Skip to main content

Blog number 1057. ನನ್ನ ಮಗಳ ಮದುವೆಯಲ್ಲಿ ಭಾಗವಹಿಸಿ ಶುಭ ಹಾರೈಸಿ ಪೇಸ್ ಬುಕ್ ನಲ್ಲಿ ದಾಖಲಿಸಿದ ಗೆಳೆಯ ನಾಗೇಂದ್ರ ಸಾಗರ್ ಲೇಖನ ಸದಾ ನೆನಪಲ್ಲಿ ಉಳಿಯುವಂತದ್ದು.

ನಿನ್ನೆ ನನ್ನ ಮಗಳ ವಿವಾಹ ಗುರು- ಹಿರಿಯರ ಆಶ್ರೀವಾದ ಅನುಗ್ರಹದಿಂದ ಸಾಂಗವಾಗಿ ನೆರವೇರಿತು, ತಂದೆ ಆದ ನನ್ನ ಕತ೯ವ್ಯ ಪೂರೈಸಿದೆ.
 ನನಗೆ ಯಾರನ್ನೂ ವೈಯಕ್ತಿಕವಾಗಿ ಆಹ್ವಾನ ಮಾಡಲು ಆಗಲಿಲ್ಲ ಕೆಲವರಿಗೆ ಅಂಚೆಯಲ್ಲಿ ಕಳಿಸಿದೆ, ಹೆಚ್ಚಿನವರಿಗೆ ಮೆಸೆoಜರ್, ವಾಟ್ಸ್ಅಪ್ ಮಾಡಿದೆ, ಇಷ್ಟು ಜನ ಬರುತ್ತಾರೆ ಅಂತ ನಿರೀಕ್ಷೆಯೇ ಮಾಡಿರಲಿಲ್ಲ ಬಂದು ಶುಭ ಹಾರೈಸಿದವರಿಗೆ ಹೆಚ್ಚಿನ ಜನರಿಗೆ ಕೃತಜ್ಞತೆ ಸಲ್ಲಿಸಿದರೂ ಬಹಳಷ್ಟು ಜನರಿಗೆ ಸಲ್ಲಿಸಲು ಆಗಲಿಲ್ಲ.
 ಅವರೆಲ್ಲರಿಗೂ ಪುನಃ ಪೇಸ್ ಬುಕ್ ಮುಖಾ೦ತರವೇ ಕೃತಜ್ಞತೆ ಹೇಳಬೇಕಂತ ಇರುವಾಗ ಜೀವದ ಮಿತ್ರ ಪ್ರಗತಿ ಪರ ಕೃಷಿಕ, ಜೇನುತಜ್ಞ ಪತ್ರಕತ೯ ನಾಗೇಂದ್ರ ಸಾಗರ್ ಮಗಳನ್ನ ಅಳಿಯನ ಜೊತೆ ಕಳಿಸುವ ಸಂದಭ೯ದಲ್ಲಿ ಇದ್ದವರು ಅವರೇ ತೆಗೆದ ನನ್ನ ಕುಟುಂಬದ ಪೋಟೋ(ಪೇಸ್ ಬುಕ್ನಲ್ಲಿ ಪ್ರಕಟವಾದ ನನ್ನ ಕುಟುಂಬದ ಮೊದಲ ಪೋಟೋ ಕೂಡ)  ಮತ್ತು ಬರೆದ ಲೇಖನ ನಿನ್ನೆಯ ಎಲ್ಲಾ ಶುಭ ಸಮಾರಂಭದ ಸಾರOಶವಾಗಿತ್ತು ಮತ್ತು ಸಮಯೋಜಿತವಾಗಿದೆ,ನನ್ನ ಮನ ಮುಟ್ಟಿತ್ತು ಹಾಗಾಗಿ ಅದನ್ನ ಪುನಃಶೇರ್ ಮಾಡಿದ್ದೇನೆ.
  ಎಲ್ಲರಿಗೂ ಕೃತಜ್ಞತೆಗಳು, ನಿಮ್ಮ ಶುಭ ಹಾರೈಕೆಗಳು ಸದಾ ನಮ್ಮನ್ನ ಸರಿ ಮಾಗ೯ದಲ್ಲಿ ಮುನ್ನಡಿಸಲಿ ಎಂದು ಪ್ರಾಥಿ೯ಸುತ್ತೇನೆ.
ದನ್ಯವಾದಗಳೊಂದಿಗೆ
 ಇತಿ ತಮ್ಮ
ಕೆ.ಅರುಣ್ ಪ್ರಸಾದ್.
11 ನವೆಂಬರ್ 2019
ಹೊಂಬುಜ ರೆಸಿಡೆನ್ಸಿ
ಆನಂದಪುರಂ.
www.hombujalodge.com

