Skip to main content

Posts

Showing posts with the label It is one kind miniature of Udupi Gulla brinjal

Blog number 901. ಉಡುಪಿ ಗುಳ್ಳ ಬದನೆಕಾಯಿಯ ಮಿನಿಯೇಚರ್ ಎಂದು ಕರೆಯಬಹುದಾದ ಸುಂಡಿ ಕಾಯಿ, ಉಸ್ತಿ ಕಾಯಿ, ಕುದನೆ ಕಾಯಿ ಎಂಬ Turkish berry ಎಂಬ ಬದನೆ ಪ್ರಬೇದ.

#ಉಡುಪಿ_ಗುಳ್ಳದ_ಮಿನಿಯೇಚರ್_ಚಿಟ್_ಬದನೆ. #ಇದರ_ಗರಿಷ್ಟ_ಗಾತ್ರ_5_ಸೆ೦ಟಿಮೀಟರ್_ಮಾತ್ರ #ತಮಿಳುನಾಡಿನಲ್ಲಿ_ಸುಂಡೆಕಾಯಿ_ಮಂಗಳೂರು_ಕಡೆ_ಕುದನೆಕಾಯಿ_ಎಂದು_ಕರೆಯುತ್ತಾರೆ #ಉಸ್ತೀ_ಕಾಯಿ_ಎಂದೂ_ಕರೆಯುತ್ತಾರೆ #Turkeyberry_ಇಂಗ್ಲೀಷಲ್ಲಿ.   ತಮಿಳುನಾಡಿನ ಕೆಲ ಭಾಗದ ರೈತರು ಇದನ್ನು ಕೃಷಿ ಮಾಡುತ್ತಾರೆ ಇದರ ಸಂಡಿಗೆ ತುಂಬಾ ಪ್ರಸಿದ್ದ ಒಮ್ಮೆ ಬೆಂಗಳೂರಿಂದ ತಂದಿದ್ದೆ ಈ ಸುಂಡೆ ಕಾಯಿ ಸಂಡಿಗೆ .   ಕನ್ನಡದ ಪ್ರಸಿದ್ಧ ಅಡಿಗೆ ಬ್ಲಾಗ್ Bhat & Bhat ಲ್ಲಿ ಸುದರ್ಶನ ಭಟ್ಟ ಬೇದರಾಡಿ ಈ ಕುದನೆ ಕಾಯಿ ಗೊಜ್ಜು ಮಾ ಡಿ ತೋರಿಸಿದ್ದರು.https://youtu.be/EgSftkM6-S0 (ಇದರ ಅಡುಗೆ ರೆಸಿಪಿಗೆ ಇಲ್ಲಿ ಲಿಂಕ್ ನಲ್ಲಿ ಕ್ಲಿಕ್ ಮಾಡಿ ನೋಡಿ)    ಇದು ದೇಹದಲ್ಲಿ ಕೆಂಪು ರಕ್ತ ಕಣದ ಉತ್ಪಾದನೆ ಹೆಚ್ಚಿಸುತ್ತದೆ, ಪಶ್ಚಿಮ ಘಟ್ಟದ ಕುರುಚಲು ಕಾಡಿನಲ್ಲಿ ಇದು ಹೆಚ್ಚಾಗಿ ಬೆಳೆಯುತ್ತದೆ, ಈ ಭಾಗದ ರೈತರು ಇದನ್ನು ಕೃಷಿಯಾಗಿ ಬೆಳೆಯುವುದಿಲ್ಲ, ರೈತರ ಕೃಷಿ ಭೂಮಿ ಅಂಚಿನ ಬೇಲಿಯಲ್ಲಿ ತನ್ನಿಂದ ತಾನೆ ಬೆಳೆಯುತ್ತದಾದರೂ ಆಹಾರಕ್ಕಾಗಿ ಬಳಸುವವರು ಸೀಮಿತಿ ಜನ ಮಾತ್ರ.   ಅಮೆಜಾನ್ ನಲ್ಲಿ ಒಣಗಿದ ಈ ಟರ್ಕಿ ಬೆರ್ರಿ ಎಂಬ ಬದನೆಕಾಯಿ ಮಿನಿಯೇಚರ್ ಲಭ್ಯ ಇದೆ ಇದನ್ನು ತೂಕ ಹೆಚ್ಚಿಸಿಕೊಳ್ಳುವವರು ಬಳಸುತ್ತಾರೆ.    ಉಡುಪಿ ಗುಳ್ಳ 6 ರಿಂದ 8 ಇಂಚು...