Blog number 1068. ಕಲ್ಪರಸ ಎಂಬ ಜೀರೋ ಆಲ್ಕೋಹಾಲ್ ನೀರಾ ಎಂಬ ಎಳನೀರಿಗಿಂತ ಮೂರು ಪಟ್ಟು ಆರೋಗ್ಯದಾಯಕ ಪೇಯ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಸಿಗುತ್ತಿದೆ ಇದು ತೆಂಗು ಬೆಳೆಯ ಮೌಲ್ಯವರ್ಧನೆ ಕೂಡ.
#ರೋಗ_ಪೀಡಿತರಿಗೆ_ನೋಡಲು_ಹೋಗುವಾಗ_ಎಳನೀರು_ಬದಲು_ಇದನ್ನು_ಒಯ್ಯಿರಿ.
#ವೈಜ್ಞಾನಿಕವಾಗಿ_ಪರ್ಮೆಂಟೇಶನ್_ಆಗದಂತೆ_ತೆಂಗಿನಮರದಿಂದ_ತೆಗೆದ_ಉತ್ಪನ್ನ.
#ಫಲಭರಿತ_ಕೇವಲ_ಎಂಟು_ತೆಂಗಿನ_ಮರದಿಂದ_ವಾರ್ಷಿಕ_ಎರಡು_ಲಕ್ಷ_ಲಾಭವಿದೆ.
#ಲೀಟರಗೆ_ಇನ್ನೂರು_ರೂಪಾಯಿಗೆ_ಲಭ್ಯ.
ಇವತ್ತು ಕುಂದಾಪುರದ ಪ್ರಸಿದ್ಧ ಮಾನಸಿಕ ತಜ್ಞರಾದ ಡಾ. ಪ್ರಕಾಶ್ ತೋಳಾರರ ಹತ್ತಿರ ನಮ್ಮ ದೇವರ ಮಗ ನಾರಾಯಣನ ತಪಾಸಣಿಗೆ ನನ್ನ ಸಹೋದರ ಕರೆದುಕೊಂಡು ಹೋಗುವಾಗ ನೀರಾ ತರಲು (ತರುವಷ್ಟರಲ್ಲಿ ಕಳ್ಳು ಅಥವ ಶೇ೦ದಿ ಆಗಿರುತ್ತದೆ) ಹೇಳಿದ್ದೆ.
ಭಾರತೀಯ ಕಿಸಾನ್ ಸಂಘ ಮತ್ತು ಸೆಂಟ್ರಲ್ ಪ್ಲಾಂಟೇಶನ್ ಕ್ರೋಪ್ ರಿಸರ್ಚ್ ಇನ್ಸ್ಟಿಟ್ಯೂಟ್ (CPCRI), ಉಡುಪಿ ಕಲ್ಪರಸ ಕೊಕನಟ್ ಮತ್ತು ಆಲ್ ಸ್ಪೈಸಸ್ ಪ್ರೊಡ್ಯೂಸರ್ ಕಂಪನಿ (ನಿ ) ಕಲ್ಪ ರಸ ಹೆಸರಿನ ಬ್ರಾಂಡಿನಲ್ಲಿ ನೀರಾ ಉತ್ಪಾದಿಸಿ ಮಾರಾಟ ಮಾಡಲಿದೆ ಎಂಬ ಸುದ್ದಿ ಎರೆಡು ವರ್ಷದ ಹಿಂದೆ ಸುದ್ದಿ ಮಾಧ್ಯಮಗಳಲ್ಲಿ ಓದಿದ್ದೆ ನಂತರ ಕೊರಾನ ಕಾಲಗತಿಯಲ್ಲಿ ಇದನ್ನು ಮರೆತಿದ್ದೆ.
ಇವತ್ತು ಕಲ್ಪರಸ ಎ೦ಬ ನೀರಾ ಕುಡಿದೆ ಇದು ಉತ್ಕೃಷ್ಟ ರುಚಿಯಲ್ಲಿದೆ ಅಲ್ಲದೆ ಅಷ್ಟೆ ವೈಜ್ಞಾನಿಕವಾಗಿ ಪರಿಶುದ್ಧವಾಗಿ ಸಂಸ್ಕರಿಸಿ ಬಾಟಲ್ ಮಾಡಿದ್ದಾರೆ.
ಇದನ್ನು ಶೀಥಲೀಕರಣದಲ್ಲಿಯೇ ಸ್ಟೋರ್ ಮಾಡಬೇಕು ಇಲ್ಲದಿದ್ದರೆ ಹುದಲಿಕರಣ (Fermentation) ಆಗಿ ಆಲ್ಕೋಹಾಲ್ ಆಗಿ ಪರಿವರ್ತನೆ ಆಗುತ್ತದೆ.
