ಭಾಗ - 60, ಆನಂದಪುರಂ ಇತಿಹಾಸ, ರಾಮನಗರದ ಜನಪದ ಲೋಕ ಸೃಷ್ಟಿಕರ್ತ, ಭಾರತ ಇತಿಹಾಸ ಕನ್ನಡದಲ್ಲಿ "ಪ್ರವಾಸಿ ಕಂಡ ಇಂಡಿಯಾ" ಎಂಬ ಎಂಟು ಸಂಪುಟ ಕುವೆಂಪು ಪ್ರದಾನ ಸಂಪಾದಕತ್ವದಲ್ಲಿ ಪ್ರಕಟಿಸಿದ ಹೆಚ್.ಎಲ್.ನಾಗೇಗೌಡರು 1963 ರಲ್ಲಿ ಶಿವಮೊಗ್ಗದಲ್ಲಿ ಜಿಲ್ಲಾಧಿಕಾರಿಗಳಾಗಿ ಸೇವೆ ಸಲ್ಲಿಸುವಾಗ ಆನಂದಪುರಂನ ಚಂಪಕ ಸರಸ್ಸು- ಕೋಟೆ ವೀಕ್ಷಣೆಗೆ ಬರುತ್ತಿದ್ದರು
#ಭಾಗ_60. #ಆನಂದಪುರಂ_ಇತಿಹಾಸ. #ಪ್ರವಾಸಿ_ಕಂಡ_ಇಂಡಿಯಾ_ಬರೆದವರು #ಜನಪದ_ಲೋಕ_ನಿರ್ಮಿಸಿದ_ಹೆಚ್_ಎಲ್_ನಾಗೇಗೌಡರು . #1963ರಲ್ಲಿ_ಶಿವಮೊಗ_ಜಿಲ್ಲಾದಿಕಾರಿಗಳು. #ಇವರು_ಆನಂದಪುರಂ_ಚಂಪಕಸರಸ್ಸು_ಅನೇಕ_ಬಾರಿ_ಸಂದರ್ಶಿಸಿದ್ದರು. #ಇವರು_ಬರೆದ_ಪುರಾತನ_ಕಾಲದಿಂದ_18ನೇ_ಶತಮಾನದವರೆಗಿನ_ಭಾರತ_ಇತಿಹಾಸ_ಪ್ರವಾಸಿ_ಕಂಡ_ಇಂಡಿಯಾ . #ಮೈಸೂರು_ವಿಶ್ವವಿದ್ಯಾಲಯದಿಂದ_ಪ್ರಕಟ #ಕುವೆಂಪು_ಪ್ರದಾನ_ಸಂಪಾದಕರು. ಹೆಚ್.ಎಲ್.ನಾಗೇಗೌಡರು ಕನ್ನಡ ಭಾಷೆಗೆ ಅನುವಾದಿಸಿದ ವಿದೇಶಿ ಪ್ರವಾಸಿಗಳ ಪತ್ರ, ದಿನಚರಿಗಳ ಸುಮಾರು 4000 ಪುಟಗಳ 8 ಸಂಪುಟಗಳು ಅತ್ಯುತ್ತಮ ಇತಿಹಾಸದ ಪುಸ್ತಕಗಳು. ಕುವೆಂಪು ಸಂಪಾದಕತ್ವವೂ ಇದಕ್ಕೆ ಇದೆ, ಐಬಿಹೆಚ್ ಪ್ರಕಾಶನ 1972 ರಲ್ಲಿ ಮೊದಲ ಮುದ್ರಣ ಮಾಡಿತ್ತು ಅಪಾರ ಬೇಡಿಕೆಯಿಂದ 2007ರಲ್ಲಿ ಪುನರ್ ಮುದ್ರಣ ಮಾಡಿದ್ದಾರೆ. ಈ ಸಂಪುಟಗಳ ವಿಶೇಷ ಅಂದರೆ ಕ್ರಿ.ಪೂ 3000 ದಿಂದ ಮೂರು ಹಂತಗಳಲ್ಲಿ ಭಾರತದ ಇತಿಹಾಸ ವಿಂಗಡಿಸಿ ಬರೆದಿದ್ದಾರೆ. #ಪ್ರಾಚೀನ_ಭಾರತದ_ಇತಿಹಾಸ ಪುರಾತನ ಕಾಲದಿಂದ 12 ನೇ ಶತಮಾನದ ವರೆಗಿನದ್ದು #ಮಧ್ಯಕಾಲ_ಇತಿಹಾಸ 13 ನೇ ಶತಮಾನದಿಂದ 18ನೇ ಶತಮಾನದವರೆಗೆ #ಆದುನಿಕ_ಇತಿಹಾಸ 18ನೇ ಶತಮಾನದಿಂದ ಈವರೆಗಿನದ್ದು ಈ ಎಂಟು ಸಂಪುಟಗಳು ಓದಿದರೆ ಭಾರತದ ಇತಿಹಾಸದ ಸಂಪೂರ್ಣ ಜ್ಞಾನ ಲಭ್ಯವಿದೆ, ಅವರು ದಾಖಲೆ ಮಾಡುತ್ತಾ ಹೋಗಿರುವ...