With the blessings of God, my daughter’s wedding was solemnised . I could not invite everyone personally due to time constraints. I sent invitation via post,WhatsApp, messenger. I was not expecting that everyone will be able to attend.  It was a pleasant surprise for me to see that many of them graced their presence and blessed the newly weds. I could not thank all of them personally.  As I was thinking of thanking all my friends through Facebook, my dear friend Nagendra Sagar posted an article on this. It touched my heart, I am sharing the article. Thank you.. may you people’s well wishes lead us on the right path..  thank you
K.Arun prasad
Ex Zilla Panchayath member.
ANANDAPURAM
www.hombujalodge.com

ಆನಂದಪುರದ ಅರುಣ್ ಪ್ರಸಾದ್ ನನ್ನ ಅಂತರಂಗದ ಮಿತ್ರರಲ್ಲಿ ಒಬ್ಬರು.. ಶಿವಮೊಗ್ಗ ಜಿಲ್ಲಾ ಪಂಚಾಯ್ತಿಯ ಮಾಜಿ ಸದಸ್ಯರು. ಇಂದು ಅವರ ಮಗಳ ಮದುವೆಯಿತ್ತು. ಎನಿತೇ ಕೆಲಸವಿದ್ದರೂ ಹೋಗಲೇ ಬೇಕು ಎಂದು ಕೊಂಡಿದ್ದೆ.. ಹಾಗಾಗಿ ಇಂದು ನೀಚಡಿಯಲ್ಲಿ ಹಮ್ಮಿಕೊಂಡಿದ್ದ ಜೇನುಕೃಷಿ ಕಾರ್ಯಾಗಾರ ನಡೆಸಿಕೊಟ್ಟು ಅಳುಕುತ್ತಲೇ ಅವರದೇ ಮಾಂಗಲ್ಯ ಮಂದಿರದಲ್ಲಿ ಕಾಲಿರಿಸಿದಾಗ ಹೊತ್ತು ಮೂರಕ್ಕೆ ಹತ್ತಿರ ಬಂದಿತ್ತು.. 

ವಧೂವರರು ಫೋಟೋ ಶೂಟೌಟಿನಲ್ಲಿದ್ದರೆ ಮುಂದಿನ ಸಾಲಿನಲ್ಲಿ ಕುಳಿತಿದ್ದ ಗೆಳೆಯ ಅರುಣ್ ಪ್ರಸಾದ್ ಆತ್ಮೀಯವಾಗಿ ಬರ ಮಾಡಿಕೊಂಡರು. ವಿವಾಹ ವೃತ್ತಾಂತ ಹೇಳುತ್ತಲೇ ಬಂಧು ಮಿತ್ರರ ಪರಿಚಯವನ್ನು ಎಂದಿನ ಅದೇ ಆತ್ಮೀಯತೆಯಿಂದ ಮಾಡಿಕೊಟ್ಟರು.. ಅವರಲ್ಲಿನ ಈ ವಿಶೇಷ ಗುಣವೇ ನಾವುಗಳು ಆತ್ಮೀಯರಾಗಲು ಕಾರಣವಾದದ್ದು.. 

