ಅವಿಭಜಿತ ಶಿವಮೊಗ್ಗ ಜಿಲ್ಲೆಯ ಚೆನ್ನಗಿರಿಯ ಹೊದಿಗೆರೆಯಲ್ಲಿ (ಈಗ ದಾವಣಗೆರೆ ಜಿಲ್ಲೆ) ಛತ್ರಪತಿ ಶಿವಾಜಿ ಮಹಾರಾಜರ ತಂದೆ ಛತ್ರಪತಿ ಷಹಾಜಿ ಮಹಾರಾಜರ ಸಮಾದಿ ಮತ್ತು ಹೊಸನಗರ ತಾಲ್ಲುಕಿನ ಅರಮನೆ ಕೊಪ್ಪದಲ್ಲಿ ಇವರ ಮಗ ಛತ್ರಪತಿ ರಾಜಾರಾಮ್ ಮಹಾರಾಜ ಕೆಳದಿ ರಾಣಿ ಚೆನ್ನಮ್ಮರ ರಕ್ಷಣೆಯಲ್ಲಿ ಎರೆಡು ವರ್ಷ ತಂಗಿದ್ದ ಅರಮನೆ ಇದೆ.
#ಛತ್ರಪತಿ_ಶಿವಾಜಿ_ಮಹಾರಾಜರ_ಮಗ_ಛತ್ರಪತಿ_ರಾಜಾರಾಮ_ಮಹಾರಾಜರನ್ನು_ಕೆಳದಿ_ರಾಣಿ_ಚೆನ್ನಮ್ಮ_ಆಶ್ರಯದಲ್ಲಿದ್ದದ್ದು
#ಮರಾಠಿ_ಟೀವಿ_ಎಬಿಪಿ_ಮಾಜಾ_ಡಾಕ್ಯುಮೆಂಟರಿ_ಮಾಡಿ_ಮೊನ್ನೆ_21_ಮಾಚ್೯_2021_ಪ್ರಸಾರ_ಮಾಡಿದೆ.
#ಇತಿಹಾಸ_ಆಸಕ್ತರಿಗಾಗಿ_ಮಾಹಿತಿ
ಛತ್ರಪತಿ ಶಿವಾಜಿ ಮಹಾರಾಜರ ತಂದೆ ಛತ್ರಪತಿ ಷಹಾಜಿ ಮಹಾರಾಜರ ಸಮಾದಿ ಚೆನ್ನಗಿರಿ ಸಮೀಪದ ಹೊದಿಗೆರೆಯಲ್ಲಿದೆ, ಇವರ ಮಗ ಛತ್ರಪತಿ ರಾಜಾರಾಮ ಮಹಾರಾಜರನ್ನು ಕೆಳದಿ ರಾಣಿ ಚೆನ್ನಮ್ಮ ಆಶ್ರಯ ನೀಡಿ ರಹಸ್ಯವಾಗಿ ಬಚ್ಚಿಟ್ಟ ಮನೆ ಬಿದನೂರು ನಗರದ ಸಮೀಪದ ಅರಮನೆ ಕೊಪ್ಪದಲ್ಲಿದೆ.
ವಿಶೇಷ ಅಂದರೆ ಬಿದನೂರಿನಿಂದ 17 ಕಿಮಿ ದೂರದ ಮತ್ತಿ ಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಮನೆ ಕೊಪ್ಪ ಎಂಬಲ್ಲಿ (ಕೊಲ್ಲೂರು ಮಾಗ೯ದಲ್ಲಿ) ಹಾಲಿ ಮಂಜುನಾಥ ಭಟ್ಟರ ಸುಪದಿ೯ಯಲ್ಲಿರುವ ಬೃಹತ್ ಮನೆ (ಒಂದು ಕಾಲದಲ್ಲಿ ಅರಮನೆ) ಯಲ್ಲಿ ಸುಮಾರು ಎರೆಡು ವರ್ಷ ಛತ್ರಪತಿ ರಾಜಾರಾಮ ಮಹಾರಾಜರನ್ನ ರಾಣಿ ಚೆನ್ನಮ್ಮ ರಹಸ್ಯವಾಗಿ ರಕ್ಷಿಸಿದ್ದಳು, ಈ ಕಾಲದಲ್ಲಿಯೆ ಛತ್ರಪತಿ ರಾಜಾರಾಮರು ಬಿದನೂರು ನಗರದಲ್ಲಿ ಸುಬ್ರಮಣ್ಯ ಮತ್ತು ಪಾರ್ವತಿ ದೇವಾಲಯ ನಿಮಿ೯ಸುತ್ತಾರೆ.
