4133.ನೀವು ಜೋಗ್ ಫಾಲ್ಸ್ ಟೂರ್ ಹೋಗ್ತಾ ಇದೀರಾ... ಸ್ವಲ್ಪ ನಿಲ್ಲಿ ಈ ಹಾಡಿನ ಬಗ್ಗೆ ನಿಮಗೆ ಇಲ್ಲಿದೆ ಪೂರ್ತಿ ಮಾಹಿತಿ ದಯವಿಟ್ಟು ಓದಿ ಮತ್ತು ನಿಮ್ಮ ಸಂಗಡಿಗರಿಗೆ ಶೇರ್ ಮಾಡಿ.
ಸಾಯೋದರಲ್ಲಿ_ಒಮ್ಮೆ_ನೋಡು_ಜೋಗಾದ_ಗುಂಡಿ
ನೀವು ಜೋಗ್ ಫಾಲ್ಸ್ ಟೂರ್ ಹೋಗ್ತಾ ಇದೀರಾ... ಸ್ವಲ್ಪ ನಿಲ್ಲಿ ಈ ಹಾಡಿನ ಬಗ್ಗೆ ನಿಮಗೆ ಇಲ್ಲಿದೆ ಪೂರ್ತಿ ಮಾಹಿತಿ ದಯವಿಟ್ಟು ಓದಿ ಮತ್ತು ನಿಮ್ಮ ಸಂಗಡಿಗರಿಗೆ ಶೇರ್ ಮಾಡಿ.
#ಮೂಗೂರು_ಮಲ್ಲಪ್ಪನವರು ಬರೆದ ಜೋಗದ ಗುಂಡಿ ಲಾವಣಿ ನಟ ಸಾರ್ವಬೌಮ #ಡಾಕ್ಟರ್_ರಾಜಕುಮಾರ್ ತಮ್ಮ ಜೀವನ ಜೈತ್ರ ಸಿನಿಮಾದಲ್ಲಿ ಅಳವಡಿಸಿ ಅವರೇ ಸ್ವತಃ ಹಾಡಿದ್ದರಿಂದ ಜಗತ್ ಪ್ರಸಿದ್ದಿ ಪಡೆದಿದೆ.
ನಮ್ಮ ಸಾಗರ ತಾಲೂಕಿನ ಜೋಗ್ ಜಲಪಾತ ಈ ಮೂಲಕ ಚಲನ ಚಿತ್ರಗೀತೆಯಾಗಿ ನಾಡಿನಾದ್ಯಂತ ಹರಿಯುತ್ತಿರುವುದು ಹೆಮ್ಮೆಯ ಸಂಗತಿ.
ಈಗ ಜೋಗ್ ಫಾಲ್ಸ್ ತುಂಬಿ ಹರಿಯುತ್ತಿರುವ ಸಂದರ್ಭದಲ್ಲಿ ಪ್ರವಾಸಿಗರು ತಂಡೋಪ ತಂಡವಾಗಿ ಬರುತ್ತಿದ್ದಾರೆ ಈ ಹಾಡು ಎಲ್ಲರ ಬಾಯಲ್ಲೂ ಗುಣುಗುತ್ತಿದೆ.
ನಮ್ಮ ಶಿವಮೊಗ್ಗ ಜಿಲ್ಲೆಯ ಶರಾವತಿ ನದಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ ಗೇರುಸೊಪ್ಪೆ ಕಣಿವೆಯಲ್ಲಿ ಜೋಗ್ ಜಲಪಾತ ಆಗಿ ದುಮ್ಮಿಕ್ಕುತ್ತದೆ.
ಜೋಗ್ ಜಲಪಾತದ ಬಗ್ಗೆ ಪ್ರಸಿದ್ಧ ಲಾವಣಿ ಬರೆದವರು ಮೂಗೂರು ಮಲ್ಲಪ್ಪನವರು.
