ಆಷಾಢ_ಮುಗಿದು_ಶ್ರಾವಣ_ಬಂತು!
ಏನಿದು_ಗಟಾರಿ_ಅಮಾವಾಸ್ಯೆ
ಇಲ್ಲಿದೆ ಕುತೂಹಲಕಾರಿ ಮಾಹಿತಿ! ಓದಿ...
ಆಷಾಢ ಮಾಸದ ಕೊನೆಯ ದಿನ ಅಂದರೆ ಅಮಾವಾಸ್ಯೆಯಂದು ಕರ್ನಾಟಕದಲ್ಲಿ 'ಭೀಮನ ಅಮಾವಾಸ್ಯೆ'ಯನ್ನು ಸಾಂಪ್ರದಾಯಿಕವಾಗಿ ಆಚರಿಸಿದರೆ ನೆರೆಯ ಮಹಾರಾಷ್ಟ್ರ ಹಾಗೂ ಗಡಿ ಭಾಗಗಳಲ್ಲಿ ಗಟಾರಿ ಅಮಾವಾಸ್ಯೆ ಎಂದು ವಿಶಿಷ್ಟವಾಗಿ ಸಂಭ್ರಮಿಸಲಾಗುತ್ತದೆ.
ಈ ವರ್ಷದ ಭೀಮನ ಅಮಾವಾಸ್ಯೆ ದಿನಾಂಕ 12 - ಆಗಸ್ಟ್-2026 ಬುಧವಾರ ಬಂದಿದೆ.
ದಿನಾಂಕ 13 - ಆಗಸ್ಟ್-2026 ಗುರುವಾರದಿಂದ ಶ್ರಾವಣ ಮಾಸ ಪ್ರಾರಂಭವಾಗುತ್ತದೆ.
#ಶ್ರಾವಣ_ಮಾಸ ಎಂಬ ಹೆಸರು ಬರಲು ಮುಖ್ಯವಾಗಿ ಖಗೋಳಶಾಸ್ತ್ರ (ನಕ್ಷತ್ರ) ಮತ್ತು ವೇದ-ಸಂಸ್ಕೃತಿಯ ಪ್ರಭಾವವಿದೆ.
ಹಿಂದೂ ಪಂಚಾಂಗದ ಪ್ರಕಾರ ತಿಂಗಳಿಗೆ ಹೆಸರು ಇಡುವುದು ಆ ತಿಂಗಳ ಹುಣ್ಣಿಮೆಯ ದಿನದಂದು ಚಂದ್ರನು ಯಾವ ನಕ್ಷತ್ರದ ಬಳಿ ಇರುತ್ತಾನೋ ಆ ಆಧಾರದ ಮೇಲೆ, ಶ್ರಾವಣ ಮಾಸದ ಹುಣ್ಣಿಮೆಯಂದು ಚಂದ್ರನು 'ಶ್ರವಣ' ನಕ್ಷತ್ರದ ನಿಕಟವಾಗಿ ಇರುತ್ತಾನೆ ಹೀಗಾಗಿ ಈ ಮಾಸಕ್ಕೆ ಶ್ರಾವಣ ಎಂದು ಹೆಸರು ಬಂದಿದೆ.
ಸಂಸ್ಕೃತದಲ್ಲಿ 'ಶ್ರವಣ' ಎಂದರೆ ಕೇಳುವುದು ಅಥವಾ ಆಲಿಸುವುದು ಎಂದರ್ಥ ಈ ಮಾಸದಲ್ಲಿ ವೇದಗಳು, ಪುರಾಣಗಳು, ಶಿವಕಥೆ ಹಾಗೂ ಧಾರ್ಮಿಕ ಪ್ರವಚನಗಳನ್ನು ಕಿವಿಯಾರೆ ಆಲಿಸುವುದು ಅತ್ಯಂತ ಶ್ರೇಷ್ಠ ಎಂಬ ನಂಬಿಕೆ ಇದೆ.
ಈ ಮಾಸದಲ್ಲಿ ಗುರುಕುಲಗಳಲ್ಲಿ ವೇದಗಳ ಪಠಣ ಮತ್ತು ಶ್ರವಣ (ಆಲಿಕೆ) ಕಾರ್ಯಕ್ರಮಗಳು ಪ್ರಾರಂಭವಾಗುತ್ತಿದ್ದವು ಆದ್ದರಿಂದ ಇದನ್ನು ಜ್ಞಾನಾರ್ಜನೆಯ ಮಾಸ ಎಂದೂ ಕರೆಯಲಾಗುತ್ತದೆ.
#ಏನಿದು_ಗಟಾರಿ_ಅಮಾವಾಸ್ಯೆ
ಇದರ ಹಿಂದಿರುವ ಕಾರಣಗಳೇನು? ಇಲ್ಲಿದೆ ಸಂಪೂರ್ಣ ವಿವರ.
ಮುಂಬರುವ ಪವಿತ್ರ ಶ್ರಾವಣ ಮಾಸದಲ್ಲಿ ಇಡೀ ತಿಂಗಳು ಮಾಂಸಾಹಾರ, ಮದ್ಯಪಾನ ಹಾಗೂ ತಾಮಸಿಕ ಆಹಾರವನ್ನು ಸಂಪೂರ್ಣವಾಗಿ ತ್ಯಜಿಸಲಾಗುತ್ತದೆ.
ಶ್ರಾವಣ ಮಾಸದಲ್ಲಿ ಮದ್ಯ ಮತ್ತು ಮಾಂಸಾಹಾರವನ್ನು ತ್ಯಜಿಸಲು ಧಾರ್ಮಿಕ, ವೈಜ್ಞಾನಿಕ ಮತ್ತು ಆರೋಗ್ಯಕರ ಕಾರಣಗಳಿವೆ.
ಶ್ರಾವಣ ಮಾಸವು ಶಿವನಿಗೆ ಅತ್ಯಂತ ಪ್ರಿಯವಾದ ಪವಿತ್ರ ಮಾಸ ಈ ಸಮಯದಲ್ಲಿ ಭಕ್ತಿ, ವ್ರತ ಮತ್ತು ಪೂಜೆ-ಪುನಸ್ಕಾರಗಳಿಗೆ ಆದ್ಯತೆ ನೀಡಲಾಗುತ್ತದೆ.
ಮಾಂಸ ಮತ್ತು ಮದ್ಯ 'ತಾಮಸಿಕ' ಪ್ರವೃತ್ತಿಯನ್ನು (ಕೋಪ, ಆಲಸ್ಯ, ಕಾಮ) ಹೆಚ್ಚಿಸುವುದರಿಂದ ಸಾತ್ವಿಕ ಮನಸ್ಥಿತಿಗಾಗಿ ಇವುಗಳನ್ನು ನಿಷೇಧಿಸಲಾಗಿದೆ.
ಪವಿತ್ರ ದಿನಗಳಲ್ಲಿ ಜೀವಹಿಂಸೆಯನ್ನು ತಡೆದು ಜೀವರಾಶಿಗಳ ಬಗ್ಗೆ ಕರುಣೆ ತೋರುವುದು ಧಾರ್ಮಿಕ ನಿಯಮ.
ಶ್ರಾವಣ ಮಾಸವು ಮಳೆಗಾಲದ ಮಧ್ಯದಲ್ಲಿ ಬರುತ್ತದೆ ಈ ಸಮಯದಲ್ಲಿ ಸೂರ್ಯನ ಬೆಳಕು ಕಡಿಮೆ ಇರುವುದರಿಂದ ಮತ್ತು ವಾತಾವರಣದಲ್ಲಿನ ತೇವಾಂಶದಿಂದಾಗಿ ಮಾನವನ ಜೀರ್ಣಶಕ್ತಿ (ಅಗ್ನಿ) ಮಂದವಾಗಿರುತ್ತದೆ.
ಮಾಂಸವು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ಹೊಟ್ಟೆಯ ಸಮಸ್ಯೆಗಳು, ಗ್ಯಾಸ್ಟ್ರಿಕ್ ಅಥವಾ ಅಜೀರ್ಣ ಉಂಟಾಗುತ್ತದೆ.
ಮಳೆಗಾಲವು ಜಲಚರಗಳು, ಕೋಳಿ ಮತ್ತು ಪ್ರಾಣಿಗಳ ಸಂತಾನೋತ್ಪತಿ ಸಮಯವಾಗಿದೆ ಈ ಸಮಯದಲ್ಲಿ ಪ್ರಾಣಿಗಳಲ್ಲಿ ಸೋಂಕು ಅಥವಾ ರೋಗಗಳು ಹೆಚ್ಚಿರುತ್ತವೆ ಅಂತಹ ಮಾಂಸವನ್ನು ಸೇವಿಸುವುದರಿಂದ ಜನರಿಗೆ ರೋಗಗಳು ಹರಡುವ ಅಪಾಯ ಹೆಚ್ಚು.
