Blog number 1047. ಕೆಳದಿ ರಾಜ ವೆಂಕಟಪ್ಪ ನಾಯಕರು ಮತ್ತು ರಂಗೋಲಿ ಪ್ರವೀಣೆ ಚಂಪಕಾಳ ದುರಂತ ಪ್ರೇಮದ ಸ್ಮಾರಕ ತಾಜ್ ಮಹಲ್ ಗೂ ಮೊದಲೇ ನಿರ್ಮಿಸಿದ ಚಂಪಕ ಸರಸ್ಸು ನಾಲ್ಕುನೂರನೆ ವರ್ಷಾಚಾರಣೆಯ ಹೊಸ್ತಿಲಲ್ಲಿ ಸಂಸದರು ಶಾಸಕರಿಂದ ಈ ಸ್ಮಾರಕ ಪ್ರವಾಸಿ ತಾಣ ಮಾಡುವ ಶಪಥ ಅಭಿನಂದನೀಯ.
#ಅಭಿನಂದನೆಗಳು.
#ನಿರ್ಮಾಣವಾಗಿ_ನಾಲ್ಕು_ನೂರು_ವರ್ಷಕ್ಕೆ_ಜನರ_ಗಮನ_ಸೆಳೆಯಿತು
#ಡಿಸೆಂಬರ್_24ಕ್ಕೆ_2024ಕ್ಕೆ_ನಾಲ್ಕುನೂರನೇ_ವಷಾ೯ಚಾರಣೆ
#ಉದ್ದೇಶ_ಪೂರ್ವಕವಾಗಿ_ಮುಚ್ಚಲ್ಪಟ್ಟ_ಕೆಳದಿ_ರಾಜ_ವೆಂಕಟಪ್ಪ_ನಾಯಕರು_ನಿರ್ಮಿಸಿದ_ಸ್ಮಾರಕ
#ನಾನು_ಬರೆದು_ಪ್ರಕಟಿಸಿದ_ಕೆಳದಿ_ಸಾಮ್ರಾಜ್ಯ_ಇತಿಹಾಸ_ಮರೆತಿರುವ
#ಬೆಸ್ತರ_ರಾಣಿ_ಚಂಪಕಾ_ಕಾದಂಬರಿ_ಸ್ಮಾರಕದ_ಅಭಿವೃದ್ದಿ_ಸಂಶೋದನೆಗೆ_ಕಾರಣವಾಗುತ್ತಿರುವುದು_ಆಶ್ಚಯ೯
ಒಂದು ಪುಸ್ತಕ ಇಷ್ಟೆಲ್ಲ ಪರಿಣಾಮ ಬೀರಬಲ್ಲದಾ? ಗೊತ್ತಿಲ್ಲ, ಸರ್ಕಾರ ಜನರ ನಿರ್ಲಕ್ಷ್ಯದಿಂದ ಆತ್ಮಹತ್ಯಾ ತಾಣ, ಬೂತ ಪ್ರೇತ ಇದೆ ಎಂಬ ಭಯ ಹುಟ್ಟಿಸಿದ್ದ, ಚಂಪಕಾ ಎಂಬ ಸೂಳೆಗಾಗಿ ರಾಜ ನಿರ್ಮಿಸಿದ್ದಾರೆ ಎಂಬ ಜನರ ಬಾಯಲ್ಲಿ ಬರುತ್ತಿದ್ದ ಚಂಪಕಾ ಸರಸ್ಸು ನಿಮಿ೯ಸಿದ್ದಾದರು ಏಕೆ?.
ನಾನು ಸ್ಥಳಿಯ ಜನಪದದಲ್ಲಿ ಇದ್ದ ಕಥೆಯ ಎಳೆ ಹಿಡಿದು ನಂತರ ಈಗ ಅಳಿಸಿ ಹೋದ ಲಾವಣಿಯಲ್ಲಿ ಕೇಳಿ, ಇಟಲಿ ಪ್ರವಾಸಿ ಡೊಲ್ಲಾ ವಲ್ಲೆ 1624 ರ ನವೆಂಬರ್ 8ಕ್ಕೆ ಕೆಳದಿ ರಾಜ ವೆಂಕಟಪ್ಪರ ಬೇಟಿ ಇಕ್ಕೇರಿಯಲ್ಲಿ ಮಾಡಿದಾಗ ನಮೂದಿಸಿದ ಪತ್ರ, ಇತಿಹಾಸಕಾರ ಹೆಚ್.ಎಲ್.ನಾಗೇಗೌಡರ ಸಂಪಾದಕತ್ವದ ಪ್ರವಾಸಿ ಕಂಡ ಇಂಡಿಯಾ ಮತ್ತು ಗೆಜೆಟಿಯರ್ ಮೂಲಗಳನ್ನು ಆದರಿಸಿ ಈ ಪುಸ್ತಕ ಬರೆದಿದ್ದೆ.
ಇದು ಇತಿಹಾಸವನ್ನು ಆಧರಿಸಿದ ಕಾಲ್ಪನಿಕ ಕಾದಂಬರಿ ಆದರೆ ಕಣ್ಣೆದುರು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದ ಸುಂದರ ಸ್ಮಾರಕ ಅದನ್ನು ಸ್ವಾತಂತ್ರ್ಯ ಬಂದರೂ ಪುರಾತತ್ವ ಇಲಾಖೆಗೆ ಸೇರಿಲ್ಲ !?.
