Blog number 1070. ಅಡಿಕೆ ಎಲೆ ಚುಕ್ಕೆ ರೋಗ ತಂದಿದೆ ಮಲೆನಾಡಿಗೆ ಗಂಡಾಂತರ, ಈ ಹಂತದಲ್ಲಿ ಸಂಶೋದನೆ ಹಾಳು ಮೂಳು ಅಂತ ಸರ್ಕಾರ ಹಣ ಬಿಡುಗಡೆಗಿಂತ ಮೊದಲು ಕೇಂದ್ರ ಸರ್ಕಾರದ ಆರ್ಥಿಕ ಮಂತ್ರಾಲಯ ಅಡಿಕೆ ಬೆಳೆಗಾರರ ಸಾಲದ ಮರುಪಾವತಿಗೆ ಹತ್ತು ವರ್ಷ ಕಾಲಾವಕಾಶ ನೀಡಿದರೆ ಅಡಿಕೆ ಬೆಳೆಗಾರರು ಜೀವ ಉಳಿಸಿ ಕೊಳ್ಳಬಹುದು,ಹೊಸನಗರ ತಾಲ್ಲೂಕಿನ ದೊಂಬೆಕೊಪ್ಪದ ಹೊಸಮನೆ ಗುರುಪಾದಪ್ಪ ಗೌಡರು ನನ್ನ ತಂದೆ ಗೆಳೆಯರು.
#ನನ್ನ_ತಂದೆಯ_ಜಿಗಣಿ_ದೋಸ್ತರು
#ಮಗ_ಸಾರಾ_ಸಂಸ್ಥೆ_ಕಟ್ಟಿರುವ_ಕಲಾವಿದ_ದೆಹಲಿ_ನಿವಾಸಿ
#ಭೂಸುದಾರಣೆ_ಕಾಯ್ದೆಯಿಂದ_ಜಮೀನು_ಕಳೆದುಕೊಂಡು_ಹತಾಷರಾಗಿದ್ದ_ಕಾಲದ_ನೆನಪು
#ಅಡಿಕೆಗೆ_ಬಂದಿರುವ_ಎಲೆಚುಕ್ಕೆ_ರೋಗ_ರೈತರ_ಆತಂಕಕ್ಕೆ_ಕಾರಣವಾಗುತ್ತಿದೆ.
#ಭಾರತೀಯ_ರಿಸರ್ವ್_ಬ್ಯಾಂಕ್_ಕೇಂದ್ರದ_ಆರ್ಥಿಕ_ಮಂತ್ರಾಲಯ_ಎಚ್ಚೆತ್ತು_ಕೊಳ್ಳುವುದು_ಅನುಮಾನ
#ರೈತರ_ಮಕ್ಕಳು_ಈ_ಗಂಡಾಂತರದ_ಅರಿವೇ_ಇಲ್ಲದೆ_ಬರಲಿರುವ_ಚುನಾವಣೆ_ಬಗ್ಗೆ_ಆಸಕ್ತರಾಗಿದ್ದಾರೆ.
ಈಗಷ್ಟೆ ಪೇಸ್ ಬುಕ್ ನಲ್ಲಿ ಒಂದು ಪೋಸ್ಟ್ ನೋಡಿ ನನ್ನ ಜೀವವೇ ತತ್ತರಿಸಿತು ಕಾರಣ ಶೃಂಗೇರಿಯ ಶ್ರೀನಿವಾಸಮೂರ್ತಿ ಬಾಲ್ಯದಿಂದ ಬಡತನವೇ ಹಾಸಿ ಹೊದ್ದು ಚಿಕ್ಕ ವಯಸ್ಸಲ್ಲೇ ಅನಾಥರಾಗಿ ಬುದ್ದಿವಂತ ಸಹೋದರಿಯ ದೈರ್ಯದಿಂದ ಈಗ ಕೃಷಿಯಲ್ಲಿ ಒಂದು ಜೀವನ ಮಟ್ಟ ಕಂಡಿದ್ದಾರೆ.
