್ಚು ಸುದ್ದಿ ಸಂದರ್ಶನ ಪ್ರಕಟಿಸಿ ಸೋಮನಾಥ ಗುರೂಜಿ ಅವರ ಉದ್ದೇಶ ಈಡೇರಿದ್ದನ್ನು ಸ್ಮರಿಸಿದಾಗ ಅವರೆಲ್ಲರೂ "ಇದೇ ಕಾರಣವೇ ನಮ್ಮ ನಿಮ್ಮ ಬೇಟಿ " ಅಂದರು ಮತ್ತು ಈ ಅಕಸ್ಮಿಕ ಬೇಟಿಯ ನೆನಪಿಗಾಗಿ ಆರು ತಿಂಗಳ ನಾಸಿಕ್ ನಿಂದ ತಲೆಯ ಮೇಲೆ ಹೊತ್ತು ತರುವ ಪಾತ್ರಾ ದೇವತೆಯನ್ನು ಮಂಗಳೂರಿಗೆ ತಲುಪಿಸಿದ ನಂತರ ಮಾಡುವ ವಿಶೇಷ ಪೂಜೆಯ ಪ್ರಸಾದ ನನಗೆ ನೀಡಿ ಮುಂದಿನ ಬಾರಾಪಂತ್ ಯಾತ್ರೆ ( 12ವರ್ಷದ ನಂತರ) ವರೆಗೆ ಸಂರಕ್ಷಿಸಿಡಲು ನೀಡಿದ್ದು ನನ್ನ ಪುಣ್ಯ.
Comments
Post a Comment