ಪುರಾತತ್ವ ಇಲಾಖೆಗೆ ಸೇರಿಸಿ ಎಂಬ ದಾವೆ ಉಚ್ಚ ನ್ಯಾಯಾಲಯದಲ್ಲಿದೆ.
ಈ ಪುಸ್ತಕವನ್ನು ನಾಲ್ಕು ವ್ಯಕ್ತಿ ಮತ್ತು ಸಂಸ್ಥೆಗೆ ಅಪ೯ಣೆ ಮಾಡಿದ್ದು ಪುಸ್ತಕದ ಮೂರನೆ ಪುಟದಲ್ಲಿ ಅಚ್ಚಿಸಿದ್ದೇನೆ
* ಕೆಳದಿ ಸಮಗ್ರ ಅಧ್ಯಯನ ಎಂಬ ಸಂಶೋದನಾ ಗ್ರಂಥ ಪ್ರಕಟಿಸಿರುವ ಶ್ರೀಮದ್ ನಿರಂಜನ ಜಗದ್ಗುರು ಶ್ರೀಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮಿಗಳಿಗೆ
* ಆನಂದಪುರಂ ಇತಿಹಾಸ ಪುಸ್ತಕ ತನ್ನ ಬೆಳ್ಳಿಹಬ್ಬಕ್ಕೆ ಪ್ರಕಟಿಸಿದ ಆನಂದಪುರಂನ ಪ್ರತಿಷ್ಟಿತ ಕನ್ನಡ ಸಂಘಕ್ಕೆ
* ಚಂಪಕ ಸರಸ್ಸು ಪ್ರತಿ ವರ್ಷ ಸ್ಟಚ್ಚಗೊಳಿಸಿ ಅಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಿರಂತರ ನಡೆಸಿಕೊಂಡು ಬರುತ್ತಿರುವ ಆನಂದಪುರಂ ಇತಿಹಾಸ ಪರಂಪರೆ ಉಳಿಸಿ ಅಭಿಯಾನ ಟ್ರಸ್ಟ್ ಗೆ
ಮತ್ತು ನಾಲ್ಕನೆ ಪುಟದಲ್ಲಿ ನನ್ನ ಆಶಯ ಕೂಡ ದಾಖಲಿಸಿದ್ದೇನೆ ಅದೇನೆಂದರೆ... ಖ್ಯಾತ ಚಲನಚಿತ್ರ ನಟ ಯಶ್ ರಿಂದ ಪ್ರಾಥಮಿಕ ಅಭಿವೃದ್ಧಿ ಕೆಲಸವಾಯಿತು ಈಗ ಶಿವಮೊಗ್ಗ ಜಿಲ್ಲಾ ಸಂಸದರು ಸಾಗರ ವಿಧಾನಸಭಾ ಸದಸ್ಯರು ಹಂತ ಹಂತವಾಗಿ ಈ ಸ್ಮಾರಕದ ಅಭಿವೃದ್ದಿ ಮಾಡುವ ಭರವಸೆ ನೀಡಿದ್ದಾರೆ ಮತ್ತು ಮುರುಘ ರಾಜೇಂದ್ರ ಸ್ವಾಮಿಗಳು ಅವರನ್ನೆಲ್ಲ ಹುರಿದುಂಬಿಸಿದ್ದಾರೆ ಇದೇ ರೀತಿ ಎಲ್ಲರೂ ಸೇರಿ ನಾಲ್ಕುನೂರನೇ ವರ್ಷಾಚಾರಣೆಯೂ ನಡೆಸಲಿ ಎಂದು ಆಶಿಸುತ್ತೇನೆ.
ಇದರಿಂದ ತಾಜ್ ಮಹಲಿಗಿಂತ ಮೊದಲೇ ನಿರ್ಮಾಣವಾದ ಈ ಪ್ರೇಮ ಸೌಧ ಮತ್ತು ಅದಕ್ಕೆ ಕಾರಣವಾಗಿರುವ ಚಂಪಕಾಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸುತ್ತೇನೆ.
ಸ್ಥಳಿಯ ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳು ಚಂಪಕ ಸರಸ್ಸುವಿನಲ್ಲಿ ಹೆಚ್ಚು ಹೆಚ್ಚು ಕಾಯ೯ಕ್ರಮ ನಡೆಸುವುದರಿಂದ ಈ ಸ್ಮಾರಕ ಹೆಚ್ಚು ಜನಪ್ರಿಯವೂ ಆಗಿ ಜನರ ಗಮನವೂ ಸೆಳೆಯುತ್ತದೆ.
ಇಡೀ ಕಾರ್ಯಕ್ರಮವನ್ನು ಪ್ರಜಾವಾಣಿ ಸ್ಥಳಿಯ ವರದಿಗಾರ ಮಲ್ಲಿಕಾರ್ಜುನ್ ಅತ್ಯುತ್ತಮವಾಗಿ ವರದಿ ಮಾಡಿ YouTube ನಲ್ಲಿ ಪ್ರಕಟಿಸಿದ್ದಾರೆ.
Comments
Post a Comment