Skip to main content

Blog number 1096. ಖ್ಯಾತ ಪತ್ರಕರ್ತ ಸಾಹಿತಿ ಅರುಣ್ ಕುಮಾರ್ ಹಬ್ಬು ನನ್ನ ಕಾದಂಬರಿ ಕೆಳದಿ ಸಾಮ್ರಾಜ್ಯ ಇತಿಹಾಸ ಮರೆತಿರುವ ಬೆಸ್ತರ ರಾಣಿ ಚಂಪಕಾ ಓದಿ ವಿಮರ್ಷೆ ಮಾಡಿದ್ದಾರೆ.

ಕಾರವಾರ ಮತ್ತು ಹುಬ್ಬಳ್ಳಿ ಕೇಂದ್ರಗಳಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿರುವ ಅರುಣ್ ಕುಮಾರ್ ಹಬ್ಬು ಈಗ ಹುಬ್ಬಳ್ಳಿಯ ವಿದ್ಯಾನಗರ ನಿವಾಸಿಗಳು.
 ಪ್ರಜಾವಾಣಿ ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳಲ್ಲಿ ೨೩ ವರ್ಷಗಳ ಕಾಲ ಪತ್ರಕರ್ತರಾಗಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿ ನಂತರ ಉದಯವಾಣಿಯಲ್ಲಿ ಎಂಟು ವರ್ಷ ಹುಬ್ಬಳ್ಳಿ ಕಚೇರಿಯ ಮುಖ್ಮಸ್ಥರಾಗಿದ್ದರು ಮುಂದೆ ಹತ್ತು ವರ್ಷಗಳ ಕಾಲ ಯುಎನ್ ಐ ಸುದ್ದಿ ಸಂಸ್ಥೆಯ ವರದಿಗಾರ, ಹದಿನೈದು ವರ್ಷ ಪತ್ರಿಕೋದ್ಯಮ ವಿಷಯದ ಉಪನ್ಯಾಸಕರಾಗಿ ಕೆಲಸ ಮಾಡಿದ್ದಾರೆ.
    ಇವರ ಇಡೀ ಕುಟುಂಬ ಸಾಹಿತ್ಯ ಕ್ಷೇತ್ರದಲ್ಲಿರುವುದು ಅಪರೂಪ ಇವರು ಆರು ಸಹೋದರರೂ ಮತ್ತು ಇವರ ತಂದೆ ಸೇರಿ ಎಲ್ಲರೂ ಕನ್ನಡ ಸಾಹಿತ್ಯದಲ್ಲಿ ಅನೇಕ ಕೃತಿಗಳನ್ನು ಬರೆದು ಪ್ರಕಟಿಸಿದ್ದಾರೆ.
  ಬಹುಶಃ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಇವರ ಕುಟು೦ಬದ ಈ ದಾಖಲೆ ಮೊದಲನೆಯದ್ದು ಈ ಬಗ್ಗೆ ಅನೇಕರು ತಿಳಿಸಿದ್ದು ನಮ್ಮ ದೇಶದ ಯಾವುದೇ ಬಾಷೆಯಲ್ಲಿ ಒಂದೇ ಕುಟುಂಬದಲ್ಲಿನ ಏಳು ಜನರು ಇಷ್ಟೆಲ್ಲ ಕೃತಿಗಳನ್ನು ಬರೆದು ಪ್ರಕಟಿಸಿದ ದಾಖಲೆ ಇಲ್ಲ ಇದು ಗಿನ್ನೆಸ್ ದಾಖಲೆಗೆ ಸೇರುವಂತಹದ್ದು ಅನ್ನುತ್ತಾರೆ.
