#ಪ್ರಸಕ್ತ ರಾಜಕಾರಣದ ಒಳಗುಟ್ಟು# ಲೋಕಸಭಾ ಚುನಾವಣಾ ಅಂಕಣ ಭಾಗ -2. (ಕೆ.ಆರುಣ್ ಪ್ರಸಾದ್) ಶಿವಮೊಗ್ಗ ಜಿಲ್ಲೆಯ ಕಾಂಗ್ರೇಸ್ ಪಕ್ಷದಲ್ಲಿ ಸಂಘಟನೆ ಯಾಕೆ ಕುಗ್ಗಿದೆ? ಒಂದು ಕಾಲದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿದ್ದ ಕಾಂಗ್ರೇಸ್ ಪಕ್ಷದ ಸಂಘಟನೆ ಈಗ ಏಕಿಲ್ಲ ಎಂದು ಪರಿಶೀಲಿಸಿದರೆ ಪರಸ್ಪರ ಕಾಲು ಏಳೆಯುವ, ಕುತಂತ್ರ ಮಾಡುವವರಿಂದ ಪಕ್ಷ ಹೀನಾಯ ಸ್ಥಿತಿಗೆ ತಲುಪಿದೆ. ಸಮಥ೯ರನ್ನ, ಅಹ೯ರನ್ನ ಸದಾ ಮೂಲೆಗುಂಪು ಮಾಡಲು ಒಂದು ಗುಂಪು ತಯಾರಾಗಿ ಬಿಡುತ್ತದೆ ಅದನ್ನ ಅಧಿಕಾರ ಇದ್ದವರು ಪೋಷಿಸುತ್ತಾರೆ. ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾಗಿದ್ದ ತೀ.ನಾ.ಶ್ರೀನಿವಾಸ್ ರನ್ನ ತರಾತುರಿಯಿಂದ ಕೆಳಗಿಳಿಸಿದರು ಇದಕ್ಕೆ ಯಾವುದೇ ಕಾರಣ ತಿಳಿಸಲಿಲ್ಲ, ಲೋಕ ಸಭಾ ಮಧ್ಯOತರ ಚುನಾವಣೆಯಲ್ಲಿ ಸ್ಪದಿ೯ಸಲು ಅಭ್ಯಥಿ೯ಯೇ ಇಲ್ಲ ಎಂಬ ತೀಮಾ೯ನ ಮಾಡಿಬಿಟ್ಟರು. ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯಥಿ೯ ಮಂಜುನಾಥ ಭಂಡಾರಿ ಸ್ಪದಿ೯ಸಿದ್ದಾಗ ಕಾ೦ಗ್ರೇಸ್ ಮುಖಂಡರುಗಳೇ ಜೆಡಿಎಸ್ ಅಭ್ಯಥಿ೯ ಗೀತಾ ಶಿವರಾಜ್ ಕುಮಾರರಿಗೆ ಬೆಂಬಲಿಸಿದ್ದರು. ಈಗಿನ ಲೋಕಸಭಾ ಚುನಾವಣಾ ಸಂದಭ೯ದಲ್ಲಿ ಸಾಗರ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಪಕ್ಷದ ಅದ್ಯಕ್ಷರುಗಳನ್ನ ದಿಡೀರ್ ಆಗಿ ಬದಲಾಯಿಸಿದ್ದು ಅಲ್ಲಿ ಬಿನ್ನಮತಕ್ಕೆ ಕಾರಣ ಆಗಿದೆ. ಜಿಲ್ಲೆಯ ಏಕೈಕ ಕಾಂಗ್ರೇಸ್ ಶಾಸಕ ಭದ್ರಾವತಿಯ ಸಂಗಮೇಶರಿಗೆ ಮಂತ್ರ...