Blog number 1092. ಗೋರಕ್ ಪುರದ ನಾಥಪಂತದ ಯೋಗಿ ಆದಿತ್ಯನಾಥರ ಆಡಳಿತಕ್ಕೆ ಸೇರಿದ ಕುಂದಾಪುರ ತಾಲ್ಲೂಕಿನ ಕಮಲಶಿಲೆ ಸಮೀಪದ ಯಡಮೊಗೆಯ ಶ್ರೀ ಕ್ಷೇತ್ರ ಸಿದ್ದ ಪೀಠ ಕೊಡಚಾದ್ರಿ ಹಲವರಿ ಮಠದ ಶ್ರೀ ಫೀರ್ ಯೋಗಿ ಜಗದೀಶ್ ನಾಥಜೀ ನನ್ನ ಸಂಸ್ಥೆಗೆ ಬೇಟಿ ನೀಡಿದಾಗ
2017ರಲ್ಲಿ ನಾಸಿಕ್ ನಿ೦ದ ನಡೆದು ಬಂದ 630 ಸನ್ಯಾಸಿಗಳ ಬಾರ ಪಂತ್ ಯಾತ್ರೆ ಉಡುಪಿ ಜಿಲ್ಲೆಯ ಸಿದ್ದಾಪುರ ಸಮೀಪದ ಕಮಲಶಿಲೆ ಹತ್ತಿರದ 5000ಕ್ಕೂ ಹೆಚ್ಚು ವಷ೯ದ ಇತಿಹಾಸ ಪ್ರಸಿದ್ದ ಹಲವಾರಿ ಮಠಕ್ಕೆ ಶ್ರೀ ಜಗದೀಶ್ ಸ್ವಾಮಿಜಿಯವರನ್ನ ಮಠದ ಅಧಿಪತಿ ಆಗಿ ನಿಯಮಿಸಿದ್ದಾರೆ.
ಈ ಮಠದಲ್ಲಿ 34 ವಷ೯ ದೀಘ೯ ಅವದಿಗೆ ಸ್ವಾಮಿಗಳಾಗಿದ್ದ ಶ್ರೀ ಸೋಮನಾಥ ಪೀರ್ ಸ್ವಾಮಿಜಿ ಬಾರ ಪಂತ್ ಬರುವ 2 ವಷ೯ ಮೊದಲೇ ಇಹಲೋಕ ತ್ಯಜಿಸಿದ್ದರು.
ಉತ್ತರ ಪ್ರದೇಶದ ಹಾಲಿ ಮುಖ್ಯಮಂತ್ರಿ ಆದಿತ್ಯನಾಥರು ಗೋರಕ್ ಪುರದ ಸಂತರು ಇವರಿಗೆ ಮುಖ್ಯಸ್ಥರು.
ಹಿಂದಿನ ಸೋಮನಾಥ ಪೀರ್ ಸ್ವಾಮಿಗಳು ನನ್ನ ಗುರುಗಳು, ಇವತ್ತು ಅವರ ಕೃಪಕಟಾಕ್ಷ ನನ್ನ ಮೇಲಿದೆ ಅಂತಹ ಅನೇಕ ಆಗೋಚರ ಅನುಭವ ನನ್ನ ಮೇಲೆ ಆಗುತ್ತಿರುತ್ತದೆ.
ಜಗದೀಶ್ ಸ್ವಾಮಿಗಳು ಆದಿಚುಂಚನ ಗಿರಿ ಸ್ವಾಮಿಜಿಗಳ ಆಮಂತ್ರಣದ ಮೇರೆಗೆ ಆದಿಚುಂಚನಗಿರಿಯ ಕಾಲ ಬೈರವೇಶ್ವರ ಸನ್ನಿದಿಗೆ ಹೋಗುವ ಮಾಗ೯ದಲ್ಲಿ ನಮ್ಮ ನೂತನ ಲಾಡ್ಜ್ ಕಚೇರಿಗೆ ಆಗಮಿಸಿದ್ದರು. ಸೋಮನಾಥ ಪೀರ್ ಸ್ವಾಮಿಗಳು ಇದ್ದಾಗ ಕುಂದಾಪುರದಿಂದ ಬರುವಾಗ ಒಂದು ರಾತ್ರಿ ನಾನು ಹಲವಾರಿ ಮಠಕ್ಕೆ ಹೋದಾಗ ಇದೇ ಜಗದೀಶ್ ಸ್ವಾಮಿಜಿ (ಆಗ ಪೀಠಾದೀಶರಾಗಿರಲಿಲ್ಲ) ಅಲ್ಲಿಗೆ ಬಂದು ತಂಗಿದ್ದರು, ಅವರೇ ನಮಗೆ ಗೋದಿ ರೊಟ್ಟಿ ಆಲೂ ಪಲ್ಯ ಮಾಡಿ ಬಡಿಸಿದ್ದರು ಅದನ್ನ ನೆನಪಿಸಿದೆ ಅವರಿಗೂ ನೆನಪಾಯಿತು.
ಹಿರಿಯ ಸೋಮ ನಾಥಪೀರ್ ಸ್ವಾಮಿಜಿ 2009ರ ಜಾತ್ರಾ ಮಹೋತ್ಸವದ ರಥೋತ್ಸವ ಉದ್ಘಾಟಿಸಿದ್ದರು ಈ ಸಂದಭ೯ದಲ್ಲಿ ಅವರ ಗಮನಕ್ಕೂ ತರಲಾಯಿತು.
ಪ್ರತಿ 12 ವಷ೯ಕ್ಕೆ ಮಹಾರಾಷ್ಟ್ರದ ನಾಸಿಕ್ ನಿಂದ ಕುಂಭಮೇಳದ ಮರುದಿನ ಪ್ರಾರಂಭಿಸಿ ಪಶ್ಚಿಮ ಘಟ್ಟದ ಮಧ್ಯದಲ್ಲಿ ನಡೆದು ಬರುವ ನೂರಾರು ಸಾದು ಸಂತರ ಬಾರ ಪಂತ್ ಯಾತ್ರೆ ಸಾಗರದ ಗಣಪತಿ ದೇವಸ್ಥಾನದಲ್ಲಿ ತಂಗಿ ನಂತರ ಆಲಗೇರಿ ಮಂಡ್ರಿ, ಬಿದನೂರು ನಗರ, ಹಲವಾರಿ ಮಠ ಮುಖಾಂತರ ಮಂಗಳೂರಿನ ಕದ್ರಿ ಮಠದಲ್ಲಿ ಸಮಾಪ್ತಿಯಾಗುತ್ತದೆ ಸುಮಾರು 6 ತಿಂಗಳ ಕಾಲ ಪಾತ್ರ ದೇವತೆಯನ್ನ ತಲೆ ಮೇಲೆ ಹೊತ್ತು ತರುತ್ತಾರೆ, ಇದರ ಬಗ್ಗೆ ಕನ್ನಡದ ಪ್ರಖ್ಯಾತ ಸಾಹಿತಿ ರಹಮತ್ ತರೀಕೆರೆ ಒಂದು ಸಂಶೋದನ ಗ್ರ೦ಥವೇ ತಂದಿದ್ದಾರೆ.
ನೂತನ ಸ್ವಾಮಿಜಿಗಳ ಆಗಮನ ಆಶ್ರೀವಾದದಿಂದ ನನಗೆ ಸಂತೃಪ್ತಿಯ ಬಾವನೆ ಪ್ರಾಪ್ತಿ ಆಗಿದೆ.
Comments
Post a Comment