  ಅರುಣ್ ಕುಮಾರ್ ಹಬ್ಬು ಸ್ವತಃ ಬರೆದು ಪ್ರಕಟಿಸಿದ ಕೃತಿಗಳು 
1. #ಪತ್ರಿಕೋಧ್ಯಮದ_ತ್ರಿವಿಕ್ರಮ (ಡಿವಿಜಿ ಕುರಿತು). 2.#ನೀವು_ಉತ್ತಮ_ಸಂದಶ೯ಕಲಾಗುವಿರಾ (ಸಾಹಿತ್ಯ ಪ್ರಕಾಶನ) 3.#ವೈವಿಧ್ಯ_ಕಲಾ_ನಿದಿ_ಗೋಪಾಲಕೃಷ್ಣನಾಯಕ (ಜೀವನ ಚರಿತ್ರೆ ) 
4.#ಸುದ್ದಿ_ಜಗದಗಲ_ಮುಗಿಲಗಲ (ಮಾಧ್ಯಮ ಅಕಾಡೆಮಿ)
 5.#ಮಹಿಳೆ_ಮತ್ತು_ಮಾಧ್ಯಮ (ಆದಿತ್ಯ ಪ್ರಕಾಶನ) 6.#ಅಂಗುತ್ತರ_ನಿಕಾಯ (ಅನುವಾದ ಮಾಹಾ ಬೋದಿ ಸೊಸೈಟಿ 
7.#ಬೊಗಸೆ_ನೀರು ( ಆತ್ಮನಿವೇದನೆ - ವಿಕಾಸ ಪ್ರಕಾಶನ).
                                    ***
    ಅರುಣ್ ಕುಮಾರ್ ಹಬ್ಬು ನನ್ನ ಕಾದಂಬರಿ ಕೆಳದಿ ಸಾಮ್ರಾಜ್ಯ ಇತಿಹಾಸ ಮರೆತಿರುವ ಬೆಸ್ತರ ರಾಣಿ ಚಂಪಕಾ ಓದಿ ಅದರ ಬಗ್ಗೆ ತಮ್ಮ ವಸ್ತು ನಿಷ್ಟ ವಿಮರ್ಷೆ ಅವರ ಪೇಸ್ ಬುಕ್ ನಲ್ಲಿ ಪ್ರಕಟಿಸಿದ್ದಾರೆ ಅದರ ಯಥಾ ನಕಲು ಇಲ್ಲಿದೆ ಓದಿ.
  #ಇತಿಹಾಸ ಮರೆತ ಕೆಳದಿ ಚಂಪಕಾರಾಣಿಯ ಮನೋಜ್ಞ ವೃತ್ತಾಂತ#
ಇತಿಹಾಸದ ಪುಟಗಳಲ್ಲಿ ಅನೇಕ ಸತ್ಯ ಕಥೆಗಳು ದಾಖಲಾಗದೇ ಇರುವ ಅನೇಕ ಉದಾಹರಣೆಗಳಿವೆ. ಅವುಗಳಲ್ಲಿ ಕೆಳದಿಯರಸರ ರಾಣಿಯಾಗಿದ್ದ ಬೆಸ್ತರ ಮಹಿಳೆ ಚಂಪಕ ರಾಣಿಯ ಕಥೆಯೂ ಒಂದು. ನಿರ್ಲಕ್ಷಕ್ಕೆ ಒಳಗಾದ ಆನಂದಪುರದಲ್ಲಿರುವ ಅನಾದಿ ಕಾಲದ ಪಾಳು ಬಿದ್ದ ಕೊಳವೊಂದರ ಸುದ್ದಿಯು ಇಡೀ ಕಾದಂಬರಿಯ ರಚನೆಗೆ ಕಾರಣವಾಯಿತು. 