ಈ ಟೇವಿ ತಂಡವನ್ನು ಈ ಅರಮನೆ ಕೊಪ್ಪಕ್ಕೆ ಕರೆದೊಯ್ದು ಮಾಹಿತಿ ನೀಡಿದವರು ಹಾಲಿ ಬಿದನೂರು ವಾಸಿ ಆಗಿರುವ ಇತಿಹಾಸ ಸಂಶೋದಕರು ಮತ್ತು ಅನೇಕ ಕೆಳದಿ ಇತಿಹಾಸದ ಪುಸ್ತಕ ಪ್ರಕಟಿಸಿರುವ ಅಂಬ್ರಯ್ಯ ಮಠರವರು.
ಅಂಬ್ರಯ್ಯ ಮಠರವರು ಬರೆದು ಪ್ರಕಟಿಸಿರುವ "ಗತರಾಜಧಾನಿಯ ಸುತ್ತುಮುತ್ತು ಹಾಗೂ ಐತಿಹಾಸಿಕ ಲೇಖನಗಳು" ಪುಸ್ತಕದಲ್ಲಿ ಅರಮನೆ ಕೊಪ್ಪದ ಬಗ್ಗೆ ಹೀಗೆ ಉಲ್ಲೇಖಿಸಿದ್ದಾರೆ
ಇದು ನಗರದಿಂದ ಕೊಲ್ಲೂರು ಮಾರ್ಗದಲ್ಲಿ ಸು. 17 ಕಿ.ಮಿ ಸಾಗಿ ಬಂದರೆ ಮತ್ತಿ ಮನೆ ಗ್ರಾಮ ಪಂಚಾಯಿತಿಯಲ್ಲಿ ಸಿಕ್ಕುತ್ತದೆ. ರಾಜ ರಾಮನಿಗಾಗಿ ಕೆಳದಿಯ ರಾಣಿ ಚೆನ್ನಮ್ಮ ಕಟ್ಟಿಸಿಕೊಟ್ಟ ಅರಮನೆ ಎಂಬ ಪ್ರತೀತಿ. ಈ ಸ್ಥಳಕ್ಕೆ ಅರಮನೆ ಕೊಪ್ಪ ಎನ್ನುತ್ತಾರೆ. ಕಲ್ಲು ಮತ್ತು ಮಣ್ಣಿನಿಂದ ಕಟ್ಟಿದ ಈ ಮನೆಯ ಗೋಡೆಗಳ ಅಗಲ 6 ಅಡಿ. ಅರಮನೆಯಲ್ಲಿ ಒಂದೇ ಮರದಿಂದ ಮಾಡಿದ ತೊಲೆಗಳು ಮತ್ತು ಸೊಗಸಾಗಿ ಕಟ್ಟಿದ ಕಂಬಗಳು ಬಹು ಆಕಷ೯ಕವಾಗಿವೆ. ಮೇಲಿನ ಉಪ್ಪರಿಗೆಗೆ ಹೋಗಲು ಮಣ್ಣಿನ ಮೆಟ್ಟಿಲುಗಳಿವೆ. ಉಪ್ಪರಿಗೆಯಲ್ಲಿ ಈಗ ಮೂರು ಕೊಠಡಿಗಳು ಮಾತ್ರ ಉಳಿದಿದೆ.
