Blog number 1064. ರವಿ ಬೆಳೆಗೆರೆ ಅಸ್ತಂಗತರಾಗಿದ್ದಾರೆ ಆದರೆ ಅವರು ಪತ್ರಿಕೊದ್ಯಮ, ಟೆಲಿವಿಷನ್ ಮಾಧ್ಯಮ ಮತ್ತು ಸಾಹಿತ್ಯ ಲೋಕದಲ್ಲಿ ಮಾಡಿರುವ ಸಾದನೆ ಅಸಮಾನ್ಯ, ಅವರ ಅಭಿಮಾನಿ ಆಗಿ ಅವರಿಗೆ ಅತಿಥ್ಯ ನೀಡುವ ಕೆಲವು ಅವಕಾಶ ನನಗೆ ದೊರಕಿತ್ತು ಎಂಬುದು ಜೀವಮಾನ ಪೂರ್ತಿ ನೆನಪಿನಲ್ಲಿ ಉಳಿಯುವುದು.
ರವಿಬೆಳೆಗೆರೆ_ಹಾಯ್_ಬೆಂಗಳೂರು
#ರವಿ ಬೆಳೆಗೆರೆ ಅಸ್ತoಗತರಾಗಿ ಇವತ್ತಿಗೆ ಎರೆಡು ವರ್ಷ.
ಅವತ್ತು ಅಂದರೆ 2020ರ ನವೆಂಬರ್ 13ರ ಮಧ್ಯ ರಾತ್ರಿ ಪ್ರಜಾವಾಣಿ ವಿಭಾಗೀಯ ಪ್ರಸರಾಣಾಧಿಕಾರಿ ಸಂಗಣ್ಣ ಪ್ರಕಾಶ್ ವಾಟ್ಸ್ ಪ್ ನಲ್ಲಿ ರವಿ ಬೆಳೆಗೆರೆ ಅಸ್ತಂಗತ ಅಂತ ಸುದ್ದಿ ಕಳಿಸಿದ್ದು ನೋಡಿ ನನ್ನ ಮನಸ್ಸು ಸೂತಕದ ಮನೆ ಅಂತಾಯಿತು.
ಮೊದಲ ಪ್ರತಿ ಹಾಯ್ ಬೆಂಗಳೂರಿಂದ ಇವತ್ತಿನ ಸಾವಿರದ ಇನ್ನೂರು ದಾಟಿದ ಪ್ರತಿ ಪತ್ರಿಕೆ, ಅವರು ಬರೆದ ಅನುವಾದಿಸಿದ ಎಲ್ಲಾ ಪುಸ್ತಕ ಓದಿದ್ದೇನೆ.
ನನ್ನ ಜೀವನದ ಎಲ್ಲಾ ಏಳು ಬೀಳಿನಲ್ಲಿ ರವಿ ಬೆಳೆಗೆರೆಯ ಬರಹಗಳು ಅವರ ಜೀವನದ ಅನುಭವ ನನಗೆ ವಿಪರೀತ ಪ್ರಭಾವ ಉಂಟು ಮಾಡಿತ್ತು.
ಇವರ ನನ್ನ ಮೊದಲ ಬೇಟಿ ಹೇಗಾಯಿತೆ೦ದರೆ ಶಿವಮೊಗ್ಗ ಜಿಲ್ಲಾ ಪಂಚಾಯತ್ ಕೋಟ್ಯಾಂತರ ರೂಪಾಯಿ ಹಣ ಕಳಪೆ ಔಷದಿ ಖರೀದಿಸಿ ಲಕ್ಷಾಂತರ ರೂಪಾಯಿ ಹೊಡೆದು ತಿಂದ ಕಥೆ ಅವತ್ತಿನ ಜಿಲ್ಲಾ ಸಜ೯ನ್ ರಹಸ್ಯವಾಗಿ ತಿಳಿಸಿದ್ದನ್ನ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಮಂಡಿಸಿ ತನಿಖೆಗೆ ಒತ್ತಾಯಿಸಿದ್ದರಿಂದ ಅವತ್ತು ರಾತ್ರಿಯೇ ಈ ಔಷದಿ ಗೋದಾಮ ವಿದ್ಯುತ್ ಅವಘಡದಿಂದ ಸುಟ್ಟು ಹೋಯಿತೆಂದು ಮಾಡಿ ಇದನ್ನು ಪ್ರತಿಭಟಿಸಿದ ನನ್ನ ಮೇಲೆ ಸುಳ್ಳು ಕೇಸ್ ಮಾಡಿ ಜೈಲಿಗೆ ಕಳಿಸಿದ ಪ್ರಕರಣದಲ್ಲಿ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಅಧಿಕಾರ ಹೊಂದಿದ್ದ ಎಲ್ಲಾ ರಾಜಕಾರಣಿಗಳು ಪಾಲುದಾರರಾಗಿದ್ದಾಗ ನಾನು ಒಬ್ಬಂಟಿ ಆಗಿದ್ದೆ.