ಮಕ್ಕಳು ಪ್ರೌಡ ಶಿಕ್ಷಣ ಮುಗಿಸಿ ಮುಂದಿನ ಶಿಕ್ಷಣದ ಹಂತದಲ್ಲಿದ್ದಾರೆ ಈಗ ಶೃಂಗೇರಿಯಲ್ಲಿ ಅಡಿಕೆಗೆ ಬಂದಿರುವ ಎಲೆ ಚುಕ್ಕೆ ರೋಗದಿಂದ ಅವರ ತೋಟ ಹಾಳಾಗುತ್ತಿರುವ ಸಂದರ್ಭದಲ್ಲಿ ಹಾಳಾಗುತ್ತಿರುವ ಅಡಿಕೆ ತೋಟದ ಚಿತ್ರದ ಜೊತೆ "ಕ್ಷಮಿಸಿ ಬರೆಯಲು ಏನೂ ಉಳಿದಿಲ್ಲ,ಪ್ರಕೃತಿ ಸಹಕರಿಸುತ್ತಿಲ್ಲ, ಎಲ್ಲಾ ಪ್ರಯೋಗ ಮತ್ತು ಪ್ರಯತ್ನ ವಿಫಲವಾಗುತ್ತಿದೆ" ಎಂಬ ಪೋಸ್ಟ್ ನೋಡಿ ಹೃದಯ ಹಿಂಡಿತು, ತಕ್ಷಣ ಅವರಿಗೆ ಪ್ರತಿಕ್ರಿಯಿಸಿ ದೈಯ೯ವಾಗಿರಲು ವಿನಂತಿಸಿದೆ ತಕ್ಷಣ ಅವರು ತಾವು ದೃತಿಗೆಡುತ್ತಿಲ್ಲ ಕಾಫಿ ಬೆಳೆ ಕೂಡ ಮಾಡಿದ್ದೇನೆ ಆದರೆ ಅನೇಕರು ಕೇವಲ ಅಡಿಕೆ ಮೇಲೆ ಅವಲಂಬಿತರು ಅವರ ಪರಿಸ್ಥಿತಿ ಕಷ್ಟ ಅಂತ ಉತ್ತರಿಸಿದ್ದು ನೋಡಿ ಉಸಿರಾಟ ನಿರಾಳವಾಯಿತು ಕಾರಣ ಸಾಮಾಜಿಕ ಜಾಲ ತಾಣದಲ್ಲಿ (ಪರಸ್ಪರ ಮುಖಃತ ಬೇಟಿ ಆಗದಿದ್ದರೂ) ನನಗೆ ಅವರು ಆಪ್ತರನ್ನಿಸಿ ಬಿಟ್ಟಿದ್ದಾರೆ.
ಅಡಿಕೆ ತೋಟದ ಕಾಯಿಲೆ ಶೃಂಗೇರಿಯಿಂದ, ತೀರ್ಥಹಳ್ಳಿ ದಾಟಿ, ಹೊಸನಗರ ತಾಲ್ಲೂಕ್ ಹಾದು ಸಾಗರ ತಾಲ್ಲೂಕಿನ ಕಡೆ ಮುಖ ಮಾಡಿದೆ ಮುಂದೆ ಯಾವಾಗ ಗಡಿ ತಾಲ್ಲೂಕುಗಳಾದ ಉತ್ತರ ಕನ್ನಡ ಜಿಲ್ಲೆಗೆ ಆವರಿಸುತ್ತೊ ಎ೦ಬ ಭಯ ಅಡಿಕೆ ಬೆಳೆಗಾರರಲ್ಲಿ ಇದೆ ಇದಕ್ಕೆ ಸರ್ಕಾರವೂ ಕೈ ಚೆಲ್ಲಿ ದೇವರಲ್ಲಿ ಪ್ರಾರ್ಥನೆ - ಮಂತ್ರ ಪಠನ ಮಾಡುತ್ತಿದೆ ಅಂದರೆ ಪರಿಸ್ಥಿತಿ ಅರಿವಾದೀತು.
ಇದರ ಮಧ್ಯ ರೈತರ ಮಕ್ಕಳು ಬರುವ ಚುನಾವಣೆಗಳ ಬಗ್ಗೆ ಉತ್ಸುಕರಾಗಿದ್ದಾರೆ,ಕುಟುಂಬದ ಯಜಮಾನ ಆರ್ಥಿಕ ಆದಾಯದ ಮೂಲ ಸಾಯುತ್ತಿರುವುದರಿಂದ ಡಿಪ್ರೆಶನ್ ಗೆ ಒಳಗಾಗುತ್ತಿರುವುದರಿಂದ ಮುಂದಿನ ಪರಿಣಾಮ ಏನು? ಅಂತ ಉಹಿಸಲು ಭಯ ಆಗುತ್ತಿದೆ, ಸದ್ಯದ ರಿಸರ್ವ್ ಬ್ಯಾಂಕ್ ಮತ್ತು ಕೇಂದ್ರದ ಆರ್ಥಿಕ ಮಂತ್ರಾಲಯ ಎಚ್ಚೆತ್ತುಕೊಳ್ಳುವ ಸಾಧ್ಯತೆ ತುಂಬಾ ಕಡಿಮೆ ಇದರಿಂದ ಮುಂದೇನು?... ಗೊತ್ತಿಲ್ಲ !!.
