ನನ್ನ ತಂದೆ ಕಾಲದಿಂದ ನಮ್ಮ ಸ್ಥಳ ಜೈನ ದಿಗಂಬರರಿಗೆ, ಮಾತಾಜಿಯವರಿಗೆ ಒಂದು ತ೦ಗುದಾಣ, ಈವರೆಗೆ 2006ರಿಂದ 20I9ರವರೆಗೆ ಎರಡು ಬಾರಿ ಶ್ರವಣಬೆಳಗೋಳದ ಗೊಮ್ಮಟೇಶ್ವರನಿಗೆ ಮಹಾಮಜ್ಜನ ನಡೆದಿದೆ (12 ವಷ೯ಕೊಮ್ಮೆ) ಇಲ್ಲಿವರೆಗೆ ನಮ್ಮಲ್ಲಿ ತಂಗಿದ ಜೈನ ಮುನಿ ಮತ್ತು ಮಾತೆಯರ ಸಂಖ್ಯೆ 1000ಕ್ಕೂ ಹೆಚ್ಚು.
ಜೈನ ಮುನಿ ಮಹಾರಾಜರ ಮತ್ತು ಮಾತೆಯರ ಸೇವೆ ಮಾಡಲು ಜೈನ ಸಮಾಜದ ಅನೇಕರು ಕಾತುರರಾಗಿರುತ್ತಾರೆ ಆದರೆ ಅವರು ಬರುವುದಿಲ್ಲ.
ಅದೇನೋ ಗೊತ್ತಿಲ್ಲ ನನ್ನ ತಂದೆ ತಾಯಿ ಹೆಸರಲ್ಲಿ ಕಟ್ಟಿದ ಕಲ್ಯಾಣ ಮಂಟಪ (ಶ್ರೀ ಕೃಷ್ಣ ಸರಸ ಕನ್ವೆಷನ್ ಹಾಲ್, ತಂದೆ ಕೃಷ್ಣಪ್ಪ ಮತ್ತು ತಾಯಿ ಸರಸಮ್ಮ)ದಲ್ಲಿ ಇವರುಗಳು ತಂಗುತ್ತಾರೆ ಮತ್ತು ನಮ್ಮನ್ನ ಆಶ್ರೀವದಿಸುತ್ತಾರೆ.
ಹುOಚದ ಹಿಂದಿನ ಸ್ವಾಮಿಗಳು ಸೂಚಿಸಿದ ಹೆಸರು ನನ್ನ ಲಾಡ್ಜ್ ಗೆ ಇಟ್ಟಿದ್ದೇನೆ ಅದು ಹೊಂಬುಜ ರೆಸಿಡೆನ್ಸಿ ಅಂತ ಅದಕೊಂದು ಹಿನ್ನೆಲೆ ಇದೆ ಕೇಳಿ, ದೂರದ ಗುಜರಾತಿನ ವಜ್ರ ವ್ಯಾಪಾರಿ ನಿಮ೯ಲ್ ಕುಮಾರ್ ಒಮ್ಮೆ ಹುಂಚದ ಹಿಂದಿನ ಸ್ವಾಮಿಗಳ ಬೇಟಿಗೆ ಬಂದವರು ನನ್ನ ಜೊತೆಯಲ್ಲಿ ಕರೆದೊಯ್ದಿದ್ದರು.
ಅಲ್ಲಿ ಸ್ವಾಮಿಗಳ ಬೇಟಿ ಆಯಿತು, ಹಿಂದಿನ ದಿನವಷ್ಟೆ ಅವರು ಅಮೇರಿಕಾ ದೇಶದ ಪ್ರವಚನ ಪ್ರವಾಸ ಮುಗಿಸಿ ಬಂದಿದ್ದರು, ನನ್ನ ಅವರ ಬೇಟಿ ಅದು ಮೊಟ್ಟ ಮೊದಲಿನದು, ನನ್ನ ಪರಿಚಯ ನಿಮ೯ಲ್ಕುಮಾರರು ಮಾಡಿದಾಗ ಅವರು ಕೇಳಿದ ಮೊದಲ ಪ್ರಶ್ನೆ ನಿಮ್ಮ ಕಲ್ಯಾಣ ಮಂಟಪದ ಮೇಲೆ ಏನು ಕಟ್ಟುತ್ತಿದೀರಿ? ಅಂತ, ಲಾಡ್ಜ್ ಅಂತ ಹೇಳಿದೆ, ನಂತರ ಗೊತ್ತಾಯಿತು ಅವರಿಗೆ ನಮ್ಮ ತಂದೆ ಕೃಷ್ಣಪ್ಪ ಪರಿಚಯ ಅಂತ.
