Skip to main content

Blog number 1075. ಸಾಮಾಜಿಕ ಜಾಲತಾಣದಲ್ಲಿ ನಾನು ಪುನಿತಣ್ಣ ಶಿವಣ್ಣನ ಅಭಿಮಾನಿ ಕಾಫಿನಾಡು ಚಂದು ಎನ್ನುತ್ತಾ ತಮ್ಮದೇ ಶೈಲಿಯ ಡಯಲಾಗ್ ಮ್ಯಾನರಿಸಂನಿಂದ ರಾಜ್ಯದ ಉದ್ದಗಲದಲ್ಲಿ ವಿಪರೀತ ಜನಪ್ರಿಯತೆ ಪಡೆದ ಕಾಫಿನಾಡು ಚಂದು ಮತ್ತು ನನ್ನ ದಿಡೀರ್ ಬೇಟಿ

ಕಾಫಿನಾಡು_ಚಂದು_ಅಚಾನಕ್_ಬೇಟಿ 

#ಈ_ಬಡ_ಕಲಾವಿದನಿಗೆ_ಬೇಕಾಗಿದೆ_ಕನ್ನಡಿಗರ_ಹಾರೈಕೆಗಳು

#ಕರೆದುಕೊಂಡು_ಬ೦ದವರು_ರಿಪ್ಪನಪೇಟೆಯ_ಸಿದ್ಧಿವಿನಾಯಕ_ಟ್ರಾವೆಲ್ಸ್_ಶಿವಣ್ಣ

#ಇವರದ್ದೇ_ಸ್ಟೈಲ್_ಮತ್ತು_ಮ್ಯಾನರಿಸಂನಿಂದ_ಕರ್ನಾಟಕದ_ಸೆಲೆಬ್ರಿಟಿ.

