Blog number 1072. ಪಡಿತರ ಅಕ್ಕಿ ಮತ್ತು ಗೋದಿ ಸಾರಯುಕ್ತ ಮಿಶ್ರಣ ಮಾಡುವ ಮೂಲಕ ಭಾರತ ದೇಶದ ಬಡತನ ರೇಖೆಗಿಂತ ಕೆಳಗಿನ ಬಡವರ ಮಕ್ಕಳಿಗೆ ಪೌಷ್ಟಿಕತೆ ವೃದ್ಧಿ ಮಾಡುವ ಪ್ರದಾನ ಮಂತ್ರಿ ಮೋದಿಯವರ ಘೋಷಣೆಯ ಸರಿಯಾದ ಮಾಹಿತಿ ಇಲ್ಲದೆ ಸಾರ್ವಜನಿಕರಲ್ಲಿ ಪಡಿತರ ಅಕ್ಕಿಯಲ್ಲಿರುವ ಬಿಳಿಪುಡಿ ಬಗ್ಗೆ ತಪ್ಪು ತಿಳುವಳಿಕೆ ಪ್ರಚಾರದಲ್ಲಿದೆ.
#ಪಡಿತರ_ಅಕ್ಕಿ_ಹುಳ_ಹಿಡಿಯ_ಬಾರದೆಂಬ_ರಾಸಾಯನಿಕವಾ?
#ಅದರಿಂದ_ಆರೋಗ್ಯಕ್ಕೆ_ಹಾನಿಯಾ ?
#ಇಂತಹ_ನೂರಾರು_ಪ್ರಶ್ನೆಗಳಿದೆ_ಆದರೆ_ಇದು_ಅಪೌಷ್ಟಿಕತೆಗಾಗಿ_ಕೇಂದ್ರ_ಸಕಾ೯ರ_
#ಸಾರವರ್ದನೆ_ಮಾಡುವ_ಮೈಕ್ರೋನ್ಯೂಟ್ರಿಯಂಟ್.
#ಪ್ರದಾನಮಂತ್ರಿ_74ನೇ_ಸ್ವಾತಂತ್ರೋತ್ಸವದಲ್ಲಿ_ಘೋಷಿಸಿದ_ಯೋಜನೆ.
ಇದರ ಮಧ್ಯ ರಾಷ್ಟ್ತ್ರೀಯ ಆರೋಗ್ಯ ಸರ್ವೆ ಪ್ರಕಾರ ದೇಶದ ಬಡತನ ರೇಖೆಯ ಕೆಳಗಿನ ಕುಟುಂಬಗಳ ಶೇಕಡಾ 78.7% ಮಕ್ಕಳು ದೇಶದ ಶೇಕಡಾ 75 ಜಿಲ್ಲೆಗಳಲ್ಲಿ ಪೌಷ್ಟಿಕ ಆಹಾರ ಕೊರತೆಯಿಂದ ಬಳಲುತ್ತಿದೆ ಎಂದಿರುವುದರಿಂದ ಪಡಿತರ ಅಕ್ಕಿ ಮತ್ತು ಗೋದಿಗೆ ಮೈಕ್ರೋನ್ಯೂಟ್ರಿಯಂಟ್ ಪುಡಿ 1 : I 00 ಅಂದರೆ ನೂರು ಕೇಜಿ ಗೋದಿ ಅಥವ ಅಕ್ಕಿಗೆ ಐರನ್ - ಪೊಲಿಕ್ ಆಸಿಡ್ - ಬಿ ಕಾಂಪ್ಲೆಕ್ಸ್ - ವಿಟಮಿನ್ A - ಜಿಂಕ್ ಬೆರೆಸುವ ಮೂಲಕ ಸಾರ ವರ್ದನೆ (Fortification) ಮಾಡುತ್ತಿದೆ.
