#ಶಿವರಾತ್ರಿಯಿಂದ_ಶಿವರಾತ್ರಿವರೆಗೆ
#ಇಪ್ಪತ್ತು_ಕೇಜಿ_ತೂಕ_ಇಳಿಸಿಕೊಂಡಿದ್ದು
ಕಳೆದ ವರ್ಷ ಫೆಬ್ರುವರಿ 23ಕ್ಕೆ ಇರಬೇಕು ಶಿವರಾತ್ರಿ ಅವತ್ತೇ ತೀಮಾ೯ನ ಮಾಡಿದ್ದೆ ಮುಂದಿನ ವರ್ಷದ ಶಿವರಾತ್ರಿ ತನಕ ರಾತ್ರಿ ಊಟ ಬಿಡುವುದಂತ.
ನಮ್ಮ ತಂದೆ ಕೂಡ ರಾತ್ರಿ ಊಟ ಮಾಡುತ್ತಿರಲಿಲ್ಲ ಮಲಗುವಾಗ ಒಂದು ಲೋಟ ರಾಗಿ ಅಂಬಲಿ ಹಾಲು ಮಾತ್ರ ಅವರ ಪದ್ಧತಿ ಆಗಿತ್ತು.
ಕಳೆದ ವರ್ಷ ಜನವರಿಯಲ್ಲಿ ಶಿವಮೊಗ್ಗದ ಡಾಕ್ಟರ್ ಪ್ರೀತಂ (ನಮ್ಮ ಕುಟುಂಬ ವೈದ್ಯರು) ತಪಾಸಣೆಗೆ ಹೋದಾಗ ನನ್ನ ತೂಕ 133 - 135 ರ ಆಸುಪಾಸಿನಲ್ಲಿತ್ತು, ಡಯಾಬಿಟೀಸ್ ಖಾಲಿ ಹೊಟ್ಟೆಯಲ್ಲಿ 240 ಊಟದ ನಂತರ 300 ರ ಸಮೀಪ ಇರುತ್ತಿತ್ತು, ಹೊಟ್ಟೆ ಗುಡಾಣ ಆಗಿತ್ತು ಅದರ ಮಧ್ಯೆ ಹೊಕ್ಕುಳ ಹತ್ತಿರ ಹನಿ೯ಯಾ ಬೇರೆ.
ಹತ್ತಿಪ್ಪತ್ತು ಹೆಜ್ಜೆ ನಡೆಯಲು ಆಯಾಸ ಇದು ನನ್ನ ದೇಹದ ಒಳಗಿನ ಬಯಾಲಾಜಿಕಲ್ ಕ್ಲಾಕ್ ಅಲಾರಂ ಮಾಡುತ್ತಿತ್ತು "ನಿನ್ನ ಆರೋಗ್ಯ ಹದಗೆಟ್ಟಿದೆ ಎಚ್ಚರ " ಅಂತ.
1995 ರ ತನಕ ನನ್ನ 35 ವರ್ಷದ ತನಕ ನನಗೆ ತೂಕದ ಸಮಸ್ಯೆ ಇರಲಿಲ್ಲ ನಂತರವೇ ಪ್ರಾರಂಭ ಆದ ತೂಕದ ಏರುಗತಿ 2001ರಲ್ಲಿ 120 ದಾಟಿ ಅಲ್ಲೇ ನಿಂತಿದ್ದು 2020ಕ್ಕೆ ಪುನಃ ತನ್ನ ಏರುಗತಿ ಪ್ರಾರಂಬಿಸಿತ್ತು.