ಈ ಸಂದಭ೯ದಲ್ಲಿ ಈ ಘಟನೆ ನೆನಪಾಯಿತು ದೈರ್ಯದಿಂದ ಜೀವನ ಎದುರಿಸಿದ ಕುಟುಂಬದ ಯಜಮಾನರು ಇಲ್ಲಿ ಉದಾಹರಣೆಯಾಗಿ ನೆನಪಾದರು.
ಸುಮಾರು 45 ವರ್ಷದ ಹಿಂದಿನ ನನ್ನ ತಂದೆಯ ಆತ್ಮೀಯ ಗೆಳೆಯರೊಬ್ಬರು ತಮ್ಮ ಕೃಷಿ ಜಮೀನುಗಳು ಭೂ ಸುದಾರಣೆ ಕಾನೂನಿನಲ್ಲಿ ಕಳೆದುಕೊಂಡು ಬದುಕುವುದು ಅಸಾಧ್ಯ ಎಂದು ಆಳವಾದ ಡಿಪ್ರೆಶನ್ ಗೆ ಒಳಗಾಗಿ ಆತ್ಮಹತ್ಯೆಯ ಪ್ರಯತ್ನದಲ್ಲಿದ್ದಾಗ ಅವರಿಗೆ ನಮ್ಮ ತಂದೆ ಅದೆಷ್ಟು ದೈರ್ಯ ನೀಡುತ್ತಿದ್ದರೆಂದು ನಾನು ಬಾಲ್ಯದಲ್ಲಿ ನೋಡಿದ್ದೆ.
ಮುಖ ಕ್ಷೌರ ಮಾಡದೆ, ತಮ್ಮ ದುರಾದೃಷ್ಟದಿಂದ ಭವಿಷ್ಯದ ದಾರಿ ಕತ್ತಲಾದ ಬಗ್ಗೆ ಮತ್ತು ಮುಂದಿನ ಸಂಸಾರ ನಡೆಸುವ ಆರ್ಥಿಕ ಮೂಲ ಇಲ್ಲದ್ದರಿಂದ ಚಿಕ್ಕ ಚಿಕ್ಕ ಮಕ್ಕಳ ಭವಿಷ್ಯವನ್ನು ಯೋಚಿಸಿ ಯೋಚಿಸಿ ಅದೀರರಾಗಿದ್ದರು ಹಾಗಂತ ಅವರು ತುಂಬಾ ತಿಳುವಳಿಕೆಯ ಓದು ಬಲ್ಲ ವಿವೇಕ ಇರುವ ವ್ಯಕ್ತಿಯೆ ಆಗಿದ್ದರು,ನಾನು ನನ್ನ ತಂದೆ ಮತ್ತು ಇವರ ಸಂಭಾಷಣೆ ಕೇಳಿಸುಕೊಳ್ಳುತ್ತಿದ್ದೆ ನಂತರ ಮನೆಯಲ್ಲಿ ನನ್ನ ತಂದೆ ತಾಯಿ ಮಾತಾಡುವುದು ಕೇಳಿ ಅಳುತ್ತಿದ್ದೆ.
ಪುಣ್ಯವಶಾತ್ ಗುರುಪಾದಪ್ಪ ಗೌಡರು ತುಂಬಾ ಕಷ್ಟ ಪಟ್ಟು ಆ ಕೆಟ್ಟ ದಿನ ಎದುರಿಸಿದರು, ಮೌನಿಗಳಾಗಿ ಶ್ರಮದಿಂದ ಜೀವನ ಸಾಗಿಸಿದರು, ಉಳಿದ ಖಾಲೀ ಜಮೀನುಗಳನ್ನು ಅಭಿವೃದ್ದಿ ಮಾಡುತ್ತಾ, ಮಕ್ಕಳನ್ನು ವಿದ್ಯಾವಂತರಾಗಿಸಿದರು ಈ ಹಂತದಲ್ಲೂ ಸಮಾಜದ ಅಂಕು ಡೊಂಕು ತಿದ್ದುತ್ತಾ, ರೈತ ಸಂಘದಲ್ಲಿ ಪ್ರೋಪೆಸರ್ ನಂಜುಂಡಸ್ವಾಮಿಗಳ ಪ್ರಭಾವದಿಂದ ರೈತ ಹೋರಾಟಗಳಲ್ಲೂ ಭಾಗವಹಿಸುತ್ತಾ ಬಂದಿದ್ದಾರೆ.
ನಮ್ಮ ಊರಿನ ಶ್ರೀ ವರಸಿದ್ದಿ ವಿನಾಯಕ ದೇವಸ್ಥಾನದ ಭಕ್ತರೂ ಆದ ಅವರು ದೇವಾಲಯದ ಆಡಳಿತ ಮಂಡಳಿಯ ಸಲಹೆಗಾರರೂ ಆಗಿದ್ದಾರೆ.