ಆ ಸಂದಭ೯ದಲ್ಲಿ ಹಾಯ್ ಬೆಂಗಳೂರು ನನ್ನ ಪರವಾಗಿ ಪ್ರಕಟಿಸಿದ ವರದಿ ನನಗೆ ನನ್ನ ಹೋರಾಟದ ನೈತಿಕತೆಗೆ ಹೆಚ್ಚಿನ ಬಲ ಮತ್ತು ಆತ್ಮವಿಶ್ವಾಸ ಉಂಟು ಮಾಡಿತ್ತು ಇದಕ್ಕೆ ಧನ್ಯವಾದ ಹೇಳಲು ರವಿ ಬೆಳೆಗೆರೆಗೆ ಪೋನ್ ಮಾಡಿದಾಗ ಸ್ವತಃ ಬಂದು ಧನ್ಯವಾದ ಹೇಳಿ ಅಂದಿದ್ದರು ಹಾಗಾಗಿ ಬೆಂಗಳೂರಿನ ಅವರ ಕಛೇರಿಗೆ ಹೋಗಿ ಬೇಟಿ ಮಾಡಿದ್ದೆ " ಏನ್ರಿ ಒಂದು ಒಳ್ಳೇ ಪೋಟೋ ಕೊಡೋಕೆ ಆಗಿಲ್ಲೇನ್ರಿ? ಕ್ರಿಮಿನಲ್ ಗಳೇ ಸೂಟು ಬೂಟು ಹಾಕಿ ಪತ್ರಿಕೆಗೆ ಪೋಟೊ ಕೊಡುತ್ತಾರೆ " ಅಂತ ತಮಾಷೆ ಮಾಡಿದ್ದರು.
ಇದಕ್ಕೆ ಕಾರಣ ನನ್ನ ಬಗ್ಗೆ ವರದಿ ಮಾಡಿದ ಶೃಂಗೇಶರಿಗೆ ಅವತ್ತು ನನ್ನ ಪರಿಚಯ ಇರಲಿಲ್ಲ ಮತ್ತು ಸರಿಯಾದ ಪೋಟೊ ಅವರಿಗೆ ಸಿಕ್ಕಿರಲಿಲ್ಲ.
ನಂತರ ನನ್ನ ಬಗ್ಗೆ ಅನೇಕ ಲೇಖನಗಳು ಬಂದಿದೆ, ಬಹಿರಂಗ ಸಭೆಯಲ್ಲಿ ರವಿ ಬೆಳೆಗೆರೆ ನನ್ನ ಬಗ್ಗೆ ಮಾತಾಡಿದ್ದು ಎಲ್ಲಾ ಈಗ ನೆನಪು.
ನಮ್ಮ ಮಲ್ಲಿಕಾ ವೆಜ್ ನ ಇಡ್ಲಿ ವಡಾ ಸಾಂಬಾರು ಮತ್ತು ಕೊಥಾಸ್ ಪಿಲ್ಟರ್ ಕಾಫಿ ಅವರಿಗೆ ತುಂಬಾ ಇಷ್ಟ ಹಾಗೆಯೇ ನಮ್ಮ ಚಂಪಕಾ ಪ್ಯಾರಾಡೈಸ್ ನ ಮಡಿಕೆ ದಮ್ ಬಿರಿಯಾನಿಗೆ ಅವರು ಪಿದಾ ಆಗಿದ್ದರು ಅವರು ಅದನ್ನು ಪೇಸ್ ಬುಕ್ ನಲ್ಲೂ ಬರೆದಿದ್ದರು.
ಅವರ ನನ್ನ ಕೊನೆಯ ಭೇಟಿ ಲಾಕ್ ಡೌನ್ ಗೆ ಕೆಲ ದಿನ ಮೊದಲು 21 ಜನವರಿ 2020 ರಂದು ಈ ಮಾಗ೯ದಲ್ಲಿ ಬಂದಾಗ ಶೃಂಗೇಶ್ ಬೆಳಗಿನ ಉಪಹಾರಕ್ಕೆ ನಮ್ಮಲ್ಲಿ ಕರೆತಂದಿದ್ದರು ಇಂತಹ ಇಡ್ಲಿ ಸಾಂಬಾರು ಚಟ್ನಿ ಸ್ಟಾರ್ ಹೋಟಲ್ ಲ್ಲಿ ಸಿಗೋದಿಲ್ಲ ಅಂದಿದ್ದರು.
ನನ್ನ ಗೆಳೆಯರು ಮತ್ತು ನನ್ನ ಸಿಬ್ಬಂದಿಗಳ ಜೊತೆ ಪೋಟೊ ತೆಗೆಸಿಕೊಂಡರು ಅವರನ್ನ ನನ್ನ ಗೆಳೆಯರು ಅವರ ಕ್ರೈಂಡೈರಿ ಬಗ್ಗೆ ನೆನಪಿಸಿದಾಗ ಅವರು ಆ ಬಗ್ಗೆ ಮಾತಾಡಿದ ವಿಡಿಯೋ ತುಣುಕು ಲಗತ್ತಿಸಿದ್ದೇನೆ.
Comments
Post a Comment