ಅದನ್ನು ಖ್ಯಾತ ನಟ ರಾಜ್ ಕುಮಾರ್ ತಮ್ಮ ಸಿನಿಮಾದಲ್ಲಿ ಹಾಡಿದ್ದರಿಂದ ಅದು ಇನ್ನೂ ಹೆಚ್ಚು ಪ್ರಖ್ಯಾತಿ ಆಯಿತು.
ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ ಸಾಯೋದರಲ್ಲಿ ಒಮ್ಮೆ ನೋಡು ಜೋಗಾದ ಗುಂಡಿ.
ಸಾಯೋ ತನಕ ಸಂಸಾರದೊಳಗೆ ಗಂಡಾ ಗುಂಡಿ, ಹೇರಿಕೊಂಡು ಹೋಗೋದಿಲ್ಲ ಸತ್ತಾಗ ಬಂಡಿ.
ಇರೋದರೊಳಗೆ ಒಮ್ಮೆ ನೋಡು ಜೋಗದ್ ಗುಂಡಿ.
ಈ ಲಾವಣಿ ಸಂಗ್ರಹಿಸಿ ಕನ್ನಡಿಗರಿಗೆ ನೀಡಿದವರು, ಜನಪದ ಇತಿಹಾಸ ತಜ್ಞ #ತರೀಕೆರೆ ವಕೀಲರಾದ #ಕೆ_ಆರ್_ಲಿಂಗಪ್ಪನವರು.
#ಮೂಗೂರು_ಮಲ್ಲಪ್ಪ_ಅವರ_ಜನನ_ಸ್ಥಳ...
ಮೂಗೂರು ಮಲ್ಲಪ್ಪನವರು ಅವಿಭಜಿತ ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರ (ಟಿ. ನರಸೀಪುರ) ತಾಲ್ಲೂಕಿನ ಮೂಗೂರು ಎಂಬ ಐತಿಹಾಸಿಕ ಗ್ರಾಮದವರು.
ತಮ್ಮ ಹುಟ್ಟೂರಿನ ಹೆಸರನ್ನೇ ತಮ್ಮ ಹೆಸರಿನೊಂದಿಗೆ ಜೋಡಿಸಿಕೊಂಡು 'ಮೂಗೂರು ಮಲ್ಲಪ್ಪ' ಎಂದೇ ಪ್ರಖ್ಯಾತರಾದರು.
ಚಿಕ್ಕಮಗಳೂರು ಕಡೂರು ಶಾಲೆಗಳನ್ನು ಕೂಡ ದಕ್ಷತೆಯಿಂದ ಪಾಠ ಮಾಡುತ್ತಿದ್ದಂತಹ ಮೇಷ್ಟ್ರು,ತಾನು ಪಾಠ ಮಾಡುತ್ತಿದ್ದ ಮಕ್ಕಳಿಗೆ ಸಂಗೀತ ಲಯ ಭಾಷೆಯ ಸೊಗಡು ಸೊಗಸು ಜೊತೆಗೆ ಸುಲಲಿತವಾಗಿ ಹಾಡಿನ ಮೂಲಕ ನಾಡಿನ ಹಿರಿಮೆಯನ್ನು ಮಕ್ಕಳ ಮನದಲ್ಲಿ ನೆಟ್ಟ ಮೇಷ್ಟ್ರು.
ಮೂಗೂರು ಮಲ್ಲಪ್ಪನವರ ಜನ್ಮ ಸ್ಥಳ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಸಮೀಪದ ಸಿರಿಯಾಳ ಕೊಪ್ಪದವರು ಎಂದು ತಪ್ಪಾಗಿ ಹಿಂದೆ ಸುದ್ದಿ ಆಗಿತ್ತು ಆದರೆ ಅದು ತಪ್ಪು ಕ್ಷಮಿಸಿ.
ಅವರು ಅಲ್ಲಿನ ಸರ್ಕಾರಿ ಮಾಧ್ಯಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು ಎಂಬ ಮಾಹಿತಿ ಇದೆ.