ಆಹಾರ ಸಾರವರ್ದನೆ ಮೊದಲಿಗೆ 1940 ರಲ್ಲಿ ಪಿಲಿಪೈನ್ಸ್ ನ ವಿಜ್ಞಾನಿ ಡಾ. R. F. ವಿಲಿಯಂಸ್ ಸಂಶೋದಿಸಿದರು ಇದು 1950 ರಿಂದ ವೆಜಿಟೇಬಲ್ ಆಯಿಲ್ ಮತ್ತು ಉಪ್ಪು ಐಯೋಡೈಸ್ ಮಾಡುವ ಮೂಲಕ ವಿಶ್ವದಾದ್ಯಂತ ಸಾರ ವರ್ದನೆ ಬಳಕೆ ಪ್ರಾರಂಭವಾದರೂ 60 ವಷ೯ದ ನಂತರ ಅಂದರೆ 2000 ನೇ ಇಸವಿಯಿಂದ ಅಕ್ಕಿ ಗೋದಿಯಲ್ಲಿ ಸಾರ ವರ್ದನೆ ಪ್ರಾರಂಭ ಆಯಿತು.
2018ರಿಂದ ಭಾರತೀಯ FSSAI ಪುಡ್ ಸೇಫ್ಟಿ ಸ್ಟಾ೦ಡರ್ಡ್ ಶೇಕಡಾ 1% ಭಾರತ ದೇಶದ ಪಡಿತರ ವಿತರಣೆಯ ಅಕ್ಕಿ ಮತ್ತು ಗೋದಿಯಲ್ಲಿ ಸಾರವರ್ದನೆಯ ಮೈಕ್ರೋನ್ಯೂಟ್ರಿಂಟ್ ಬಳಸಲು ಕಾನೂನಾತ್ಮಕ ಅನುಮತಿ ನೀಡಿದೆ.
15- ಆಗಸ್ಟ್ -2021 ರಲ್ಲಿ ಪ್ರದಾನ ಮಂತ್ರಿ ಮೋದಿಯವರು ತಮ್ಮ ಭಾಷಣದಲ್ಲಿ ಭಾರತದ ಬಡತನ ರೇಖೆ ಕೆಳಗಿನ ಬಡವರಿಗಾಗಿ ಪೌಷ್ಟಿಕ ಮಿಶ್ರಣ ಮಾಡಿದ ಸಾರಯುಕ್ತ ಪಡಿತರ ಅಕ್ಕಿ ಮತ್ತು ಗೋದಿ ದೇಶದ 24 ರಾಜ್ಯದ 151 ಜಿಲ್ಲೆಗಳಲ್ಲಿ ನೀಡುವ ಘೋಷಣೆ ಮಾಡಿದರು ಮುಂದುವರಿದು 2024 ರಿಂದ ದೇಶದಾದ್ಯಂತ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸುವ ಯೋಜನೆ ತಿಳಿಸಿದ್ದಾರೆ.
ಒ0ದು ಕೇಜಿ ಮೈಕ್ರೋನ್ಯೂಟ್ರಿಯಂಟ್ ಬೆಲೆ ರೂ 200 ರಿಂದ 400 ಇದೆ.
ಪಡಿತರ ಅಕ್ಕಿ ವಿಪರೀತವಾಗಿ ನೀರಲ್ಲಿ ತೊಳೆದರೆ, ಪುನಃ ಪಾಲೀಶ್ ಮಾಡಿದರೆ ಸರ್ಕಾರದ ಸದುದ್ದೇಶದ ಮೈಕ್ರೋನ್ಯೂಟ್ರಿಯಂಟ್ ನಷ್ಟವಾಗಲಿದೆ.
ಈ ಮಾಹಿತಿ ಸರ್ಕಾರ ಸಾರ್ವಜನಿಕರಿಗೆ ತಲುಪಿಸುವ ಕೆಲಸವನ್ನು ಸರಿಯಾಗಿ ಮಾಡದಿದ್ದರಿಂದ ಪಡಿತರ ಅಕ್ಕಿ ಬಗ್ಗೆ ಸಾರ್ವಜನಿಕವಾಗಿ ತಪ್ಪು ಕಲ್ಪನೆ ಇದೆ.
Comments
Post a Comment