#ನನ್ನ_ಬ್ಲಾಗ್_ARUNPRASAD_HOMBUJARESIDENCYಗೆ_ಈಗ_ನಾಲ್ಕನೇ_ವರ್ಷ.
ನನ್ನ 2012 ರ ಜನವರಿ ತಿಂಗಳಲ್ಲಿ ನಡೆಸಿದ ಸಾಗರ ಮತ್ತು ಹೊಸನಗರ ತಾಲ್ಲೂಕಿನಾದ್ಯಂತ #ಮಾಹಿತಿ_ಹಕ್ಕು ಮತ್ತು #ಲೋಕಾಯುಕ್ತ ಜನ ಜಾಗೃತಿಗಾಗಿ ನಡೆಸಿದ ಎತ್ತಿನಗಾಡಿ ಯಾತ್ರೆ ಪೋಟೋದ ಮೇಲೆ ಅನೇಕ ಮಾದರಿ ಶಿಕ್ಷಣ ಪ್ರಯೋಗ ಮಾಡುವ ಯುವ ಸಕಾ೯ರಿ ಶಿಕ್ಷಕರಾದ ಮಂಜುನಾಥ ಆರ್.ಸಿ. ನಮ್ಮ ಜನ ಜಾಗೃತಿ ಎತ್ತಿನಗಾಡಿ ಯಾತ್ರೆ ನಿಟ್ಟೂರಿನಲ್ಲಿ ಎದುರುಗೊಂಡಿದ್ದಾಗಿ ನೆನಪಿಸಿದಾಗ ನನ್ನ ಬ್ಲಾಗ್ ನಲ್ಲಿ ಈ ಎತ್ತಿನಗಾಡಿ ಯಾತ್ರೆ ಬಗ್ಗೆ ಬರೆದಿರಬೇಕೆಂಬ ನೆನಪಲ್ಲಿ 1- ಜನವರಿ -2017 ರಿಂದ ಪ್ರಾರಂಭಿಸಿದ ಬ್ಲಾಗ್ ಹುಡುಕಾಡಿದಾಗಲೇ ಗೊತ್ತಾಗಿದ್ದು ಈ ಎತ್ತಿನಗಾಡಿ ಯಾತ್ರೆ ಬಗ್ಗೆ ಬರೆದಿಲ್ಲ ಅಂತ.
ಆದರೆ ನನ್ನ ಬ್ಲಾಗ್ ಗೆ 4 ವರ್ಷ ಆಯಿತು ಮತ್ತು ನಾಟಿ ಶುಂಠಿ ಲೇಖನ ನನ್ನ ಬ್ಲಾಗ್ ನ 518 ನೇ ಲೇಖನ ಅಂತ ಗೊತ್ತಾಯಿತು.
ನಾನು ಪೇಸ್ ಬುಕ್ ನಲ್ಲಿ ಮತ್ತು ಕೆಲ ಪತ್ರಿಕೆಯಲ್ಲಿ ಬರೆಯುತ್ತಿದ್ದ ಲೇಖನ ನೋಡಿದ ಅನೇಕರು ಬ್ಲಾಗ್ ನಲ್ಲಿ ಬರೆದರೆ ಲೇಖನ ಸುರಕ್ಷಿತವಾಗಿ ಸೇವ್ ಆಗಿರುತ್ತದೆ ಬೇಕಾದಾಗ ನೋಡ ಬಹುದು ಮತ್ತು ಒಂದು ನೂರು ಲೇಖನ ಆದ ನಂತರ ಪುಸ್ತಕ ಮಾಡೋಣ ಅಂದಿದ್ದರಿಂದ ಈ ಬ್ಲಾಗ್ ಪ್ರಾರಂಬಿಸಿದ್ದೆ.
ವ್ಯಕ್ತಿ ಪರಿಚಯ, ಸಂದರ್ಶನ, ಪ್ರವಾಸಿ ಕೇಂದ್ರ, ಸ್ಥಳಿಯ ಆಚರಣೆ, ನಂಬಿಕೆಗಳು, ಪಶ್ಚಿಮ ಘಟ್ಟದ ಆಹಾರ, ತರಕಾರಿ, ಹಣ್ಣು, ಅಡುಗೆ, ಪುಸ್ತಕ ಪರಿಚಯ, ಕೃಷಿ, ಜನಪರ ಹೋರಾಟ, ನನ್ನ ಬೇಟಿಗೆ ಬಂದವರೊಡನೆ ನೆನಪು, ಮಲೆನಾಡಿನ ಹಸೆ ಚಿತ್ರ ಬಿಡಿಸುವವರು, ಮಲೆನಾಡಿನ ನಿಗೂಡ ಕಾಯಿಲೆ ಹಂದಿಗೋಡು, ಮಂಗನ ಕಾಯಿಲೆ ಬಗ್ಗೆ, ಪುರಾತನವಾದ ದೇವಾಲಯಗಳು ಹೀಗೆ ಹಲವಾರು ವಿಚಾರಗಳನ್ನ ಆಯಾ ಕಾಲಕ್ಕೆ ಪ್ರೇರಣೆ ಆದಹಾಗೆ ಬರೆಯುತ್ತಾ ಹೋದೆ ಈಗ ಹಿಂದಿರುಗಿ ನೋಡಿದರೆ 500 ದಾಟಿ 18 ಆಗಿ 600 ರ ಗಡಿ ಮುಟ್ಟಲಿದೆ.
ಈಗ ತೀಮಾ೯ನ ಮಾಡಿದ್ದೇನೆ 1000 ಲೇಖನ ಆದ ಮೇಲೆ ಅದರಲ್ಲಿ ಆಯ್ದ ಲೇಖನ ಹೆಕ್ಕಿ ಪುಸ್ತಕ ಮಾಡೋಣ ಅಂತ.
#ಪೇಸ್_ಬುಕ್_ನಲ್ಲಿ_ಲೇಖನ_ಬರೆಯುವ_ಗೆಳೆಯರಿಗೆ_ನನ್ನ_ಸಲಹೆ_ನೀವು_ಬ್ಲಾಗ್_ನಲ್ಲಿ_ಬರೆಯಲು_ಪ್ರಾರಂಬಿಸಿ.
Comments
Post a Comment