Blog number 1090. ಉದಯೋನ್ಮುಖ ಚಲನ ಚಿತ್ರ ನಿಧೇ೯ಶಕ ಮತ್ತು ಕದಂಬ ಪಿಲಂ ಇನ್ಸ್ಟಿಟ್ಯೂಟ್ ಸ್ಥಾಪಕರಾದ ಟಿ.ಎನ್. ನಾಗೇಶ್ ನಿನ್ನೆ ನನ್ನ ಅತಿಥಿ. (26- ನವೆಂಬರ್ -2022)
#ಇಪ್ಪತ್ತೆರೆಡು_ವಷ೯ದ_ಗೆಳೆತನ,
#ಇವರ_ನಿಧೇ೯ಶನದಲ್ಲಿ_ಆರು_ಚಲನಚಿತ್ರ_ಬಂದಿದೆ
#ಹದಿಮೂರು_ಮೆಗಾ_ಸಿರಿಯಲ್_ಮಾಡಿದ್ದಾರೆ
#ಇಪ್ಪತ್ತು_ಚಲನ_ಚಿತ್ರಗಳಿಗೆ_ಅಸಿಸ್ಟೆಂಟ್_ಡೈರೆಕ್ಟರ್
#ಇವರದ್ದೇ_ಸ್ವಂತ_ಕದಂಬ_ಪಿಲಂ_ಇನ್ಸ್ಟಿಟ್ಯೂಟ್_ಕೂಡ_ಇದೆ
ಒಂದು ಕಾಲದಲ್ಲಿ ಬೆಂಗಳೂರಿನ ಹೈಲ್ಯಾಂಡ್ ಹೋಟೆಲ್ ಚಲನ ಚಿತ್ರ ಉಧ್ಯಮಿಗಳ ಕೇಂದ್ರವೇ ಆಗಿತ್ತು ಅಲ್ಲಿನ ಮ್ಯಾನೇಜರ್ ಚಂದ್ರು ಅವರು ಹೈಲ್ಯಾಂಡ್ಸ್ ಚಂದ್ರು ಅಂತಾನೆ ಪ್ರಸಿದ್ದಿ ಪಡೆದಿದ್ದರು ಅವರು ಶಿವಮೊಗ್ಗ ಜಿಲ್ಲೆಯ ಮೂಲದ ತೀರ್ಥಹಳ್ಳಿಯ ಕನ್ನಂಗಿಯವರು.
90 ರ ದಶಕದಲ್ಲಿ ಇವರೆಲ್ಲ ಬೆಂಗಳೂರಿನ ಬಂಗಾರಪ್ಪನವರ ಅಭಿಮಾನಿಗಳು, ಬಂಗಾರಪ್ಪನವರು ಕಾಂಗ್ರೇಸ್ ನಿಂದ ಸಿಡಿದು KCP ಎಂಬ ಬೇರೆ ಪಕ್ಷ ಕಟ್ಟಿದಾಗ ಚ೦ದ್ರು ಬೆಂಗಳೂರಿನ ಗಾಂಧಿ ನಗರ ವಿದಾನ ಸಭಾ ಕ್ಷೇತ್ರದಿಂದ ಸ್ಪರ್ದೆ ಮಾಡಿದ್ದರು.
ಹೀಗೆ ಹೈಲ್ಯಾಂಡ್ ಚಂದ್ರುರವರ ಗೆಳೆಯರಾಗಿದ್ದ ಟಿ.ಎನ್. ನಾಗೇಶ್ 1997 ರಿಂದ ನನಗೂ ಗೆಳೆಯರಾಗಿದ್ದು.
ಟಿ.ಎನ್. ನಾಗೇಶ್ ತುಂಬಾ ತಾಳ್ಮೆ ಸ್ವಬಾವದವರು ಮತ್ತು ಮೆದು ಮಾತಿನವರು, ಕನ್ನಡ ಸಾಹಿತ್ಯ ಇತಿಹಾಸದ ಬಗ್ಗೆ ತುಂಬಾ ಓದಿದ್ದಾರೆ, ತಮ್ಮ ಕೆಲಸದಲ್ಲಿ ಹೆಚ್ಚು ಕಲಿಯಬೇಕೆಂಬ ತುಡಿತವೇ ಈಗ ಇವರು ಈ ಸ್ಥಾನಕ್ಕೆ ಏರಲು ಕಾರಣವಾಗಿದೆ.
ಸುಮಾರು 20 ಚಲನಚಿತ್ರದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ, ಹದಿಮೂರು ಮೆಗಾ ಸೀರಿಯಲ್ (ಸರೋಜಿನಿ- ಚಂದ್ರಿಕಾ ಇತ್ಯಾದಿ) ಸ್ಪತಂತ್ರ ನಿದೇ೯ಶಕರಾಗಿ, ಆರು ಚಲನಚಿತ್ರಗಳನ್ನು ಇವರೇ ನಿರ್ದೇಶಿಸಿ ಯಶಸ್ವಿ ಆಗಿದ್ದಾರೆ.
