#ಇಡ್ಲಿ_ನಿನ್ನ_ಮಹಿಮೆ_ಏನು?
ರೆಸ್ಟೋರೆಂಟ್ ಮಾಲಿಕರ ಮತ್ತು ಇಡ್ಲಿ ಪ್ರಿಯರ ಗಮನಕ್ಕಾಗಿ
ಬೆಳಿಗ್ಗೆ ಮನೇನಲ್ಲಿ ಒಂದು ರವೆ ಇಡ್ಲಿ ಮತ್ತು ಸಾದಾ ಇಡ್ಲಿ ಜೊತೆಗೆ ಎಮ್ಮೆ ಹಾಲಿನಿಂದ ಮಾಡಿದ ಬೆಣ್ಣೆ ಮತ್ತು ತೊಗರಿ ಬೇಳೆ ಹುರಿದು ಮಾಡಿದ ಚಟ್ನಿ ತಿಂದು ಚಹಾ ಕುಡಿದು ಪತ್ರಿಕೆ ಓದಲು ಕುಳಿತಾಗ ಗೊತ್ತಾಯಿತು ಇವತ್ತು ವಿಶ್ವ ಇಡ್ಲಿ ದಿನ ಅಂತ.
ಆದರೆ ವಿಶ್ವ ಸಂಸ್ಥೆ,WHO ವಿಶ್ವದ ಜನ ಜಾಗೃತೆಗಾಗಿ ಮಾಡುವ ವಿಶ್ವ ದಿನ ಇದಲ್ಲ ಇದು 2015 ರಿಂದ ಚೆನೈನಲ್ಲಿ ಪ್ರಾರಂಭವಾದ ವಿಶ್ವ ಇಡ್ಲಿ ದಿನ ಬಾರತದಾದ್ಯಂತ ಪ್ರಸಿದ್ಧಿ ಪಡೆದಿದೆ.
ಚೆನೈನ ಮಲ್ಲಿಪು ಇಡ್ಲಿ ಪ್ರಖ್ಯಾತವಾದ ಅನೇಕ ಕಡೆ ನಡೆಯುವ ರೆಸ್ಟೋರಾಂಟ್ ಇದರ ಮಾಲಿಕ ಅನ್ನಿವನ್ನನ್ 2015ರ ಮಾಚ೯ 30 ರಂದು 1328 ವಿದದ ಇಡ್ಲಿ ಮತ್ತು 44 ಕೆಜಿಯ ಬೃಹತ್ ಇಡ್ಲಿ ತಯಾರಿಸಿ ಪ್ರಸಿದ್ಧ ಜನರಿಂದ ಇಡ್ಲಿ ಕಟ್ ಮಾಡುವ ಮೂಲಕ ಉದ್ಘಾಟಿಸಿದ್ದು ಈಗ ಭಾರತದಲ್ಲಿ ವಿಶ್ವ ಇಡ್ಲಿ ದಿನ ಅಂತ ಆಚರಣೆಗೆ ಕಾರಣ ಆಗಿದೆ.
ದಕ್ಷಿಣ ಬಾರತದಲ್ಲಿ ಅದರಲ್ಲೂ ತಮಿಳುನಾಡು ಮತ್ತು ಕನಾ೯ಟಕದಲಿ ಇಡ್ಲಿ ಯಾವತ್ತೂ ಪೇಮಸ್ಸೇ ಅದೇ ಗೋವಾ, ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಇಡ್ಲಿ ಕ್ರಿಕೆಟ್ ಬಾಲ್ ನಂತೆ ಗಡುಸಾಗಿರುತ್ತದೆ.
ಇಡ್ಲಿ ಯಾವ ರಾಜ್ಯದೆಂದರೆ ಕನಾ೯ಟಕ ಮತ್ತು ತಮಿಳುನಾಡು ಪರಸ್ಪರ ತಮ್ಮದೆಂದೇ ವಾದಿಸಬಹುದಾದರೂ ಇಡ್ಲಿ ಮೂಲ ಇಂಡೋನೇಷಿಯ ಅಲ್ಲಿಂದ ಕ್ರಿ.ಶ. 800 ರಲ್ಲಿ ಭಾರತಕ್ಕೆ ಬಂದಿದೆ ಎಂಬ ಇತಿಹಾಸಕಾರರ ಅಂಬೋಣ ಇದಕ್ಕೆ ಕಾರಣ ಇಂಡೋನೇಷಿಯದಲ್ಲಿ ಆ ಕಾಲದಲ್ಲೇ ಅಕ್ಕಿ ಉದ್ದು ಬಳಸುವ ಅದನ್ನು ಹಿಟ್ಟು ಮಾಡಿ ಹುಳಿ ಬರುಸುವ (permentation) ಮತ್ತು ಹಬೆಯಲ್ಲಿ ಬೇಯಿಸಿ ತಯಾರಿಸುವ ಅನೇಕ ವಿಧಾನದ ಆಹಾರ ತಯಾರಿಕೆ ಅವರಲ್ಲಿದೆ.
ಕನಾ೯ಟಕದ ವಡ್ಡಾರಾದನೆ ಕಾವ್ಯದಲ್ಲಿ ಕ್ರಿ.ಶ. 920 ರಲ್ಲಿ ಇಡ್ಡಲಗೆ ಎಂದು ಇಡ್ಲಿ ಉಲ್ಲೇಖ ಇದೆ.
ಕ್ರಿ.ಶ. 1130 ರಲ್ಲಿ ರಾಜ ಸೋಮೇಶ್ವರ (3) ಬರೆದ ಸಾಂಸ್ಕೃತ ಮನೋಸೊಲ್ಲಾಸದಲ್ಲಿ ಇಡ್ಡೆಲಿಕೆ ಎಂದು ಉಲ್ಲೇಖ ಮತ್ತು ಕ್ರಿ.ಶ. 1025 ರಲ್ಲಿ ಚಾವುಂಡರಾಯ (2) ಬರೆದ ಲೋಕೋಪಾರಾಕದಲ್ಲಿ ಕೂಡ ಇಡ್ಲಿ ಉಲ್ಲೇಖ ಇದೆ ಎಂಬ ಮಾಹಿತಿ ಇದೆ.
ಈಗೆಲ್ಲ ಇಡ್ಲಿ, ಮಲ್ಲಿಗೆ ಇಡ್ಲಿ, ತಟ್ಟೆ ಇಡ್ಲಿ, ರವಾ ಇಡ್ಲಿ, ಬಟನ್ ಇಡ್ಲಿ ಅಂತ ಎಲ್ಲಾ ರೆಸ್ಟೋರಾಂಟ್ಗಳಲ್ಲೂ ಇಡ್ಲಿ ಸಿಗುತ್ತದೆ.
Comments
Post a Comment