#ನಮ್ಮ_ಜಿಲ್ಲೆಯ_ಕವಿ_ಬರಹಗಾರ_ಚಲನಚಿತ್ರ_ನಿರ್ದೇಶಕ_ಪತ್ರಕತ೯_ಲಂಕೇಶರ_ಸ್ಮಾರಕ_ಯಾಕೆ_ಇಲ್ಲ !?
ಶಿವಮೊಗ್ಗ ಜಿಲ್ಲೆ ವಿಭಜನೆ ನಂತರ (1998 ರ ನಂತರ) ಲಂಕೇಶರ ಹುಟ್ಟೂರು ದಾವಣಗೆರೆಗೆ ಸೇರಿದ್ದರೂ ಲಂಕೇಶರು ಶಿವಮೊಗ್ಗ ಜಿಲ್ಲೆಯವರೇ ಅನ್ನುವ ಭಾವನೆ ಹಾಗೇ ಉಳಿದಿದೆ.
ಲಂಕೇಶರ ಸ್ಮರಣೆಗಾಗಿ ಅವರ ಅಪಾರ ಅಭಿಮಾನಿ ಬಳಗ ಅವರ ಹುಟ್ಟೂರಿನಲ್ಲಿ ಅಥವ ಶಿವಮೊಗ್ಗದಲ್ಲಿ ಸ್ಮಾರಕ ನಿಮಿ೯ಸಲು ಪ್ರಯತ್ನಿಸಬಾರದೇಕೆ ? ಅವರ ಪುಸ್ತಕ, ಲಂಕೇಶ್ ಪತ್ರಿಕೆಯ ಹಿಂದಿನ ಪ್ರತಿಗಳು, ಅವರ ಪೋಟೋ ಗ್ಯಾಲರಿ, ಅವರ ಚಲನಚಿತ್ರ, ಅವರು ಬರೆದ ಚಲನಚಿತ್ರಗೀತೆಗಳು, ಜಿಲ್ಲೆಯಲ್ಲಿ ಪ್ರಾರಂಭ ಆದ ಸಮಾಜವಾದಿ ಪಕ್ಷ, ರೈತ ಸಂಘದ ಒಡನಾಟ ವಿವರಿಸುವ ದಾಖಲೆಗಳು ಮುಂದಿನ ತಲೆಮಾರಿಗೆ ತಲುಪಿಸ ಬಹುದಲ್ಲವೆ?
ಮೊನ್ನೆ ಲಂಕೇಶರ ಹುಟ್ಟೂರಿನ ಮನೆ ಹಿತ್ತಲಿನ ಬೃಹತ್ ಹುಡೇವು ಚಿತ್ರ ಪೋಸ್ಟ್ ಮಾಡಿ ಈ ಬಗ್ಗೆ ಲಂಕೇಶರು ಎಲ್ಲಾದರೂ ಉಲ್ಲೇಖಿಸಿದ್ದಾರ? ಎಂಬ ಪ್ರಶ್ನೆಗೆ ಪತ್ರಕತ೯ರಾದ #ಶಶಿ_ಸಂಪಳ್ಳಿ ಲಂಕೇಶರ ಹುಳಿ ಮಾವಿನ ಮರ ಪುಸ್ತಕದಲ್ಲಿ ಬರೆದ ಬಗ್ಗೆ ಮತ್ತು ಒಮ್ಮೆ ಅವರ ಮನೆಗೆ ಹೋದಾಗ ಶಶಿ ಸಂಪಳ್ಳಿ ಈ ಹುಡೇವು ನೋಡಿ ಬಂದ ಬಗ್ಗೆ ನೆನಪಿಸಿದ್ದರು.
ಇನ್ನೊಬ್ಬ ಗೆಳೆಯರಾದ #ಸುಬ್ರಮಣ್ಯ_ಕಲ್ಮನೆ ಹುಳಿ ಮಾವಿನ ಮರದಲ್ಲಿ ಈ ಹುಡೇವು ಬಗ್ಗೆ ಬರೆದ ಪುಟ ನನಗೆ ಕಳಿಸಿದ್ದರು ಅದರಲ್ಲಿ ಲಂಕೇಶರು ಬರೆದದ್ದು...
ಇನ್ನೊಂದು ಹಿತ್ತಿಲು ನಮ್ಮಲ್ಲಿರುವ ಹುಡೇವು (ಕಲ್ಲಿನ ಕೋಟೆಯಂತ ಕಟ್ಟಡ) ಪಕ್ಕಕ್ಕಿದ್ದ ಜಾಗ, ಇದು ದನದ ಮನೆಯ ಹಿಂದೆ ಇತ್ತು. ಈ ಹುಡೇವು ಯಾವ ಶತಮಾನದಲ್ಲಿ ಕಟ್ಟಿದ್ದರೋ, ಅದು ಸುಮಾರು 60 ಅಡಿ ಎತ್ತರ, 200 ಅಡಿ ಸುತ್ತಳತೆ ಇದ್ದು ಅದನ್ನು ಅದ೯ದಷ್ಟು ಎತ್ತರ ಹತ್ತಿ ಒಳಗೆ ಹೋದರೆ ಅಲ್ಲಿ ಲಂಟಾನ , ಕಾರೆ ಕಂಟಿ, ಹಾವುಗಳು ಇರುತ್ತಿದ್ದವು.
ಈ ಹುಡೇವು ಒಮ್ಮೆ ಊರಿನ ಜನ ಶತೃಗಳಿಂದ ಬಚ್ಚಿಟ್ಟುಕೊಂಡು ಹೊರಾಡಲು ಅನುಕೂಲವಾಗಿರ ಬಹುದಾದ ....ಅಂತ ಬರೆದಿದ್ದಾರೆ.
ಲಂಕೇಶರ ಸ್ಮರಣೆಗಾಗಿ ಸ್ಮಾರಕ ಆದಷ್ಟು ಬೇಗ ಆಗಲಿ ಎಂದು ಒತ್ತಾಯಿಸೋಣವೇ?
Comments
Post a Comment