ಜಿರೋ ಆಲ್ಕೋಹಾಲ್ ನೀರಾ ಎಳನೀರಿಗಿಂತ ಮೂರು ಪಟ್ಟು ಸಕ್ಕರೆ, ಪ್ರೋಟೀನ್, ಮಿನರಲ್, ಆಂಟಿ ಆಕ್ಸಿಡೆಂಟ್ ಮತ್ತು ವಿಟಮಿನ್ ಹೊಂದಿರುತ್ತದೆ ಮತ್ತು ವಿಶೇಷವಾದ ರುಚಿ ಮತ್ತು ಅರೋಮ ಇದರಲ್ಲಿದೆ.
ತೆಂಗಿನ ಹೂವಿನ ಗೊನೆಯ ಕೆಳಗಿನ ದಂಟು ಸವರಿ ಅದರಿಂದ ಸ್ರವಿಸುವ ರಸಗಳನ್ನು ಸಂಗ್ರಹಿಸುವ ಶೇಂದಿ ಉದ್ಯಮದ ರೀತಿಯೇ ಆದರೂ ಶೇಂದಿ ಉದ್ಯಮದಲ್ಲಿ ಪರಿಸರದಲ್ಲಿ ಬದಲಾಗುವ ಸೂರ್ಯ ಕಿರಣದ ಉಷ್ಣದಿಂದ ಈ ತೆಂಗಿನ ಹೂವಿನ ರಸ ಹುದಗಲು (Fermentation) ಪ್ರಾರಂಬಿಸಿ ಸಕ್ಕರೆ ಅಂಶ ಆಲ್ಕೋಹಾಲ್ ಆಗಿ ಬದಲಾಗುವುದು ಸಹಜ.
ಆದರೆ CPCRI ಸಂಶೋದಿಸಿದ ಐಸ್ ಬಾಕ್ಸ್ ತಂತ್ರಜ್ಞಾನದಲ್ಲಿ ತೆಂಗಿನ ಹೂವಿನ ದಂಟಿನ ರಸ ತುಂಬಾ ಆರೋಗ್ಯಕರವಾಗಿ ಮತ್ತು ಪರ್ಮೆಂಟೇಶನ್ ಆಗದಂತೆ ತೆಗೆಯುವುದರಿಂದ ಇದು ಜೀರೋ ಆಲ್ಕೋಹಾಲ್ ಇರುವ ಪರಿಶುದ್ದ ನೀರಾ ಆಗಿರುತ್ತದೆ ನಂತರ ಶಿಥಲೀಕರಣದ ವ್ಯವಸ್ಥೆಯಲ್ಲೇ ಗ್ರಾಹಕರ ಸೇರುವುದರಿಂದ ನೀರಾಗುಣ ಬದಲಾಗುವುದಿಲ್ಲ.
ಇದರಿಂದ ತೆಂಗಿನ ಬೆಳೆಯ ಮೌಲ್ಯವರ್ಧನೆ ಕೂಡ ಅಡಗಿದೆ ಎಂಟು ಫಲಭರಿತ ತೆಂಗಿನ ಮರದಿಂದ ವಾರ್ಷಿಕ ಒಂದು ಲಕ್ಷ ಆದಾಯವಿದೆ, ತೆಂಗಿನ ತೋಟದ ರೈತನೇ ಈ ರಸ ತೆಗೆದುಕೊಡುವುದಾದರೆ ಎರೆಡು ಲಕ್ಷ ಆದಾಯವಿದೆ ಎಂದು ಈ ಸಹಕಾರಿ ಸಂಘ ಘೋಷಿಸಿದೆ.
ರಾಜ್ಯ ಅಬಕಾರಿ ಇಲಾಖೆಯಿಂದ ತಾತ್ಕಾಲಿಕ ಲೈಸೆನ್ಸ್ ಪಡೆದು ಕುಂದಾಪುರದ ಜಪ್ತಿ ಎಂಬಲ್ಲಿ ಕಲ್ಪ ರಸ ಉತ್ಪಾದನಾ ಘಟಕ ಕಾಯಾ೯ರಂಭ ಮಾಡಿದೆ ಇದು ರಾಜ್ಯದ ಈ ರೀತಿಯ ನೀರಾ ಉತ್ಪಾದನೆಯ ಎರಡನೆ ಘಟಕವಂತೆ ಇಲ್ಲಿ ತೆಂಗಿನ ನೀರಾದ ಬೆಲ್ಲ / ಸಕ್ಕರೆ ಮುಂತಾದ ಉಪ ಉತ್ಪನ್ಗಳು ಕೂಡ ತಯಾರಾಗುತ್ತಿದೆ.
ಮಲೆನಾಡು ನಟ್ಸ್ & ಸ್ಟೈಸ್ (MNS) ಸಂಸ್ಥೆ ಬೆಂಗಳೂರಿನಲ್ಲಿ ನೀರಾ ಮಾರ್ಕೆಟ್ ಮಾಡಿದೆ.
ಇದನ್ನ ತಂದು ಮನೆಯ ರೆಪ್ರಿಜೇಟರಲ್ಲಿಟ್ಟು ಪ್ರತಿ ದಿನ ಸೇವಿಸುವುದು ಆರೋಗ್ಯ ಸುದಾರಣೆಗೆ ಕಾರಣವಾಗಲಿದೆ.
Comments
Post a Comment