Skip to main content

Posts

Showing posts with the label Kigga God Sringesh chariot drag by alcoholic devotees

ಮಧ್ಯಪಾನ ಮಾಡಿ ರಥ ಎಳೆಯುವ ಪದ್ದತಿಗೆ ಕಾರಣ ಏನು?

ಕಿಗ್ಗಾ ಶೃಂಗೇಶ್ವರ ಜಾತ್ರೆ ವಿಶೇಷ ಗೊತ್ತಾ ? ಶೂದ್ರರು ಕುಡಿದು ರಥ ಎಳೆಯುವ ಪದ್ಧತಿಗೆ ಕಾರಣ?   ಕಿಗ್ಗಾ ಶೃಂಗೇರಿ ಮತ್ತು ಸಿರಿಮನೆ ಜಲಪಾತದ ಮಧ್ಯದ ಸಣ್ಣ ಊರು, ಶೃಂಗೇರಿಯಿಂದ 9 ಕಿ.ಮಿ. ದೂರದಲ್ಲಿದೆ.   ಕಿಗ್ಗಾದ ಜಾತ್ರೆ ನಂತರ ಮಳೆ ಬಂದೇ ಬರುತ್ತದೆ, ಇಲ್ಲಿ ನರಸಿಂಹ ಪರ್ವತ ಇದೆ, ಇಲ್ಲಿನ ದೇವಾಲಯ 11ನೇ ಶತಮಾನದಲ್ಲಿ ನಿಮಾ೯ಣವಾದ 4 ಅಡಿ ಎತ್ತರದ ಶಿವಲಿಂಗ ಇದೆ.   ಋಷಿ ಶೃಂಗೇಶ್ವರರು ಜಿಂಕೆಯ ಕೊಂಬಿನಿಂದ ಜನಿಸಿದರೆಂಬ ಸ್ಥಳ ಪುರಾಣ ಇದೆ, ರಾಜ್ಯದಲ್ಲಿ ಬರಗಾಲ ಬಂದಾಗೆಲ್ಲ ಇಲ್ಲಿ ಪೂಜೆ ಸಲ್ಲಿಸಿದ ಭರಪೂರ ಮಳೆ ಆಗುತ್ತದೆ.   ಮೂರು ದಿನದ ಹಿಂದೆ ಕಿಗ್ಗಾ ರಥೋತ್ಸವ ಆಯಿತು ಹಗಲಿನ ರಥೋತ್ಸವ ಅರ್ಚಕರು ಮತ್ತು ಬ್ರಾಹ್ಮಣರು ನೆರವೇರಿಸುತ್ತಾರೆ ಸಂಜೆ ಶೂದ್ರರೇ ರಥ ಎಳೆಯುವ ಪದ್ಧತಿ ಇದೆ.   ಇಲ್ಲಿನ ನಂಬಿಕೆ ಒಂದು ಈಗಲೂ ಆಚರಣೆಯಲ್ಲಿದೆ ಅದೇನೆಂದರೆ ಶೂದ್ರ ಭಕ್ತರು ಮದ್ಯಪಾನ ಮಾಡಿಯೇ ರಥ ಎಳೆಯುವುದು!?    ಯಾವುದೋ ಕಾಲದಲ್ಲಿ ಶೂದ್ರರು ಭಕ್ತಿ ಪೂರ್ವಕವಾಗಿ ರಥ ಎಳೆಯಲು ಎಷ್ಟೇ ಪ್ರಯತ್ನಿಸಿದರು ಸಾಧ್ಯವಾಗದಿದ್ದಾಗ ಕಾಲಜ್ಞಾನಿಯಿಂದ ಮಧ್ಯಪಾನ ಮಾಂಸಹಾರ ಮಾಡಿ ರಥ ಎಳೆಯಲು ತಿಳಿಸಿದಂತೆ ಹೇಳಿಕೆ ಆದಾಗ ರಥ ಚಲಿಸಿದ್ದರಿಂದ ಈಗಲೂ ಈ ಪದ್ದತಿ ಚಾಲ್ತಿಯಲ್ಲಿದೆ.   ಸ್ಥಳಿಯ ಶೂದ್ರರಲ್ಲಿ ಈ ರಥೋತ್ಸವಕ್ಕಾಗಿ ದ್ರಾಕ್ಷಿಯಿಂದ ಮಾಡಿದ ವೈನ್ ಎಲ್ಲರ ಮನೆಯಲ್ಲಿ ಜಾತ್ರೆಗಾಗಿಯೇ...