ವರ್ಷದ ಒಂದು ತಿಂಗಳು ಮಾಂಸಾಹಾರ ಮತ್ತು ಮದ್ಯವನ್ನು ತ್ಯಜಿಸುವುದರಿಂದ ಲಿವರ್ ಹಾಗೂ ಜೀರ್ಣಾಂಗವ್ಯೂಹಕ್ಕೆ ವಿಶ್ರಾಂತಿ ಸಿಗುತ್ತದೆ ಇದು ದೇಹವನ್ನು ಒಳಗಿನಿಂದ ಶುದ್ಧೀಕರಿಸಲು (Detox) ಸಹಾಯ ಮಾಡುತ್ತದೆ.
ಹೀಗಾಗಿ ಶ್ರಾವಣ ಆರಂಭವಾಗುವ ಮುನ್ನವೇ ಆಷಾಢದ ಕೊನೆಯ ದಿನದಂದು ಕುಟುಂಬಸ್ಥರು ಹಾಗೂ ಸ್ನೇಹಿತರೊಡನೆ ಸೇರಿ ತಮಗಿಷ್ಟವಾದ ಮಾಂಸಾಹಾರದ ಖಾದ್ಯಗಳನ್ನು ಸವಿದು ಸಂಭ್ರಮಿಸುವುದು ಈ ದಿನದ ವಿಶೇಷ.
ಜನಪದ ಆಡುಭಾಷೆಯಲ್ಲಿ ಈ ದಿನ ಅತಿಯಾಗಿ ಮದ್ಯಪಾನ ಮಾಡಿ ಚರಂಡಿಗಳಲ್ಲಿ (ಗಟಾರಕ್ಕೆ) ಬೀಳುವವರನ್ನು ತಮಾಷೆಯಾಗಿ ಉಲ್ಲೇಖಿಸುತ್ತಾ 'ಗಟಾರಿ' ಎಂಬ ಹೆಸರು ಪ್ರಚಲಿತಕ್ಕೆ ಬಂತು ಎನ್ನಲಾಗುತ್ತದೆ.
ಆದರೆ ಮೂಲತಃ ಇದು ಶ್ರಾವಣದ ಸಾತ್ವಿಕ ವ್ರತಕ್ಕೆ ಮುನ್ನ ಮಾಡುವ ಒಂದು ಸೌಹಾರ್ದ ಕೂಟವಾಗಿದೆ.
ಈ ದಿನದಂದು ರೆಸ್ಟೋರೆಂಟ್‌ಗಳು, ಧಾಬಾಗಳು ಮತ್ತು ಮನೆಗಳಲ್ಲಿ ವಿಶೇಷ ಕೊಲ್ಹಾಪುರಿ ಮಟನ್ ರಸ್ಸಾ, ಮಾಲ್ವಣಿ ಮೀನಿನ ಸಾರು, ಚಿಕನ್ ಆಂಟಿ ಹಾಗೂ ಸೀಫುಡ್ ಖಾದ್ಯಗಳ ಘಮಲು ತುಂಬಿರುತ್ತದೆ.
ಪ್ರಸ್ತುತ ದಿನಗಳಲ್ಲಿ ಹೋಟೆಲ್‌ಗಳಲ್ಲಿ 'ಗಟಾರಿ ಸ್ಪೆಷಲ್ ತಾಳಿ' ಆಫರ್‌ಗಳ ಸಮ್ಮೇಳನವೇ ನಡೆಯುತ್ತದೆ!.
ಭೀಮನ ಅಮಾವಾಸ್ಯೆ
ಆಚರಣೆಯ ಉದ್ದೇಶ ಪತಿ ಹಾಗೂ ಕುಟುಂಬದ ಪುರುಷರ (ಸಹೋದರರು/ಮಕ್ಕಳು) ದೀರ್ಘಾಯುಷ್ಯ, ಆರೋಗ್ಯ ಮತ್ತು ಶ್ರೇಯಸ್ಸಿಗಾಗಿ ಮಹಿಳೆಯರು ಮಾಡುವ ವ್ರತ, ಪರಶಿವ ಮತ್ತು ಪಾರ್ವತಿಯನ್ನು ಪೂಜಿಸಲಾಗುತ್ತದೆ.
ಈ ಲೇಖನ ನಿಮಗಿಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ! ಎಲ್ಲರಿಗೂ ಭೀಮನ ಅಮಾವಾಸ್ಯೆ ಹಾಗೂ ಗಟಾರಿ ಸಂಭ್ರಮದ ಶುಭಾಶಯಗಳು!
#shravanamasa #maharashtra #gatari #amavasya #bhimanaamavasya #detox
Comments
Post a Comment