ಒಲವೆ ವಿಸ್ಮಯ, ಪಂಚಾಮೃತ, ಗೌಡ v/s ರೆಡ್ಡಿ, ದೂ೦ - ದೂಂ, ರಾಮದಾನ್ಯ ಮತ್ತು ಖಡಕ್.
ಅನಂತ್ ಕುಮಾರ್ - ಶಶಿಕುಮಾರ್ - ದೇವರಾಜ್ - ಶ್ರೀನಗರ ಕಿಟ್ಟಿ - ಅಚ್ಯುತ್ -ರಂಗಾಯಣ ರಘು ಅವರೆಲ್ಲರ ತಾರಗಣದಲ್ಲಿ ಇವರು ಸಿನಿಮಾ ನಿರ್ದೇಶಿಸಿದ್ದಾರೆ.
ಪಂಚಾಮೃತ 5 ಕಥೆಗಳ ಕಥಾ ಸಂಗಮ ಪುಟ್ಟಣ್ಣನವರ ನಂತರ ಪ್ರಥಮ ಬಾರಿಗೆ ಇವರು ನಿಧೇ೯ಶಿಸಿದ್ದಾರೆ.
ಕನಕದಾಸರು ರಚಿಸಿದ ಕಿರು ಕಾವ್ಯವಾದ ರಾಮ ದ್ಯಾನ ಭತ್ತ ಮತ್ತು ಅಕ್ಕಿಯಲ್ಲಿ ಶ್ರೇಷ್ಟರಾರೆಂದು ತರ್ಕದಲ್ಲಿ ಶ್ರೀ ರಾಮ ರಾಗಿಯೇ ಎಂದು ನೀಡಿದ ತೀರ್ಪಿನ ಕಾವ್ಯವನ್ನು ಅತ್ಯುತ್ತಮವಾಗಿ ಸಿನಿಮಾ ಮಾಡಿದ್ದಾರೆ ಇದು ಹಿಂದಿಯಲ್ಲೂ ಡಬ್ ಆಗಿ ಯಶಸ್ಸು ಪಡೆಯಿತು.
ಕೊರಾನಾ ಕಾಲದಲ್ಲಿ ಹಿಂದಿಯ ಮಹಾಬಾರತ ಸೀರಿಯಲ್ ಕನ್ನಡಕ್ಕೆ ಬಾಷಾಂತರಿಸಿ ಅನೇಕ ಕಲಾವಿದರಿಗೆ ಆ ಸಂಕಷ್ಟ ಕಾಲದಲ್ಲಿ ಚಿತ್ರರಂಗಕ್ಕೆ ದೊಡ್ಡ ಸಹಾಯವಾಗಿತ್ತು.
ಚಲನ ಚಿತ್ರದ ಅಭಿನಯ, ನಿರ್ದೇಶನ, ಕ್ಯಾಮೆರಾ, ವಿನ್ಯಾಸ ಇತ್ಯಾದಿ ತರಬೇತಿ ನೀಡುವ ಇವರದ್ದೇ ಸ್ವಂತದ್ದಾದ ತರಬೇತಿ ಸಂಸ್ಥೆ ಕದಂಬ ಪಿಲಂ ಇನ್ಸ್ಟಿಟ್ಯೂಟ್ ಕೂಡ ನಡೆಯುತ್ತಿದೆ.
ಸುಮಾರು 20 ವರ್ಷ ಪರಸ್ಪರ ಬೇಟಿ ಆಗಿರಲಿಲ್ಲ ಆದರೆ ಪೋನ್ ಸಂಪರ್ಕದಲ್ಲಿದ್ದೆವು, ನನ್ನ ಪೇಸ್ ಬುಕ್ ಬರಹಗಳಿಗೆ ಪ್ರತಿಕ್ರಿಯಿಸುತ್ತಿದ್ದರು ಮತ್ತು ನನ್ನ ಎರೆಡೂ ಪುಸ್ತಕ ಓದಿದ್ದಾರೆ.
ಅವರಿಗೆ ಬೆಸ್ತರ ರಾಣಿ ಚಂಪಕ ಕಾದಂಬರಿ ತುಂಬಾ ಹಿಡಿಸಿದೆ, ಕಳೆದು ಹೋಗಿದ್ದ ಹೈಲ್ಯಾಂಡ್ಸ್ ಚಂದ್ರು ಸಂಪರ್ಕ ಪುನಃ ಇವರಿಂದ ಜೋಡನೆ ಆಗಿ ಈಗಷ್ಟೆ ಚಂದ್ರು ಜೊತೆ ಮಾತಾಡಲು ಸಾಧ್ಯವಾಯಿತು.
Comments
Post a Comment