ಈ ಕೊಳವೇ ಚಂಪಕರಾಣಿಯ ನೆನಪಿನ ಕೊಂಡಿ. ಪತ್ರಿಕೆಗಳಲ್ಲಿ ಬಂದ ಸುದ್ದಿಯಲ್ಲಿ ಕೆಳದಿ ಅರಸರು ವೇಶ್ಯೆಯೊಬ್ಬಳ ನೆನಪಿಗಾಗಿ ಈ ಚಂಪಕ ಸರಸ್ಸು ನಿರ್ಮಿಸಿದ್ದರು ಎನ್ನುವ ಸಾಲು ಬರೆಹಗಾರ ಹಾಗೂ ಪತ್ರಕರ್ತ ಆನಂದಪುರ ಮತ್ತು ಕೆಳದಿ ಸಂಸ್ಥಾನದ ಕಟ್ಟಾ ಅಭಿಮಾನಿ ಉದ್ಯಮಿ ಅರುಣಪ್ರಸಾದ್ ಅವರನ್ನು ಕೆರಳಿಸಿ  ಚಂಪಕ ರಾಣಿಯ ಸ್ಪಷ್ಟ ಚಿತ್ರಣವನ್ನುಕಾದಂಬರಿ ರೂಪದಲ್ಲಿ ನೀಡಲು ಕಾರಣವಾಯಿತು. ಇದರಿಂದ ಒಂದು ಐತಿಹಾಸಿಕ ಕಾದಂಬರಿಯೊಂದನ್ನು ಕನ್ನಡ ಸಾರಸ್ವತ ಲೋಕಕ್ಕೆ ಕಾಣಿಕೆಯಾಗಿ ನೀಡಿದಂತಾಗಿದೆ.
ಕೆಳದಿಯ ಅರಸರಾದ ರಾಜಾ ವೆಂಕಟಪ್ಪ ನಾಯಕರು ಅಂದಿನ ಕಾಲದಲ್ಲಿ ಜನಮೆಚ್ಚಿದ ಅರಸರಾಗಿ ಮೆರೆದಿದ್ದವರು. ವಿಸ್ತಾರವಾದ ಸಾಮ್ಯಾಜ್ಯದ ಅರಸರಾಗಿದ್ದ ಅವರು ತಮ್ಮ ಸಾಮಾಜಿಕ ಕಳಕಳಿ, ಅಭಿವೃದ್ಧಿ ಕಾರ್ಯಗಳು ಹಾಗೂ ಇತರ ಜನಪ್ರಿಯ ಕಾರ್ಯಗಳಿಂದಾಗಿ ಜನಾನುರಾಗಿಯೂ ಆಗಿದ್ದರು. ಕಲಾಪೋಷಕರೂ ಆಗಿದ್ದ ಅವರು ಆನಂದಪುರದ ಬೆಸ್ತರ ಕನ್ಯೆ ನಿತ್ಯ ಅಪ್ರತಿಮವಾಗಿ ಬಿಡಿಸುತ್ತಿದ್ದ ಸುಂದರ ರಂಗೋಲಿಗಳನ್ನು ನೋಡುತ್ತ ಅವಳಲ್ಲಿ ಅನುರಾಗಿಯಾಗುತ್ತಾರೆ.