   "ನಾನು ಪುನಿತಣ್ಣ ಶಿವಣ್ಣನವರ ಅಭಿಮಾನಿ ಕಾಫಿ ನಾಡು ಚಂದು" ..... ಎನ್ನುತ್ತಾ ತಮ್ಮದೇ ಶೈಲಿಯಿಂದ ಕರ್ನಾಟಕದ ಜನಪ್ರಿಯ ಸೆಲೆಬ್ರಿಟಿ ಆಗಿರುವ ಕಾಫಿನಾಡು ಚಂದು ಅವರನ್ನು ಇವತ್ತು ದಿಡೀರಾಗಿ ನನ್ನ ಕಛೇರಿ ಒಳಗೆ ಕರೆ ತಂದವರು ರಿಪ್ಪನ್ ಪೇಟೆಯ ಸಿದ್ದಿ ವಿನಾಯಕ ಟ್ರಾವೆಲ್ಸ್ ನ ಶಿವಣ್ಣ.
   ಕಾಫಿನಾಡು ಈ ಪರಿ ಜನಪ್ರಿಯತೆಗೆ ಕಾಫಿನಾಡು ಚಂದು ಅವರ ಸೋಷಿಯಲ್ ಮೀಡಿಯಾದ ನಿತ್ಯ ನೂರಾರು ವಿಡಿಯೋಗಳು.
   ಪ್ರಾರಂಭದಿಂದ ಕಾಫಿನಾಡು ಚಂದುವನ್ನು ಸಾಮಾಜಿಕ ಜಾಲ ತಾಣದಲ್ಲಿ ನೋಡುತ್ತಾ ಬಂದಿದ್ದೇನೆ ನಂತರ ಇವರು ವೈರಲ್ ಆದರು ಆಗ ಅನ್ನಿಸಿದ್ದು ಈ ಕಲಾವಿದ ಯಾವುದೋ ಉದ್ದೇಶದಿಂದ ದಿಡೀರ್ ಜನಪ್ರಿಯತೆಗಾಗಿ ಹೀಗೆಲ್ಲ ಮಾಡುತ್ತಿರಬಹುದೆನ್ನಿಸಿತು ಜೊತೆಗೆ ಮಾಧ್ಯಮಗಳು ವಿಪರೀತ ಪ್ರಚಾರ ನೀಡಿ ನಂತರ ಈ ಮುಗ್ದ ದುರಂತ ಮಾಡಿಕೊಂಡರೆ ಎಂಬ ಭಯ ಕೂಡ ಅನೇಕರಂತೆ ನಾನು ವ್ಯಕ್ತಪಡಿಸಿದ್ದೆ.
  ಆದರೆ ಕಾಫಿನಾಡು ಚಂದು ಹೊಗಳಿಕೆಗೆ ಏರದೆ ತೆಗಳಿಕೆಗೆ ಕುಗ್ಗದೆ ಒಂದೇ ರೀತಿ ಇರುವುದು ಸಮಾದಾನ, ಇವರು ಹುಟ್ಟಿದ್ದು ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ಸಮೀಪದ ಮಲಂದೂರು, ತಂದೆ ಬಸವರಾಜ್ ಮತ್ತು ತಾಯಿ ಮುದ್ದಮ್ಮ, ಕಡು ಬಡ ಕುಟುಂಬದಲ್ಲಿ ಜನಿಸಿದ ಕಾಫಿನಾಡು ಚಂದು ಓದಿ ಮುಂದೆ ಪೋಲೀಸಾಗಬೇಕೆಂಬ ಇವರ ತಾಯಿಯ ಆಸೆ ಈಡೇರಲಿಲ್ಲ ಕಾರಣ ಇವರು 9ನೇ ತರಗತಿಯಲ್ಲಿದ್ದಾಗಲೇ ಇವರ ತಾಯಿ ಕ್ಯಾನ್ಸರ್ ಗೆ ಬಲಿಯಾದರು ಚಂದು ವಿದ್ಯಾಬ್ಯಾಸ ಅಲ್ಲಿಗೆ ಮುಕ್ತಾಯವಾಯಿತು.
  ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಅವರ ಕಟ್ಟಾ ಅಭಿಮಾನಿ ಇವರು, ಅವರಿಬ್ಬರ ಎಲ್ಲಾ ಸಿನಿಮಾ ನೋಡಿದ್ದಾರೆ ಅವರಿಬ್ಬರ ಹೆಸರಿಲ್ಲದೆ ಇವರ ಡಯಲಾಗ್ ಇರಲು ಸಾಧ್ಯವೇ ಇಲ್ಲ.
  ಕಾಫಿನಾಡು ಚಂದುಗೆ ಈಗ 40 ರ ಹರೆಯ, ವಿವಾಹಿತರು ದೊಡ್ಡ ಮಗ ಪಿಯೂಸಿ ವ್ಯಾಸಂಗ ಮಾಡುತ್ತಿದ್ದಾನೆ, ಹೊಟ್ಟೆಪಾಡಿಗೆ ರಿಕ್ಷಾ ಚಾಲನೆ ಇವರ ವೃತ್ತಿ.
  ಕಾಫಿನಾಡು ಚಂದು ಸಾಮಾಜಿಕ ಜಾಲ ತಾಣದಲ್ಲಿ ಪ್ರಸಿದ್ಧಿ ಪಡೆದ ನಂತರ ರಿಕ್ಷಾ ಚಾಲನೆ ಮಾಡಲು ಆಗುತ್ತಿಲ್ಲ, ಇತ್ತೀಚಿಗೆ ಅನಾರೋಗ್ಯದಿಂದ ಆಸ್ಪತ್ರೆ ಸೇರಿ ನಿತ್ರಾಣರಾಗಿ ಬಂದಿದ್ದಾರೆ ನಾನು ಅವರಿಗೆ ಎಲ್ಲರಂತೆ ವಿಡಿಯೋ ಡಯಲಾಗಿಗೆ ಒತ್ತಾಯಿಸಲಿಲ್ಲ ಅವರ ನನ್ನ ಬೇಟಿಯ ನೆನಪಿಗಾಗಿ ನನ್ನ ಪುಸ್ತಕ ನೀಡಿ ಶುಭ ಹಾರೈಸಿದೆ.
   ಸಾಗರದಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭಕ್ಕೆ ಇವರನ್ನು ಆಹ್ವಾನಿಸಿದ್ದರಿಂದ ಹೋಗುತ್ತಿದ್ದಾರೆ ಮುಂದಿನ ದಿನದಲ್ಲಿ youtube channel ಮಾಡಿ ಆಮೂಲಕ ಗೂಗಲ್ ನಿಂದ ಆದಾಯ ಪಡೆಯುವ ಪ್ರಯತ್ನ ಮಾಡಲು ಸಲಹೆ ನೀಡಿದೆ, ಈ ಬಗ್ಗೆ ಹೆಚ್ಚಿನ ಸಲಹೆ ಮಾಹಿತಿಗೆ ಸಂಪರ್ಕಿಸುವುದಾಗಿ ಅದಕ್ಕಾಗಿ ನನ್ನ ವಿಸಿಟಿಂಗ್ ಕಾರ್ಡ್ ಪಡೆದು ಹೋದರು.
   ಮುಖತಃ ಬೇಟಿಯಿಂದ ಮತ್ತು ಅವರ ಜೊತೆ ಮಾತಿನಲ್ಲಿ ನನಗೆ ಅನ್ನಿಸಿದ್ದು ಕಾಫಿನಾಡು ಚಂದು ಮುಗ್ದ ಮತ್ತು ಪ್ರಾಮಾಣಿಕ, ಈತನಲ್ಲಿ ಅಭಿನಯ, ಹಾಡುಗಳ ಮೂಲಕ ತನ್ನ ಭಾವನೆ ನಿಂತ ಸ್ಥಳದಲ್ಲೇ ಸುಂದರವಾದ ಶೈಲಿಯಲ್ಲಿ ಅರ್ಥಪೂರ್ಣವಾಗಿ ರಚಿಸಿ ಅಭಿನಯದ ಜೊತೆ ಹಾಡುತ್ತಾ ಸಾದರ ಪಡಿಸುವ ವಿಶೇಷ ಕಲೆ ಹುಟ್ಟಿನಿಂದ ಸಹಜವಾಗಿ ಬಂದಿರುವುದು ಆಶ್ಚರ್ಯವೇ ಆಗಿದೆ.
   ರಾಜ್ಯದ ಮೂಲೆ ಮೂಲೆಗೂ ಕಾಫಿನಾಡು ಚಂದು ಪರಿಚಯ ಪ್ರಚಾರ ಪಡೆದು ಜನಪ್ರಿಯರಾಗಿದ್ದಾರೆ ನಾನೂ ಕಾಫಿನಾಡು ಚಂದು ಅಭಿಮಾನಿಯೆ ಆಗಿದ್ದೇನೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...