ಪ್ರತಿ 3 ತಿಂಗಳಿಗೆ ತೊಡುವ ಬಟ್ಟೆ ಅಳತೆ ಬದಲಾಗಿ ಹೊಸ ಬಟ್ಟೆ ಬೇಕಾಗಿತ್ತು, ಬೇರಿಯಾಟ್ರಿಕ್ ಸಜ೯ರಿ ಮಾಡಿಸಿಕೊಳ್ಳುವ ಮನಸ್ಸೂ ಮಾಡಿದ್ದೆ ನಮ್ಮಲ್ಲಿಗೆ ಬೇಟಿ ನೀಡಿದ್ದ, ಬೇರಿಯಾಟ್ರಿಕ್ ಸರ್ಜರಿ ಮಾಡಿಸಿಕೊಂಡಿದ್ದ ರವಿ ಬೆಳಗೆರೆ, ಚಿತ್ರ ನಟ ದೊಡ್ಡಣ್ಣ ತಮ್ಮ ಬೇರಿಯಾಟ್ರಿಕ್ ಸಜ೯ರಿ ಯಶಸ್ಸಾಗಿದೆ ಅನ್ನುತ್ತಿದ್ದರು ಬೇರೆ.
ಎಲ್ಲಾ ರೀತಿಯ ಡಯಟ್, ಕ್ರಾಶ್ ಡಯಟ್ ಅಮೆರಿಕನ್ ಡಯಟ್ ಹೀಗೆ ಸಾಲು ಸಾಲು ತೂಕ ಇಳಿಸಿಕೊಳ್ಳುವ ಪ್ರಯತ್ನ ಸ್ವಲ್ಪವೂ ಫಲ ನೀಡಲೇ ಇಲ್ಲ.
ರಾತ್ರಿ ಚಪಾತಿ ತಿನ್ನುವುದು, ಬೆಳಿಗ್ಗೆ ಬಿಸಿ ನೀರಲ್ಲಿ ಜೇನು ತುಪ್ಪ, ಸಿರಿ ಧಾನ್ಯ ಇಂತಹ ಎಲ್ಲಾ ಪ್ರಯತ್ನವೂ ನನ್ನ ದೇಹದ ತೂಕ ನಿಯಂತ್ರಿಸಲು ಸಾಧ್ಯವೇ ಆಗಲಿಲ್ಲ.
2006 ರಿಂದ ತಪ್ಪದೇ ಸಿದ್ದ ಸಮಾದಿ ಯೋಗ ಸಂಸ್ಥೆಯ ಯೋಗಾಸನ, ಪ್ರಾಣಯಾಮ ಮತ್ತು ಧ್ಯಾನ ಇವತ್ತಿನ ದಿನದ ತನಕವೂ ತಪ್ಪಿಸಿಲ್ಲ ಆದರೆ ಅದು ತೂಕದ ಸುದ್ದಿಗೆ ಹೋಗಲಿಲ್ಲ.
ಹನಿ೯ಯಾಗೆ ಶಸ್ತ್ರಚಿಕಿತ್ಸೆ ಅನಿವಾಯ೯ ಅನ್ನುವ ಸಂದರ್ಭದಲ್ಲೇ ಕಳೆದ ವರ್ಷದ ಶಿವರಾತ್ರಿ ದಿನ ತೆಗೆದುಕೊಂಡ ತೀಮಾ೯ನ ಒಂದು ವರ್ಷದಲ್ಲಿ ಸುಮಾರು 20 ಕೇಜಿ ತೂಕ ಇಳಿಸಿತು, ಹರ್ನಿಯಾ ನಾಪತ್ತೆ ಆಯಿತು, ಡಯಾಬಿಟಿಸ್ ಖಾಲಿ ಹೊಟ್ಟೆಯಲ್ಲಿ ನೂರರ ಒಳಗೆ ಊಟದ ನಂತರ 130 ದಾಟಲಿಲ್ಲ, ಪ್ರತಿದಿನ ಆಯಾಸ ಇಲ್ಲದೇ 2 ಗಂಟೆ ಸತತ ನಡೆಯುವ ಶಕ್ತಿಗಳೆಲ್ಲ ದೇಹ ಪಡೆದಿದೆ.
ಊಟ ಯಾವುದೂ ಬಿಡಲಿಲ್ಲ, ಹಾಲು ತುಪ್ಪ ಬೆಣ್ಣೆ ಬೇಕಾದಷ್ಟು ತಿನ್ನುತ್ತೇನೆ ಇದೆಲ್ಲ ಏಕೆ ಹೇಳುತ್ತೇನೆಂದರೆ ಡಯಟ್ ತಜ್ಞರು ಇದನ್ನೆಲ್ಲ ಬಳಸಬಾರದೆಂದು ಹೇಳುತ್ತಾರೆ.
