#ನನ್ನ_ನಿತ್ಯ_ಉಪಹಾರದ_ತಟ್ಟೆ_ನೋಡಿ. #ಸ್ಥೂಲಕಾಯ_ನಿವಾರಣೆಗೆ_ಮಿತ_ಆಹಾರ_ಸೇವನೆ #ನಿತ್ಯ_ವಾಕಿಂಗ್_ನಿರ೦ತರವಾಗಿಡುವಂತೆ_ಮಿತ_ಆಹಾರದ_ಅಭ್ಯಾಸ_ಕೂಡ. #ನನ್ನ_ಸ್ವಂತ_ಅನುಭವ_ಯಾರಿಗಾದರೂ_ಉಪಯೋಗ_ಆದೀತಾ .... ಬದುಕಲಿಕ್ಕಾಗಿ ತಿನ್ನುತ್ತೀಯಾ ಅಥವ ತಿನ್ನಲಿಕ್ಕಾಗಿ ಬದುಕಿತ್ತೀಯ ಎಂಬ ಪ್ರಶ್ನೆ ನನಗೆ ನಾನೆ 140 ಕಿಲೋ ದಾಟಿದ ನನ್ನ ದೇಹದ ತೂಕದಿಂದ ತತ್ತರಿಸಿ ಪ್ರಶ್ನೆ ಮಾಡಿಕೊಳ್ಳುವ ಸಂದರ್ಭ 2019 ರಲ್ಲಿ ಬಂದಿತ್ತು ಈ ಪ್ರಶ್ನೆ ಕೋಳಿಯಿಂದ ಮೊಟ್ಟೆಯಾ ಅಥವ ಮೊಟ್ಟೆಯಿಂದ ಕೋಳಿನಾ ಅಂತ ಪ್ರಶ್ನಿಸಿದ ಹಾಗೆ. ಬಾಲ್ಯದಲ್ಲಿ ಯೌವ್ವನದಲ್ಲಿ ಎಷ್ಟು ತಿಂದರೂ ದೇಹ ಅದನ್ನು ಶಕ್ತಿಯಾಗಿ ಪರಿವರ್ತಿಸುತ್ತದೆ ಮತ್ತು ವಯಸ್ಸಿಗೆ ತಕ್ಕ ಹಾಗೆ ನಾವೂ ಕ್ರಿಯಾಶೀಲರಾಗಿರುತ್ತೇವೆ ಆದರೆ 40 ದಾಟಿದಂತೆ ಕ್ರಿಯಾಶೀಲತೆ ಕಡಿಮೆ ಆದಂತೆ ಸೇವಿಸುವ ಹೆಚ್ಚುವರಿ ಆಹಾರವನ್ನು ದೇಹ ಕೊಬ್ಬಾಗಿ ಪರಿವರ್ತಿಸಿ ಸ್ಥೂಲಕಾಯರಾಗಿಸುತ್ತದೆ. ಸ್ತ್ರೀಯರಲ್ಲಿ ಹಾರ್ಮೋನ್ ವೈಪರಿತ್ಯದಿಂದ ಕಡಿಮೆ ಆಹಾರ ತಿಂದರೂ ಸ್ಥೂಲಕಾಯರಾಗುತ್ತಾರೆ. ನಾನು ಜೀವನದಲ್ಲಿ ಆ ಸಮಯದಲ್ಲಿ ನಿರಾಸಕ್ತಿ ಹೊಂದಿದ್ದೆ ಪುನಃ ಜೀವನೋತ್ಸವ ಪಡೆದದ್ದು ನನ್ನ ನಿತ್ಯ ಜೀವನ ಶೈಲಿ ಬದಲಾಯಿಸಿಕೊಂಡ ನಂತರವೇ. ಹತ್ತು ಹೆಜ್ಜೆ ನಡೆಯಲಾರದವನು ಈಗ ದಿನ ಒಂದು ಗಂಟೆ ವಾಕಿಂಗ್ ಸಲೀಸಾಗಿ ಮಾಡುವುದು, ರಾತ್ರಿ ಊಟ ನಿಲ್ಲಿಸಿ ಮುಂದಿನ ಶಿವರಾತ್ರಿಗ...