ಮೂರನೆ ಕೊಠಡಿಯಲ್ಲಿ ಮರದಿಂದ ಮಾಡಿದ ಒ0ದು ಬೀರುವಿದೆ ಇದರ ತಳಭಾಗದ ಬಾಗಿಲು ತೆರೆದರೆ ಮರದ ಚೌಕಟ್ಟಿನಿಂದ ನಿಮಾ೯ಣವಾದ ಸುರಂಗವು ಕಾಣಿಸುತ್ತದೆ. ಮಹಡಿಯ ಒಂದು ಭಾಗದಲ್ಲಿ ಒಂದೇ ಒಂದು ಕಬ್ಬಿಣದ ಸರಳಿನ ಕಿಟಕಿಯಿದೆ. ಇದರ ಬಾಗಿಲು ತೆರೆದಾಗ ಒಬ್ಬರು ಸುಲಭವಾಗಿ ಕೆಳಕ್ಕೆ ಹಾರಿ ತಪ್ಪಿಸಿಕೊಳ್ಳಬಹುದು. ಮನೆಯ ಒಳಬಾಗದಲ್ಲೇ ಬಾವಿ ಇದೆ. ಅಲ್ಲದೆ ಈ ಮನೆಗೆ ಯಾವಾಗಲೂ ಮೇಲಿರುವ ಕೆರೆಯಿಂದ ನೀರು ಬರುವ ವ್ಯವಸ್ಥೆ ಮಾಡಲಾಗಿದೆ. ಈ ಮನೆಗೆ ಬೆಂಕಿ ಬಿದ್ದಾಗ ಸುಂದರವಾದ ದ್ವಾರಗಳು ಮತ್ತು ಕೊಠಡಿಗಳು ಸುಟ್ಟು ಹೋದವೆಂದು ಅಲ್ಲಿನವರು ತಿಳಿಸುತ್ತಾರೆ. ಈ ಮನೆಯ ಸುತ್ತಲಿನ ಕೋಟೆ, ಕಂದಕ ಮುಂತಾದವುಗಳನ್ನು ವೀಕ್ಷಿಸಿದಾಗ ಇದನ್ನು ಅತ್ಯಂತ ರಕ್ಷಣಾತ್ಮಕವಾಗಿ ಕಟ್ಟಿರುವ ಒಂದು ಅರಮನೆಯೆಂದು ನಿಸ್ಸಂಶಯವಾಗಿ ಹೇಳಬಹುದು.
ಇದು ಅಂದಿನ ಅರಸರ ರಕ್ಷಣಾತ್ಮಕ ಅರಮನೆಯಾಗಿತ್ತು. ಇಲ್ಲಿ ತೋಪುಗಳನ್ನು ಹಾರಿಸುವ ಹಲವಾರು ಸಾಧನಾ ಸಾಮಗ್ರಿಗಳಿದ್ದವು. ಧಾನ್ಯ ಸಂಗ್ರಹಣೆಯ ಮರದ ಪಣತಗಳನ್ನು, ಮನೆಯ ಮುಂಬಾಗದಲ್ಲಿ ಲೆಕ್ಕ ಪತ್ರಗಳ ಕಡತವನ್ನು ಇಡುತ್ತಿದ್ದ ಚಾವಡಿಯ ಅವಶೇಷಗಳನ್ನು ಕಾಣಬಹುದಾಗಿದೆ. ಅಂದಿನ ರಾಜಮನೆತನಕ್ಕೆ ಸಂಬಂದಪಟ್ಟ ಹಲವಾರು ವಸ್ತುಗಳನ್ನು, ತಾಡೋಲೆ ಕಟ್ಟುಗಳನ್ನು ನಾವಿಲ್ಲಿ ಕಾಣಬಹುದು.