ಸ್ವತಃ ಪ್ರಯೋಗ ಮಾಡಿ ನೋಡದ ಎಲ್ಲಾ ಪುಸ್ತಕದ ಬದನೆಕಾಯಿಯಂತ ಪ್ರಕೃತಿಗೆ ವಿರುದ್ದವಾದ ಡಯಟ್ ಪಾಲನೆ ಕಷ್ಟಸಾಧ್ಯ, ಪ್ರಾರಂಭದಲ್ಲಿ ಇರುವ ಉತ್ಸಾಹ ನಂತರ ನಾಲಿಗೆ ಕೇಳದೆ ಉತ್ಸಾಹ ಕಳೆದುಕೊಂಡು ಬೋನಸ್ ತೂಕ ಪಡೆದವರ ನೂರಾರು ಕಥೆ ನನ್ನ ಸುತ್ತಲಿನವರದ್ದು.
ಕಳೆದ ವರ್ಷದ ಪೋಟೋದಲ್ಲಿ ನೋಡಿ ನನ್ನ ಮುಖ ಹಿತ್ತಾಳೆ ಚೆಂಬಿನಂತೆ ಅಗಲ ಆಗುತ್ತಿತ್ತು ಇವತ್ತು ಕೊಬ್ಬು ಕರಗಿ ಬದಲಾಗಿರುವುದು ನೋಡಬಹುದು.
ಮುಂದಿನ ವರ್ಷದ ಶಿವರಾತ್ರಿಗೂ ನನ್ನ ಈ ಡಯಟ್ ಮುಂದುವರಿಸುವ ತೀಮಾ೯ನ ಮಾಡಿದ್ದೇನೆ ಇನ್ನೊಂದು 20 ಕೇಜಿ ತೂಕ ಇಳಿಯಬಹುದು ಎಂಬ ಆಶಾಭಾವನೆ ಕೂಡ ಇದೆ.
ನಮ್ಮಲ್ಲಿರುವುದ ಮರೆತು ಬೇರೆಲ್ಲೊ ಹುಡುಕುವ ನಮ್ಮ ಸಹಜ ಬುದ್ದಿ ಬದಲಾಯಿಸಿ ಕೊಂಡು ಪ್ರಕೃತಿಯ ಜೊತೆಗೆ ಮನೆಯಲ್ಲೇ ಯಾವುದೇ ಖಚಿ೯ಲ್ಲದೆ ಸ್ಥೂಲಕಾಯ ನಿವಾರಿಸಿಕೊಳ್ಳುವ ಸುಲಭ ಮಾರ್ಗಗಳಿದೆ ಆದರೆ ನಿಮ್ಮ ಪ್ರಯತ್ನಕ್ಕೆ ಕನಿಷ್ಟ ಒಂದು ವರ್ಷದ ಕಾಲಾವಕಾಶ ಇಟ್ಟುಕೊಳ್ಳಬೇಕು, ಎರಡೇ ದಿನದಲ್ಲಿ ತೂಕ ಪರೀಕ್ಷಿಸಿಕೊಂಡರೆ ಹತಾಷೆ ಗ್ಯಾರಂಟಿ.
ನಾನು ಪ್ರಾರಂಭದ ಆರು ತಿಂಗಳು ತೂಕ ಪರೀಕ್ಷೆ ಮಾಡಲೇ ಇಲ್ಲ ಇವತ್ತಿನ ತೂಕ 110 kg.
ಮುಂದಿನ ದಿನದಲ್ಲಿ ನಮ್ಮ ಆಯುವೇ೯ದ ಮತ್ತು ನ್ಯಾಚುರೋಪತಿ ಚಿಕಿತ್ಸಾಲಯದಲ್ಲಿ ಇಂತಹ ಮಾಗ೯ದಶ೯ನ ಸಿಗುವ ವ್ಯವಸ್ಥೆ ಕೂಡ ಆಗಲಿದೆ.
Comments
Post a Comment