#ಶ್ರದ್ದಾ೦ಜಲಿಗಳು. #ನನ್ನ_ಬಾಲ್ಯದ_ರೋಲ್_ಮಾಡೆಲ್_ಆಗಿದ್ದ_ಡುಮಿಂಗ್_ರೆಬೆಲೋ_ಕ್ರಿಸ್ತ_ಪಾದ_ಸೇರಿದರು #ಅವರ_ಆತ್ಮಕ್ಕೆ_ಸದ್ಗತಿ_ಸ್ವರ್ಗ_ಪ್ರಾಪ್ತಿಗೆ_ದೇವರಲ್ಲಿ_ಪ್ರಾರ್ಥಿಸುತ್ತೇನೆ. ನಮ್ಮ ಊರಲ್ಲಿ ದೇವಸ್ಥಾನ ಮಸೀದಿ ಇರಲಿಲ್ಲ ಆದರೆ ಚರ್ಚ್ ಇತ್ತು ಅಂದರೆ ಆಗ 13 ಮನೆ ಕ್ರಿಸ್ತರದ್ದೆ,6 ಮನೆ ಹಿಂದುಗಳದ್ದು ಮತ್ತು 5 ಮನೆ ಮುಸ್ಲಿಂ ಜನದ್ದು ಇದು 1960 - 70 ರ ಕಾಲದಲ್ಲಿ. ಈಗ ಸುಮಾರು 200 ಹಿಂದೂ ದಮಿ೯ಯರ ಮನೆಗಳಿದೆ, 120 ಮುಸ್ಲಿಂ ಮನೆಗಳಿದೆ, ಕ್ರಿಶ್ಚಿಯನ್ನರ ಮನೆಗಳು 25 ಮೀರಿಲ್ಲ. ಈಗ ಯೋಹವನ ಸಾಕ್ಷಿಗಳ ಇನ್ನೊಂದು ಚಚು೯ ಆಗಿದೆ, ಮಸೀದಿ ಆಗಿದೆ ಮತ್ತು ಸಿದ್ದಿ ವಿನಾಯಕ ದೇವಸ್ಥಾನ ಆಗಿದೆ. ಪೆಟ್ರೋಲ್ ಪಂಪ್ ಇದೆ, ಎರೆಡು ಬ್ಯಾಂಕ್ ಇದೆ, ಎರೆಡು ಮೋಟಾರ್ ಸೈಕಲ್ ಶೋ ರೂಂ ಆಗಿದೆ, 3 ಅಕ್ಕಿ ಗಿರಣಿ ಇದೆ, ಪದವಿ ಕಾಲೇಜ್ ತನಕ ಇದೆ. ಆದರೆ ನಮ್ಮ ಬಾಲ್ಯದ ಸವಿ ನೆನಪಿನ ಅಂಗಳದಲ್ಲಿ ಇದ್ಯಾವುದೂ ಇರಲಿಲ್ಲ ಆ ಕಾಲದಲ್ಲಿ ನಿಜವಾದ ಮನಷ್ಯತ್ವದ ಸಮಾಜ ಇತ್ತು. ದಮ೯ಗಳ ಮಧ್ಯ ದ್ವೇಷ ಇರಲಿಲ್ಲ ಅಪನಂಬಿಕೆ ಇರಲಿಲ್ಲ. ಇವತ್ತು ಸಂಜೆ ನಮ್ಮ ಪ್ರೀತಿಯ ಡುಮಿಂಗಣ್ಣ ತಮ್ಮ ಇಹ ಲೋಕ ತ್ಯಜಿಸಿ ಕ್ರಿಸ್ತ ಪಾದ ಸೇರಿದ್ದಾರೆ ಇವರನ್ನು ಅತ್ಯಂತ ಪ್ರೀತಿಯಿಂದ ಕೊನೆ ತನಕ ನೋಡಿ ಕಂಡ ಪತ್ನಿ ತೀರ್ಥಹಳ್ಳಿಯ ರೋಜಿನ ಬಾಯಮ್ಮ ಮತ್ತು ...