ಎಂದು ಬರೆದಿದ್ದಾರೆ ಮರಾಠಿ ಚಾನೆಲ್ ನವರು ಇಡೀ ಮನೆಯನ್ನು ವಿವರವಾಗಿ ಚಿತ್ರಿಸಿದ್ದನ್ನು ಇಲ್ಲಿ ಲಗತ್ತಿಸಿರುವ ಯು ಟ್ಯೂಬ್ ಚಾನಲ್ ನಲ್ಲಿ ನೋಡಬಹುದು, ಮಹಾರಾಷ್ಟ್ರದಿಂದ ಇಲ್ಲಿಯ ತನಕ ಮತ್ತು ಕೆಳದಿ ದೇವಸ್ಥಾನ ಒಳಗೊಂಡಂತೆ 350 ವರ್ಷದ ಇತಿಹಾಸ ಪುನಃ ನೆನೆಪಿಸುವ ಗ್ರೇಟ್ ಛತ್ರಪತಿ ಮಹಾರಾಜ್ ರಾಜಾರಾಮ್ ಎಂಬ ಡಾಕ್ಯುಮೆಂಟರಿ ಸುಂದರವಾಗಿ ದಾಖಲೆಯ ಕಥೆಯೊಂದಿಗೆ ಚಿತ್ರಿಕರಿಸಿ ಪ್ರಸಾರ ಮಾಡಿದ ಮರಾಠಿ ಎಬಿಪಿ ಮಾಜಾ ಚಾನೆಲ್ ಗೆ ಅಭಿನಂದನೆಗಳು.
ಮತ್ತು ಇದನ್ನು ಕಳಿಸಿಕೊಟ್ಟ ಮಹಾರಾಷ್ಟ್ರದ ಕೊಲ್ಲಾಪುರ ವಾಸಿ ಕೈಗಾರಿಕೋದ್ಯಮಿ ವೆಂಕಟೇಶ್ ಭಟ್ಟರಿಗೆ ವಿಶೇಷ ನಮನಗಳು ಅವರು ಈ ಮರಾಠಿ ವಿಡಿಯೋ ಈ ಕೆಳ ಕಂಡಂತೆ ಕನ್ನಡದಲ್ಲಿ ಸಂಕ್ಷಿಪ್ತಗೊಳಿಸಿದ್ದಾರೆ
"ನನಗೂ ಕೂಡ ಛತ್ರಪತಿ ಶಿವಾಜಿ ವಂಶಜರಿಗೆ ರಾಣಿ ಚೆನ್ನಮ್ಮ ಆಶ್ರಯ ನೀಡಿದ್ದಳು ಯೆಂದು ಒಂದು ಸಣ್ಣ ತುಣುಕು ತಿಳಿದಿತ್ತೇ ವಿನಃ, ವಿವರವಾಗಿ ತಿಳಿದಿರಲಿಲ್ಲ.
ಹಿಂದವೀ ಸ್ವರಾಜ್ಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜ (Shivaji Bhonsale)1680 ರ ಏಪ್ರಿಲ್ 3ರ ಹನುಮಾನ ಜಯಂತಿಯಂದು ತೀವ್ರ ಜ್ವರದಿಂದ ಅಸು ನೀಗುತ್ತಾರೆ, ಅವರ ನಂತರದಲ್ಲಿ ಅವರ ಮೊದಲನೇ ಪುತ್ರ ಸಂಭಾಜಿ ಮಹಾರಾಜರ ಆಳ್ವಿಕೆ ಪ್ರಾರಂಭವಾಗುತ್ತದೆ, ಅತ್ಯಂತ ಶೂರ ಹಾಗೂ ಪರಾಕ್ರಮಿಯಾದರು ಮೊಘಲ ರಾಜ ಔರಂಗಜೇಬ ನ ಸೆರೆಯಲ್ಲಿ ಸಿಲುಕುತ್ತಾನೆ, ಸೆರೆಗೆ ಸಿಕ್ಕ ಛ:ಸಂಭಾಜಿಯನ್ನು ದಿನಕ್ಕೊಂದರಂತೆ ಆತನ ಅಂಗಾಂಗಗಳನ್ನು ಕತ್ತರಿಸುತ್ತಾ ಕಣ್ಣುಗಳನ್ನು ಕಿತ್ತು ಹತ್ಯೆಗಯ್ಯಲಾಗುತ್ತದೆ, ಆಗಲೇ ಸಂಭಾಜಿಯ ಕಿರಿಯ ಸಹೋದರ ಛತ್ರಪತಿ ರಾಜಾರಾಮರ ಕತೆ ಪ್ರಾರಂಭವಾಗುವುದು ಹಾಗೂ ನಮ್ಮ ಹೆಮ್ಮೆಯ ರಾಣಿ ಚೆನ್ನಮ್ಮನಲ್ಲಿಗೆ ಬಂದು ನಿಲ್ಲುವುದು. ಮೊಘಲರ ಸೇನೆ ರಾಯಘಡ ಕೋಟೆಯನ್ನು ಸುತ್ತುವರೆದು ಛತ್ರಪತಿ ಸಂಬಾಜಿಯನ್ನು ಕೊಂದಂತೆ ಛತ್ರಪತಿ ರಾಜಾರಾಮನನ್ನೂ ಕೊಂದು ಹಿಂದವೀ ಸ್ವರಾಜ್ಯ ಸ್ಥಾಪಕನ ವಂಶವನ್ನು ಮುಗಿಸುವ ಯೋಜನೆಯಲ್ಲಿರುವಾಗಲೇ, ಆಗಿನ್ನೂ ಅಧಿಕಾರ ವಹಿಸಿಕೊಂಡ ಕೇವಲ ಹತ್ತೊಂಬತ್ತು ವರ್ಷದ ಛತ್ರಪತಿ ರಾಜಾರಾಮ ಬಲಾಢ್ಯ ಮೊಗಲರಿಂದ ಆ ಸಮಯದಲ್ಲಿ ತಪ್ಪಿಸಿಕೊಳ್ಳಲು ಯೋಜನೆಯ ಒಂದು ಭಾಗವಾಗಿ ಆಗಿನ ಕರ್ನಾಟಕದ ಭಾಗವಾಗಿದ್ದ ಈಗಿನ ತಮಿಳುನಾಡಿನ ಜಿಂಜಿ ಕೋಟೆಯತ್ತ ತೆರಳಲು ತೀರ್ಮಾನಿಸಿ ಹೊರಡುತ್ತಾರೆ, ರಾಯಗಡದಿಂದ ಪ್ರತಾಪ ಗಡ, ಸತಾರ, ಹಾಗೂ ಈಗಲೂ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗ ಭಕ್ತರೇ ಹೆಚ್ಚಿರುವ ಜಾಗೃತ ದತ್ತ ಪೀಠ ನರಸಬವಾಡಿ ಯಿಂದ ಪನ್ಹಾಳ ಗಡ ದ ಮುಕೇನ ಈಗಿನ ಕರ್ನಾಟಕದ ಗೋಕಾಕ್, ಸವದತ್ತಿ, ನವಲಗುಂದದ ಮೂಲಕ 33 ದಿನಗಳ ಪ್ರಯಾಣ ಮುಗಿಸಿ ಹೊನ್ನಾಳಿಯನ್ನು ತಲುಪಿದ ನಂತರ ರಾಜಾರಾಮರ ರಾಯಭಾರಿ ರಾಣಿ ಚೆನ್ನಮ್ಮರನ್ನು ಆಸ್ಥಾನದಲ್ಲಿ ಭೇಟಿಯಾಗಿ ಆಶ್ರಯವನ್ನು ಬೇಡುತ್ತಾರೆ, ಮಹಾರಾಣಿ ಯ ಔದಾರ್ಯ, ಧೈರ್ಯ, ಪರಾಕ್ರಮ, ರಾಜಧರ್ಮವನ್ನು ಮೆಚ್ಚಬೇಕಾದ ಸಮಯವೇ ಇದು, ಏಕೆಂದರೆ ಛತ್ರಪತಿ ರಾಜರಾಮರಿಗೆ ಆಶ್ರಯ ನೀಡಿ, ಅವರನ್ನು ಬೆನ್ನಟ್ಟಿ ಬಂದಿರುವ ಬಲಾಢ್ಯ ಮೊಘಲರ ಕೆಂಗಣ್ಣಿಗೆ ತುತ್ತಾಗುವುದು ಯೆಂತಹಾ ಧೈರ್ಯಶಾಲಿಯ ಕಲ್ಪನೆಗೂ ನಿಲುಕದ ಮಾತಾಗಿತ್ತು, ಆಸ್ಥಾನದ ಮಂತ್ರಿಯ ಮಾತನ್ನೂ ಪರಿಗಣಿಸದೇ ಹಲವರ ವಿರೋಧದ ನಡುವೆಯೂ, ಆಗಿನ್ನೂ ರಾಜ ಸೋಮಶೆಜರ ನಾಯಕನ ವಿಧವಾ ಪತ್ನಿ "ನನ್ನ ರಾಜ್ಯ ಹೋದರೂ ಸರಿ, ಹಿಂದವೀ ಸ್ವರಾಜ್ಯ ಸಾಮ್ರಾಟನ ಮಗನಿಗೆ ಆಶ್ರಯ ನೀಡುವುದು ನನ್ನ ಕರ್ತವ್ಯ " ಯೆನ್ನುವ ರಾಣಿ ಚೆನ್ನಮ್ಮರ ತೀರ್ಮಾನ ಮರಾಠಿಗರ ಮೇಲೆ ಕನ್ನಡಿಗರು ಹೊರಿಸಿದ ಎಂದಿಗೂ ತೀರಿಸಲಾಗದ ಸಾಲ ಎನ್ನುವ ಉದ್ಗಾರ ಮರಾಠಿ ನಿರೂಪಕನ ಬಾಯಿಂದ ಬರುವಾಗ ಕನ್ನಡಿಗರಾದ ನಮಗೆ ಆಗುವ ರೋಮಾಂಚನ ವರ್ಣಿಸಲಸದಳ, ಅಂತೆಯೇ ಮೂರು ಅತ್ಯಂತ ಘಾತಕ ಮೊಘಲ್ ಸರದಾರರನ್ನು ಸಂತಾಜಿ ಘೋರ್ಪಡೆಯೊಂದಿಗೆ ಸೇರಿ ಮಣ್ಣು ಮುಕ್ಕಿಸಿದ ರಾಣಿಯ ವೀರಗಾಥೆಯನ್ನು ಮರಾಠಿ ಇತಿಹಾಸ ತಜ್ಞ Dr. ಶೇಟೆ ಯವರ ಬಾಯಿಂದ ಕೇಳುವಾಗ ಆಗುವ ಆನಂದವೇ ಬೇರೆ, ಅರಮನೆ ಕೊಪ್ಪದ ಮನೆಯಲ್ಲಿ ಈಗ ವಾಸಿಸುತ್ತಿರುವ ಮಂಜುನಾಥ ಭಟ್ಟರ ಪರವಾಗಿ ಶ್ರೀಅಂಬ್ರಯ್ಯ ಮಠರು ಹೇಳುವಂತೆ ಛತ್ರಪತಿ ಶಿವಾಜಿ ಮಹಾರಾಜರ ಸುಪುತ್ರನಿಗೆ ಆಶ್ರಯ ನೀಡಿದವರು ನಾವು ಯೆಂದು ಹೇಳಿಕೊಳ್ಳುವಾಗ ಮೈ ನವಿರೇಳುತ್ತದೆ, ಒಟ್ಟಿನಲ್ಲಿ ತಮ್ಮ ರಾಜಕೀಯ ಬೇಳೆ ಬೆಯ್ಯಿಸಿಕೊಳ್ಳುವ ತವಕದಲ್ಲಿ ಗಡಿ ಬಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟು ಮಾಡಿರುವ ಮೊಳಕಾಲಲ್ಲಿ ಬುದ್ದಿ ಹುದುಗಿಸಿ ಕೊಂಡ ಕಿರಾತಕರ ನಡುವೆಯೇ ಈ ಮಾಲಿಕೆ ಯನ್ನು ಬಿತ್ತರಿಸಿದ "ABP ಮಾಜ" ವಾಹಿನಿಗೆ ಧನ್ಯವಾದ ಅರ್ಪಿಸಲೇ ಬೇಕು"🙏🙏🙏
Comments
Post a Comment