ಕಳೆದ ಜನವರಿ ತಿಂಗಳಲ್ಲಿ ನಡೆದ ರಥೋತ್ಸವದ ಸಂದರ್ಭದಲ್ಲಿ ಗುರುಪಾದಪ್ಪ ಗೌಡರು ಮತ್ತು ನನ್ನ ಸಿದ್ಧ ಸಮಾದಿ ಯೋಗದ ಗುರುಗಳು ಖ್ಯಾತ ಭಜನಗಾರರು ಆದ ಸಾಗರದ ಗಣೇಶ್ ಗುರೂಜಿ ಜೊತೆ ನನಗೆ ಸೇರುವ ಅವಕಾಶ ದೊರೆತಾಗ ನನ್ನ ತಂದೆ ಮತ್ತು ಅವರ ಗೆಳೆತನ ಮತ್ತು ಆ ದಿನದ ಸಂಕಷ್ಟಗಳ ವಿಷಯಗಳು ಮಾತಾಡಿದರು.
ಈಗ ಗುರುಪಾದಪ್ಪ ಗೌಡರ ಎರಡನೆ ಮಗ ದೆಹಲಿಯಲ್ಲಿ ಸಂಸಾರದೊಂದಿಗೆ ನೆಲೆಸಿ ದೊಡ್ಡ ಚಿತ್ರ ಮತ್ತು ಶಿಲ್ಪ ಕಲಾವಿದರು ಆಗಿದ್ದಾರೆ ಅವರು ತಮ್ಮ ಊರಾದ ಹೊಸನಗರ ತಾಲೂಕಿನ ಬಟ್ಟೆಮಲ್ಲಪ್ಪ ಸಮೀಪದ ದೊಂಬೆಕೊಪ್ಪ ಗ್ರಾಮದಲ್ಲಿ ಸಾರಾ ಸಂಸ್ಥೆ ಹುಟ್ಟುಹಾಕಿ ನಾಡಿನ ನೆಲ-ಜಲ- ಸಂಸ್ಕೃತಿ-ಪರಿಸರದ ಬಗ್ಗೆ ಅತ್ಯುತ್ತಮವಾದ ಕಾರ್ಯಕ್ರಮಗಳನ್ನು ಹುಟ್ಟುಹಾಕಿದ್ದಾರೆ ದೆಹಲಿಯ ಅವರ ಸಂಪರ್ಕದಿಂದ ಅನೇಕ ಪ್ರಸಿದ್ಧರು ಇಲ್ಲಿಗೆ ಬರುತ್ತಾರೆ ಮುಂದಿನ ದಿನದಲ್ಲಿ ಇದು ಇನ್ನೊಂದು ಕೆ.ವಿ.ಸುಬ್ಬಣ್ಣರ ಹೆಗ್ಗೋಡಿನಂತೆ ಆದೀತು ಅವರೇ ಸಾರಾ ಸಂಸ್ಥೆ ಅರುಣ ಕುಮಾರ್ ಇವರ ಪತ್ನಿ ತಂದೆ ದೇಶದ ಸುಪ್ರಸಿದ್ದ ಆರ್ಟಿಸ್ಟ್ ರಾಮೇಶ್ವರ ಬ್ರೂಟಾ.
ದೊಡ್ಡ ಮಗ ಸತೀಶ್ ತಂದೆ ಜೊತೆ ಕೃಷಿ ಮಾಡುತ್ತಾ ತಮ್ಮನ ಕನಸಿನ ಸಾರಾ ಸಂಸ್ಥೆ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ ಇನ್ನೊಬ್ಬ ಮಗ ಸೊರಬ ತಾಲ್ಲೂಕಿನಲ್ಲಿ ನೆಲೆಸಿದ್ದಾರೆ ಕೆಲ ತಿಂಗಳ ಹಿಂದೆ ಇವರ ಪತ್ನಿ ಇಹಲೋಕ ತ್ಯಜಿಸಿದ್ದಾರೆ.
45 ವಷ೯ದ ಹಿಂದೆ ಗುರುಪಾದಪ್ಪ ಗೌಡರೇನಾದರು ಹತಾಷೆಯಿಂದ ಜೀವನ ಎದುರಿಸದೆ ಬೇರೊಂದು ತೀರ್ಮಾನಕ್ಕೆ ದುಮುಕಿದ್ದರೆ? ಇದೆಲ್ಲಾ ಸಾಧ್ಯವಿತ್ತಾ? ಅನ್ನಿಸಿತು.
Comments
Post a Comment