ಮೂಗೂರು ಮಲ್ಲಪ್ಪನವರು ತಮ್ಮ ವಿದ್ಯಾರ್ಥಿಗಳಿಗೆ ಜೋಗ ಜಲಪಾತ ತೋರಿಸಲು ಬಂದಾಗ ಅವರ ಮನದಲ್ಲಿ ಮೂಡಿದ್ದೇ ಈ ಸುಂದರ ಹಾಡು ಎನ್ನುತ್ತಾರೆ.
ಇನ್ನೊಂದು ಮಾಹಿತಿ, ಸ್ವತಂತ್ರ ಪೂರ್ವದಲ್ಲಿ ಬ್ರಿಟಿಷರ ಕಾಲದಲ್ಲಿ ಮೂಗೂರು ಮಲ್ಲಪ್ಪನವರು ಸ್ವಾತಂತ್ರ್ಯ ಹೋರಾಟದಲ್ಲಿ ಜೈಲಿನಲ್ಲಿದ್ದಾಗ ಸೆರೆಮನೆಯ ಸಣ್ಣ ಕಿಂಡಿಯಿಂದ ಹೊರಪ್ರಪಂಚವನ್ನು ನೋಡಿ ಪ್ರೇರಿತರಾಗಿ ಈ ಪ್ರಸಿದ್ಧ ಲಾವಣಿಯನ್ನು ಅವರು ಬರೆದಿದ್ದರು ಎಂದೂ ಇತಿಹಾಸ ಹೇಳುತ್ತದೆ.
ಇದನ್ನು ಸಂಗ್ರಹಿಸಿ ಪ್ರಕಟಿಸಿದವರು ಜನಪದ ಇತಿಹಾಸ ತಜ್ಞ ವಕೀಲರು ಆದ #ತರೀಕೆರೆಯ_ಕೆಆರ್_ಲಿಂಗಪ್ಪನವರು.
ಆಗಿನ ಮೈಸೂರು ಸರ್ಕಾರ ದಿನಾಂಕ 24 - ಜನವರಿ- 1965 ರಲ್ಲಿ ಈ ಲಾವಣಿಯನ್ನು ಕರಪತ್ರದಲ್ಲಿ ಮುದ್ರಿಸಿ, ಸಾರ್ವಜನಿಕರಿಗೆ ಹಂಚಿತ್ತು.
ಈ ಲಾವಣಿಯ ಕೊನೆಯ ಭಾಗದಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಅಂಬೂ ತೀರ್ಥದಲ್ಲಿ ಉದ್ಭವಿಸಿ, ಜೋಗ್ ಜಲಪಾತವಾಗಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುವ ಶರಾವತಿ ನದಿಯನ್ನು ಕೂಡ ಉಲ್ಲೇಖಿಸುತ್ತಾರೆ...
"#ಶರಾವತಿ_ಕನ್ನಡ_ನಾಡ_ಭಾಗಿರತಿ" "#ಪುಣ್ಯವಂತರು_ಬರ್ತಾರೆ_ಇಲ್ಲಿ_ದಿನಂಪ್ರತಿ"
"ಸಾವು ನೋವು ಸುಳಿಯದಿಲ್ಲಿಯ ಕರಾಮತಿ"
"ಮಲ್ಲೇಶನ್ನ ನೆನೆಯುತ್ತಿದ್ದರೆ ಜೀವನ್ಮುಕ್ತಿ"
ಈ ಹಾಡನ್ನು 1992 ರಲ್ಲಿ ಕನ್ನಡಿಗರ ಕಣ್ಮಣಿ ಡಾ. ರಾಜಕುಮಾರ್ ತಮ್ಮ ಜೀವನ ಚೈತ್ರ ಸಿನಿಮಾದಲ್ಲಿ ಅಳವಡಿಸಿಕೊಂಡಿದ್ದಾರೆ ಮತ್ತು ಈ ಹಾಡನ್ನು ಅವರೇ ಸ್ವತಃ ಹಾಡಿದ್ದಾರೆ.
