Blog number 1046. ಪ್ರತಿಷ್ಟಿತ ಅಂತರಾಷ್ಟ್ರೀಯ ನಗರ ಬೆಂಗಳೂರು ಸ್ವಚ್ಚ ಬಾರತ ಯೋಜನೆ ಹಳ್ಳ ಹಿಡಿಸಿದೆ ಆದರೆ ಈ ನಗರಕ್ಕೆ ಪದೇ ಪದೇ ಕ್ಲೀನ್ ಸಿಟಿ ಪ್ರಶಸ್ತಿಯ ಗರಿಯೂ ಸಿಗುತ್ತಿದೆ ಹೇಗೆ?
#ದೇಶದ_ಸುಂದರ_ನಗರಿಯ_ಮುಖದಲ್ಲೇ_ಇಷ್ಟು_ಕೊಳಕು
#ರಾಜಕೀಯ_ಪಕ್ಷಗಳು_ಚಿತ್ರನಟರು_ಹೋರಾಟಗಾರರು_ಪತ್ರಿಕೆ_ಟೀವಿ_ಎಲ್ಲಾ_ಇರುವುದು_ಈ_ನಗರದಲ್ಲೇ
#ಸ್ಟಚ್ಚ_ಭಾರತ_ಅಭಿಯಾನಕ್ಕೆ_ಕವಡೆ_ಕಿಮ್ಮತ್ತು_ನೀಡದ_ಬೆಂಗಳೂರು
#ವಷ೯_ವರ್ಷ_ದೇಶದ_ಸ್ವಚ್ಚ_ನಗರಿ_ಎಂಬ_ಪ್ರಶಸ್ತಿ_ಬೇರೆ
#ಒಮ್ಮೆ_ಕೆಂಪೆಗೌಡ_ವೃತ್ತದ_ಈ_ಸ್ಕೈವಾಕ್_ಹತ್ತಿ_ನೋಡಿ
#ಸಾಕ್ಷಾತ್_ನರಕ_ದರ್ಶನ_ಥೂ_ಅಂತ_ಉಗಿಯುತ್ತೀರಾ_ಯಾರಿಗೆ?
ನಿನ್ನೆ ಕನ್ನಡ ರಾಜ್ಯೋತ್ಸವ ವಿಜೃಂಬಣೆಯಿಂದ ಆಚರಿಸಿದ್ದೇವೆ ಎಲ್ಲೆಲ್ಲೂ ಬೆಂಗಳೂರಿನ ಸೊಬಗು ಸಮೃದ್ಧಿಯ ಜಾಹಿರಾತುಗಳು ಏಕೆಂದರೆ ಕನ್ನಡಿಗರ ಕರ್ನಾಟಕದ ರಾಜಧಾನಿ ಈ ಬೆಂಗಳೂರು.
ನಿನ್ನೆ ಬೆಂಗಳೂರಿನ ಸುಂದರವಾದ ಮುಖ ಎನ್ನಿಸಿಕೊಂಡಿರುವ ಕೆಂಪೆಗೌಡ ವೃತ್ತದ ಹತ್ತಿರ ಪುರ ದೇವತೆ ಅಣ್ಣಮ್ಮ ದೇವಿಗೆ ವಂದಿಸಿ, ರಾಮಕೃಷ್ಣ ಹೋಟೆಲ್ ಲ್ಲಿ ಉಪಹಾರ ಸೇವಿಸಿ ಬಿವಿಕೆ ಅಯ್ಯಂಗಾರ್ ರಸ್ತೆಗೆ ಹೋಗಲು ವೃತ್ತದಲ್ಲಿರುವ ಸ್ಕೈವಾಕ್ ಹತ್ತಿದಾಗಲೇ ಗೊತ್ತಾಗಿದ್ದು ಬೆಂಗಳೂರಿನ ಮುಖ!?
ಪಾದಚಾರಿಗಳಿಗೆ ಸೀಮಿತವಾದ ಇಂತಹ ಗಲೀಜು ಸ್ಕೈವಾಕ್ ಬೇಕಾ? ಮುಂದಿನ ದಿನದಲ್ಲಿ ವೃದ್ದ ಪಾದಾಚಾರಿಗಳಿಗೆ ಲಿಫ್ಟ್ ಆಳವಡಿಸುವ ದುಬಾರಿ ಯೋಜನೆ ಕೂಡ ಬಿಬಿಎಂಪಿ ಮಾಡಿದೆಯಂತೆ.
ಅಂಡರ್ ಗ್ರೌಂಡ್ ಪಾದಚಾರಿ ಮಾರ್ಗಗಳು ಇನ್ನು ಹೇಗೆ ಇದೆಯೋ ಗೊತ್ತಿಲ್ಲ.
ಇದರ ನಿರ್ಮಾಣ ನಂತರ ಅನೇಕ ಬಾರಿ ನವೀಕರಣ ಆಗಿ ಇತ್ತೀಚೆಗೆ ಬಿಬಿಎಂಪಿ ಕೇಂದ್ರ ಸರಕಾರದ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಪುನಃ ನವೀನ ಟೈಲ್ಸ್ ಎಲ್ಲಾ ಅಳವಡಿಸಿದೆ ಆದರೆ ಇಲ್ಲಿಯವರೆಗೆ ಪೂರಕೆ ಮಾತ್ರ ತಾಗಿಸಿಲ್ಲ!
ಟೈಲ್ಸ್ ನ ಒಳಗಿಂದ ಗಿಡಗಂಟಿ ಬೆಳೆದಿದೆ, ಸ್ಕೈವಾಕ್ ಮೇಲೆ ಏನಿದೆ ಏನಿಲ್ಲ? ಥೂ... ನರಕ, ಬೆಂಗಳೂರಿನ ಮುಖವೇ ಹೀಗಿದ್ದರೆ ಇನ್ನು ಬೆಂಗಳೂರಿನ ಕೈಯಿ ಕಾಲು?.
ರಾಜ್ಯದ ರಾಜಧಾನಿ ದೇಶದ ಎರಡನೆ ಅತಿ ಹೆಚ್ಚು GST ವಸೂಲಿ ಮಾಡಿ ಕೇಂದ್ರ ಸರ್ಕಾರಕ್ಕೆ ನೀಡುವ ರಾಜ್ಯ, ಅಂತರಾಷ್ಟ್ರೀಯ ಐಟಿ ಹಬ್, ಗ್ರೀನ್ ಸಿಟಿ, ಸ್ಟಚ್ಚ ನಗರ ಎಂದೆಲ್ಲ ಪದೇ ಪದೇ ಲಿಸ್ಟ್ ಆಗುವ ಪ್ರಶಸ್ತಿ ಪಡೆಯುವ ಬೆಂಗಳೂರು ಇದೇನಾ?.
Comments
Post a Comment