Blog number 1868. ಸಿಹಿ ತಿಂಡಿ,ಡ್ರೈಫ್ರೂಟ್ ಉದ್ಯಮದಲ್ಲಿ ನೂತನ ಪ್ಯಾಕಿಂಗ್ ತಂತ್ರಜ್ಞಾನ MAP ಬಳಸಿ ಆಕರ್ಷಕವಾದ ರಾಮಾಯಣದ ಚಿತ್ರಗಳ ಮುದ್ರಿಸಿ ಕರ್ನಾಟಕ ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಪ್ಯಾಕ್ಟರಿ ಔಟ್ ಲೆಟ್ ಸರಣಿ ಪ್ರಾರಂಬಿಸಿ ಗ್ರಾಹಕರಿಂದ ಪ್ರಶಂಸೆ ಪಡೆಯುತ್ತಿರುವ 1600 ಕೋಟಿ ವಾರ್ಷಿಕ ವಹಿವಾಟಿನ ಬೋಳಾಸ್
#ಸಿಹಿ_ತಿನಿಸು_ಡ್ರೈಫ್ರೂಟ್_ಉದ್ಯಮದಲ್ಲಿ_ರುಚಿ_ಶುಚಿ_ಆಕರ್ಷಕ_ಪ್ಯಾಕಿಂಗ್ #ಸಾಗರದದಲ್ಲಿ_ಪ್ರಾರಂಭ_ಆಗಿದೆ_ಬೊಳಾಸ್_ಪ್ಯಾಕ್ಟರಿ_ಔಟ್_ಲೆಟ್ #ಇಲ್ಲಿ_ಮಾರಾಟ_ಮಾಡುವ_ಸಿಹಿತಿನಿಸು_ಡ್ರೈಫ್ರೂಟ್ಸ್_MAP_ತಂತ್ರಜ್ಞಾನದ_ಪ್ಯಾಕಿಂಗ್ #ಕಾರ್ಕಳ_ಮೂಲದ_ಬೋಳಾ_ರಾಘವೇಂದ್ರ_ಕಾಮತರ_ಉದ್ಯಮಶೀಲತೆಯ_ಕನಸು #ಸ್ವಾತಂತ್ರ್ಯಪೂರ್ವ_1940ರಲ್ಲಿ_ಗೇರುಬೀಜ_ಉದ್ಯಮದಿಂದ_ಪ್ರಾರಂಭ #ಮೂರನೆ_ತಲೆಮಾರಿನ_ಬೋಳಾ_ಸುರೇಂದ್ರಕಾಮತ್_ಸನ್ಸ್_ಹೆಸರಿನಲ್ಲಿ. #ಒಂದುಸಾವಿರದ_ಆರು_ನೂರು_ಕೋಟಿ_ವಹಿವಾಟಿನ_ಡ್ರೈಪ್ರೂಟ್ಸ್_ಖಾದ್ಯತೈಲ_ಕಾಫಿ_ಜೀನು_ಸಿಹಿತಿಂಡಿ_ಸಾಫ್ಟ್_ವೇರ್_ಉದ್ಯಮ. ನಮ್ಮ ಊರಿನ ಶುಂಠಿ ಉದ್ಯಮಿ #ಪ್ರಮೋದ್_ಶೇಟ್ ಕೆಲವು ದಿನಗಳ ಹಿಂದೆ ಬೋಳಾಸ್ ನವರ ಶಬರಿ ಸ್ವೀಟ್ ಬಾಕ್ಸ್ ದೀಪಾವಳಿ ಹಬ್ಬದ ಸಿಹಿ ಉಡುಗೊರೆಯಾಗಿ ನೀಡಿದ್ದರು ಅದರಲ್ಲಿ ತಾಜಾ ಕಾಜು ಕಟ್ಲಿ ಇತ್ತು ಮತ್ತು ಈ ಬಾಕ್ಸ್ ಆಧುನಿಕ ಪ್ಯಾಕಿಂಗ್ ತಂತ್ರಜ್ಞಾನವಾದ MAP (Modified Atmosphere Package) ಆದ್ದರಿಂದ ಈ ಬಗ್ಗೆ ಕುತೂಹಲವಾಗಿ ಅವರಲ್ಲಿ ಕೇಳಿದಾಗ ಬೋಳಾಸ್ ಪ್ಯಾಕ್ಟರಿ ಔಟ್ ಲೆಟ್ ಶೋ ರೂಂ ಸಾಗರದ ಮಾರ್ಕೆಟ್ ರಸ್ತೆಯಲ್ಲಿ ಮೈಸೂರು ಕಾಫಿ ಹೌಸ್ ಹತ್ತಿರ ತೆರೆದಿದ್ದಾರೆಂದಾಗ ಅಲ್ಲಿಂದ ಅವರ ಪ್ರಸಿದ್ಧವಾದ ಬಾದಾಮಿ ಹಲ್ವಾ, ಮೈಸೂರು ಪಾಕ್ ಇತ್ಯಾದಿ ನಿನ್ನೆ ಅವರಿಂದ ತರಿಸಿದ್ದೆ. ಅನೇಕ ಉದ್ಯಮಿಗಳಿಗೆ ನಾನು ಅವರು ತಯಾರಿಸಿ ಮಾರಾಟ ಮಾಡು...