Blog number 1072. ಪಡಿತರ ಅಕ್ಕಿ ಮತ್ತು ಗೋದಿ ಸಾರಯುಕ್ತ ಮಿಶ್ರಣ ಮಾಡುವ ಮೂಲಕ ಭಾರತ ದೇಶದ ಬಡತನ ರೇಖೆಗಿಂತ ಕೆಳಗಿನ ಬಡವರ ಮಕ್ಕಳಿಗೆ ಪೌಷ್ಟಿಕತೆ ವೃದ್ಧಿ ಮಾಡುವ ಪ್ರದಾನ ಮಂತ್ರಿ ಮೋದಿಯವರ ಘೋಷಣೆಯ ಸರಿಯಾದ ಮಾಹಿತಿ ಇಲ್ಲದೆ ಸಾರ್ವಜನಿಕರಲ್ಲಿ ಪಡಿತರ ಅಕ್ಕಿಯಲ್ಲಿರುವ ಬಿಳಿಪುಡಿ ಬಗ್ಗೆ ತಪ್ಪು ತಿಳುವಳಿಕೆ ಪ್ರಚಾರದಲ್ಲಿದೆ.
ಅನ್ನ_ಬಾಗ್ಯ_ಅಕ್ಕಿಯಲ್ಲಿರುವ_ಬಿಳಿಪುಡಿ_ಏನು? #ಪಡಿತರ_ಅಕ್ಕಿ_ಹುಳ_ಹಿಡಿಯ_ಬಾರದೆಂಬ_ರಾಸಾಯನಿಕವಾ? #ಅದರಿಂದ_ಆರೋಗ್ಯಕ್ಕೆ_ಹಾನಿಯಾ ? #ಇಂತಹ_ನೂರಾರು_ಪ್ರಶ್ನೆಗಳಿದೆ_ಆದರೆ_ಇದು_ಅಪೌಷ್ಟಿಕತೆಗಾಗಿ_ಕೇಂದ್ರ_ಸಕಾ೯ರ_ #ಸಾರವರ್ದನೆ_ಮಾಡುವ_ಮೈಕ್ರೋನ್ಯೂಟ್ರಿಯಂಟ್. #ಪ್ರದಾನಮಂತ್ರಿ_74ನೇ_ಸ್ವಾತಂತ್ರೋತ್ಸವದಲ್ಲಿ_ಘೋಷಿಸಿದ_ಯೋಜನೆ. ಪಡಿತರ ಅಕ್ಕಿ ವಿತರಣೆಯ ಉದ್ದೇಶ ಬಡತನ ರೇಖೆಗಿಂತ ಕೆಳಗಿರುವ ಬಡ ಕುಟುಂಬಕ್ಕೆ ಆಹಾರ ಭದ್ರತೆ ಒಂದು ಕಾರಣವಾಗಿದೆ. ಇದರ ಮಧ್ಯ ರಾಷ್ಟ್ತ್ರೀಯ ಆರೋಗ್ಯ ಸರ್ವೆ ಪ್ರಕಾರ ದೇಶದ ಬಡತನ ರೇಖೆಯ ಕೆಳಗಿನ ಕುಟುಂಬಗಳ ಶೇಕಡಾ 78.7% ಮಕ್ಕಳು ದೇಶದ ಶೇಕಡಾ 75 ಜಿಲ್ಲೆಗಳಲ್ಲಿ ಪೌಷ್ಟಿಕ ಆಹಾರ ಕೊರತೆಯಿಂದ ಬಳಲುತ್ತಿದೆ ಎಂದಿರುವುದರಿಂದ ಪಡಿತರ ಅಕ್ಕಿ ಮತ್ತು ಗೋದಿಗೆ ಮೈಕ್ರೋನ್ಯೂಟ್ರಿಯಂಟ್ ಪುಡಿ 1 : I 00 ಅಂದರೆ ನೂರು ಕೇಜಿ ಗೋದಿ ಅಥವ ಅಕ್ಕಿಗೆ ಐರನ್ - ಪೊಲಿಕ್ ಆಸಿಡ್ - ಬಿ ಕಾಂಪ್ಲೆಕ್ಸ್ - ವಿಟಮಿನ್ A - ಜಿಂಕ್ ಬೆರೆಸುವ ಮೂಲಕ ಸಾರ ವರ್ದನೆ (Fortification) ಮಾಡುತ್ತಿದೆ. ಆಹಾರ ಸಾರವರ್ದನೆ ಮೊದಲಿಗೆ 1940 ರಲ್ಲಿ ಪಿಲಿಪೈನ್ಸ್ ನ ವಿಜ್ಞಾನಿ ಡಾ. R. F. ವಿಲಿಯಂಸ್ ಸಂಶೋದಿಸಿದರು ಇದು 1950 ರಿಂದ ವೆಜಿಟೇಬಲ್ ಆಯಿಲ್ ಮತ್ತು ಉಪ್ಪು ಐಯೋಡೈಸ್ ಮಾಡುವ ಮೂಲಕ ವಿಶ್ವದಾದ್ಯಂತ ಸಾರ ವರ್ದನೆ ಬಳಕೆ ಪ್ರಾರಂಭವಾದರೂ 60 ವಷ೯ದ ನಂತರ ಅಂದರೆ 2000 ನೇ ಇಸ...