#ಆನಂದಪುರಂ ಇತಿಹಾಸ ಭಾಗ_17. #ಶಿವಮೊಗ್ಗ_ಜಿಲ್ಲೆಯ_ಆಕಾಲದ_ಪ್ರಭಾವಿ_ನಾಯಕರನ್ನು_ಮಂತ್ರಿ_ಮಾಡದ_ಲಾಭಿ #ಅವಕಾಶ_ನೀಡದ_ನಿಜಲಿಂಗಪ್ಪನವರು. #ಅನಿವಾಯ೯ವಾಗಿ_ಬಿನ್ನಮತೀಯ_ಗುಂಪು_ಸೇರಿದ_ಬದರಿನಾರಾಯಣ್_ಅಯ್ಯ೦ಗಾರರು. #ಆನಂದಪುರಂ_ಸಮೀಪದ_ಅವರ_ಹೊಸಕೊಪ್ಪದ_ತೋಟದ_ಮನೆಯಲ್ಲಿ_ನಡೆದ_ಸರಣಿ_ಬಿನ್ನಮತಿಯ_ಸಭೆಗಳು. 1952ರ ಮೊದಲ ಮೈಸೂರು ಶಾಸನ ಸಭೆ, ಸಾಗರ - ಹೊಸನಗರ ವಿಧಾನಸಭಾ ಕ್ಷೇತ್ರಕ್ಕೆ ಸಾಗರ - ಹೊಸನಗರ- ಮತ್ತು ತೀಥ೯ಹಳ್ಳಿ ತಾಲ್ಲೂಕು ಸೇರಿ ಒಂದು ಕ್ಷೇತ್ರ. 1957ರ ಎರಡನೆ ಮೈಸೂರು ಶಾಸನ ಸಭೆ ಚುನಾವಣೆಯಲ್ಲಿ ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರಕ್ಕೆ ಸಾಗರ ತಾಲ್ಲೂಕಿನ ಆನಂದಪುರಂ ಮತ್ತು ಸಾಗರ ಪಟ್ಟಣದವರೆಗಿನ ಸೇರಿದ ಪ್ರದೇಶ ಮತ್ತು ಹೊಸನಗರ ಹಾಗೂ ತೀರ್ಥಹಳ್ಳಿ ತಾಲ್ಲೂಕ್ ಈ ವಿಧಾನಸಭಾ ಕ್ಷೇತ್ರಕ್ಕೆ ಸೇರಿತ್ತು. ಈ ಕ್ಷೇತ್ರದಿಂದ 1957 ರ ಎರಡನೇ ಮಹಾ ಚುನಾವಣೆಯಲ್ಲಿ ಕಾಂಗ್ರೇಸ್ ಪಾರ್ಟಿಯಿಂದ ಬದರಿನಾರಾಯಣ ಅಯ್ಯಂಗಾರ್ ಸಮಾಜವಾದಿ ಪಾರ್ಟಿಯಿಂದ ಸ್ಪರ್ದಿಸಿದ್ದ (1952 ರಲ್ಲಿ ಈ ಕ್ಷೇತ್ರದಿಂದ ಮೊದಲ ಸಾವ೯ತ್ರಿಕ ಚುನಾವಣೆಯಲ್ಲಿ ಇದೇ ಬದರಿನಾರಾಯಣ ಅಯ್ಯಂಗಾರ್ ರನ್ನು ಸೋಲಿಸಿದ್ದ ) ಶಾಂತವೇರಿ ಗೋಪಾಲಗೌಡರನ್ನು ಸೋಲಿಸಿ ಆಯ್ಕೆ ಆಗುತ್ತಾರೆ. ಎರಡನೇ ವಿದಾನ ಸಭಾ ಚುನಾವಣೆಯಲ್ಲಿ (1957 ರಲ್ಲಿ) ತೀಥ೯ಹಳ್ಳಿ ವಿದಾನ ಸಭಾ ಕ್ಷೇತ್ರದಿಂದ ಹೊರತು ಪಡಿಸಿದ ಸಾಗರ ತಾಲ್ಲೂ...