#ಪೂರ್ತಿ_ಲಾವಣಿ_ಇಲ್ಲಿದೆ...
ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ
ಸಾಯೋತನಕಾ ಸಂಸಾರ್ ದೊಳಗೆ ಗಂಡಾಗುಂಡಿ
ಹೇರಿಕೊಂಡು ಹೋಗೋದಿಲ್ಲ ಸತ್ತಾಗ್ ಬಂಡಿ
ಇರೋದರೊಳಗೆ ನೋಡು ಒಮ್ಮೆ ಜೋಗದ ಗುಂಡಿ
ತಾಳಗುಪ್ಪಿ ತಾರಕಂಬ ಬೊಂಬಾಯ್ ಮಠ
ಸಾಲಗುಡ್ಡದ ಮ್ಯಾಲೆ ನೋಟಕ್ ಭಟ್ಕಳ್ ಮಠ
ದಾರಿ ಕಡಿದು ಮಾಡಿದಾರೆ ಗುಡ್ಡಾ ಬೆಟ್ಟ
ಪಶ್ಚಿಮ ಘಟ್ಟದ ಮ್ಯಾಲೆ ನೋಡು ಮೈಸೂರ್ ಬಾವುಟ
ನಾಡಿನೊಳಗೆ ನಾಡು ಚೆಲುವು ಕನ್ನಡ ನಾಡು
ಬೆಳ್ಳಿ ಬಂಗಾರ ಬೆಳಿಯುತಾವೆ ಬೆಟ್ಟ ಕಾಡು
ಭೂಮಿತಾಯಿ ಮುಡಿದು ನಿಂತ ಬಾಸಿಂಗ ಜೋಡು
ಬಾಣಾವತಿ ಬೆಡಗಿನಿಂದ ಬರ್ತಾಳೆ ನೋಡು
ಅಂಕು ಡೊಂಕು ವಂಕಿ ಮುರಿ ರಸ್ತೆ ದಾರಿ
ಹತ್ತಿ ಇಳಿದು ಸುತ್ತಿದಂಗೆ ಹಾವಿನ ಮರಿ
ತೊಟ್ಟಿಲ ಜೀಕಿ ಆಡಿದ್ಹಾಂಗೆ ಮನಸಿನ ಲಹರಿ
ನಡೆಯುತದೆ ಮೈಸೂರೊಳಗೆ ದರಂದುರಿ
ಹೆಸರು ಮರ್ತಿ ಶರಾವತಿ ಅದೇನ್ ಕಷ್ಟ
ಕಡೆದ ಕಲ್ಲ ಕಂಬದ ಮ್ಯಾಲೆ ಪೂಲಿನಕಟ್ಟ
ಎಷ್ಟು ಮಂದಿ ಎದೆಯ ಮುರ್ದು ಪಡತಾರ್ ಕಷ್ಟ
ಸಣ್ಣದರಿಂದ ದೊಡ್ಡದಾಗಿ ಕಾಣೋದ್ ಬೆಟ್ಟ
ಬುತ್ತಿ ಉಣುತಿದ್ ರುಣ್ಣು ಇಲ್ಲಿ ಸೊಂಪಾಗಿದೆ
ಸೊಂಪು ಇಂಪು ಸೇರಿ ಮನಸು ಕಂಪಾಗ್ತದೆ
ಕಂಪಿನಿಂದ ಜೀವಕ್ಕೊಂದು ತಂಪಾಗ್ತದೆ
ತಂಪಿನೊಳಗೆ ಮತ್ತೊಂದೇನೋ ಕಾಣಸ್ತದೆ
ಅಡ್ಡ ಬದಿ ಒಡ್ಡು ನಿಲ್ಲಿಸಿ ನೀರಿನ ಮಿತಿ
ಇದರ ಒಳಗೆ ಇನ್ನು ಒಂದು ಹುನಾರೈತಿ
ನೀರ ಕೆಡವಿ ರಾಟೆ ತಿರುವಿ ಮಿಂಚಿನ ಶಕ್ತಿ