ಸುಮಾರು ಇಪ್ಪತ್ತೈದು ವರ್ಷಗಳ ಸ್ನೇಹ ನಮ್ಮದು. ರಾಜಕಾರಣ, ಇಸಂಗಳ ಯಾವುದೇ ಲೆಕ್ಕಾಚಾರಗಳನ್ನು ಮೀರಿದ್ದು.. ಜೀವನದಲ್ಲಿ ಜೊತೆ ಜೊತೆಯಾಗಿಯೇ ಹಲವು ಏರಿಳಿತಗಳನ್ನು ಕಂಡವರು. 

ನನಗಿನ್ನೂ ನೆನಪಿದೆ. ಆಗ ಇವರು ಅದೀಗಷ್ಟೆ ಜಿಲ್ಲಾ ಪಂಚಾಯ್ತಿಯ ಸದಸ್ಯರಾಗಿದ್ದರು. ವೈಯಕ್ತಿಕ ಕೆಲಸಕ್ಕಾಗಿ ಯಡೇಹಳ್ಳಿಯಲ್ಲಿರುವ ಇವರ ಮನೆಗೆ ಹೋದಾಗ ಇವರ ಮಗಳು ಮುಗ್ಧ ನಡೆನುಡಿಗಳಿಂದ ಮೋಡಿ ಮಾಡುತ್ತಿದ್ದ ಪುಟ್ಟ ಬಾಲೆ. ಈಗ ಹಸೆಮಣೆ ಏರಿದ್ದಾಳೆ. 

ಅದನ್ನೇ ಮಾತಾಡಿದೆವು. ಜೀವನದ ಜಂಜಾಟಗಳಲ್ಲಿ, ಬದುಕಿನ ಭರಾಟೆಯಲ್ಲಿ ದಿನಗಳು ಸಾಗಿದ್ದೇ ಗೊತ್ತಾಗುವುದಿಲ್ಲ. ಮಕ್ಕಳು ನಮ್ಮಷ್ಟೆತ್ತರಕ್ಕೆ ಬೆಳೆದು ಹೀಗೆ ಹೊಸ ಸಂಸಾರ ಕಟ್ಟಿಕೊಂಡ ಹೊತ್ತಿನಲ್ಲಿ ಹೊರಳಿ ನೋಡಿದಾಗ ಅರೇ ಇದು ನಾವೇ ಹಾಸಿ ಬಂದ ಮಾರ್ಗವೇ ಎಂದು ಅಚ್ಚರಿ ಆಗುತ್ತದೆ. ಮಕ್ಕಳು ಎಷ್ಟು ಬೇಗ ಬೆಳೆದರಲ್ಲ ಅನ್ನುತ್ತಲೇ ಹೊಸ ಬದುಕಿಗೆ ತೆರೆದುಕೊಳ್ಳುತ್ತೇವೆ.. 

ಮಧ್ಯಾಹ್ನದಿಂದ ಹಿಡಿದು ಅರುಣ್ ಪ್ರಸಾದ್ ಮಗಳನ್ನು ಹರಸಿ ಬಾಳ ಸಂಗಾತಿಯೊಂದಿಗೆ ಕಳಿಸಿ ಕೊಡುವಾಗಿನ ಭಾವುಕ ಕ್ಷಣಗಳವರೆಗೆ ನಾನು ಅವರೊಂದಿಗಿದ್ದೆ. ಜೀವನದ ಇಂಥವೆಲ್ಲ ಕ್ಷಣಗಳನ್ನು ಸಾಮಾನ್ಯದ ಆಗು ಹೋಗುಗಳಂತೇ ಸ್ವೀಕರಿಸಬೇಕು ಎಂಬ ಎಣಿಕೆಯಿದ್ದರೂ ಇಂತಹ ಸಂದರ್ಭದಲ್ಲಿ ಮನವು ತನ್ನಿಂದ ತಾನೇ ಭಾವುಕವಾಗುತ್ತದೆ. ಆರ್ದ್ರಗೊಳ್ಳುತ್ತದೆ. 

