ಇಂದ್ರಾಯಣಿ_ಅಕ್ಕಿ_ನಿಮಗೆ_ಗೊತ್ತಾ..
Indrayani Rice - ಇಂದ್ರಾಯಿಣಿ ಅಕ್ಕಿ ಮಹಾರಾಷ್ಟ್ರದ ಪಶ್ಚಿಮ ಭಾಗದಲ್ಲಿ (ಮುಖ್ಯವಾಗಿ ಪುಣೆ, ಮಾವಳ್ ಪ್ರದೇಶದಲ್ಲಿ) ವ್ಯಾಪಕವಾಗಿ ಬೆಳೆಯಲಾಗುವ ಅತ್ಯಂತ ಜನಪ್ರಿಯ ಸುಗಂಧಿತ ಅಕ್ಕಿ ತಳಿ ಇದು ನಮ್ಮ ರಾಜ್ಯದ ಗಂಧ ಸಾಲೆ / ಗಮ್ ಗಾಳಿ ಅಕ್ಕಿಯ ರೀತಿಯೇ ಕೊಂಚ ಬೇರೆ ತರ ಇದೆ.
ಇಂದ್ರಾಯಣಿ ನದಿಯು #ನಾಥ_ಪಂಥದ ಸಂತ # ಜ್ಞಾನೇಶ್ವರನಾಥ್ ರ ಸಮಾಧಿ ಇರುವ ಆಳಂದಿ ಮತ್ತು #ಸಂತ_ತುಕಾರಾಮರ ಜನ್ಮಸ್ಥಳವಾದ #ದೇಹೂ ಮುಂತಾದ ಧಾರ್ಮಿಕ ಕ್ಷೇತ್ರಗಳ ಮೂಲಕ ಹರಿಯುವ ಪವಿತ್ರ ನದಿಯಾಗಿದ್ದು ಈ ಅಕ್ಕಿಗೆ ಇದೇ ಹೆಸರು ಬಂದಿರುವುದು ಈ ಅಕ್ಕಿಗೆ ಮತ್ತಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿದೆ.
ಇದು ಅಂಬೇಮೊಹರ್ ತಳಿಯಂತೆಯೇ ಅತ್ಯುತ್ತಮ ನೈಸರ್ಗಿಕ ಸುವಾಸನೆ ಹಾಗೂ ಮೃದುವಾದ ರುಚಿಯನ್ನು ಹೊಂದಿರುತ್ತದೆ.
ಬೇಯಿಸಿದ ನಂತರ ಈ ಅನ್ನವು ಬಹಳ ಮೃದುವಾಗುತ್ತದೆ ಮತ್ತು ಸ್ವಲ್ಪ ಜಿಗುಟಾದ (sticky) ಗುಣವನ್ನು ಪಡೆಯುತ್ತದೆ.
ಮಧ್ಯಮ ಗಾತ್ರದ ಕಾಳುಗಳನ್ನು ಹೊಂದಿರುತ್ತದೆ,ದಿನನಿತ್ಯದ ಸಾಂಬಾರ್-ಅನ್ನ, ರಸಂ-ಅನ್ನಕ್ಕೆ ಸೂಕ್ತ.
ಮೃದುವಾಗಿರುವುದರಿಂದ ಕಿಚಡಿ, ಪುಲಾವ್, ಪಾಯಸ (ಖೀರ್) ಮತ್ತು ಮೊಸರನ್ನಕ್ಕೆ ಇದು ಅತ್ಯುತ್ತಮ ಆಯ್ಕೆ.
ವಯಸ್ಸಾದವರಿಗೆ ಮತ್ತು ಮಕ್ಕಳಿಗೆ ಸುಲಭವಾಗಿ ಜೀರ್ಣವಾಗುವ ಆಹಾರ ತಯಾರಿಸಲು ಇದು ಸೂಕ್ತ.
ಅಡುಗೆ ಮಾಡುವಾಗ ಗಮನಿಸಬೇಕಾದ ಅಂಶ
ಇದು ಬೇಗನೆ ಬೇಯುವುದರಿಂದ ಮತ್ತು ಜಿಗುಟಾಗುವುದರಿಂದ, ಸಾಮಾನ್ಯ ಅಕ್ಕಿಗಿಂತ ಸ್ವಲ್ಪ ಕಡಿಮೆ ನೀರು (ಅಂದಾಜು 1 ಕಪ್ ಅಕ್ಕಿಗೆ 1.75 ರಿಂದ 2 ಕಪ್ ನೀರು) ಬಳಸಿ ಬೇಯಿಸುವುದು ಉತ್ತಮ.
ಇಂದ್ರಾಯಣಿ ಅಕ್ಕಿಯು ದೇಶದಾದ್ಯಂತ ಬೆಳೆಯುವ ತಳಿಯಲ್ಲ ಇದು ಪ್ರಮುಖವಾಗಿ ಮಹಾರಾಷ್ಟ್ರದ ಪಶ್ಚಿಮ ಭಾಗಕ್ಕೆ (ಪುಣೆ, ಸತಾರ, ಕೊಲ್ಹಾಪುರ, ನಾಸಿಕ್ ಮತ್ತು ಮಾವಳ್ ಪ್ರದೇಶ) ಸೀಮಿತವಾಗಿರುವ ಒಂದು ಪ್ರಾದೇಶಿಕ ಸುಗಂಧಿತ ತಳಿಯಾಗಿದೆ.
ಇಂದ್ರಾಯಣಿ ತಳಿಗೆ ಪ್ರತ್ಯೇಕವಾಗಿ ಅಧಿಕೃತ ರಾಷ್ಟ್ರೀಯ ಅಂಕಿಅಂಶಗಳಿಲ್ಲದಿದ್ದರೂ, ಪಶ್ಚಿಮ ಮಹಾರಾಷ್ಟ್ರದ ಭತ್ತದ ವಿಸ್ತೀರ್ಣದ ಆಧಾರದ ಮೇಲೆ ಇದರ ವಾರ್ಷಿಕ ಉತ್ಪಾದನೆ ಸುಮಾರು 3.5 ರಿಂದ 5 ಲಕ್ಷ ಟನ್ ಇರಬಹುದೆಂದು ಅಂದಾಜಿಸಲಾಗಿದೆ.
ಪಶ್ಚಿಮ ಮಹಾರಾಷ್ಟ್ರದ (ಮುಖ್ಯವಾಗಿ ಮಾವಳ್ ಮತ್ತು ಭೋರ್ ತಾಲೂಕುಗಳಲ್ಲಿ) ಭತ್ತ ಬೆಳೆಯುವ ಒಟ್ಟು ಪ್ರದೇಶದ 70% ರಿಂದ 80% ಭಾಗದಲ್ಲಿ ಕೇವಲ ಇಂದ್ರಾಯಣಿ ತಳಿಯನ್ನೇ ಬೆಳೆಯಲಾಗುತ್ತದೆ.
ಮಹಾರಾಷ್ಟ್ರ ರಾಜ್ಯದಲ್ಲಿ ವಾರ್ಷಿಕವಾಗಿ ಒಟ್ಟು ಸುಮಾರು 35 ರಿಂದ 39 ಲಕ್ಷ ಮೆಟ್ರಿಕ್ ಟನ್ ಭತ್ತ ಉತ್ಪಾದನೆಯಾಗಲಿದ್ದು ಅದರಲ್ಲಿ ಇಂದ್ರಾಯಣಿ ತಳಿಯು ಪ್ರಮುಖ ಪಾಲನ್ನು ಹೊಂದಿದೆ.
ಈ ತಳಿಗೆ ಮಹಾರಾಷ್ಟ್ರ, ಉತ್ತರ ಕರ್ನಾಟಕ ಹಾಗೂ ಗೋವಾದಲ್ಲಿ ಉತ್ತಮ ಮಾರುಕಟ್ಟೆ ಬೇಡಿಕೆ ಇರುವುದರಿಂದ ಹೆಚ್ಚಿನ ಭಾಗ ಸ್ಥಳೀಯ ಹಾಗೂ ನೆರೆಹೊರೆಯ ರಾಜ್ಯಗಳಲ್ಲೇ ಬಳಕೆಯಾಗುತ್ತದೆ.
ಇಂದ್ರಾಯಣಿ ಎಂಬ ಹೆಸರು ಈ ಅಕ್ಕಿಗೆ ಬರಲು ಮುಖ್ಯ ಕಾರಣ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಹರಿಯುವ ಪವಿತ್ರ 'ಇಂದ್ರಾಯಣಿ ನದಿ'.
ಈ ಭತ್ತದ ತಳಿಯನ್ನು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಲೋನಾವಳ ಬಳಿಯಿರುವ ವಡಗಾಂವ್ ಮಾವಳ್ ಕೃಷಿ ಸಂಶೋಧನಾ ಕೇಂದ್ರದಲ್ಲಿ ಅಭಿವೃದ್ಧಿಪಡಿಸಲಾಯಿತು (ಇದು ಮಹಾತ್ಮ ಫುಲೆ ಕೃಷಿ ವಿದ್ಯಾಪೀಠದ ಅಡಿಯಲ್ಲಿ ಬರುತ್ತದೆ).
ಈ ಸಂಶೋಧನಾ ಕೇಂದ್ರ ಮತ್ತು ಈ ಭತ್ತವನ್ನು ಮೊದಲು ವ್ಯಾಪಕವಾಗಿ ಬೆಳೆಯಲಾದ ಮಾವಳ್ ಪ್ರದೇಶವು ಇಂದ್ರಾಯಣಿ ನದಿಯ ಜಲಾನಯನ ಪ್ರದೇಶದಲ್ಲಿದೆ.
ಸ್ಥಳೀಯ ಭೌಗೋಳಿಕ ಮಹತ್ವ ಮತ್ತು ಇಂದ್ರಾಯಣಿ ನದಿಯ ನೆನಪಿನಲ್ಲಿ ಕೃಷಿ ವಿಜ್ಞಾನಿಗಳು ಈ ಹೊಸ ಹೈಬ್ರಿಡ್ ಸುಗಂಧಿತ ತಳಿಗೆ 'ಇಂದ್ರಾಯಣಿ' ಎಂದು ಹೆಸರಿಟ್ಟರು.
ಇಂದ್ರಾಯಣಿ ನದಿಯು ನಾಥ ಪಂಥದ ಸಂತ ಜ್ಞಾನೇಶ್ವರರನಾಥರ ಸಮಾಧಿ ಇರುವ ಆಳಂದಿ ಮತ್ತು ಸಂತ ತುಕಾರಾಮರ ಜನ್ಮಸ್ಥಳವಾದ ದೇಹೂ ಮುಂತಾದ ಧಾರ್ಮಿಕ ಕ್ಷೇತ್ರಗಳ ಮೂಲಕ ಹರಿಯುವ ಪವಿತ್ರ ನದಿಯಾಗಿದ್ದು ಈ ಅಕ್ಕಿಗೆ ಈ ಹೆಸರು ಮತ್ತಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿದೆ.
#rice #maharashtra #indrayinirice #gandhasale #santhatukarama #jnaneshwarnath #indrayiniriver
Comments
Post a Comment