ನಾಡಿಗೆಲ್ಲ ಕೊಡ್ತಾರಂತೆ ದೀಪದ ತಂತಿ
ಊಟ ಮುಗಿದಿದ್ರೇಳು ಮುಂದೆ ನೋಡೋದದೆ
ನೋಡುತಿದ್ರೆ ಬುದ್ದಿ ಕೆಟ್ಟು ಹುಚ್ಚಾಗ್ತದೆ
ಬೇಕಾದ್ರಲ್ಲಿ ಉಡುಪಿ ಮಾವನ ಮನೆಯೊಂದಿದೆ
ಉಳಿಯೋದಾದ್ರೆ ಮಹಾರಾಜ್ರ ಬಂಗ್ಲೆ ಅದೇ
ನೋಡು ಗೆಳೆಯ ಜೋಕೆ ಮಾತ್ರ ಪಾತಾಳ ಗುಂಡಿ
ಹಿಂದಕೆ ಸರಿದು ನಿಲ್ಸಿ ತುಸು ಕೈತಪ್ಕೊಂಡಿ
ಕೈಗಳಲ್ಲಿ ಕಾಣಸ್ತದೆ ಬೊಂಬಾಯ್ ದಂಡೀ
ನಮ್ಮದಂದ್ರೆ ಹೆಮ್ಮೆಯಲ್ವೆ ಜೋಗದ ಗುಂಡೀ
ಶಿಸ್ತುಗಾರ ಶಿವಪ್ಪನಾಯ್ಕ ಕೆಳದಿಯ ನಗರ
ಚಿಕ್ಕದೇವ ದೊಡ್ದದೇವ ಮೈಸೂರಿನವರ
ಹಿಂದಕ್ಕಿಲ್ಲಿ ಬಂದಿದ್ರಂತೆ ಶ್ರೀರಾಮರ
ಎಲ್ಲ ಕಥೆ ಹೇಳುತದೆ ಕಲ್ಪಾಂತರ
ರಾಜಾ ರಾಕೆಟ್ ರೋರರ್ ಲೇಡಿ ಚತುರ್ಮುಖ
ಜೋಡಿಗೂಡಿ ಹಾಡುತಾವೆ ಹಿಂದಿನ ಸುಖ
ತಾನು ಬಿದ್ರೆ ಆದಿತೇಳು ತಾಯಿಗೆ ಬೆಳಕ
ಮುಂದಿನವರು ಕಂಡ್ರೆ ಸಾಕು ಸ್ವಂತ ಸುಖ
ಒಂದು ಎರಡು ಮೂರು ನಾಲ್ಕು ಆದಾವ್ ಮತ
ಹಿಂದಿನಿಂದ ಹರಿದು ಬಂದದ್ದೊಂದೇ ಮತ
ಗುಂಡಿ ಬಿದ್ದು ಹಾಳಾಗಲಿಕ್ಕೆ ಸಾವಿರ ಮತ
ಮುಂದೆ ಹೋಗಿ ಸೇರುವಲ್ಲಿಗೊಂದೇ ಮತ
ಶಹಾಜಹಾನ ತಾಜಮಹಲು ಕೊಹಿನೂರ್ ಮಣಿ
ಸಾವಿರಿದ್ರು ಸಲ್ಲವಿದಕೆ ಚೆಲುವಿನ ಕಣಿ
ಜೀವವಂತ ಶರಾವತಿಗಿನ್ನಾವ್ ದೆಣಿ
ಹೊಟ್ಟೆಕಿಚ್ಚಿಗಾಡಿಕೊಂಡ್ರೆ ಅದಕಾರ್ ಹೊಣಿ
ಶರಾವತಿ ಕನ್ನಡ ನಾಡ ಭಾಗೀರಥಿ
ಪುಣ್ಯವಂತ್ರು ಬರ್ತಾರಿಲ್ಲಿ ದಿನಂಪ್ರತೀ
ಸಾವು ನೋವು ಸುಳಿಯದಿಲ್ಲಿಯ ಕರಾಮತಿ
ಮಲ್ಲೇಶನ ನೆನೆಯುತಿದ್ರೆ ಜೀವನ್ಮುಕ್ತಿ.