ಮಗಳ ಮೇಲೆ ಒಬ್ಬ ತಂದೆಯಲ್ಲಿ ಇರುವ ಅದೇ ಅಂತಃಕರಣದ ಪ್ರೀತಿಯನ್ನು ಅರುಣ ಪ್ರಸಾದರ ಕಣ್ಣೊಳಗೆ ಕಂಡೆ. ಮತ್ತು ಮುಂದಿನದು ನನ್ನ ಪಾಳಿಯಲ್ಲವೇ ಎಂದುಕೊಳ್ಳುತ್ತ ಕ್ಷಣಕಾಲ ತಲ್ಲಣಗೊಂಡೆ. 

ಮಗಳನ್ನು ಬೀಳ್ಕೊಡುವ ಮುನ್ನ ಅವರ ಮನೆಯಲ್ಲಿ ಅವರ ಮಗ ಮಾಡಿಕೊಟ್ಟ ಕಾಫಿ ಗುಟುಕರಿಸುತ್ತ ಇರುವಾಗ ಬಾಲವಾಡಿಸುತ್ತ ಬಂದ ನಾಯಿಯನ್ನು ತೋರಿಸಿ ಇದು ಮಗಳ ಮುದ್ದಿನ ನಾಯಿ. ಇನ್ನು ಅವಳಿಲ್ಲದ ದಿನಗಳಲ್ಲಿ ಎಷ್ಟು ನೋಯುತ್ತದೇನೋ ಎಂದರು.. ಅಂಗಳದಲ್ಲಿನ ಹೂಗಿಡಗಳನ್ನು ತೋರಿ ಮಗಳ ಆರೈಕೆಯ ತೋಟವಿದು ಎಂದಿದ್ದರು. 

ನಮ್ಮ ಬಾಳ ಪಯಣದಲ್ಲಿ ಅನೂಹ್ಯವಾದ ಬಂಧಕ್ಕೆ ಕಾರಣವಾದ ಮಕ್ಕಳು ಮುಂದೆ ತಮ್ಮ ಸ್ವಂತ ಬದುಕನ್ನು ಕಟ್ಟಿ ಕೊಳ್ಳುವ ಮಹತ್ವದ ಕಾಲಘಟ್ಟವಿದು. ಒಂದು ಕಡೆ ಹೇಳಿಕೊಳ್ಳಲಾಗದ ನೋವು. ಮತ್ತೊಂದೆಡೆ ಅನಿವಾರ್ಯತೆ. ತಿರುಗುತ್ತಲೇ ಇರುವ ಕಾಲಚಕ್ರ. ಪಯಣ ನಿಲ್ಲುವುದಿಲ್ಲ.. 

ಅರುಣ್ ಪ್ರಸಾದ್, ಬಹು ಕಾಲದ ನಂತರ ನಿಮ್ಮೊಂದಿಗೆ ಮತ್ತೊಮ್ಮೆ ಆತ್ಮೀಯ ಕ್ಷಣಗಳನ್ನು ಕಳೆದಿರುವೆ.. ದಯವಿಟ್ಟು ಕ್ಷಮಿಸಿ, ನಿಮ್ಮ ಮಗಳ ಮದುವೆಯ ಸಂದರ್ಭದಲ್ಲಿ ಕೆಲವು ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳ ಬಹುದಿತ್ತು. ತಪ್ಪಿನ ನೋವು ನನ್ನಲ್ಲಿದೆ. ನೂತನ ವಧೂವರರಿಗೆ ಹೃದಯಪೂರ್ವಕ ಹಾರೈಕೆಗಳು. ಮತ್ತು ನಮ್ಮ ಸ್ನೇಹಯಾನ ಹೀಗೆಯೇ ಮುಂದುವರೆಯುತ್ತಲಿರಲಿ ಎನ್ನುವ ಆಶಯ ನನ್ನದು.

✍️ ನಾಗೇಂದ್ರ ಸಾಗರ್...

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