ಅವಳನ್ನು ವಿವಾಹವಾಗುವ ಇಂಗಿತವನ್ನು ವ್ಯಕ್ತಪಡಿಸುತ್ತಾರೆ. ಇದು ಅಪಾಯಕಾರಿಯೆಂದು ಚಂಪಕಾ ಮತ್ತು ಅವಳ ತಂದೆಗೆ ಅರಿವಿತ್ತಾದರೂ ರಾಜರ ಮನಸ್ಸಿಗೆ ವಿರುದ್ಧವಾಗಿ ನಡೆಯಲಾಗದೇ ವಿವಾಹಕ್ಕೆ ಸಮ್ಮತಿ ನೀಡುತ್ತಾರೆ. ರಾಜಾ ವೆಂಕಟಪ್ಪ ನಾಯಕರು ಪಟ್ಟದ ರಾಣಿಯ ಮನಸ್ಸಿಗೆ ವಿರುದ್ಧವಾಗಿ ಈ ವಿವಾಹವನ್ನು ಸಾಂಪ್ರದಾಯಿಕ ಪದ್ಧತಿಯಲ್ಲಿಯೇ ಮಾಡಿಕೊಂಡಿದ್ದರೂ ಮಹಾರಾಣಿಗೆ ಅದು ಇಷ್ಟವಿಲ್ಲದ ಕೃತ್ಯವಾಗಿತ್ತಲ್ಲದೇ ಮೌನಪ್ರತಿಭಟನೆ ಮಾಡಿ ದೇಹ ತ್ಯಾಗ ಮಾಡುತ್ತಾರೆ. ಚಂಪಕರಾಣಿ ಒಬ್ಬ ಶೈವಭಕ್ತೆಯಾಗಿ ಒಬ್ಬ ಕುಲೀನ ಸ್ತ್ರೀಗೆ ಇರಬೇಕಾದ ಎಲ್ಲ ಸಂಸ್ಕಾರಗಳನ್ನು ಹೊಂದಿದ್ದರೂ ಅವಳನ್ನು ವೇಶ್ಯೆ, ಮದ್ಯಪಾನ ಮಾಡುವವಳು ಮತ್ತು ಮಾಂಸಾಹಾರ ಭಕ್ಷಣ ಮಾಡುವವಳು ಎಂದು ಕೆಲ ಕುತ್ಸಿತ ಮನೋಭಾವದ ಜನರು ಅಪಪ್ರಚಾರ ಮಾಡುತ್ತಾರೆ. ಇದು ಸಭ್ಯ ಸಂಸ್ಕಾರವಂತಳಾಗಿದ್ದ ಚಂಪಕಾರಾಣೀಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ರಾಜ ವಂಶದ ಖ್ಯಾತಿ ಮತ್ತು ಅರಸರ ಪ್ರತಿಷ್ಠೆಗೆ ಧಕ್ಕೆ ಉಂಟಾಯಿತು ಎಂಬ ದುಃಖದಿಂದ ವಜ್ರವನ್ನು ಸೇವಿಸಿ ಪ್ರಾಣ ತ್ಯಾಗ ಮಾಡುತ್ತಾಳೆ. ಕೆಳದಿಯ ರಾಜವಂಶದ ಗೌರವ ಕಾಪಾಡಲು ಅವಳು ತನ್ನ ಜೀವವನ್ನೇ ತ್ಯಾಗ ಮಾಡುವ ದಾರುಣ ಕಥೆಯಿದು.
ಅರುಣಪ್ರಸಾದ ಅವರು ಈ ಕಥೆಯ ಕೊಂಡಿಯನ್ನೇ ಮುಖ್ಯ ಎಳೆಯನ್ನಾಗಿಸಿಕೊಂಡು ಒಂದು ಸುಂದರ ಕಾದಂಬರಿ ರಚಿಸಿದ್ದಾರೆ. ಇದು ಕೇವಲ ಚಂಪಕಾಳ ಕಥೆಯಲ್ಲ. ಆದರೆ ಇಡೀ ಕೆಳದಿಯ ರಾಜಮನೆತನದ ಇತಿಹಾಸದ ಕಥೆ. ಕೆಳದಿ ರಾಜ್ಯದ ಉನ್ನತ ಪರಂಪರೆ, ಸಂಪ್ರದಾಯ, ರಾಜವಂಶದ ಪದ್ಧತಿಗಳು, ಕೆಳದಿಯ ಅಂದಿನ ಭೌಗೋಳಿಕ ಚಿತ್ರಣ, ಅಂದಿನ ಜನಜೀವನವೆಲ್ಲವೂ ಈ ಕಾದಂಬರಿಯಲ್ಲಿ ದಾಖಲಾಗಿದೆ.