ಮೂಗೂರು ಮಲ್ಲಪ್ಪನವರು ಮಲೆನಾಡಿನ ಸೌಂದರ್ಯದ ರಾಜನಂತಿರುವ ಜೋಗ ಜಲಪಾತವನ್ನು ನೋಡಿ ಮಾರುಹೋಗಿ, ಅದರ ಭವ್ಯತೆಯನ್ನು ವರ್ಣಿಸುವ ಲಾವಣಿಯನ್ನು ಬರೆದರು.
ಪ್ರಸಿದ್ಧ ಪ್ರಕೃತಿ ಸೌಂದರ್ಯದ ತಾಣವಾದ ಜೋಗ ಜಲಪಾತದ ಕುರಿತು "ಜೋಗಾದ್ ಗುಂಡಿ" ಲಾವಣಿ ಬದುಕಿನ ನಶ್ವರತೆಯನ್ನು ಮತ್ತು ಜೋಗದ ಅದ್ಭುತ ಸೌಂದರ್ಯವನ್ನು ಕೇವಲ ನಾಲ್ಕೇ ಸಾಲುಗಳಲ್ಲಿ ಅತ್ಯಂತ ಮಾರ್ಮಿಕವಾಗಿ ಕಟ್ಟಿಕೊಟ್ಟ ಹೆಗ್ಗಳಿಕೆ ಇವರದ್ದಾಗಿದೆ.
ಮೂಗೂರು ಮಲ್ಲಪ್ಪನವರು ಕನ್ನಡ ಜಾನಪದ ಲೋಕದ ಒಬ್ಬ ಅಪರೂಪದ ಮತ್ತು ಪ್ರತಿಭಾವಂತ ಕವಿ.
ಜನಸಾಮಾನ್ಯರ ನಾಲಿಗೆಯ ಮೇಲೆ ಇಂದಿಗೂ ನಲಿಯುವ ಜೋಗ ಜಲಪಾತದ ಅಮರ ಗೀತೆಯನ್ನು ಕಟ್ಟಿಕೊಟ್ಟ ಇವರ ಜೀವನದ ಪ್ರಮುಖ ವಿವರಗಳು ಇಲ್ಲಿವೆ.
ತತ್ವಪದಗಳ ಪ್ರಭಾವ ..ಇವರ ರಚನೆಗಳು ಕೇವಲ ಪ್ರಕೃತಿ ವರ್ಣನೆಗೆ ಸೀಮಿತವಾಗಿರದೆ, ಬದುಕಿನ ಸತ್ಯಗಳು, ಸಂಸಾರದ ಜಂಜಾಟಗಳು ಮತ್ತು ಆಧ್ಯಾತ್ಮಿಕ ಚಿಂತನೆಗಳನ್ನು ಒಳಗೊಂಡ ತತ್ವಪದಗಳ ರೂಪದಲ್ಲಿರುತ್ತಿದ್ದವು.
ಇವರ ಹಾಡುಗಳಲ್ಲಿ 'ಮಲ್ಲೇಶ' ಎಂಬ ಅಂಕಿತನಾಮ ಅಥವಾ ದೈವಭಕ್ತಿಯು ವ್ಯಕ್ತವಾಗುತ್ತಿತ್ತು.