ಮುಂದೆ ಲಾಡ್ಜ್ ಗೆ ಏನು ಹೆಸರಿಡುತ್ತೀರಿ ಅಂದಾಗ ಇನ್ನು ನಿದಾ೯ರ ಮಾಡಿಲ್ಲ ನೀವು ಸಲಹೆ ಕೊಡಿ ಅಂದಾಗ ಅವರು ಹೊಂಬುಜ ಅಂತ ಯಾಕೆ ಇಡಬಾರದೆಂದರು, ಹೊಂಬುಜದ ಅಥ೯ ಕೇಳಿದೆ, ಅವರೆಂದರು ಸಾವಿರ ವಷ೯ದ ಹಿಂದೆ ಈ ಎಲ್ಲಾ ಪ್ರದೇಶ ಆಳಿದ ರಾಜನ ಹೆಸರು, ಸಂಸ್ಕೃತ ದಲ್ಲಿ ಉದಯಿಸುತ್ತಿರುವ ಸೂಯ೯ನ ಸುವಣ೯ ಬುಜಗಳು ಅಂದರು.
ನೀವು ಬ೦ದು ಉದ್ಘಾಟಿಸುವುದಾದರೆ ಆ ಹೆಸರೇ ಇಡುತ್ತೇನೆ ಅಂದೆ, ಅದಾದ ನಂತರ ಮೂರು ತಿಂಗಳಲ್ಲಿ ಸ್ವಾಮೀಜಿ ಇಹಲೋಕ ತ್ಯಜಿಸಿದರು, ಅವರು ಪ್ರವಚನಗಳಿಂದಲೇ ಭಕ್ತರಿ೦ದ ಸ್ಟೀಕರಿಸಿದ ಹಣ 600 ಕೋಟಿಗೂ ಹೆಚ್ಚು!
ಈ ಘಟನೆ ನಡೆದ 2 ವಷ೯ದ ನಂತರ ನನ್ನ ಲಾಡ್ಜ್ ಪ್ರಾರಂಬಿಸ ಬೇಕಾದಾಗ ಹೆಸರಿಗಾಗಿ ಹುಡುಕಾಟ ಪ್ರಾರ೦ಬಿಸಿದಾಗ ನೆನಪಾಯಿತು, ಹಾಗಾಗಿ ಹೊಂಬುಜ ರೆಸಿಡೆನ್ಸಿ ಅಂತಲೇ ನಾಮಕರಣ ಮಾಡಿದೆ.
ಮೊನ್ನೆ ಬಂದು ತಂಗಿದ ಜೈನ ಮಹಾಮುನಿಗಳು ಶ್ರೀ ಪ್ರಮುಖ ಸಾಗರರರು, ಶ್ರವಣಬೆಳಗೋಳ ಮತ್ತು ದಮ೯ಸ್ಥಳದ ಬಾಹುಬಲಿ ಮಹಾ ಮಸ್ತಾಬಿಷೇಕ ಮುಗಿಸಿ ಹೊಂಬುಜ ಕ್ಷೇತ್ರ ಸಂದಶಿ೯ಸಿ ಗೋವಾ ಸಾಗುವಾಗ ನಮ್ಮ ಕಲ್ಯಾಣ ಮಂದಿರದಲ್ಲಿ ತಂಗಿದ್ದರು.
ಇವರು ಹಿಮಾಲಯ ತಪ್ಪಲಿನ ಬದರಿಯಲ್ಲಿ ಹಿಮಪಾತವಾಗುವಾಗ ದಿಗOಬರರಾಗಿ ಒಂದು ತಿಂಗಳು ತಂಗಿದ್ದು ಅಲ್ಲಿ ಪ್ರವಚನ ನೀಡಿದ್ದ ನಂಬಲಾರದ ಸತ್ಯ.
ಸಾದು ಸ೦ತರು ತಂಗುವ ಅವರನ್ನ ಸತ್ಕರಿಸುವ ಭಾಗ್ಯ ದೇವರೇ ನನ್ನ ಗುರು ಹಿರಿಯರ ಆಶ್ರೀವಾದದಿಂದ ಅನುಗ್ರಹಿಸಿದ್ದಾರೆ ಎಂದೇ ಬಾವಿಸಿದ್ದೇನೆ.
Comments
Post a Comment