ಕಾದಂಬರಿಯುದ್ದಕ್ಕೂ ಕೆಳದಿಯ ಅಂದಿನ ವೈಭವ, ಕೆಳದಿಯ ಅರಸ ರಾಜಾ ವೆಂಕಟಪ್ಪ ನಾಯಕರು, ರಾಣಿ ಭದ್ರಾದೇವಿಯ ಮಾನಸಿಕ ವೇದನೆ, ಚಂಪಕಾರಾಣಿಯ ತಳಮಳ ಮತ್ತು ಅವಳ ತ್ಯಾಗ ಎಲ್ಲವೂ ಅತ್ಯಂತ ಮನೋಜ್ಞವಾಗಿ ಚಿತ್ರಿತವಾಗಿವೆ. “ಇತಿಹಾಸದ ಪುಟಗಳಲ್ಲಿ ಶ್ರಮಿಕ ವರ್ಗ ಮತ್ತು ಕೆಳ ಜಾತಿಯ ಜನ ಹೀಗೆ ಅಕಾರಣವಾಗಿ ಅವಮಾನಕ್ಕೀಡಾಗುವುದು, ಹೇಳಹೆಸರಿಲ್ಲದಂತಾಗುವುದು ಅದು ಸಹಜವೆನ್ನುವ ಮಟ್ಟಿಗಿನ ವಾಸ್ತವ. ಆ ಕುರಿತಾದ ಅರುಣಪ್ರಸಾದರ ಆಕ್ಷೇಪ ಈ ಕಾದಂಬರಿಯ ಮೂಲಕ ಪ್ರಕಟವಾಗಿದೆ.” ಎಂದು ಮುನ್ನುಡಿ ಬರೆದ ಪತ್ರಕರ್ತ ಶೃಂಗೇಶ ಅವರು ಹೇಳಿರುವುದರಲ್ಲಿ ಅತಿಶಯೋಕ್ತಿಯಿಲ್ಲ.
ಈ ಕಾದಂಬರಿ ಇಂದಿನ ಜಾತಿ ಪದ್ಧತಿ, ಮೇಲುಕೀಳೆಂಬ ಮನುಜನ ಕುತ್ಸಿತ ಭಾವನೆಯ ವಿರುದ್ಧ ಪ್ರತಿಭಟನೆಯ ರೂಪದಲ್ಲಿ ವ್ಯಕ್ತಗೊಂಡಿದೆ. ಇಂಥ ಅನಿಷ್ಠ ವ್ಯವಸ್ಥೆಯ ವಿರುದ್ಧ ಆಕ್ರೋಶವೂ ಅಭಿವ್ಯಕ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಅರುಣಪ್ರಸಾದ ಅವರು ಒಬ್ಬ ಕಾದಂಬರಿಕಾರರಾಗಿ ರೂಪುಗೊಂಡಿರುವುದು ಕನ್ನಡ ಸಾಹಿತ್ಯದ ಹೆಮ್ಮೆ. ಒಮ್ಮೆ ಓದಲೇಬೇಕಾದ ಕಾಂಬರಿಯಿದು.
ಅರುಣಪ್ರಸಾದ್‌ ಭಟ್ಟರ ಬಾಂಡ್ಲಿಯಲ್ಲಿ ಬಿಲಾಲಿ ಬಿಲ್ಲಿ ಅಭ್ಯಂಜ ಮತ್ತು ೨೮ ಕಥೆಗಳು ಎಂಬ ಕೃತಿ ಪ್ರಕಟಿಸಿ ಉತ್ತಮ ಕಥೆಗಾರರೆಂದೂ ಹೆಸರಾಗಿದ್ದಾರೆ. ಅವರಿಗೆ ಶುಭಕೋರುತ್ತೇನೆ.
ಪ್ರಕಾಶಕರು: ಪಶ್ಚಿಮ ಘಟ್ಟದ ಶೊವಮೊಗ್ಗ ಓದುಗ-ವಿಮರ್ಶಕ ಬಳಗ ಯಡೇಹಳ್ಳಿ, ಆನಂದಪುರಂ
ಬೆಲೆ:ರೂ.೧೦೦.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...