ಪಠ್ಯಪುಸ್ತಕಗಳಲ್ಲಿ ಗೌರವ...
ಇವರು ಬರೆದ "ಜೋಗಾದ್ ಗುಂಡಿ" ಪ್ರಕೃತಿ ಗೀತೆಯು ಇವರ ಜನಪ್ರಿಯತೆಯಿಂದಾಗಿ 1990ರ ದಶಕದಲ್ಲಿ ಕರ್ನಾಟಕದ ಪ್ರೌಢಶಾಲಾ (ಹತ್ತನೇ ತರಗತಿ) ಕನ್ನಡ ಪಠ್ಯಪುಸ್ತಕದಲ್ಲಿ ಸ್ಥಾನ ಪಡೆದಿತ್ತು.
ಅಂದಿನಿಂದ ಇಂದಿನವರೆಗೂ ತಲೆಮಾರುಗಳಾದ್ಯಂತ ವಿದ್ಯಾರ್ಥಿಗಳು ಮತ್ತು ಕನ್ನಡ ಸಾಹಿತ್ಯಾಸಕ್ತರು ಇವರ ಹೆಸರನ್ನು ಗೌರವದಿಂದ ನೆನೆಯುತ್ತಾರೆ.
ಇವರ ಜೀವನವು ಸರಳತೆಯಿಂದ ಕೂಡಿದ್ದು, ತಳಮಟ್ಟದ ಜಾನಪದ ಸೊಗಡನ್ನು ಸಾಹಿತ್ಯದ ಮುಖ್ಯವಾಹಿನಿಗೆ ತರಲು ಶ್ರಮಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಸಾಯೋದ್ರೊಳಗೆ ಒಮ್ಮೆ ನೋಡು ಜೋಗಾ ಗುಂಡಿ…. ಜೋಗ ಜಲಪಾತದ ... ಹಾಡಿನಲ್ಲಿ “ಸಾಯೋತನಕ ಸಂಸಾರದೊಳಗೆ ಗಂಡಾಗುಂಡಿ, ಹೇರಿಕೊಂಡು ಹೋಗೋದಿಲ್ಲ ಸತ್ತಾಗ್ ಬಂಡಿ…. ಇರೋದ್ರೊಳಗೆ ಒಮ್ಮೆ ನೋಡು ಜೋಗಾದ್ ಗುಂಡಿ” ಎಂಬ ಸಾಲು ಬರುತ್ತವೆ.
ಮೂಗೂರು ಮಲ್ಲಪ್ಪ ಬರೆದಿರುವ ಈ ಹಾಡು,
ಬದುಕಿನ ಪಾಠ ಹೇಳುವ ಜೋಗ ಜಲಪಾತ, ಏನು ನೋಡ್ತೀಯೋ ಬಿಡ್ತೀಯೋ ಆದರೆ ಜೀವಮಾನದಲ್ಲಿ ಒಮ್ಮೆಯಾದರೂ, ಜಂಜಾಟದ ಜೀವನವನ್ನು ಬದಿಗೆ ಒತ್ತಿ, ಹೋಗಿ ನೋಡ್ಕೊಂಡ್ ಬಾ ಜೋಗದ ಗುಂಡಿ ಎಂದು ಕರೆ ನೀಡಿದ್ದಾರೆ ಕವಿ ಮೂಗೂರು ಮಲ್ಲಪ್ಪನವರು.
ಮೂಗೂರು ಮಲ್ಲಪ್ಪ ಅವರ ಬದುಕು, ಸಾಧನೆ ಮತ್ತು ಕೃತಿಗಳ ಕುರಿತಾದ ನಿಖರ ಹಾಗೂ ಐತಿಹಾಸಿಕ ವಿವರಗಳು ಇಲ್ಲಿವೆ.
