#ವಾಕಿಂಗ್_ಬಗ್ಗೆ_ಏನೆಲ್ಲ_ಮಿತಿ?
ಕಳೆದ ವಷ೯ ಇದೇ ಲಾಕ್ ಡೌನ್ ಸಂದರ್ಭದಲ್ಲಿ ವಾಕಿಂಗ್ ಶುರು ಮಾಡಿದೆ, 130 ಕೆಜಿ ತೂಕದ ದೇಹ ವಾಕಿಂಗ್ ಗೆ ಸಹಕರಿಸುತ್ತಿರಲಿಲ್ಲ ಆದರೆ ತೂಕ ಇಳಿಸಿಕೊಳ್ಳುವ ದೃಡ ನಿದಾ೯ರ ಮಾಡಿ ಆಗಿತ್ತು.
ನನ್ನ ಸ್ವಂತ ನಿದಾ೯ರದಲ್ಲಿ ನನ್ನ ವಾಕಿಂಗ್ ದಿನಕ್ಕೆ ಒಂದು ಗಂಟೆ ಅವದಿಗೆ ಒಯ್ದು ನಿಲ್ಲಿಸ ಬೇಕಾಗಿತ್ತು ಆಗ ನಾನು ಮಾಡಿದ ತೀಮಾ೯ನ ಮೊದಲ ವಾರ ಪ್ರತಿ ನಿತ್ಯ 5 ನಿಮಿಷ ದಂತೆ ನಡೆಯಲು ಶುರು ಮಾಡಿದೆ ಎರಡನೇ ವಾರ 10 ನಿಮಿಷ, ಮೂರನೇ ವಾರ 15 ನಿಮಿಷದಂತೆ ಹೀಗೆ 12ನೇ ವಾರಕ್ಕೆ ನಿತ್ಯ ಲೀಲಾಜಾಲವಾಗಿ ಒಂದು ಗಂಟೆ ವಾಕಿಂಗ್ ಮಾಡಲು ದೇಹ ಹೊಂದಿ ಕೊಂಡಿದ್ದು ನನಗೆ ನಂಬಲಾಗಲಿಲ್ಲ.
ನಾನು ವಾಕಿಂಗ್ ಗೆ ನಿಗದಿ ಮಾಡಿಕೊಂಡ ಜಾಗ ಮಾತ್ರ ನನ್ನ ಮನೆಯ ಮುಂದಿನ ಪಾಕಿ೯೦ಗ್ ಜಾಗ ಇದು 15 ಅಡಿ ಉದ್ದ ಮತ್ತು ಅಗಲ 10 ಅಡಿ ಮಾತ್ರದ್ದು, ನೇರ ನಡೆದರೆ 10 ಹೆಜ್ಜೆ ಮಾತ್ರ 8 ಆಕಾರದಲ್ಲಿ ನಡೆದರೆ 15 ಹೆಜ್ಜೆ ಆಗುವ ಚಿಕ್ಕ ಜಾಗ ಇದರಲ್ಲಿ ಒ0ದು ಗಂಟೆ ಕಾಲಾವದಿ ವಾಕಿಂಗ್ ನಾನು ಮಾಡುವುದು.
ರಸ್ತೆ ಮೇಲೆ ವಾಕಿಂಗ್ ಹೋದರೆ ಸಿಗುವವರ ಜೊತೆ ಮಾತಿಗೆ ನಿಲ್ಲಬೇಕಾದ ಅನಿವಾಯ೯ತೆಯಿಂದ ವಾಕಿಂಗ್ ನಿರಂತರ ಆಗುವುದಿಲ್ಲ ಮತ್ತು ಇತ್ತೀಚಿನ ದಿನದಲ್ಲಿ ವಿಪರೀತ ವಾಹನಗಳ ಸಂಚಾರ ಮತ್ತು ವೇಗದ ಚಾಲನೆಯಿಂದ ರಸ್ತೆಯಲ್ಲಿ ವಾಕಿಂಗ್ ಮಾಡುವುದು ಹೆಚ್ಚು ಅಪಾಯ ಆದ್ದರಿಂದ ನಾನು ಮನೆಯ ಗೇಟಿನ ಒಳಗೆ ವಾಕಿಂಗ್ ನಿಗದಿ ಮಾಡಿದ್ದೇನೆ.
ಶಿವಮೊಗ್ಗದಲ್ಲಿ ಮಾಜಿ ಶಾಸಕರಾಗಿದ್ದ ಶಿರನಾಳಿ ಚಂದ್ರಶೇಖರ್ ಈ ರೀತಿ ವಾಕಿಂಗ್ ಮಾಡುವುದು ನೋಡಿದ್ದೆ, ಪ್ರಸಿದ್ಧ ಜೈಲ್ ಬ್ರೇಕರ್ ಪ್ಯಾಪಿಲಾನ್ ತನ್ನ 7 ಅಡಿ ಉದ್ದದ ಜೈಲಿನ ಕೋಣೆಯಲ್ಲೇ ವಾಕಿಂಗ್ ಅಭ್ಯಾಸ ಶುರು ಮಾಡಿ ತನ್ನ ಪಿಟ್ ನೆಸ್ ಕಾಪಾಡಿಕೊಂಡ ಪುಸ್ತಕ ಕೂಡ ಪ್ರೇರಣೆ ನೀಡಿತ್ತು.
ಇದೆಲ್ಲ ಯಾಕೆ ವಿವರಿಸಿದೆ ಎಂದರೆ ವಾಕಿಂಗ್ ಟ್ರಾಕ್, ಪಾರ್ಕ್ ಅಥವ ಜನ ಸಂಚಾರವಿಲ್ಲದ ರಸ್ತೆ ಇತ್ಯಾದಿ ವಾಕಿಂಗ್ ಮಾಡಲು ಹುಡುಕಲು ಹೊರಟಿದ್ದರೆ ನಾನು ನಿರಂತರ ವಾಕಿಂಗ್ ಮಾಡುತ್ತಿರಲಿಲ್ಲ ಮತ್ತು ತೂಕ ಇಳಿಸಿಕೊಳ್ಳುತ್ತಿರಲಿಲ್ಲ.
ಅನೇಕರು ನನ್ನ ಅನುಭವ ಕೇಳಿ ಸಂಪಕ೯ ಮಾಡುವವರಿಗೆ ನಾನು ಹೇಳುವುದಿಷ್ಟೆ ಯಾವುದೇ ತಯಾರಿಗೆ ಹೋಗದೇ ಸರಳವಾಗಿ ದೃಡ ನಿದಾ೯ರ ಮಾಡಿ ಶುರು ಮಾಡಿಬಿಡಿ, ಟ್ರಾಕಿಂಗ್ ಸೂಟ್, ಬೂಟ್, ವಾಕಿಂಗ್ ಟ್ರಾಕ್ ಎಲ್ಲಾ ಬೇಕಾಗಿಲ್ಲ ಇದು ನನ್ನ ಸ್ವಂತ ಅನುಭವ.
Comments
Post a Comment