Blog number 1063. ಸಾಗರದ ಸಚಿನ್ ತೆಂಡೂಲ್ಕರ್ ತನ್ಮಯ್ ಮಂಜುನಾಥರ ದಾಖಲೆಯ ನಾಲ್ಕು ಶತಕಗಳು ಕೇವಲ 162 ಬಾಲ್ ಗಳಲ್ಲಿ, 48 ಬೌಂಡರಿ, 24 ಸಿಕ್ಸರ್ ಇವರು ಸಾಗರದ ನಾಗೇಂದ್ರ ಪಂಡಿತ್ ಕ್ರಿಕೆಟ್ ಅಕಾಡೆಮಿ ಪ್ರಾಡಕ್ಟ್
#ನಾಲ್ಕು_ನೂರಾ_ಏಳು_ರನ್_165_ಬಾಲುಗಳಿಗೆ
#ವಲಯಮಟ್ಟದ_16_ವರ್ಷದ_ಒಳಗಿನ_50_ಒವರ್_ಪಂದ್ಯದಲ್ಲಿ
#ತನ್ಮಯ_ಮಂಜುನಾಥ್_ಭಾರತದ_ಕ್ರಿಕೆಟ್_ತಂಡದಲ್ಲಿ_ಸ್ಥಾನ_ಪಡೆಯುಲಿ
#ನಾಗೇಂದ್ರಪಂಡಿತ್_ಕ್ರಿಕೆಟ್_ಅಕಾಡಮಿಗೆ_ಹಿರಿಮೆ.
16 ವರ್ಷದ ಒಳಗಿನ ವಲಯಮಟ್ಟದ ಸೀಮಿತ 50 ಓವರ್ ಕ್ರಿಕೆಟ್ ಶಿವಮೊಗ್ಗದ ಪೆಸಿಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ ಈ ಪಂದ್ಯದಲ್ಲಿ ಸಾಗರದ ಮಂಜುನಾಥ ಪ್ಯಾಷನ್ಸ್ ಮಾಲಿಕರ ಪುತ್ರ ತನ್ಮಯ್ 165 ಬಾಲ್ ನಲ್ಲಿ 48 ಬೌಂಡರಿ, 24 ಸಿಕ್ಸರ್ ಗಳೊಂದಿಗೆ 4 ಶತಕಗಳ ಸಹಿತ 407 ರನ್ ಗಳಿಸಿ ದಾಖಲೆ ಮಾಡಿದ್ದಾರೆ.
ಹಿಂದಿನ ಕೆಲ ಪಂದ್ಯಗಳಲ್ಲೂ ತನ್ಮಯ್ ದಾಖಲೆಯ ಕ್ರಿಕೆಟ್ ಆಟ ಮುಂದಿನ ದಿನದಲ್ಲಿ ಭಾರತದ ಕ್ರಿಕೆಟ್ ತಂಡದಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರದಿಂದ ಪ್ರತಿನಿದಿಸುವ ಎಲ್ಲಾ ಲಕ್ಷಣಗಳಿದೆ ಅಂತಹ ದಿನ ಬರಲಿ ತನ್ಮಯ್ ಭಾರತ ಕ್ರಿಕೆಟ್ ತಂಡದ ಇನ್ನೊಬ್ಬ ಸಚಿನ್ ತೆಂಡೂಲ್ಕರ್ ಆಗಲಿ ಎಂದು ಹಾರೈಸೋಣ.
ಈ ದಾಖಲೆಯ 407 ರನ್ ಗಳಿಸಿದ ತನ್ಮಯ್ ಬಗ್ಗೆ ಸಾಗರದ ನಾಗೇಂದ್ರ ಪಂಡಿತ್ ಕ್ರಿಕೆಟ್ ಅಕಾಡಮಿಯ ನಾಗೇಂದ್ರ ಪಂಡಿತ್ ಹೆಚ್ಚು ಸಂಭ್ರಮ ಪಟ್ಟಿದ್ದಾರೆ.
1978-79 ರಲ್ಲಿ ಸಾಗರದ ಖ್ಯಾತ ಪತ್ರಕರ್ತರು ರಾಜಕಾರಣಿಗಳು, ಕಲಾವಿದರೂ ಆದ ಟಿ.ಡಿ. ಕೆ. ಪಂಡಿತರ ಪುತ್ರ ನಾಗೇಂದ್ರ ಪಂಡಿತ್ ಕರ್ನಾಟಕ ಮತ್ತು ಭಾರತದ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯುತ್ತಾರೆಂಬ ನಿರೀಕ್ಷೆಯ ಉದಯೋನ್ಮುಖ ಆಟಗಾರರಾಗಿದ್ದರು ಆದರೆ ಜನರ ನಿರೀಕ್ಷೆ ನನಸಾಗಲಿಲ್ಲ.
ವಿದೇಶದಲ್ಲಿ ಉದ್ಯೋಗಿ ಆಗಿ ಈಗ ಸಾಗರದಲ್ಲಿ ಅವರದೇ ಹೆಸರಲ್ಲಿ ಕ್ರಿಕೆಟ್ ಅಕಾಡೆಮಿ ಸ್ಥಾಪಿಸಿ ಕ್ರಿಕೆಟ್ ತರಬೇತಿ ನೀಡುತ್ತಿದ್ದಾರೆ ಜೊತೆಗೆ ಉದಯೋನ್ಮುಖ ಆಟಗಾರರಿಗೆ ಯಾವ ಯಾವ ಪಂದ್ಯಗಳಲ್ಲಿ ಭಾಗವಹಿಸಬೇಕು ಆ ಮೂಲಕ ಪ್ರಥಮ ದರ್ಜೆ ಕ್ರಿಕೆಟ್ ಗೆ ಹೇಗೆ ಪಾದಾರ್ಪಣೆ ಮಾಡಬೇಕೆಂಬ ಮಾಹಿತಿಯೂ ಅವರು ನೀಡುತ್ತಿದ್ದಾರೆ.
ನಾಗೇಂದ್ರ ಪಂಡಿತರ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆದ ತನ್ಮಯ್ ಅವರ ಈ ಸಾಧನೆ ಅವರಿಗೆ ಸ೦ಭ್ರಮಕ್ಕೆ ಕಾರಣವಾಗಿದೆ ಮತ್ತು ಸಾಗರದ ನಾಗೇಂದ್ರ ಪಂಡಿತ್ ಕ್ರಿಕೆಟ್ ಅಕಾಡಮಿಯ ಕಿರೀಟಕ್ಕೆ ಗರಿ,ಕೇವಲ ಎರೆಡು ವಷ೯ದಲ್ಲಿ ಮಲೆನಾಡಿನ ಸಾಗರದಂತ ಊರಿನಲ್ಲಿ ಕ್ರಿಕೆಟ್ ನಲ್ಲಿ ದೊಡ್ಡ ಸಾಧನೆ.
Comments
Post a Comment