ಅತ್ಯಂತ ಪ್ರಸಿದ್ಧ ಕೃತಿ/ಲಾವಣಿಮೂಗೂರು ಮಲ್ಲಪ್ಪ ಎಂದರೆ ಕನ್ನಡಿಗರಿಗೆ ತಕ್ಷಣ ನೆನಪಾಗುವುದು ಅವರು ರಚಿಸಿದ ಅತ್ಯಂತ ಜನಪ್ರಿಯ ಲಾವಣಿ ಗೀತೆ ಮಾನವನಾಗಿ ಹುಟ್ಟಿದ್ಮೇಲೆ ಏನೇನ್ ಕಂಡಿ? ಇರೋದ್ರೊಳಗೆ ಒಮ್ಮೆ ನೋಡು ಜೋಗಾದ್ ಗುಂಡಿ!".
ಸಿನಿಮಾದಲ್ಲಿ ಈ ಅಮರ ಸಾಹಿತ್ಯದ ಕೆಲವು ಸಾಲುಗಳನ್ನು 1992 ರ ಡಾ. ರಾಜ್‌ಕುಮಾರ್ ಅಭಿನಯದ ಪ್ರಸಿದ್ಧ 'ಜೀವನ ಚೈತ್ರ' ಚಲನಚಿತ್ರದ "ಮಾನವನಾಗಿ ಹುಟ್ಟಿದ ಮೇಲೆ..." ಹಾಡಿನಲ್ಲಿಯೂ ಬಳಸಿಕೊಳ್ಳಲಾಗಿದೆ.
ವೃತ್ತಿ ಮತ್ತು ಜೀವನ,ಇವರು ಮೂಲತಃ ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲ್ಲೂಕಿನ ಪ್ರಸಿದ್ಧ ತ್ರಿಪುರಸುಂದರಿ ಅಮ್ಮನ (ತಿಬ್ಬದೇವಿ) ಕ್ಷೇತ್ರವಾದ ಮೂಗೂರು ಗ್ರಾಮದವರು.
ಇವರು ಕೇವಲ ಲಾವಣಿ ಗಾಯಕರಷ್ಟೇ ಅಲ್ಲದೆ ಕಡೂರು ಮತ್ತು ಚಿಕ್ಕಮಗಳೂರಿನ ಸರ್ಕಾರಿ ಶಾಲೆಗಳಲ್ಲಿ ದಶಕಗಳ ಕಾಲ ದಕ್ಷತೆಯಿಂದ ಸೇವೆ ಸಲ್ಲಿಸಿದ ಆದರ್ಶ ಶಾಲಾ ಶಿಕ್ಷಕರಾಗಿದ್ದರು.
ತಮ್ಮ ವಿದ್ಯಾರ್ಥಿಗಳಿಗೆ ಪಾಠದ ಜೊತೆಗೆ ಜಾನಪದ ಕಲೆ, ಸಂಗೀತ, ಲಯ ಮತ್ತು ಸಾಹಿತ್ಯದ ಸೊಗಡನ್ನು ಹಾಡುಗಳ ಮೂಲಕವೇ ಕಲಿಸುತ್ತಿದ್ದ ಅಪರೂಪದ ಮೇಷ್ಟ್ರಾಗಿದ್ದರು.
ಇವರಿಗೆ ಸಂದ ಪ್ರಶಸ್ತಿ ಮತ್ತು ಗೌರವಗಳು ಅನೇಕ ಇವರ ಸಾಹಿತ್ಯ ಮತ್ತು ಲಾವಣಿ ಕಲೆಯ ಕೊಡುಗೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರ ಮತ್ತು ಜಾನಪದ ಅಕಾಡೆಮಿಗಳು ಇವರಿಗೆ ರಾಜ್ಯ ಮಟ್ಟದ ಗೌರವ ಹಾಗೂ ಪುರಸ್ಕಾರಗಳನ್ನು ನೀಡಿ ಗೌರವಿಸಿವೆ.
#rajkumar #jivanachaitra #cinema #mugurumallappa #jogfalls #sharavathi
Comments
Post a Comment