ಕಲ್ಲುಕುಟುಕಸ್ವಾಮಿ ಸೊಪ್ಪುಗುಡ್ಡೆ - ತೀರ್ಥಹಳ್ಳಿ ಶಿವಮೊಗ್ಗ ಜಿಲ್ಲೆ. ನೂರಾ ನಲವತ್ತು ವರ್ಷಗಳ ನಮ್ಮ ಕುಟುಂಬದ ಕಥೆ. ನಮ್ಮ ಕುಟುಂಬದ ಕಲ್ಲುಕುಟಿಕ ಮತ್ತು ವರ್ತೆ ದೈವಸ್ಥಾನ ಮೊನ್ನೆ 2026ರ ಮೇ ತಿಂಗಳ 10ನೇ ತಾರೀಖು ಭಾನುವಾರ #ತೀರ್ಥಹಳ್ಳಿಯ_ಸೊಪ್ಪುಗುಡ್ಡೆಯಲ್ಲಿ ಪುನರ್ ಪ್ರತಿಷ್ಠಾಪನೆ ಆಯಿತು ಇದು ನೂರು ವರ್ಷಗಳಲ್ಲಿ ಮೂರನೆ ಪುನರ್ ಪ್ರತಿಷ್ಠಾಪನೆ ಆಗಿದೆ. ಅಂದಾಜು 1890 ನೇ ಇಸವಿಯಲ್ಲಿ ಉಡುಪಿ ಜಿಲ್ಲೆಯ #ಬೆಣ್ಣೆಕುದುರಿನಿಂದ ಘಟ್ಟಕ್ಕೆ ಬರುವಾಗ ನನ್ನ ಅಜ್ಜಿ ಅಬ್ಬಕ್ಕ ತನ್ನ ಜೊತೆ ತಂದಿದ್ದು ಕಲ್ಲುಕುಟಿಕ ದೇವರನ್ನ. ನನ್ನ ಅಜ್ಜಿ ಕಲ್ಲುಕುಟಿಕ ದೇವರ ಆರಾದಿಸುತ್ತಿದ್ದವರು ಮತ್ತು ಕಲ್ಲುಕುಟಿಕ ದೇವರ ನೇಮ, ರೀತಿ-ನೀತಿಗಳ ಕಟ್ಟುಪಾಡು ಕಡ್ಡಾಯವಾಗಿ ಪಾಲಿಸಿಕೊಂಡು ಬಂದವರು. ಸುಮಾರು ನೂರು ವರ್ಷಗಳ ಹಿಂದೆ ತಾನು ಘಟ್ಟಕ್ಕೆ ತಂದ ಕಲ್ಲುಕುಟಿಕ ದೇವರನ್ನ ಸರಿಯಾಗಿ ಪೂಜೆ ಪುರಸ್ಕಾರಗಳನ್ನು ನಡೆಸಿಕೊಂಡು ಹೋಗುವ ಭರವಸೆಯನ್ನು ತನ್ನ ಅಕ್ಕನ ಮಗಳು ಶ್ರೀಮತಿ #ಚಿಕ್ಕಮ್ಮರ ಪತಿ ತೀರ್ಥಹಳ್ಳಿಯ ಸೊಪ್ಪುಗುಡ್ಡೆಯ #ರಾಮಣ್ಣಪಾತ್ರಿಗಳಲ್ಲಿ ನೋಡಿ ಅಲ್ಲಿಗೆ ಕಲ್ಲುಕುಟಿಕ ದೇವರನ್ನ ಸ್ಥಳಾಂತರಿಸುತ್ತಾರೆ. ಈ ರೀತಿ ಉಡುಪಿ ಜಿಲ್ಲೆಯಿಂದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ...